ಬ್ರೇಕಿಂಗ್ ನ್ಯೂಸ್
01-10-26 11:20 am HK News Staffer ದೇಶ - ವಿದೇಶ
ನವದೆಹಲಿ, ಅ.1 : ಎರಡು ಸಾವಿರ ರೂ.ಗಿಂತ ಹೆಚ್ಚಿನ ಯುಪಿಐ ವಹಿವಾಟುಗಳಿಗೆ ಶುಲ್ಕ ವಿಧಿಸುವ ನೆಪದಲ್ಲಿ ವ್ಯಾಪಾರಸ್ಥರಿಗೆ ಮರ್ಚೆಂಟ್ ಡಿಸ್ಕೌಂಟ್ ರೇಟ್ (MDR) ವಿಧಿಸುವ ಪ್ರಸ್ತಾವದ ವಿರುದ್ಧ ಅಕ್ಟೋಬರ್ 2ರ ಗಾಂಧಿ ಜಯಂತಿಗೆ ದೇಶಾದ್ಯಂತ ನಡೆಸಲು ಉದ್ದೇಶಿಸಿದ್ದ ‘ನೋ ಯುಪಿಐ ಡೇ’ ಪ್ರತಿಭಟನೆಯಿಂದ ಎರಡು ಪ್ರಮುಖ ವ್ಯಾಪಾರಿ ಸಂಘಟನೆಗಳು ಹಿಂದೆ ಸರಿದಿವೆ. ‘ಆಲ್ ಇಂಡಿಯಾ ಕನ್ಸ್ಯೂಮರ್ ಪ್ರಾಡಕ್ಟ್ಸ್ ಡಿಸ್ಟ್ರಿಬ್ಯೂಟರ್ಸ್ ಫೆಡರೇಷನ್’ (AICPDF) ಮತ್ತು ‘ಆಲ್ ಇಂಡಿಯಾ ಮೊಬೈಲ್ ರಿಟೇಲರ್ಸ್ ಅಸೋಸಿಯೇಷನ್’ (AIMRA) ಬುಧವಾರ ಈ ನಿರ್ಧಾರ ಪ್ರಕಟಿಸಿವೆ.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿ ಮಾಡಿ MDR ಕುರಿತು ತಮ್ಮ ಅಹವಾಲುಗಳನ್ನು ಮಂಡಿಸಿದ ಬಳಿಕ ಸಂಘಟನೆಗಳು ಪ್ರತಿಭಟನೆ ಕೈಬಿಡುವ ನಿರ್ಧಾರ ತೆಗೆದುಕೊಂಡಿವೆ. ‘ಕಾನ್ಫೆಡರೇಷನ್ ಆಫ್ ಆಲ್ ಇಂಡಿಯಾ ಟ್ರೇಡರ್ಸ್’ (CAIT) ಪ್ರಧಾನ ಕಾರ್ಯದರ್ಶಿ ಪ್ರವೀಣ್ ಖಂಡೇಲ್ವಾಲ್ ನೇತೃತ್ವದ ನಿಯೋಗವು ಸಚಿವರನ್ನು ಭೇಟಿ ಮಾಡಿದ್ದು ನವರಾತ್ರಿ ಹಬ್ಬದ ಋತುವಿನಲ್ಲಿ ವ್ಯಾಪಾರ ಚಟುವಟಿಕೆ ಹೆಚ್ಚಾಗುವುದರಿಂದ, ಹಬ್ಬದ ಋತು ಮುಗಿಯುವವರೆಗೆ ಪ್ರಸ್ತಾವಿತ MDR ಜಾರಿಯನ್ನು ಮುಂದೂಡಬೇಕು ಎಂದು ನಿಯೋಗ ಮನವಿ ಮಾಡಿತು.
ಅಲ್ಲದೆ, ಪ್ರಸ್ತಾವಿತ 1 ಲಕ್ಷ ರೂ. ಗಳ ಮಿತಿಯನ್ನು 5 ಲಕ್ಷ ರೂ. ಗೆ ಹೆಚ್ಚಿಸಬೇಕು ಎಂದೂ ಕೋರಿಕೆ ಸಲ್ಲಿಸಿತು. ವ್ಯಾಪಾರಿ–ವ್ಯಾಪಾರಿ (M2M) ವಹಿವಾಟುಗಳನ್ನು MDR ವ್ಯಾಪ್ತಿಯಿಂದ ಹೊರಗಿಡಬೇಕು ಮತ್ತು ಈ ಕುರಿತು ವಿವರವಾಗಿ ಪರಿಶೀಲಿಸಿ ಮುಂದಿನ ಕ್ರಮದ ಬಗ್ಗೆ ಶಿಫಾರಸು ಮಾಡಲು ಸಮಿತಿಯೊಂದನ್ನು ರಚಿಸಬೇಕು ಎಂದೂ ಮನವಿ ಮಾಡಿತು. ‘ನಾವು ಎತ್ತಿರುವ ವಿಷಯಗಳನ್ನು ಸೂಕ್ತವಾಗಿ ಪರಿಗಣಿಸಿ, ಸೂಕ್ತ ರೀತಿಯಲ್ಲಿ ಬಗೆಹರಿಸಲಾಗುತ್ತದೆ ಎಂಬ ಭರವಸೆ ನಮಗಿದೆ’ ಎಂದು AICPDF ಮತ್ತು AIMRA ಹೇಳಿಕೆಯಲ್ಲಿ ತಿಳಿಸಿವೆ.
ಮಹಾರಾಷ್ಟ್ರ ಚೇಂಬರ್ ಆಫ್ ಕಾಮರ್ಸ್, ಇಂಡಸ್ಟ್ರಿ & ಅಗ್ರಿಕಲ್ಚರ್ (MCCIA), AICPDF, ಅಖಿಲ ಭಾರತೀಯ ಖಾದ್ಯ ತೈಲ ವ್ಯಾಪಾರಿ ಮಹಾಸಂಘ, ಆಲ್ ಇಂಡಿಯಾ ಜ್ಯುವೆಲ್ಲರ್ಸ್ ಮತ್ತು ಗೋಲ್ಡ್ಸ್ಮಿತ್ ಫೆಡರೇಷನ್, AIMRA ಹಾಗೂ ಫೆಡರೇಷನ್ ಆಫ್ ರಿಟೇಲ್ ಟ್ರೇಡರ್ಸ್ ವೆಲ್ಫೇರ್ ಅಸೋಸಿಯೇಷನ್ಗಳು ಅಕ್ಟೋಬರ್ 2 ಅನ್ನು ‘ನೋ ಯುಪಿಐ ಡೇ’ ಎಂದು ಘೋಷಿಸಿದ್ದವು.
ಅಕ್ಟೋಬರ್ 15ರಿಂದ MDR ಜಾರಿಗೆ ಸಿದ್ಧತೆ
ಕಳೆದ ಆರು ವರ್ಷಗಳಿಂದ UPI ವಹಿವಾಟುಗಳು ಉಚಿತವಾಗಿದ್ದವು. ಇದೀಗ ‘ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ’ (NPCI) ಆಯ್ದ UPI ಪಾವತಿಗಳಿಗೆ MDR ವ್ಯವಸ್ಥೆಯನ್ನು ಪರಿಚಯಿಸಿದ್ದು, ಅದು ಅಕ್ಟೋಬರ್ 15ರಿಂದ ಜಾರಿಗೆ ಬರುವ ಸಾಧ್ಯತೆ ಇದೆ.
ವ್ಯಕ್ತಿ–ವ್ಯಕ್ತಿ (P2P) ನಡುವಿನ UPI ವಹಿವಾಟುಗಳಿಗೆ ಯಾವುದೇ ಶುಲ್ಕ ಇರುವುದಿಲ್ಲ. ಆದರೆ ವ್ಯಕ್ತಿ–ವ್ಯಾಪಾರಿ (P2M) ನಡುವಿನ 2,000 ರೂ.ಗಿಂತ ಹೆಚ್ಚಿನ ವಹಿವಾಟುಗಳಿಗೆ ಶೇ. 0.40ರಷ್ಟು MDR ವಿಧಿಸಲಾಗುತ್ತದೆ. ಈ ಶುಲ್ಕಕ್ಕೆ ಗರಿಷ್ಠ ಮಿತಿ 300 ರೂ. ಆಗಿರುತ್ತದೆ. P2PM (ಪೀರ್-ಟು-ಪೀರ್ ಮರ್ಚೆಂಟ್) ಎಂದು ವರ್ಗೀಕರಿಸಲಾದ ಸಣ್ಣ ಮಾರಾಟಗಾರರಿಗೆ ಮಾಡುವ ಪಾವತಿಗಳಿಗೆ MDR ಇರುವುದಿಲ್ಲ. UPI ಮೂಲಕ ತಿಂಗಳಿಗೆ 1 ಲಕ್ಷ ರೂ. ವರೆಗೆ ಪಾವತಿ ಸ್ವೀಕರಿಸುವ ಸಣ್ಣ ಮಾರಾಟಗಾರರನ್ನು P2PM ಮಾರಾಟಗಾರರು ಎಂದು ವರ್ಗೀಕರಿಸಲಾಗಿದೆ. ಈ ವ್ಯವಸ್ಥೆಯಿಂದ ವಿಶೇಷವಾಗಿ ಗ್ರಾಮೀಣ ಮತ್ತು ಅರೆನಗರ ಪ್ರದೇಶಗಳಲ್ಲಿನ ಸಣ್ಣ ಉದ್ಯಮಗಳಿಗೆ ಪ್ರಯೋಜನವಾಗಲಿದೆ.
Two major trader organisations have withdrawn their proposed nationwide ‘No UPI Day’ protest scheduled for October 2, following a meeting with Union Finance Minister Nirmala Sitharaman over concerns regarding the proposed Merchant Discount Rate (MDR) on certain UPI transactions. The All India Consumer Products Distributors Federation (AICPDF) and All India Mobile Retailers Association (AIMRA) announced the decision on Wednesday.
27-09-26 03:21 pm
HK News Desk
ಬೆಂಗಳೂರಿಗೆ ಬಂದ ಶಾಸಕರೆಲ್ಲ ಎರಡೆರಡು ಮದುವೆಯಾಗಿದ್ದ...
25-09-26 04:49 pm
ರಾಜ್ಯ ಸರ್ಕಾರಕ್ಕೆ ಆರ್ಥಿಕ ಸಂಕಷ್ಟ ; ಬೆಳಗಾವಿ ವಿಟಿ...
25-09-26 03:11 pm
ಕರಾವಳಿಯಲ್ಲಿ ನೀರು ಸಂರಕ್ಷಣೆಗೆ ವೈಜ್ಞಾನಿಕ ಮಾಸ್ಟರ್...
23-09-26 11:02 pm
ಬರ ಪಟ್ಟಿಯಿಂದ ಇಂಡಿ, ಚಡಚಣ ಕೈಬಿಟ್ಟಿದ್ದಕ್ಕೆ ಅಸಮಾಧ...
23-09-26 05:14 pm
01-10-26 11:46 am
HK News Staffer
ಯುಪಿಐ ನೆಪದಲ್ಲಿ ವ್ಯಾಪಾರಸ್ಥರಿಗೆ ಶುಲ್ಕ ; ಸಚಿವೆ ನ...
01-10-26 11:20 am
Smith Machar, Indian pilot: ದುಬೈನಲ್ಲಿ ವಿಮಾನ ಪ...
01-10-26 11:05 am
ಅರಬ್ಬೀ ಸಮುದ್ರದಲ್ಲಿ ಅಂತಾರಾಷ್ಟ್ರೀಯ ಡ್ರಗ್ಸ್ ರಾಕೆ...
30-09-26 10:49 am
ಡ್ರಗ್ಸ್ ಕಳ್ಳಸಾಗಣೆ ಆರೋಪ, ಸೌದಿಯಲ್ಲಿ ಕೇರಳದ ಯುವಕನ...
29-09-26 08:11 pm
01-10-26 06:19 pm
HK News Staffer
MRPL ಸ್ಫೋಟದ ಬೆನ್ನಲ್ಲೇ ನೆಲ್ಲಿದಡಿ ಗುತ್ತು ಚರ್ಚೆ...
01-10-26 03:04 pm
Sowjanya case, STI: ಸೌಜನ್ಯಾ ಪ್ರಕರಣ ಮರುತನಿಖೆ ;...
01-10-26 12:53 pm
Mrpl Fire, Mangalore, ut khadar: MRPL ಸ್ಫೋಟ ಪ...
01-10-26 10:25 am
Mrpl fire accident, Church Damage: ಎಂಆರ್ ಪಿಎಲ...
30-09-26 10:24 pm
01-10-26 02:31 pm
HK News Staffer
Mangalore Police News: ಪೊಲೀಸ್ ಕಾನ್ಸ್ ಟೇಬಲ್ ನೇ...
01-10-26 11:10 am
Mrpl Fire, Mangalore: ಎಂಆರ್ ಪಿಎಲ್ ಘಟಕದಲ್ಲಿ ದು...
30-09-26 08:59 pm
ಮಣಿಪಾಲ KMC ಆಸ್ಪತ್ರೆಯಲ್ಲಿ ತೀರ್ಥಹಳ್ಳಿಯ ರೋಗಿ ಆತ್...
30-09-26 08:17 pm
ಉಡುಪಿಯಲ್ಲಿ ಹೆಲ್ಮೆಟ್ ಧರಿಸಿ ದುರ್ಗಾಂಬ ಬಸ್ ಕಳವು ;...
30-09-26 10:33 am