ಬ್ರೇಕಿಂಗ್ ನ್ಯೂಸ್
31-08-26 06:07 pm HK News Staffer ಕರಾವಳಿ
ಪುತ್ತೂರು, ಆ.31: ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಒಂಬತ್ತು ಕೇಸುಗಳಿವೆ. ಎರಡು ಕೇಸು ಇದ್ದರೆ ರೌಡಿ ಶೀಟ್ ಹಾಕುವ ಪೊಲೀಸರು ಪ್ರಿಯಾಂಕ ಖರ್ಗೆ ಮೇಲೆ ರೌಡಿ ಶೀಟ್ ಯಾಕೆ ಹಾಕಿಲ್ಲ. ಕಲಬುರ್ಗಿಯಲ್ಲಿ ದಂಧೆಕೋರರಿಗೆ ರಕ್ಷಣೆ ನೀಡುವ ಪೊಲೀಸರು ಖರ್ಗೆ ಮೇಲೆ ರೌಡಿಶೀಟ್ ಹಾಕಿ ಎಂದು ಹಿಂದು ಜಾಗರಣ ವೇದಿಕೆ ಮುಖಂಡ ಶ್ರೀಕಾಂತ್ ಶೆಟ್ಟಿ ಆಗ್ರಹಿಸಿದ್ದಾರೆ.
ಜೆರಾಕ್ಸ್ ಅಂಗಡಿಯಲ್ಲಿ ಹಲ್ಲೆ ಸಂಬಂಧಿಸಿ ಪೊಲೀಸರು ತಾರತಮ್ಯ ಮಾಡಿದ್ದಾರೆಂದು ಹೇಳಿ ಹಿಂದು ಸಂಘಟನೆಗಳ ವತಿಯಿಂದ ಹಮ್ಮಿಕೊಂಡಿದ್ದ 'ಪುತ್ತೂರು ಚಲೋ' ಸಮಾವೇಶದಲ್ಲಿ ಶ್ರೀಕಾಂತ್ ಶೆಟ್ಟಿ ಭಾಷಣ ಮಾಡಿದರು. ರಾಜ್ಯದಲ್ಲಿ ಪೊಲೀಸ್ ರಾಜ್ ನಡೀತಿದ್ದು ಹಿಂದು ಸಂಘಟನೆಗಳ ದಮನಕ್ಕೆ ಪೊಲೀಸರನ್ನ ಛೂ ಬಿಟ್ಟಿದ್ದಾರೆ. ಹಿಂದೂ ಸಂಘಟನೆಯನ್ನು ದಮನಿಸಲು ಪೊಲೀಸರಿಗೆ ಕಾಂಟ್ರಾಕ್ಟ್ ನೀಡಿರುವಂತಿದೆ ಎಂದು ಆರೋಪ ಮಾಡಿದ್ದಾರೆ.
ಪುತ್ತೂರಿನಲ್ಲಿ ಆಸ್ಪತ್ರೆಯಲ್ಲಿ ಮಲಗಿದ ಮಹಿಳೆಯ ಮೇಲೆ ಕೊಲೆ ಯತ್ನದ ಕೇಸ್ ಹಾಕಿದ್ದಾರೆ. ಅವರಿಗೆ ಹೊಡೆದವರು ಬೀದಿಯಲ್ಲಿ ಎದೆಯುಬ್ಬಿಸಿ ನಡೀತಾ ಇದಾರೆ. ಅವರ ಮೇಲೆ ಕೇಸು ಹಾಕಿಲ್ಲ. ದ.ಕ ಜಿಲ್ಲೆಯ ಎಸ್ಪಿಯವರೇ ಹಿಂದೂ ಸಮಾಜದ ತಾಳ್ಮೆ ದೌರ್ಬಲ್ಯ ಎಂದುಕೊಳ್ಳಬೇಡಿ. ಮಂಗಳೂರಿನ ಹಿಂದು ಸಂಘಟನೆಗಳ ಇತಿಹಾಸವನ್ನು ನೀವು ಗಮನಿಸಬೇಕು. ಹೋರಾಟದ ಇತಿಹಾಸ ಇಲ್ಲಿನ ಸಂಘಟನೆಯ ಕಾರ್ಯಕರ್ತರಿಗಿದೆ ಎನ್ನುವುದನ್ನು ನೆನಪಿಟ್ಟುಕೊಳ್ಳಿ ಎಂದರು.






ಪ್ರಿಯಾಂಕ ಖರ್ಗೆಯವರು ಆರೆಸ್ಸೆಸ್ ಬಗ್ಗೆ ಬಾಯಿಗೆ ಬಂದ ಹಾಗೆ ಮಾತನಾಡಿ ಮೊನ್ನೆ ಕೋರ್ಟ್ ಗೆ ಹೋಗಿ ದಂಡ ಕಟ್ಟಿದ್ದಾರೆ. ಆದರೂ ಅವರಿಗೆ ಬುದ್ಧಿ ಬಂದಂತಿಲ್ಲ. ಅಂತಹ ನಾಲಾಯಕ್, ನಪುಂಸಕ ವ್ಯವಸ್ಥೆ ನಮ್ಮಲ್ಲಿದೆ ಎಂದು ಹೇಳಿದ ಶ್ರೀಕಾಂತ್ ಶೆಟ್ಟಿ, ದ.ಕ ಎಸ್ಪಿಯವರೇ ನೀವು ಇಲ್ಲಿ ಶಾಶ್ವತ ಅಂದ್ಕೊಳ್ಳಬೇಡಿ. ಯಾರ ಕಾರಣಕ್ಕೆ ಪುತ್ತೂರಿನಲ್ಲಿ ಗಲಾಟೆ ನಡೆಯಿತೋ ಅವರೇ ಕೇಸ್ ಕ್ಲೋಸ್ ಮಾಡಿ ಅಂತಾರೆ. ಹಾಗಾಗಿ ಅಂಜನಾ ಪೈ, ಸುದರ್ಶನ ಪೈ ಮೇಲಿನ ಕೇಸ್ ವಾಪಾಸ್ ಪಡೆಯಿರಿ. ವಿನಾಕಾರಣ ಗಲಾಟೆ ಮಾಡಿದ ಪಿಎಫ್ಐ ಕಾರ್ಯಕರ್ತರ ಮೇಲೆ ಕೋಕಾ ಕೇಸ್ ದಾಖಲಿಸಿ. ಹಿಂದೂ ಸಮಾಜ ಇವತ್ತು ಹೋರಾಟ ಆರಂಭ ಮಾಡಿದೆ, ಈ ಹೋರಾಟ ನಿಲ್ಲಲ್ಲ. ಈ ರೀತಿಯ ಚಲೋ ಇನ್ನು ತಿಂಗಳಿಗೊಂದು ನಡೆಯಲಿದೆ. ಪೊಲೀಸರಿಗೆ ಏನಾದ್ರೂ ಕಾನೂನು, ನ್ಯಾಯ ಬಿಟ್ಟು ಕಾಂಗ್ರೆಸಿನ ಚಮಚಾಗಿರಿಯೇ ಮಾಡಬೇಕು ಅಂತಿದ್ದರೆ ತಮ್ಮ ಯೂನಿಫಾರ್ಮ್ ಬಿಚ್ಚಿ ಮನೆಯಲ್ಲಿಟ್ಟು ಬನ್ನಿ ಎಂದು ಹೇಳಿದರು.
31-08-26 08:29 pm
HK News Staffer
ಇಸ್ಲಾಂ ಶ್ರೇಷ್ಠ ಧರ್ಮ, ನಾನು ಮಠ ಮಂದಿರ ಹೋಗಲ್ಲ, ಹಜ...
30-08-26 10:09 pm
ADGP Chandrashekhar, Seemanth Kumar Singh: ಅಧ...
30-08-26 07:31 pm
Jnanendra Kumar IAS Arrest: ಪಶುವೈದ್ಯರ ನೇಮಕಾತಿ...
30-08-26 05:13 pm
ಬಿಜೆಪಿ ಸಂಸದೀಯ ಮಂಡಳಿ ಸಭೆಯಿಂದ ಯಡಿಯೂರಪ್ಪ ಹೊರಕ್ಕೆ...
29-08-26 10:49 pm
31-08-26 01:28 pm
HK News Staffer
Mohan Bhagwat: ಹಿಂದೂ ರಾಷ್ಟ್ರದ ಪರಿಕಲ್ಪನೆ ಮುಸ್ಲ...
30-08-26 02:41 pm
ನೇಪಾಳದಲ್ಲಿ ಪ್ರಕೃತಿಯ ರೌದ್ರಾವತಾರ ; ಪ್ರವಾಹಕ್ಕೆ 6...
29-08-26 10:25 pm
ನೇಪಾಳ ಪ್ರವಾಹದ ಬಳಿಕ ಇನ್ಫೋಸಿಸ್ ಪಬ್ಲಿಕ್ ಸರ್ವಿಸಸ್...
29-08-26 03:36 pm
ನೇಪಾಳದಲ್ಲಿ ಜಲಪ್ರಳಯ ; ಸಾವಿನ ಸಂಖ್ಯೆ 160ಕ್ಕೆ ಏರ...
27-08-26 12:39 pm
31-08-26 11:04 pm
HK News Staffer
ಸೆ.18ರಂದು ಮಂಗಳೂರಿನಲ್ಲಿ ಸಚಿವ ಸಂಪುಟ ಸಭೆ ; ಕರಾವಳ...
31-08-26 07:12 pm
ಪ್ರಿಯಾಂಕ್ ಖರ್ಗೆ ಮೇಲೆ 9 ಕೇಸ್ ಇದೆ, ಅವರ ಮೇಲೆ ರೌಡ...
31-08-26 06:07 pm
ಮಂಗಳೂರಿನಲ್ಲಿ ಆಟೋ ದರ ಪರಿಷ್ಕರಣೆ ; ಕನಿಷ್ಠ ದರ 40...
31-08-26 05:09 pm
ಮಧ್ಯರಾತ್ರಿ ಅಪಾರ್ಟ್ಮೆಂಟ್ ಲಿಫ್ಟ್ನಲ್ಲಿ ಸಿಲುಕಿದ...
31-08-26 04:19 pm
31-08-26 09:50 pm
HK News Staffer
ಮೃತ ಗಂಡನ ಪಿಂಚಣಿ ನೀಡದೆ ನಿರ್ಲಕ್ಷ್ಯ ; ಮಂಗಳೂರಿನ ಕ...
31-08-26 07:10 pm
ದೆಹಲಿಯಲ್ಲಿ ಮತ್ತೊಂದು ಪೈಶಾಚಿಕ ಕೃತ್ಯ ; ಡ್ರಾಪ್ ನೀ...
31-08-26 03:48 pm
ಮಂಗಳೂರಿನ ‘ಸುರಕ್ಷಾ’ ಆಂಬುಲೆನ್ಸ್ ಚಾಲಕ ಕುಡಿದು ಫುಲ...
31-08-26 01:49 pm
Mangalore Murder: ಕುಡಿದ ಮತ್ತಿನಲ್ಲಿ ಮೊಬೈಲ್ ವಿಚ...
31-08-26 12:01 pm