ಬ್ರೇಕಿಂಗ್ ನ್ಯೂಸ್
11-10-26 03:20 pm HK News Staffer ದೇಶ - ವಿದೇಶ
ವಾಷಿಂಗ್ಟನ್, ಅ.11: ರಷ್ಯಾದಿಂದ ಕಚ್ಚಾ ತೈಲ ಖರೀದಿಸಿದ ಕಾರಣಕ್ಕೆ ಭಾರತದ ಮೇಲೆ ಭಾರೀ ದಂಡನೆ ವಿಧಿಸಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇದೀಗ ಯು- ಟರ್ನ್ ಹೊಡೆದಿದ್ದಾರೆ. ಅಮೆರಿಕದಲ್ಲಿ ಹೆಚ್ಚುತ್ತಿರುವ ತೈಲ ದರವನ್ನು ಸರಿದೂಗಿಸಲು ರಷ್ಯಾದಿಂದಲೇ ನೇರವಾಗಿ ಡೀಸೆಲ್ ಖರೀದಿಸಲು ಮುಂದಾಗಿದ್ದಾರೆ. ಅಮೆರಿಕದಲ್ಲಿ ಎದುರಾಗಿರುವ ಮಧ್ಯಂತರ ಚುನಾವಣೆಯಲ್ಲಿ ಜನರ ಸಿಟ್ಟು ತಗ್ಗಿಸಲು ಶತ್ರುವನ್ನು ಮಿತ್ರನಾಗಿಸಿದ್ದಾರೆ.
ದೇಶೀಯವಾಗಿ ಗಗನಕ್ಕೇರಿರುವ ಇಂಧನ ದರಗಳನ್ನು ನಿಯಂತ್ರಿಸಲು ಟ್ರಂಪ್ ಮಾಸ್ಕೋ ಮೇಲಿನ ನಿರ್ಬಂಧಗಳನ್ನು ದಿಢೀರ್ ಸಡಿಲಿಸಿದ್ದು, ರಷ್ಯಾದಿಂದ ಲಕ್ಷಾಂತರ ಟನ್ ಡೀಸೆಲ್ ಆಮದು ಮಾಡಿಕೊಳ್ಳುವ ಒಪ್ಪಂದ ಮಾಡಿಕೊಂಡಿದ್ದಾರೆ. ತೈಲ ದರ ಹೆಚ್ಚಳದಿಂದಾಗಿ ಅಮೆರಿಕದಲ್ಲಿ ಜೀವನ ವೆಚ್ಚ ವಿಪರೀತ ಹೆಚ್ಚಿದ್ದು, ಜನಸಾಮಾನ್ಯರಲ್ಲಿ ಟ್ರಂಪ್ ಯುದ್ಧ ನೀತಿಗಳ ಬಗ್ಗೆ ತೀವ್ರ ವಿರೋಧ ಎದ್ದಿದೆ. ಇದರಿಂದಾಗಿ ಸಂಸತ್ತಿನಲ್ಲಿ ಹಿಡಿತ ಕಳೆದುಕೊಳ್ಳುವ ಭೀತಿಯಲ್ಲಿರುವ ರಿಪಬ್ಲಿಕನ್ ಪಕ್ಷಕ್ಕೆ ಮಧ್ಯಂತರ ಚುನಾವಣೆ ನಿರ್ಣಾಯಕವಾಗಿದ್ದು ಜನರ ಸಿಟ್ಟು ತಗ್ಗಿಸಲು ಅನಿವಾರ್ಯ ಕ್ರಮಗಳನ್ನು ಕೈಗೊಂಡಿದ್ದಾರೆ.
ಇರಾನ್ ಜೊತೆಗಿನ ಸಂಘರ್ಷದ ಬಳಿಕ, ವಿಶ್ವದ ಪ್ರಮುಖ ಇಂಧನ ಜಲಮಾರ್ಗವಾದ ಹಾರ್ಮುಜ್ ಜಲಸಂಧಿಯಲ್ಲಿ ತೈಲ ಸಾಗಣೆಗೆ ಸಂಕಷ್ಟ ಎದುರಾಗಿತ್ತು. ಹೀಗಾಗಿ ಅಮೆರಿಕದಲ್ಲಿ ಪೆಟ್ರೋಲ್ ಬೆಲೆ ಶೇ. 46ರಷ್ಟು ಜಿಗಿದು ಪ್ರತಿ ಗ್ಯಾಲನ್ಗೆ 4.37 ಡಾಲರ್ ತಲುಪಿತ್ತು. ಡೀಸೆಲ್ ಬೆಲೆ ಶೇ. 67ರಷ್ಟು ಏರಿಕೆಯಾಗಿದ್ದು ಪ್ರತಿ ಗ್ಯಾಲನ್ ದರ 6.28 ಡಾಲರ್ ತಲುಪಿದೆ. ಇದರ ಪರಿಣಾಮ ದೇಶೀಯವಾಗಿ ಜನರ ಸಿಟ್ಟು ಟ್ರಂಪ್ ಮೇಲೆ ತಿರುಗಿದ್ದು ಚುನಾವಣೆಯಲ್ಲಿ ವಿರೋಧ ಕಾಣಿಸಿಕೊಳ್ಳುವ ಸಾಧ್ಯತೆ ನಿಚ್ಚಳವಾಗಿದೆ.
ಇದರ ಪರಿಣಾಮ ಎನ್ನುವಂತೆ, ಅತ್ತ ಉಕ್ರೇನ್ ಜೊತೆಗಿನ ಸಂಘರ್ಷ ನಡುವೆಯೇ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ಟ್ರಂಪ್ ಮಾತುಕತೆ ನಡೆಸಿದ್ದಾರೆ. ಇದರ ಬೆನ್ನಲ್ಲೇ ಜಾಲತಾಣದಲ್ಲಿ ಟ್ರಂಪ್ ಮಾಹಿತಿ ಹಂಚಿಕೊಂಡಿದ್ದು ಅಮೆರಿಕ ಹಾಗೂ ಜಾಗತಿಕ ಮಾರುಕಟ್ಟೆಗೆ ರಷ್ಯಾ 3,00,000 ಟನ್ಗಳಿಗೂ ಅಧಿಕ ಡೀಸೆಲ್ ಪೂರೈಸಲಿದೆ ಎಂದು ತಿಳಿಸಿದ್ದಾರೆ. ನವೆಂಬರ್ನಲ್ಲಿ ಹೆಚ್ಚುವರಿಯಾಗಿ 5,00,000 ಟನ್ ಹಾಗೂ ನಂತರ ಹಂತವಾಗಿ 10 ಲಕ್ಷ ಟನ್ ಡೀಸೆಲ್ ಪೂರೈಕೆಯಾಗಲಿದೆ ಎಂದು ಹೇಳಿದ್ದಾರೆ.
ಇದೇ ವೇಳೆ, ರಷ್ಯಾದ ಮೇಲಿನ ನಿರ್ಬಂಧಗಳನ್ನು ಸಡಿಲಿಸಿದ ಟ್ರಂಪ್ ನಿರ್ಧಾರಕ್ಕೆ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ರಷ್ಯಾದ ತೈಲ ಸಂಸ್ಕರಣಾಗಾರಗಳ ಮೇಲೆ ಉಕ್ರೇನ್ ನಡೆಸಿದ ದಾಳಿಗಳೇ ಜಾಗತಿಕ ತೈಲ ದರ ಏರಿಕೆಗೆ ಕಾರಣ ಎಂದು ಟ್ರಂಪ್ ಆರೋಪಿಸಿದ್ದು ಉಕ್ರೇನ್ ಅಧ್ಯಕ್ಷರನ್ನು ಕೆರಳಿಸಿದೆ. ಯುದ್ಧ ನಿಲ್ಲಿಸಲು ಅಮೆರಿಕ ಮತ್ತು ಉಕ್ರೇನ್ ಸಂಧಾನಕಾರರು ಸಭೆ ನಡೆಸುತ್ತಿರುವ ನಡುವೆಯೇ ಈ ತೈಲ ಒಪ್ಪಂದ ಬಹಿರಂಗಗೊಂಡಿದೆ. ಅಮೆರಿಕವನ್ನು ನಂಬಿ ಸಂಘರ್ಷಕ್ಕಿಳಿದಿದ್ದ ಉಕ್ರೇನ್ ಈಗ ಮಿತ್ರನ ಬಗ್ಗೆಯೇ ಮುನಿಸಿಕೊಂಡಿದೆ.
08-10-26 08:00 pm
HK News Staffer
B.Y. Vijayendra: ಸ್ಟಿಂಗ್, ಡಿಂಗ್ ಆಪರೇಷನ್ ಮಾ...
08-10-26 04:38 pm
ಜನಸಾಮಾನ್ಯರು ಅಪಘಾತದಲ್ಲಿ ಸತ್ತರೆ 5 ಲಕ್ಷ ಕೊಡಕ್ಕಾಗ...
07-10-26 10:45 pm
HD Kumaraswamy, DK Shivakumar: ಡಿಕೆಶಿ ಸಿಎಂ ಆಗ...
07-10-26 09:16 pm
ಬೆಂಗಳೂರು ನಗರದಲ್ಲಿ ಐದು ಕಮಿಷನರೇಟ್ ; ವಿಭಜನೆಗೆ ಸಚ...
06-10-26 10:46 pm
11-10-26 10:28 pm
HK News Desk
ರಷ್ಯನ್ ತೈಲಕ್ಕಾಗಿ ಭಾರತಕ್ಕೆ ಬರೆ ಹಾಕಿದ್ದ ಅಮೆರಿಕ...
11-10-26 03:20 pm
ರಿಯಾದ್ ಏರ್ಪೋರ್ಟ್ ಮೇಲೆ ಹೌತಿಗಳಿಂದ ಬಾಂಬ್ ದಾಳಿ ;...
11-10-26 02:34 pm
Elon Musk , Ambani, Modi: ಭಾರತದ ಆತ್ಮೀಯ ಪ್ರಧಾನ...
10-10-26 10:31 pm
ಸಿಇಸಿ ವಿರುದ್ಧ ದೆಹಲಿ, ಮುಂಬೈನಲ್ಲಿ ಭಾರೀ ಪ್ರತಿಭಟನ...
10-10-26 07:33 pm
11-10-26 06:35 pm
HK News Staffer
Someshwar Beach, Mangalore: ಸೋಮೇಶ್ವರದಲ್ಲಿ ಸಮು...
11-10-26 05:37 pm
Mahesh Shetty Thimarodi, Sowjanya Case: ಸೌಜನ್...
10-10-26 09:27 pm
Sowjanya, Mangalore, Justice: ಬೆಳ್ತಂಗಡಿಯಲ್ಲಿ...
10-10-26 09:17 pm
ಕರ್ನಾಟಕ ಕಬಡ್ಡಿ ಪ್ರೀಮಿಯರ್ ಲೀಗ್ ; ಉತ್ತರ ಕನ್ನಡ ಸ...
10-10-26 05:09 pm
10-10-26 02:27 pm
HK News Staffer
ಮೃಗಾಲಯಕ್ಕೆ ಗಂಡನೊಂದಿಗೆ ಬಂದ ನವವಿವಾಹಿತೆ: ಪತಿ ಬೈಕ...
09-10-26 08:41 pm
Dharwad Accident: ಧಾರವಾಡ ; ಕಾರು - ಕ್ಯಾಂಟರ್ ನಡ...
09-10-26 05:37 pm
ಕೊರಿಯರ್ ನಲ್ಲಿ ಪಂಜಾಬಿನಿಂದ ಮಂಗಳೂರಿಗೆ ಎಂಡಿಎಂಎ ಪೂ...
09-10-26 03:25 pm
Nisha Raphael, POCSO: 11 ವರ್ಷದ ಬಾಲಕನ ಮೇಲೆ ಲೈಂ...
09-10-26 03:23 pm