ಬ್ರೇಕಿಂಗ್ ನ್ಯೂಸ್
05-10-26 12:35 pm HK News Staffer ಕರಾವಳಿ
ಮಂಗಳೂರು, ಅ.5 : ಇತ್ತೀಚೆಗೆ ಮಂಗಳೂರಿನಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಸುರತ್ಕಲ್ ಬಳಿಯ ಎಕ್ಕಾರಿನಲ್ಲಿ ತಿರುಪತಿ ತಿರುಮಲ ಮಾದರಿಯಲ್ಲೇ ತಿರುಪತಿ ವೆಂಕಟೇಶ್ವರ ದೇವಸ್ಥಾನ ನಿರ್ಮಾಣಕ್ಕೆ ಹತ್ತು ಎಕರೆ ಜಾಗ ಮಂಜೂರು ಮಾಡಲಾಗಿತ್ತು. ಆದರೆ ಇದೀಗ, ತಿರುಪತಿ ಮಾದರಿಯ ದೇಗುಲ ನಿರ್ಮಾಣಕ್ಕೆ ಸ್ಥಳೀಯರಿಂದ ವಿರೋಧ ವ್ಯಕ್ತವಾಗಿದೆ.
ತಿರುಪತಿ ತಿರುಮಲ ದೇಗುಲ (TTD) ವತಿಯಿಂದ ಎಕ್ಕಾರಿನ ಸ್ವಾಮಿಲಪದವು ಬಳಿಯಲ್ಲಿ ಬೃಹತ್ ವೆಂಕಟೇಶ್ವರ ದೇವಾಲಯ ನಿರ್ಮಾಣಕ್ಕೆ ಮುಂದಾಗಿರುವಾಗಲೇ ಎಕ್ಕಾರು ಭಾಗದಲ್ಲಿ ಸ್ಥಳೀಯರು ದೈವದ ಕಟ್ಟುಕಟ್ಟಲೆ ನೆನಪಿಸಿದ್ದಾರೆ. ಇಲ್ಲಿನ ಕಾರಣಿಕದ ಎಕ್ಕಾರು ಶ್ರೀ ಕೊಡಮಣಿತ್ತಾಯ ದೈವಸ್ಥಾನದ ಕಟ್ಟುಕಟ್ಟಳೆ ಪ್ರಕಾರ ಮತ್ತೊಂದು ಮುಗುಳಿ ಇರುವ ದೇವಸ್ಥಾನ ನಿರ್ಮಿಸುವುದು ಸರಿಯಲ್ಲ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ದೈವಸ್ಥಾನದ ಪ್ರಮುಖರು ಈ ಬಗ್ಗೆ ಜಿಲ್ಲಾಧಿಕಾರಿಯವರಿಗೆ ಮತ್ತು ರಾಜಕೀಯ ಪ್ರಮುಖರಿಗೆ ಗಮನಕ್ಕೆ ತಂದಿದ್ದಾರೆ. ಎಕ್ಕಾರು ಕೊಡಮಣಿತ್ತಾಯ ದೈವಸ್ಥಾನಕ್ಕೆ ಸುಮಾರು 800 ವರ್ಷಗಳ ಇತಿಹಾಸವಿದ್ದು ಈ ಮಾಗಣೆಯ ಊರವರಿಗೆ ಸುರತ್ಕಲ್ ಸದಾಶಿವ ಮಹಾಗಣಪತಿ ದೇವಸ್ಥಾನ ಒಂದೇ ಆಲಯ. ಅದು ಬಿಟ್ಟರೆ ಎಕ್ಕಾರು ಮಾಗಣೆಯಲ್ಲಿ ಮುಗುಳಿ ಮತ್ತು ಧ್ವಜಸ್ತಂಭ ಇರುವ ಮತ್ತೊಂದು ದೇವಸ್ಥಾನ ಇಲ್ಲ. ಈ ಮಾಗಣೆಯಲ್ಲಿ ಮುಗುಳಿ, ಧ್ವಜಸ್ತಂಭ ಇರುವ ದೇವಸ್ಥಾನ ಅಥವಾ ದೈವಸ್ಥಾನ ಬರುವಂತಿಲ್ಲ ಎನ್ನುವುದು ದೈವಗಳ ನುಡಿ.




'ಕಟ್ಟಿ ದೇವಸ್ಥಾನ ಇಜ್ಜಿ, ದೀಪಾಯಿ ಮುಗುಳಿ ಇಜ್ಜಿ, ದೇವೆರ್ಲಾ ಎಂಕುಲೆ ದೈವಲಾ ಎಂಕುಲೆ' ಎಂದು ದೈವಗಳು ಪ್ರತಿ ವರ್ಷವೂ ನುಡಿ ಕೊಡುವುದು ವಾಡಿಕೆ. ಕಳೆದ 800 ವರ್ಷಗಳಿಂದಲೂ ಇದೇ ಕಟ್ಟುಕಟ್ಟಳೆ ನಡೆದುಕೊಂಡು ಬಂದಿದೆ. ಹೀಗಿರುವಾಗ ಈ ಮಾಗಣೆಯಲ್ಲಿ ಮುಗುಳಿ, ಧ್ವಜಸ್ತಂಭ ಇರುವ ಮತ್ತೊಂದು ದೇವಸ್ಥಾನ ನಿರ್ಮಾಣವಾದರೆ ಊರಿಗೆ ಅಪಚಾರ ಎಂಬ ನಂಬಿಕೆ ಗ್ರಾಮಸ್ಥರಲ್ಲಿದೆ.
ತಿರುಪತಿ ತಿರುಮಲ ದೇವಸ್ಥಾನಕ್ಕೆ ಮಂಗಳೂರಿನಿಂದ ಕಟೀಲಿಗೆ ಹೋಗುವ ರಸ್ತೆಯಲ್ಲಿ ಪೆರ್ಮುದೆ ಬಳಿಯ ಸ್ವಾಮಿಲಪದವು ಎಂಬಲ್ಲಿನ ಖಾಲಿ ಸರ್ಕಾರಿ ಜಾಗವನ್ನು ಮಂಜೂರು ಮಾಡಲಾಗಿದೆ. ಇಲ್ಲಿಂದ ಎರಡು ಕಿಮೀ ಅಂತರದಲ್ಲಿ ಎಕ್ಕಾರು ಕೊಡಮಣಿತ್ತಾಯ ದೈವದ ಗುಡ್ಡೆ ಸ್ಥಾನ ಇದೆ. ಹೀಗಾಗಿ ದೈವದ ನುಡಿಗೂ ಇಲ್ಲಿ ಹೊಸ ದೇವಸ್ಥಾನ ಬರುವುದಕ್ಕೂ ವಿರೋಧಾಭಾಸ ಇದೆ ಎನ್ನುವುದು ಊರಿನ ಪ್ರಮುಖರ ವಿವರಣೆ. ನಾವು ಹೇಳುವುದನ್ನು ಹೇಳುತ್ತೇವೆ, ಮುಂದಿನದನ್ನು ದೈವ ತೀರ್ಮಾನ ಮಾಡಲಿ ಎಂದು ಎಕ್ಕಾರು ಮಾಗಣೆಯ ಪ್ರಸನ್ನ ಶೆಟ್ಟಿ ಅಭಿಪ್ರಾಯ ಪಟ್ಟಿದ್ದಾರೆ.
03-10-26 05:30 pm
HK News Staffer
Urdu Habba Row: ವಿಧಾನಸೌಧ ಮೆಟ್ಟಿಲುಗಳಲ್ಲಿ ಉರ್ದು...
01-10-26 10:50 pm
‘ಕನ್ನಡದ ಶಿವಮಣಿ’ ಖ್ಯಾತಿಯ ಡ್ರಮ್ಮರ್ ದೇವ್ ನಿಧನ ;...
27-09-26 03:21 pm
ಬೆಂಗಳೂರಿಗೆ ಬಂದ ಶಾಸಕರೆಲ್ಲ ಎರಡೆರಡು ಮದುವೆಯಾಗಿದ್ದ...
25-09-26 04:49 pm
ರಾಜ್ಯ ಸರ್ಕಾರಕ್ಕೆ ಆರ್ಥಿಕ ಸಂಕಷ್ಟ ; ಬೆಳಗಾವಿ ವಿಟಿ...
25-09-26 03:11 pm
05-10-26 01:49 pm
HK News Staffer
ನಾನು ಸಾವಿಗೆ ಅಂಜಲ್ಲ, ವಿಮಾನ ಪತನವೇ ಉದ್ದೇಶವಾಗಿತ್ತ...
05-10-26 11:40 am
Ramesh Chennithala: ಕೇರಳದಲ್ಲಿ ಪಿಡಬ್ಲ್ಯೂಡಿ ರಸ್...
04-10-26 07:07 pm
Smith Machar, benjamin netanyahu: ಸ್ಮಿತ್ ಮಚ್ಚ...
04-10-26 12:34 pm
Smith Machar, Mankind Pharma: 180 ಜೀವ ಉಳಿಸಿದ...
03-10-26 01:00 pm
05-10-26 12:35 pm
HK News Staffer
'ಮುಳಿಯ ಜುವೆಲ್ಲರಿ' ಮಾಲೀಕ ಪುತ್ತೂರಿನ ಮುಳಿಯ ಶ್ಯಾಮ...
05-10-26 11:41 am
brijesh chowta: ಹೈಕೋರ್ಟ್ ಪೀಠ ಸ್ಥಾಪನೆಗೆ ಒಗ್ಗಟ್...
03-10-26 09:56 pm
Tammanna Shetty, mysore kambala: ಮೈಸೂರು ದಸರಾ...
03-10-26 01:27 pm
KSCA, Mangaluru: ಮಂಗಳೂರಿನಲ್ಲಿ ಅಂತಾರಾಷ್ಟ್ರೀಯ ಕ...
02-10-26 05:20 pm
05-10-26 12:28 pm
HK News Staffer
Belthangady News, Banakal Accident, Mudigere...
05-10-26 10:49 am
bantwal rain: ಕರಾವಳಿ ಭಾಗದಲ್ಲಿ ಹಿಂಗಾರು ಮಳೆ ಅಬ್...
05-10-26 10:04 am
ಕಾಲೇಜು ಕ್ಯಾಂಟೀನ್ ಬಳಿ ಬಿಸಿಎ ವಿದ್ಯಾರ್ಥಿಗೆ ಚೂರಿ...
04-10-26 12:51 pm
ಪುತ್ತೂರು ; ವಿದ್ಯುತ್ ಸ್ಪರ್ಶಿಸಿ ಪವರ್ಮ್ಯಾನ್ ಸಾ...
03-10-26 08:46 pm