ಬ್ರೇಕಿಂಗ್ ನ್ಯೂಸ್
27-07-26 08:24 pm HK News Staffer ಕರಾವಳಿ
ಉಳ್ಳಾಲ, ಜು.27: ಆಸ್ಪತ್ರೆಯಲ್ಲಿ ಕ್ಯಾನ್ಸರ್ ರೋಗಕ್ಕೆ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಸಾವಿರಾರು ಅಭಿಮಾನಿಗಳು ನನ್ನ ಶವಯಾತ್ರೆ ಮಾಡುವ ಕನಸು ಕಂಡಿದ್ದೆ. ಕನಸಿನಲ್ಲೇ ಪಂಜುರ್ಲಿ ದೈವವು ನೀಡಿದ ಅಭಯದಿಂದಾಗಿ ಕೊಂಚ ಆರೋಗ್ಯ ಸುಧಾರಿಸಿ ಪುನರ್ಜನ್ಮ ದೊರೆತ ಅನುಭವವಾಗಿದೆ. ಕ್ಯಾನ್ಸರ್ ಬಂದಿದೆಯೆಂದು ಎದೆಗುಂದದೆ, ದೇಹಕ್ಕೆ ವೇದನೆ ಸಿಗಬಾರದೆಂದಷ್ಟೆ ಬಯಸಿದ್ದೆ. ಯಾರೊಬ್ಬರಿಗೂ ಕ್ಯಾನ್ಸರ್ ರೋಗ ಬಾರದಿರಲಿಯೆಂದು ಇಂದು ಕೂಡ ನಾನು ದೈವ, ದೇವರಲ್ಲಿ ಪ್ರಾರ್ಥಿಸಿರುವುದಾಗಿ ಬಿಜೆಪಿ ಮುಖಂಡರು, ದಿ ಮೈಸೂರು ಇಲೆಕ್ಟ್ರಿಕಲ್ಸ್ ಲಿಮಿಟೆಡ್ ಮಾಜಿ ಅಧ್ಯಕ್ಷರಾದ ಸಂತೋಷ್ ಕುಮಾರ್ ರೈ ಬೋಳಿಯಾರ್ ಹೇಳಿದರು.
ಕ್ಯಾನ್ಸರ್ ಕಾಯಿಲೆಗೆ ತುತ್ತಾಗಿ ಕೆಲ ತಿಂಗಳುಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಅಭಿಮಾನಿಗಳ ಒತ್ತಾಸೆಯ ಮೇರೆಗೆ ಬೋಳಿಯಾರ್ ಕುವೆತ್ತಬೈಲಿನ ತನ್ನ ಸ್ವಗೃಹದಲ್ಲಿ ಸೋಮವಾರ 60ನೇ ವರ್ಷದ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಿ ಮಾತನಾಡಿದರು. ತನಗೆ ಇನ್ನೂ ಎರಡು ತಿಂಗಳ ಕಾಲ ಚಿಕಿತ್ಸೆ ಮುಂದುವರಿಯಲಿದ್ದು, ವೈದ್ಯರ ಕಟ್ಟುನಿಟ್ಟಿನ ಸೂಚನೆಯಂತೆ ಯಾವುದೇ ಸೋಂಕು ತಗುಳದಂತೆ ಮನೆಯೊಳಗೆ ವಿಶ್ರಾಂತಿಯಲ್ಲಿದ್ದೆ. ಜನ್ಮದಿನವನ್ನ ಆಚರಿಸುವ ಉದ್ದೇಶ ನನಗಿರಲಿಲ್ಲ. ಎಂಟನೇ ನಮೋ ಕುಟೀರ ನಿರ್ಮಾಣಕ್ಕೆ ಇಳಿಯುವಂತೆ ಪತ್ನಿ ನೀಡಿದ ಸಲಹೆ ಮೇರೆಗೆ ಈ ಸರಳ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆಯೆಂದರು.






ಬಡ ಕ್ಯಾನ್ಸರ್ ರೋಗಿಗಳಿಗಾಗಿ ಟ್ರಸ್ಟ್ ಸ್ಥಾಪನೆ
ಕ್ಯಾನ್ಸರ್ ಚಿಕಿತ್ಸೆಗಾಗಿ ಆಯುಷ್ಮಾನ್ ಭಾರತ ಯೋಜನೆಯಡಿ ಬಿಪಿಎಲ್ ಕಾರ್ಡ್ ಹೊಂದಿದವರಿಗೆ ಐದು ಲಕ್ಷ ರೂಪಾಯಿ ಲಭಿಸುತ್ತದೆಯಾದರೂ, ಬಡ ರೋಗಿಗಳಿಗೆ ಕ್ಯಾನ್ಸರ್ ರೋಗ ಪತ್ತೆಯ ವಿವಿಧ ಪರೀಕ್ಷೆಗಳಿಗೆ ಲಕ್ಷಾಂತರ ರೂಪಾಯಿ ಹಣ ಹೊಂದಿಸಲು ಕಷ್ಟ ಸಾಧ್ಯವಾಗಿದೆ. ಬಡ ಕ್ಯಾನ್ಸರ್ ರೋಗಿಗಳ ಚಿಕಿತ್ಸೆಗಾಗಿ ಪತ್ನಿಯ ಸಲಹೆಯಂತೆ ಶೀಘ್ರವೇ ಟ್ರಸ್ಟ್ ಒಂದನ್ನ ಸ್ಥಾಪಿಸಲಾಗುವುದೆಂದು ಸಂತೋಷ್ ಬೋಳಿಯಾರ್ ಹೇಳಿದರು.
ಬಿಜೆಪಿ ಮಂಗಳೂರು ಮಂಡಲದ ಮಾಜಿ ಅಧ್ಯಕ್ಷರಾದ ಚಂದ್ರಹಾಸ್ ಉಳ್ಳಾಲ್ ಮಾತನಾಡಿ ಅನೇಕರು ತಮ್ಮ ಹುಟ್ಟುಹಬ್ಬಗಳನ್ನ ಬಾರ್, ರೆಸ್ಟೋರೆಂಟ್ ಗಳಲ್ಲಿ ಅರ್ಥ ಹೀನವಾಗಿ ಆಚರಿಸುತ್ತಾರೆ. ಆದರೆ ಸಂತೋಷ್ ಬೋಳಿಯಾರ್ ಅವರು ಅಶಕ್ತರಿಗೆ ಪ್ರಧಾನಿ ನರೇಂದ್ರ ಮೋದಿಯವರ ಹೆಸರಲ್ಲಿ ಮನೆಗಳನ್ನ ಕಟ್ಟಿ ಕೊಟ್ಟು ಎಲ್ಲರಿಗೂ ಮಾದರಿಯಾಗಿದ್ದಾರೆ. ಮನಸ್ಸಿನೊಳಗೆ ಎಷ್ಟೇ ನೋವಿದ್ದರು ಸಹ ಅವರ ಮುಖದಲ್ಲಿ ಸಂತೋಷವೇ ಎದ್ದು ಕಾಣುತ್ತಿದೆ. ಅವರ ಮನೆಯವರು ಎಷ್ಟು ಯಾತನೆ ಪಡುತ್ತಿದ್ದಾರೆಂಬುದು ತಲೆದಿಂಬಿಗೇ ತಿಳಿದಿರುತ್ತದೆ. ಸಮಾಜಕ್ಕೆ ನಿರಂತರವಾಗಿ ಸೇವೆ ನೀಡುವ ತುಡಿತ ಇರುವ ಅವರಿಗೆ ದೇವರು ಸದಾ ಆರೋಗ್ಯ ಕರುಣಿಸಲಿಯೆಂದು ಆಶಿಸಿದರು.
ರಾಜೇಶ್ ಮಡಿವಾಳ ಅವರ ಕುಟುಂಬಕ್ಕೆ ಸಂತೋಷ್ ಬೋಳಿಯಾರ್ ಅವರು ನಿರ್ಮಿಸಿಕೊಡಲಿರುವ ಎಂಟನೇ 'ನಮೋ ಕುಟೀರ' ಮನೆ ಹಾಗೂ ಪಾಣೆಲ ಸರ್ಕಾರಿ ಶಾಲೆಗೆ ನಿರ್ಮಿಸಲಿರುವ ಸಭಾಂಗಣದ ನೀಲ ನಕ್ಷೆ, ಕುರ್ನಾಡು ದತ್ತಾತ್ರೇಯ ಶಾಲೆಗೆ ಮೂಲಸೌಲಭ್ಯಗಳ ವಿಸ್ತರಣೆಗಾಗಿ ನೀಡಲಾದ 50 ಸಾವಿರ ರೂಪಾಯಿ ಸಹಾಯ ಧನದ ಚೆಕ್ಕನ್ನು ಮಾಡೂರು ಮರಿಯಣ್ಣಪಾಲು ಶಿವದುರ್ಗಾಂಭ ಮಠದ ಶ್ರೀ ಶಿವಯೋಗಿ ದುರ್ಗಾನಂದ ಸ್ವಾಮೀಜಿಯವರು ಫಲಾನುಭವಿಗಳಿಗೆ ಹಸ್ತಾಂತರಿಸಿದರು.
ಕಣಂತೂರು ಕ್ಷೇತ್ರದ ಆಡಳಿತ ಮೊಕ್ತೇಸರ ದೇವಿಪ್ರಸಾದ್ ಪೊಯ್ಯತ್ತಾಯ, ಗಡಿ ಪ್ರಧಾನರಾದ ಪದ್ಮನಾಭ ರೈ ಯಾನೆ ಮಂಜು ಭಂಡಾರಿ, ನಿವೃತ್ತ ಮುಖ್ಯ ಶಿಕ್ಷಕರಾದ ರವೀಂದ್ರ ರೈ ಕಲ್ಲಿಮಾರ್, ಮುಖಂಡರಾದ ರವಿ ರೈ ಪಜೀರು, ಸಂತೋಷ್ ಬೋಳಿಯಾರ್ ಅವರ ಪತ್ನಿ ವೀಣಾ ಎಸ್.ರೈ, ಪುತ್ರ ಸಮ್ಯಕ್ತ್ ರೈ ಬೋಳಿಯಾರ್ ಹಾಗೂ ಪುತ್ರಿ ಸ್ಪರ್ಶ ಎಸ್.ರೈ ಮೊದಲಾದವರು ಉಪಸ್ಥಿತರಿದ್ದರು.
15-09-26 04:46 pm
HK News Staffer
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
ಬಿಜೆಪಿ ಅಧಿಕಾರಕ್ಕೆ ಬರಲು ನನ್ನ ಸ್ಥಾನ ಬಿಟ್ಟುಕೊಟ್ಟ...
12-09-26 05:56 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
15-09-26 05:29 pm
HK News Staffer
U T Khader, KDP Meeting, Sudheer Reddy Ips: :...
15-09-26 05:27 pm
ಮಂಗಳೂರು ವಿಮಾನ ನಿಲ್ದಾಣಕ್ಕೆ ‘ಕೋಟಿ-ಚೆನ್ನಯ’ ಹೆಸರು...
15-09-26 12:50 pm
ಕರಾವಳಿ ಅಭಿವೃದ್ಧಿಗೆ ಡಿಕೆಶಿ ಸರ್ಕಾರದ ಮಹತ್ವದ ಹೆಜ್...
15-09-26 09:46 am
ತುಳುನಾಡಿನಲ್ಲಿ ವಿಭಿನ್ನ ಗಣೇಶ ಚತುರ್ಥಿ ; ಮಣ್ಣಿನ ಮ...
14-09-26 10:01 pm
15-09-26 12:55 pm
HK News Staffer
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm
ಗಣೇಶ ಹಬ್ಬದ ಬೆನ್ನಲ್ಲೇ ಕರ್ನಾಟಕದಲ್ಲಿ ಸರಣಿ ದುರಂತ:...
15-09-26 12:41 pm
ಗಣೇಶೋತ್ಸವದ ಸಂಭ್ರಮದ ನಡುವೆ ಭೀಕರ ದುರಂತ: ಅಗ್ನಿ ಅವ...
15-09-26 10:31 am
ಜೈಲಿನಲ್ಲಿದ್ದರೂ ಹಳೆ ಚಾಳಿ ಬಿಡದ ಪ್ರಜ್ವಲ್ ರೇವಣ್ಣ...
12-09-26 07:41 pm