Mahesh Shetty Thimarodi, Sowjanya Case: ಸೌಜನ್ಯಾ ಪ್ರಕರಣದಲ್ಲಿ ಪೊಲೀಸರೇ ಸಾಕ್ಷ್ಯ ನಾಶ ಮಾಡಿದ್ದೀರಿ..! ಯೋಗೀಶನನ್ನು ನೇತು ಹಾಕಿದ್ರೆ ಸತ್ಯ ಹೊರಬರುತ್ತೆ.. ಮಹೇಶ್ ಶೆಟ್ಟಿ ತಿಮರೋಡಿ ಅಬ್ಬರದ ಭಾಷಣ 

10-10-26 09:27 pm       HK News Staffer   ಕರಾವಳಿ

ನಮ್ಮನ್ನು ಈ ಹೋರಾಟಕ್ಕೆ ಪ್ರತಿಸ್ಪರ್ಧಿಗಳ ರೀತಿ ಬಿಂಬಿಸಿದ ಪೊಲೀಸ್ ಇಲಾಖೆ ಮತ್ತು ಅತ್ಯಾಚಾರಿಗಳನ್ನ ರಕ್ಷಣೆ ಮಾಡಿದ ರಾಜಕೀಯ ನಾಯಕರಿಗೆ ಅಭಿನಂದನೆಗಳು. ಎಲ್ಲದಕ್ಕೂ ತಯಾರಾಗೇ ನಿಂತವರು ನಾವು. 14 ವರ್ಷಗಳ ಹಿಂದೆ ಕಂಡಿದ್ದನ್ನು ಕಂಡ ಹಾಗೆ ಹೇಳಿದ್ದೇನೆ. ದಕ್ಷ ಅಧಿಕಾರಿಗಳಿಗೆ ಇದು ಕಿವಿಮಾತು ಹಾಗು ಎಚ್ಚರಿಕೆ.

ಬೆಳ್ತಂಗಡಿ, ಅ.10: ನಮ್ಮನ್ನು ಈ ಹೋರಾಟಕ್ಕೆ ಪ್ರತಿಸ್ಪರ್ಧಿಗಳ ರೀತಿ ಬಿಂಬಿಸಿದ ಪೊಲೀಸ್ ಇಲಾಖೆ ಮತ್ತು ಅತ್ಯಾಚಾರಿಗಳನ್ನ ರಕ್ಷಣೆ ಮಾಡಿದ ರಾಜಕೀಯ ನಾಯಕರಿಗೆ ಅಭಿನಂದನೆಗಳು. ಎಲ್ಲದಕ್ಕೂ ತಯಾರಾಗೇ ನಿಂತವರು ನಾವು. 14 ವರ್ಷಗಳ ಹಿಂದೆ ಕಂಡಿದ್ದನ್ನು ಕಂಡ ಹಾಗೆ ಹೇಳಿದ್ದೇನೆ. ದಕ್ಷ ಅಧಿಕಾರಿಗಳಿಗೆ ಇದು ಕಿವಿಮಾತು ಹಾಗು ಎಚ್ಚರಿಕೆ. ರಾಜಕೀಯ ಪಕ್ಷಗಳ ಕೈಗೊಂಬೆಗಳ ರೀತಿ ಕಪಟಿಗಳ ಜೊತೆ ಸೇರಿ ನೀವು ಸಾಕ್ಷಿಗಳನ್ನ ನಾಶ ಮಾಡಿದ್ದೀರಿ ಎಂದು ಸೌಜನ್ಯಾ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಆರೋಪಿಸಿದ್ದಾರೆ. 

ಬೆಳ್ತಂಗಡಿಯಲ್ಲಿ ನಡೆದ ಸೌಜನ್ಯ ಮರು ತನಿಖೆ ಮತ್ತು ನ್ಯಾಯದ ನಡಿಗೆ ಸಮಾವೇಶದಲ್ಲಿ ತಿಮರೋಡಿ ಅಬ್ಬರದ ಭಾಷಣ ಮಾಡಿದ್ದಾರೆ. ಪೊಲೀಸ್ ಇಲಾಖೆ ಸೌಜನ್ಯ ಪ್ರಕರಣದ ಸಾಕ್ಷ್ಯಗಳನ್ನ ನಾಶ ಮಾಡಿದೆ. ಸೌಜನ್ಯಾ ಹೋರಾಟದಲ್ಲಿ ಅವಳು ಮಿಸ್ಸಿಂಗ್ ಅದ ಬಳಿಕ ಇಲ್ಲಿಯ ತನಕ ಎಲ್ಲಾ ಸಾಕ್ಷ್ಯಗಳನ್ನ ನಾಶ ಮಾಡಿದ ಪೊಲೀಸ್ ಇಲಾಖೆಗೆ ನನ್ನ ಧಿಕ್ಕಾರ. ನಿಮ್ಮತ್ರ ನ್ಯಾಯದ ಭಿಕ್ಷೆ ಬೇಡಲು ಇಲ್ಲಿ ಸೇರಿಲ್ಲ. ನೀವು ಮಾಡಿದ ತಪ್ಪುಗಳನ್ನ ಜನರ ಮುಂದೆ ಇಟ್ಟಿದ್ದೇವೆ. ಪೊಲೀಸರು ಇಲ್ಲಿ ಇವತ್ತು ಮಾಡುವ ವಿಡಿಯೋ, ಅವತ್ತು ಮಾಡಬೇಕಿತ್ತು. 2012ರಲ್ಲಿ ತೆಗೆದ ಸಿಸಿಟಿವಿ ವಿಡಿಯೋ ಎಲ್ಲಿದೆ ಎಂದು ಈಗ ಎಸ್ಐಟಿ ತನಿಖೆ ಮಾಡಬೇಕು. 

ಇದನ್ನ ನಾನು ಹೇಳಿಲ್ಲ, ಆಗಿನ ಎಸ್ಪಿ ಅಭಿಷೇಕ್ ಗೊಯಲ್ ಹೇಳಿದ್ದರು. ಎರಡು ವಿಡಿಯೋ ಫುಟೇಜ್ ಇದೆ, ಆರೋಪಿಗಳನ್ನ ಹಿಡಿಯುತ್ತೇವೆ ಎಂದಿದ್ರು.‌ ಈಗಿನ SIT ಗೆ ಮನವಿ ಮಾಡುತ್ತೇವೆ, ಎರಡು ಸಿಸಿಟಿವಿ ವಿಡಿಯೋಗಳು ಎಲ್ಲಿ ಹೋಗಿದೆ ಎಂದು ತನಿಖೆ ಆಗಬೇಕು.‌ ಸೌಜನ್ಯಳನ್ನ ಅಪಹರಣ ಮಾಡಿದ ವಿಡಿಯೋ ಅದರಲ್ಲಿ ಇದೆ. SIT ಯಲ್ಲಿ ಇರುವ ಅಧಿಕಾರಿಗಳ ಬಗ್ಗೆ ಪೋಷಕರಿಗೆ ಅನುಮಾನವಿದೆ, SIT ಅಧಿಕಾರಿಗಳತ್ರ ನ್ಯಾಯ ಕೇಳೋದಿಲ್ಲ. ರಾಜ್ಯದ ಮುಖ್ಯಮಂತ್ರಿ ಹಾಗು ಗೃಹ ಮಂತ್ರಿಗಳ ಬಳಿ ನ್ಯಾಯ ಕೇಳುತ್ತೇವೆ‌.‌ ನ್ಯಾಯ ಸಿಗುವವರೆಗೆ ನಾವು ವಿರಮಿಸೋದಿಲ್ಲ. 

ನಮ್ಮನ್ನ ಬುರುಡೆ ಗ್ಯಾಂಗ್ ಎಂದು ಬಿಂಬಿಸುವ ಕೆಲಸ ಆಯ್ತು.‌ ತಪ್ಪುಗಳು ನಡೆಯೋದು ಸರ್ವೇ ಸಾಮಾನ್ಯ. ಪದೇ ಪದೇ ತಪ್ಪಾದ್ರೆ ಅಕ್ಷಮ್ಯ ಅಪರಾಧವಾಗುತ್ತದೆ. ಸೌಜನ್ಯ ಎನ್ನುವ ಒಂದು ಹೆಣ್ಣಮಗಳಲ್ಲ, ಇಲ್ಲಿ ಸಾವಿರಾರು ಹೆಣ್ಣುಮಕ್ಕಳ ಮಾರಣ ಹೋಮವಾಗಿದೆ‌.‌ ಈ ಕೈಯಲ್ಲಿ ರಕ್ತ ಆಂಟಿಕೊಳ್ಳಲು ಬಿಡಬೇಡಿ ನ್ಯಾಯ ಕೊಡಿ ನಮಗೆ‌. ನಮ್ಮ ಸೌಜನ್ಯಳ ಶಕ್ತಿಯ ಹಿಂದೆ ಬಿದ್ರೆ, ಈ ಬಾರಿ ನಮಗೆ ನ್ಯಾಯ ಸಿಗದೇ ಹೋದ್ರೆ ರಾಜ್ಯ ಮಟ್ಟದಲ್ಲಿ ಲಕ್ಷಾಂತರ ಜನ ಸೇರಿಸಿ ಹೋರಾಟ ಮಾಡುತ್ತೇವೆ. 

ಹಿಂದಿನ ಎಸ್ ಐ ಟಿ ಸೌಜನ್ಯಾ ಪರ ಹೋರಾಟಗಾರರನ್ನ ಕಟ್ಟಿಹಾಕಲು ನೋಡಿತ್ತು‌. ಕೊನೆಗೆ ಎಸ್ಐಟಿಯಲ್ಲಿ ಎರಡು ತಂಡವಾಯ್ತು. ಸೌಜನ್ಯ ಹೋರಾಟಗಾರರನ್ನ ಕಟ್ಟಿ ಹಾಕಲು ನೋಡಿತ್ತು. ಚಿನ್ನಯ್ಯನನ್ನ ಹೆದರಿಸಿ ಬೆದರಿಸಿ ಹೇಳಿಕೆ ಬದಲಾಯಿಸಿದ್ರು. 13 ಹೊಂಡದಲ್ಲಿ ಹೆಣ ಸಿಗದಾಗ ಅದು ಷಡ್ಯಂತ್ರ. ಆದರೆ ಆ ಹೊಂಡದಲ್ಲಿ ಹೆಣ ಸಿಕ್ಕಿದೆ ಎಂದಾಗ ಕಾರ್ಯಾಚರಣೆ ನಿಲ್ಲಿಸಿದ್ರು. ಹಾಗಾಗಿ ಚಿನ್ನಯ್ಯ ಬಿಡುಗಡೆಯಾಗಿ ಹೊರಗಡೆ ಬಂದಿದ್ದ. ನನ್ನ ವಿರುದ್ಧ ಸುಳ್ಳು ಕೇಸ್ ಹಾಕಿಸಿ ಗಡಿಪಾರಿಗೆ ಆದೇಶ ಮಾಡಿಸಿದ್ದು ಇಲ್ಲಿಯ ಡಿವೈಎಸ್ಪಿ ವಿಜಯ ಪ್ರಸಾದ್. ನಾನು ಗಡಿಪಾರು ಆಗಿ ವಾಪಸ್ ಬರುವಾಗ ಅದೇ ವ್ಯಕ್ತಿ ಅಮಾನತಾಗಿ ಮನೆಗೆ ಹೋಗಿದ್ದ. ಇದು ಅಣ್ಣಪ್ಪ ಸ್ವಾಮಿ, ಸೌಜನ್ಯ ಶಕ್ತಿ!  

ಎಲ್ಲ ನಡೆದು ಒಂದೇ ವರ್ಷದಲ್ಲಿ ಸುಪ್ರೀಂ ಕೋರ್ಟ್ ಪೊಲೀಸರಿಗೆ ಚಾಟಿ ಬೀಸಿದೆ. ಒಂದು ಶಕ್ತಿ ಈ ಹೋರಾಟವನ್ನು ಕಾಪಾಡುತ್ತಿದೆ. ಧರ್ಮಸ್ಥಳದಲ್ಲಿ ಅತ್ಯಾಚಾರ ಮಾಡುವ ಹೆಗ್ಗಣಗಳನ್ನ ಹಿಡಿಯಿರಿ ಅನ್ನೋದು ತಪ್ಪಾ?  ನಾಗಲಕ್ಷ್ಮಿ ಚೌಧರಿಯಾವರೇ ನೀವು ಕಡ್ಲೆಪುರಿ ತಿನ್ನುತ್ತಾ ಇದ್ರಾ?ವರದಿ ಬಂದು ನೀವು ಮೈಕೊಡವಿ ನಿಲ್ಲಲು 6 ತಿಂಗಳು ಬೇಕಾಯ್ತು. ಆದರೆ ಕೊನೆಗಾದ್ರೂ ನೀವು ನಮ್ಮ ಜೊತೆ ನ್ಯಾಯಾಕ್ಕಾಗಿ ಸೇರಿದ್ರಲ್ಲ. ನಿಮ್ಮ ಬಗ್ಗೆ ಗೌರವವಿದೆ. ಸರಕಾರ ಸೌಜನ್ಯ ಹೆಸರಲ್ಲಿ ಹೆಲ್ಪ್ ಲೈನ್ ಶುರು ಮಾಡಬೇಕು. ಯಾವ ಹೆಣ್ಣಿನ ತಾಯಿಯೂ ಮುಂದೆ ಕಣ್ಣೀರು ಹಾಕಬಾರದು ಎಂದರು ಮಹೇಶ್ ಶೆಟ್ಟಿ. 

ಈಗಿನ SIT ಗೆ ಮಾಹಿತಿ ಬೇಕಾದ್ರೆ ಸತ್ಯ ಬೇಕಾದ್ರೆ ನಾವು ನೀಡುತ್ತೇವೆ. ಯಾರನ್ನ ತನಿಖೆ ಮಾಡಬೇಕು, ಯಾರು ಅತ್ಯಾಚಾರಿಗಳನ್ನ ಬಚಾವ್ ಮಾಡಿದ್ದಾರೆಂದು ಹೇಳುತ್ತೇವೆ. ಸೌಜನ್ಯ ತಾಯಿ ಹೇಳಿದ ಆಧಾರದಲ್ಲಿ ತನಿಖೆ ಮಾಡಿದ್ರೆ ಆಗಿನ ತನಿಖಾಧಿಕಾರಿ ಯೋಗೀಶನನ್ನ ನೇತು ಹಾಕಿದ್ರೆ ಸತ್ಯ ಹೊರಬರುತ್ತದೆ. ಯೋಗೀಶ 5 ಮಂದಿಯನ್ನ ನಾನೇ ಬಚಾವ್ ಮಾಡಿದ್ದು ಎಂದು ಹೇಳಿದ್ದಾನೆ. ದೈವಗಳ ಮುಂದೆ ಪ್ರಮಾಣ ಮಾಡಿ ಹೇಳಿದ್ದಾನೆ. SIT ಯವರು ಮೊದಲು ಯೋಗೀಶ್ ನನ್ನ ನೇತಾಕಬೇಕು. ಮುಂದಿನ ದಿನ ಮಂಗಳೂರಿನ ನೆಹರು ಮೈದಾನದಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ಸೇರಿಸಿ ಹೋರಾಟ ಮಾಡಲಿದ್ದೇವೆ ಎಂದು ಹೇಳಿದರು. ‌

Sowjanya justice movement activist Mahesh Shetty Thimarody launched a scathing attack on the police department and political leaders, alleging that crucial evidence had been destroyed during the investigation into the 2012 death of Sowjanya, an SDM College student from Ujire.