Madoor Yusuf Murder Case: ಜೈಲಿನಲ್ಲಿ ಮಾಡೂರು ಯೂಸುಫ್ ಹತ್ಯೆ ಪ್ರಕರಣ ; ಐವರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ, ಮಂಗಳೂರು ಕೋರ್ಟ್ ತೀರ್ಪು  

01-10-26 10:45 pm       Mangaluru Staffer   ಕರಾವಳಿ

2015ರಲ್ಲಿ ಮಂಗಳೂರು ಕಾರಾಗೃಹದಲ್ಲಿ ನಡೆದಿದ್ದ ಮಾಡೂರು ಯುಸೂಫ್ ಎಂಬಾತನ ಹತ್ಯೆ ಪ್ರಕರಣದಲ್ಲಿ ಐವರು ಆರೋಪಿತರಿಗೆ ಮಂಗಳೂರಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. 

ಮಂಗಳೂರು, ಅ.1: 2015ರಲ್ಲಿ ಮಂಗಳೂರು ಕಾರಾಗೃಹದಲ್ಲಿ ನಡೆದಿದ್ದ ಮಾಡೂರು ಯುಸೂಫ್ ಎಂಬಾತನ ಹತ್ಯೆ ಪ್ರಕರಣದಲ್ಲಿ ಐವರು ಆರೋಪಿತರಿಗೆ ಮಂಗಳೂರಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. 

ಸದ್ರಿ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿಗಳಾದ ಸೂರಿಂಜೆಯ ಲಿತೇಶ್ ಪೂಜಾರಿ, ಸುರತ್ಕಲ್ ಮಧ್ಯ ನಿವಾಸಿ ಶೋಭರಾಜ್, ಕಾಟಿಪಳ್ಳ ನಿವಾಸಿ ಯುವರಾಜ್, ಉಳಾಯಿಬೆಟ್ಟು ಪ್ರದೀಪ್ ಮತ್ತು ಸುಳ್ಯ ಬಾಳುಗೋಡು ನಿವಾಸಿ ಉಮೇಶ್ ಕೊಂಬಾರ್ ಎಂಬವರಿಗೆ ಮಂಗಳೂರಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಜಗದೀಶ್ ವಿ‌.ಎನ್ ಅವರು ಪ್ರಕರಣದಲ್ಲಿ ವಿಚಾರಣೆಯನ್ನು ಪೂರ್ಣಗೊಳಿಸಿ, ಅ.1ರಂದು ಜೀವಾವಧಿ  ಶಿಕ್ಷೆ ಹಾಗೂ 76,000  ರೂ. ದಂಡ ವಿಧಿಸಿ ಶಿಕ್ಷೆ ಪ್ರಕಟ ನೀಡಿರುತ್ತಾರೆ.

ಸದ್ರಿ ಪ್ರಕರಣದಲ್ಲಿ ವಿಶೇಷ ಸರಕಾರಿ ಅಭಿಯೋಜಕರಾದ ಬಿ.ಮೋಹನ್ ಕುಮಾರ್ ಸರಕಾರದ ಪರವಾಗಿ ವಾದಿಸಿರುತ್ತಾರೆ. ಸದ್ರಿ ಪ್ರಕರಣದ ತನಿಖೆಯನ್ನು ಅಂದಿನ ಮಂಗಳೂರು ಕೇಂದ್ರ ಉಪವಿಭಾಗ ಸಹಾಯಕ ಪೊಲೀಸ್ ಆಯುಕ್ತರಾಗಿದ್ದ ತಿಲಕ್ ಚಂದ್ರ ನಡೆಸಿ  ಆರೋಪಿಗಳ ವಿರುದ್ದ ದೋಷಾರೋಪಣ ಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ ಇತ್ತೀಚೆಗೆ ಐವರು ಆರೋಪಿಗಳನ್ನು ಸಾಕ್ಷ್ಯ ಕೊರತೆಯಿಂದ ಖುಲಾಸೆಗೊಳಿಸಿತ್ತು. ಉಳಿದ ಐವರು ಆರೋಪಿಗಳು ದೋಷಿಗಳೆಂದು ಹೇಳಿತ್ತು.

In a significant judgment in the Madoor Yusuf murder case, a Mangaluru court has sentenced all five accused to life imprisonment for the killing of Yusuf inside the jail.