ಬ್ರೇಕಿಂಗ್ ನ್ಯೂಸ್
04-10-26 12:34 pm HK News Staffer ದೇಶ - ವಿದೇಶ
ಟೆಲ್ ಅವಿವ್, ಅ.04: ಫ್ಲೈ ದುಬೈ ವಿಮಾನದಲ್ಲಿ ಸಂಭವಿಸಿದ ಕಾಕ್‌ಪಿಟ್ ದಾಳಿಯ ವೇಳೆ ಧೈರ್ಯದಿಂದ ಪರಿಸ್ಥಿತಿ ನಿಭಾಯಿಸಿ ಪ್ರಯಾಣಿಕರ ಜೀವ ಉಳಿಸಿದ ಭಾರತೀಯ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಅವರಿಗೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ವಿಶೇಷ ಗೌರವ ನೀಡಿದ್ದಾರೆ. 2027ರ ಮೇ ತಿಂಗಳಲ್ಲಿ ನಡೆಯಲಿರುವ ಇಸ್ರೇಲ್ ಸ್ವಾತಂತ್ರ್ಯ ದಿನಾಚರಣೆಯ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಜ್ಯೋತಿ ಬೆಳಗಿಸಲು ಮಚ್ಚಾರ್ ಅವರಿಗೆ ಆಹ್ವಾನ ನೀಡಿದ್ದಾರೆ.
ನೆತನ್ಯಾಹು ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸ್ಮಿತ್ ಮಚ್ಚಾರ್ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿದ್ದಾರೆ. ಈ ವೇಳೆ ಮಚ್ಚಾರ್ ಅವರ ಧೈರ್ಯವನ್ನು ಶ್ಲಾಘಿಸಿದ ನೆತನ್ಯಾಹು, ಭಾರತ, ಇಸ್ರೇಲ್ ಹಾಗೂ ಇಡೀ ಜಗತ್ತಿನ ನಿಜವಾದ ಹೀರೋ ಎಂದು ಕೊಂಡಾಡಿದ್ದಾರೆ. ಈ ಸಂಭಾಷಣೆಯ ವಿಡಿಯೋವನ್ನು ನೆತನ್ಯಾಹು ಕಚೇರಿ ಬಿಡುಗಡೆ ಮಾಡಿದೆ.
ಇಸ್ರೇಲ್ ಸ್ವಾತಂತ್ರ್ಯ ದಿನದ ಸಂದರ್ಭದಲ್ಲಿ ನಡೆಯುವ ಜ್ಯೋತಿ ಬೆಳಗಿಸುವ ಗೌರವ ಸಾಮಾನ್ಯವಾಗಿ ಇಸ್ರೇಲಿ ನಾಗರಿಕರಿಗೆ ನೀಡಲಾಗುತ್ತದೆ. ಈ ಬಾರಿ ಭಾರತೀಯ ಪೈಲಟ್ ಸ್ಮಿತ್ ಮಚ್ಚಾರ್ ಹಾಗೂ ಪ್ರಧಾನಿ ಮೋದಿ ಅವರನ್ನು ಆಹ್ವಾನಿಸಿರುವುದು ವಿಶೇಷ.
ಸೆಪ್ಟೆಂಬರ್ 30ರಂದು ದುಬೈಯಿಂದ ಟೆಲ್ ಅವಿವ್‌ಗೆ ತೆರಳುತ್ತಿದ್ದ ಫ್ಲೈದುಬೈ FZ1073 ವಿಮಾನದಲ್ಲಿ ಘಟನೆ ಸಂಭವಿಸಿತ್ತು. ಸ್ಮಿತ್ ಮಚ್ಚಾರ್ ಅವರ ಹೇಳಿಕೆಯ ಪ್ರಕಾರ, ಒಮಾನಿ ಸಹ-ಪೈಲಟ್ ಹಮಾಮ್ ಅಲ್-ಹಮಾಮಿ ಪ್ರಾರ್ಥನೆ ಮಾಡಲು ಸಮಯ ಕೇಳಿ ಎದ್ದಿದ್ದರು. ಸಹ ಪೈಲಟ್ ಪ್ರಾರ್ಥನೆ ಮಾಡುತ್ತಿದ್ದಾನೆ ಎಂದು ಭಾವಿಸಿದ ಮಚ್ಚಾರ್ ಗೌರವದ ಕಾರಣದಿಂದ ಹಿಂದೆ ತಿರುಗಿ ನೋಡಿರಲಿಲ್ಲ. ಸುಮಾರು ನಾಲ್ಕೈದು ನಿಮಿಷಗಳ ಬಳಿಕ ಹಿಂಬದಿಯಿಂದ ತಲೆಗೆ ಭಾರಿ ಹೊಡೆತ ಬಿದ್ದಿದೆ. ಆರಂಭದಲ್ಲಿ ವಿಮಾನಕ್ಕೇ ಏನೋ ಗಂಭೀರ ಸಮಸ್ಯೆಯಾಗಿದೆ ಎಂದು ಭಾವಿಸಿದ್ದ ಮಚ್ಚಾರ್, ನಂತರ ತಮ್ಮ ಮೇಲೆಯೇ ದಾಳಿ ನಡೆಯುತ್ತಿದೆ ಎಂಬುದನ್ನು ಅರಿತುಕೊಂಡಿದ್ದಾಗಿ ನೆತನ್ಯಾಹು ಬಳಿ ಹೇಳಿದ್ದಾರೆ.


ಯುಎಇ ಅಧಿಕಾರಿಗಳ ಪ್ರಕಾರ, ಸಹ ಪೈಲಟ್ ಕಾಕ್‌ಪಿಟ್‌ನಲ್ಲಿದ್ದ ಕ್ರ್ಯಾಶ್ ಆಕ್ಸ್‌ನಿಂದ ಮಚ್ಚಾರ್ ಮೇಲೆ ದಾಳಿ ನಡೆಸಿದ್ದ. ಘಟನೆಗೆ ಸಂಬಂಧಿಸಿದಂತೆ ತನಿಖೆ ಮುಂದುವರಿದಿದ್ದು, ದಾಳಿಯ ಉದ್ದೇಶ ಹಾಗೂ ಇತರ ಅಂಶಗಳನ್ನು ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.
ದಾಳಿಯಲ್ಲಿ ಗಂಭೀರ ಗಾಯಗೊಂಡಿದ್ದರೂ ಮಚ್ಚಾರ್ ಕಾಕ್‌ಪಿಟ್ ಬಾಗಿಲು ತೆರೆಯಲು ಪ್ರಯತ್ನಿಸಿದ್ದಾರೆ. ಮೊದಲ ಪ್ರಯತ್ನದಲ್ಲಿ ಸಹ ಪೈಲಟ್ ಬಾಗಿಲನ್ನು ಮತ್ತೆ ಮುಚ್ಚಿದ್ದಾನೆ ಎಂದು ಮಚ್ಚಾರ್ ಹೇಳಿದ್ದಾರೆ. ನಂತರ ತಮ್ಮಲ್ಲಿದ್ದ ಕೊನೆಯ ಶಕ್ತಿಯನ್ನು ಬಳಸಿ ಬಾಗಿಲು ತೆರೆದಿದ್ದು, ಪ್ರಯಾಣಿಕರು ಮತ್ತು ಸಿಬ್ಬಂದಿ ಒಳಗೆ ಧಾವಿಸಿ ದಾಳಿ ನಡೆಸುತ್ತಿದ್ದ ಸಹ ಪೈಲಟ್‌ನನ್ನು ನಿಯಂತ್ರಣಕ್ಕೆ ತಂದಿದ್ದಾರೆ.
03-10-26 05:30 pm
HK News Staffer
Urdu Habba Row: ವಿಧಾನಸೌಧ ಮೆಟ್ಟಿಲುಗಳಲ್ಲಿ ಉರ್ದು...
01-10-26 10:50 pm
‘ಕನ್ನಡದ ಶಿವಮಣಿ’ ಖ್ಯಾತಿಯ ಡ್ರಮ್ಮರ್ ದೇವ್ ನಿಧನ ;...
27-09-26 03:21 pm
ಬೆಂಗಳೂರಿಗೆ ಬಂದ ಶಾಸಕರೆಲ್ಲ ಎರಡೆರಡು ಮದುವೆಯಾಗಿದ್ದ...
25-09-26 04:49 pm
ರಾಜ್ಯ ಸರ್ಕಾರಕ್ಕೆ ಆರ್ಥಿಕ ಸಂಕಷ್ಟ ; ಬೆಳಗಾವಿ ವಿಟಿ...
25-09-26 03:11 pm
04-10-26 07:07 pm
HK News Staffer
Smith Machar, benjamin netanyahu: ಸ್ಮಿತ್ ಮಚ್ಚ...
04-10-26 12:34 pm
Smith Machar, Mankind Pharma: 180 ಜೀವ ಉಳಿಸಿದ...
03-10-26 01:00 pm
ಹನುಮಾನ್ ಚಾಲೀಸಾ ಜಪಿಸುತ್ತಲೇ ಕಾಕ್‌ಪಿಟ್ ಬಾಗಿಲು ತೆ...
02-10-26 05:28 pm
ಇಸ್ರೇಲ್ ತೆರಳುತ್ತಿದ್ದ ವಿಮಾನ ಹೈಜಾಕ್ ಯತ್ನ ? ಒಮಾ...
02-10-26 10:23 am
03-10-26 09:56 pm
HK News Staffer
Tammanna Shetty, mysore kambala: ಮೈಸೂರು ದಸರಾ...
03-10-26 01:27 pm
KSCA, Mangaluru: ಮಂಗಳೂರಿನಲ್ಲಿ ಅಂತಾರಾಷ್ಟ್ರೀಯ ಕ...
02-10-26 05:20 pm
Sowjanya case, Lokesh Jagalsar: ಸೌಜನ್ಯ ಪ್ರಕರಣ...
02-10-26 10:25 am
Madoor Yusuf Murder Case: ಜೈಲಿನಲ್ಲಿ ಮಾಡೂರು ಯೂ...
01-10-26 10:45 pm
04-10-26 12:51 pm
HK News Staffer
ಪುತ್ತೂರು ; ವಿದ್ಯುತ್ ಸ್ಪರ್ಶಿಸಿ ಪವರ್ಮ್ಯಾನ್ ಸಾ...
03-10-26 08:46 pm
Mangalore Crime, Mangalore Police, Delhi Thie...
03-10-26 06:39 pm
Kasaragod crime: ಕಾಸರಗೋಡು ; ಮನೆ ಮೇಲೆ ಬಿದ್ದ ಬೋ...
03-10-26 05:05 pm
Infra Developers, Vasudevan: ಬೆಂಗಳೂರಿನಲ್ಲಿ ಫ್...
03-10-26 03:41 pm