ಬ್ರೇಕಿಂಗ್ ನ್ಯೂಸ್
28-09-26 02:13 pm HK News Staffer ಕರಾವಳಿ
ಬಂಟ್ವಾಳ, ಸೆ.28 : ಅಬ್ದುಲ್ ರೆಹಮಾನ್ ಕೊಲೆಯಾಗಿದ್ದು ವೈಯುಕ್ತಿಕ ಕಾರಣಗಳಿಂದ. ಅವರ ನಡುವಿನ ವೈಯುಕ್ತಿಕ ಕಾರಣಗಳಿಂದ ಹತ್ಯೆಯಾಯಿತು. ನಾನು ವಿವರಣೆ ನೀಡೋದಿಲ್ಲ. ಅ ಊರಿಗೆ ಹೋದ್ರೆ ಅಲ್ಲಿನವರೇ ಹೇಳ್ತಾರೆ. ವೈಯುಕ್ತಿಕ ದ್ವೇಷವನ್ನ ಸಂಘಟನೆ ಮೇಲೆ ಹಾಕೋದು ಯಾಕೆ ಎಂದು ಆರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಪ್ರಶ್ನೆ ಮಾಡಿದ್ದಾರೆ.
ಬಿ.ಸಿ.ರೋಡ್ ಚಲೋ ಪ್ರತಿಭಟನೆ ಬಳಿಕ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಅವರು, ನಾವು ಹತ್ಯೆಯನ್ನು ಪ್ರತಿಪಾದನೆ ಮಾಡೋದಿಲ್ಲ. ಯಾವುದೇ ಸಂಬಂಧ ಇಲ್ಲದ ಭರತ್ ಹಾಗು ಇತರರನ್ನ ಕೇಸ್ ಹಾಕಿ ಜೈಲಿಗೆ ಹಾಕಿದ್ರು. ಗೂಂಡಾ ಕಾಯ್ದೆ ಹಾಕಿದ್ರು. ಇದು ಯಾವ ಸಂವಿಧಾನ ಹೇಳಿದ ಕಾನೂನು. ಆ ಕೇಸಿಗೂ ಆತನಿಗೂ ಸಂಬಂಧವೇ ಇಲ್ಲ ಎಂದು ಹೇಳಿದರು.
ಭರತ್ ಕುಮ್ದೇಲ್ ಬಂಧನವಾದ ಬಳಿಕ ಆತನ ಮನೆಯಲ್ಲಿ ಊಟಕ್ಕೆ ಕಷ್ಟವಾಗಿತ್ತು. ಭರತ್ ಮಗುವಿಗೆ ಅನಾರೋಗ್ಯ ಎಂದು ರಿಕ್ಷಾದಲ್ಲಿ ಕರೆದುಕೊಂಡು ಹೋದ್ರು. ಆ ರಿಕ್ಷಾದವನ ಮೇಲೆ ಕೇಸ್ ಹಾಕಿದ್ರು. ಎಂತಹ ಪಾಪಿಗಳು ಇವರು. ಭರತ್ ಕುಟುಂಬಸ್ಥರು ಸಹಕಾರ ಕೇಳಿದ್ರೆ ಸಹಕಾರ ಕೊಟ್ಟವರ ಮೇಲೆ ಕೇಸ್ ಹಾಕ್ತಾರೆ. ಕಾನೂನು ಬಿಟ್ಟು ಗೃಹಮಂತ್ರಿ- ಮುಖ್ಯಮಂತ್ರಿ ಹೇಳ್ತಾರೆ ಎಂದು ಕೇಸ್ ಹಾಕೋದಲ್ಲ. ಪೊಲೀಸರು ಚೇಲಾಗಳ ಹಾಗೆ ಕೆಲಸ ಮಾಡೋದಲ್ಲ.
ಕೇಸ್ ಹಾಕಲಿ ನಾವೆಲ್ಲಾ ಇದನ್ನ ನೋಡಿ ಆಗಿದೆ. ನನ್ನ ಮೇಲೆ ಕೇಸ್ ಹಾಕೋಕೆ ಹೊರಟಿದ್ದಾರೆ. ಇದು ನನಗೆ ದೊಡ್ಡ ವಿಷಯ ಅಲ್ಲ. ಈ ಕೇಸ್ ನನ್ನ ಕೂದಲಿಗೆ ಸಮ. ನಾನು ಯಾರ ಹತ್ರ ಬೇಕಾದರೂ ಫೋನ್ ನಲ್ಲಿ ಮಾತನಾಡುತ್ತೇನೆ. ನನಗೆ ಅಂಬೇಡ್ಕರ್ ಕೊಟ್ಟ ಸಂವಿಧಾನ ಸ್ವಾತಂತ್ರ್ಯ ಕೊಟ್ಟಿದೆ. ಭರತ್ ಜೊತೆ ನಾನು ಫೋನ್ ನಲ್ಲಿ ಮಾತನಾಡಿದ್ದೇನೆ. ನಾನು ಭರತ್ ಕುಮ್ದೇಲ್ ಗೆ ಯಾರಿಗಾದರೂ ಹೊಡಿ ಅಂತಾ ಹೇಳಿದ್ದೀನಾ, ಕೊಲ್ಲು ಅಂತಾ ಹೇಳಿದ್ದೀನಾ? ಅ ರೀತಿಯ ಸಂಭಾಷಣೆ ಪೊಲೀಸರಿಗೆ ಸಿಕ್ಕಿದ್ಯಾ? ಪೊಲೀಸರ ಈ ರೀತಿಯ ಹುಚ್ಚು ಸ್ವಲ್ಪ ಇಳಿಯಬೇಕು ಎಂದು ಹೇಳಿದರು.
ಭರತ್ ಕುಮ್ದೇಲ್ ಹಾಗು ಇತರೇ ಆರೋಪಿಗಳ ಬಗ್ಗೆ ಪೊಲೀಸರು ಆರೋಪ ಪಟ್ಟಿ ಬಿಡುಗಡೆ ಮಾಡಿರುವ ವಿಚಾರದ ಬಗ್ಗೆ ಪ್ರಭಾಕರ ಭಟ್ ಕಿಡಿಕಾರಿದ್ದು, 17 ಕೇಸ್ ಇದ್ದದ್ರಲ್ಲಿ 15 ಕೇಸ್ ಬಿದ್ದೋಗಿದೆ. ಎರಡು ಕೇಸಿಗೆ ಗೂಂಡಾ ಕಾಯ್ದೆ ಹಾಕೋದಾ? ಕೋರ್ಟ್ ಸೂಚನೆಗೂ ಪೊಲೀಸರಿಗೆ ಒಪ್ಪಿಗೆ ಇಲ್ಲ. ನನ್ನ ಮೇಲೂ ಗೂಂಡಾ ಕಾಯ್ದೆ ಹಾಕುವ ಯೋಚನೆ ಇರಬಹುದು. ಹಾಗಾಗಿ ವಿಚಾರಣೆ ಎಂದು ನೋಟಿಸ್ ಕೊಟ್ಟಿರಬಹುದು. ದೇಶ ವಿರೋಧಿ, ಸಮಾಜ ವಿರೋಧಿ ಕೆಲಸದಲ್ಲಿದ್ರೆ ಕೇಸ್ ಹಾಕಬೇಕು. ಹಿಂದೂಗಳ ಮೇಲೆ ಅಕ್ರಮಣ ಮಾಡೋದು ಶಾಂತಿನಾ? ಪೊಲೀಸರು ಅಶಾಂತಿ ನಿರ್ಮಾಣ ಮಾಡುತ್ತಿದ್ದಾರಾ?ಪೊಲೀಸರು ಜನ ಸ್ನೇಹಿಯಾಗಬೇಕು. ಕೋರ್ಟ್ ನಲ್ಲಿ ಜಡ್ಜ್ ಪೊಲೀಸರಿಗೆ ತಪರಾಕಿ ಹಾಕಿದ್ದಾರೆ. ನಮ್ಮಷ್ಟು ಶಾಂತಿಯಲ್ಲಿ ಜೀವನ ನಡೆಸುವವರು ಯಾರಿದ್ದಾರೆ? ಅವರ ಆಕ್ಷನ್ ಗೆ ನಮ್ಮದು ಸಣ್ಣ ಆಕ್ಷನ್ ಎಂದರು ಭಟ್.
ಅಬ್ದುಲ್ ರಹಿಮಾನ್ ಹತ್ಯೆ ಆರೋಪಿ ಭರತ್ ಕುಮ್ದೇಲ್ ಗೆ ಮಂಪರು ಪರೀಕ್ಷೆ ಮಾಡುತ್ತಾರೆಂಬ ವದಂತಿ ಬಗ್ಗೆ, ಮಂಪರು ಪರೀಕ್ಷೆಗೆ ಯಾಕೆ ಒಪ್ಪಿಕೊಳ್ಳಬೇಕು. ಏನು ಆಧಾರ ಇದೆ ಮಂಪರು ಪರೀಕ್ಷೆ ಮಾಡಲು. ಮೊದಲು ಎಸ್ಪಿ ಅರುಣ್ ಕುಮಾರ್ ಮಂಪರು ಪರೀಕ್ಷೆ ಮಾಡಿಕೊಳ್ಳಲಿ. ಖಾಲಿ ಫೋನ್ ಮಾಡಿದಕ್ಕೆ ನನ್ನನ್ನ ವಿಚಾರಣೆಗೆ ಕರೆಯೋದಾ? ಮಾಧ್ಯಮಗಳು ಫೋನ್ ಮಾಡುತ್ತೀರಾ ನಿಮಗೂ ವಿಚಾರಣೆಗೆ ಕರೆಯುತ್ತಾರಾ? ನಾನು ಜೈಲಿಗೆ ಹೋಗಿಯಾಗಿದೆ, ನನ್ನದು ಸಾಲದು ಎಂದು ನನ್ನ ಹೆಂಡತಿಯನ್ನೂ ಜೈಲಿಗೆ ಹಾಕಿದ್ದಾರೆ. ಇನ್ನು ಏನಿದ್ರೂ ಗಲ್ಲಿಗೆ ಹಾಕಬೇಕು. ಅಷ್ಟು ಮಾತ್ರ ಬಾಕಿ ಇರೋದು. ತಾಕತ್ ಇದ್ರೆ ನನ್ನನ್ನ ಗಲ್ಲಿಗೆ ಹಾಕಲಿ ಎಂದು ಸವಾಲೆಸೆದರು.
RSS leader Kalladka Prabhakar Bhat has claimed that Abdul Rahiman was killed due to personal reasons and questioned why an alleged personal dispute was being linked to an organisation.
27-09-26 03:21 pm
HK News Desk
ಬೆಂಗಳೂರಿಗೆ ಬಂದ ಶಾಸಕರೆಲ್ಲ ಎರಡೆರಡು ಮದುವೆಯಾಗಿದ್ದ...
25-09-26 04:49 pm
ರಾಜ್ಯ ಸರ್ಕಾರಕ್ಕೆ ಆರ್ಥಿಕ ಸಂಕಷ್ಟ ; ಬೆಳಗಾವಿ ವಿಟಿ...
25-09-26 03:11 pm
ಕರಾವಳಿಯಲ್ಲಿ ನೀರು ಸಂರಕ್ಷಣೆಗೆ ವೈಜ್ಞಾನಿಕ ಮಾಸ್ಟರ್...
23-09-26 11:02 pm
ಬರ ಪಟ್ಟಿಯಿಂದ ಇಂಡಿ, ಚಡಚಣ ಕೈಬಿಟ್ಟಿದ್ದಕ್ಕೆ ಅಸಮಾಧ...
23-09-26 05:14 pm
26-09-26 07:01 pm
HK News Staffer
ವೃದ್ಧಾಶ್ರಮ ಸೇರಿದ ವಿನೋದ್ ಕಾಂಬ್ಳಿ: ವಿಡಿಯೋ ವೈರಲ್...
26-09-26 11:51 am
ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಂದ್ರ ಕುಮಾರ್ ದೇಶದ್ರ...
24-09-26 09:42 pm
"ನಾವು ಚುನಾವಣೆ ಗೆದ್ದರೆ, ಟೆಕ್ಸಾಸ್ ಹನುಮಾನ್ ವಿಗ್...
23-09-26 04:21 pm
ಪಶುವೈದ್ಯರ ಹುದ್ದೆಗೆ ₹80 ಲಕ್ಷದ ಡೀಲ್ ಆರೋಪ: ಪ್ರಶ್...
22-09-26 09:42 am
28-09-26 02:13 pm
HK News Staffer
ಸೌಜನ್ಯಾ ಪ್ರಕರಣದ ಎಸ್ಐಟಿ ಬಗ್ಗೆ ಆರೆಸ್ಸೆಸ್ ಮುಖಂಡ...
28-09-26 02:10 pm
15 ದಿನಗಳಲ್ಲಿ 51 ಶಾಲೆಗಳಿಗೆ ಭೇಟಿ ; 4,500ಕ್ಕೂ ಹೆ...
28-09-26 10:53 am
ಅಪರಾಧಗಳ ಖಂಡನೆಗೆ ಧರ್ಮ ಅಡ್ಡಿಯಾಗಬಾರದು ! ಪೊಲೀಸ್ ಕ...
27-09-26 11:31 pm
ವಿದ್ಯಾರ್ಥಿ ಸಂಘದ ಪದಗ್ರಹಣ ; ಮೊದಲ ಮಹಡಿಯ ಕಾಂಕ್ರೀಟ...
27-09-26 10:59 am
28-09-26 03:08 pm
HK News Staffer
ಹೆಲ್ಮೆಟ್ ರಹಿತ ಚಾಲನೆಯಿಂದ ಹೆಚ್ಚುತ್ತಿರುವ ಸಾವು- ನ...
27-09-26 08:06 pm
Suhas Shetty: ಸುಹಾಸ್ ಶೆಟ್ಟಿ ಹತ್ಯೆಗೆ ಪ್ರತೀಕಾರಕ...
27-09-26 06:10 pm
ಶಾರ್ಜಾದಲ್ಲಿ ಹತ್ಯೆಯಾದ ಕುಂದಾಪುರದ ವ್ಯಕ್ತಿಯ ಶವ ಹು...
25-09-26 04:53 pm
ಕೋಟೇಶ್ವರ ಜೋಗಿ ವಿವಿಧೋದ್ದೇಶ ಸಹಕಾರಿ ಸಂಘದ ಸಿಇಓ ನೇ...
25-09-26 11:17 am