ಬ್ರೇಕಿಂಗ್ ನ್ಯೂಸ್
26-07-26 09:14 pm HK News Desk ಕರಾವಳಿ
ಮಂಗಳೂರು, ಜುಲೈ 26: 1971ರ ಪಾಕಿಸ್ತಾನ ಯುದ್ಧದಲ್ಲಿ ಪಾಲ್ಗೊಂಡಿದ್ದಲ್ಲದೆ, ನಾಲ್ಕು ದಶಕ ಭಾರತೀಯ ಸೇನೆಗೆ ಸೇವೆ ನೀಡಿದ್ದ ಟಿ-55 ಯುದ್ಧ ಟ್ಯಾಂಕ್ ಅನ್ನು ಮಂಗಳೂರು ನಗರದ ಕದ್ರಿಯ ಯುದ್ಧ ಸ್ಮಾರಕದ ಬಳಿ ಇರಿಸಲಾಗಿದ್ದು, ಇಂದು ಅಧಿಕೃತವಾಗಿ ಲೋಕಾರ್ಪಣೆ ಮಾಡಲಾಯಿತು.
ಇದೇ ವೇಳೆ ಮಾತನಾಡಿದ ಸಂಸದ ಕ್ಯಾ.ಬ್ರಿಜೇಶ್ ಚೌಟ, ಇದು ಕೇವಲ ಉಕ್ಕಿನ ವಸ್ತುವಲ್ಲ. ಬರೀ ಯಂತ್ರವೂ ಅಲ್ಲ. ಪ್ರದರ್ಶನಕ್ಕಿಟ್ಟಿರುವ ವಸ್ತುವೂ ಅಲ್ಲ. ಅಸಂಖ್ಯಾತ ಯೋಧರ ಸೇನಾ ಸಾಹಸದ ಜೀವಂತ ಸಾಕ್ಷಿ. ಇದಕ್ಕೆ ದೇವಸ್ಥಾನಕ್ಕೆ ಸಲ್ಲಿಸುವಷ್ಟೇ ಗೌರವ ಕೊಡಬೇಕು ಎಂದು ಹೇಳಿದರು. ಮುಂದಿನ ದಿನಗಳಲ್ಲಿ ಮಂಗಳೂರಿಗೆ ಮಿಗ್ 21 ರೀತಿಯ ಹಳೆಯ ಯುದ್ಧ ವಿಮಾನವೊಂದನ್ನು ತಂದು ಸ್ಮಾರಕವಾಗಿ ಇರಿಸುವ ಯೋಜನೆ ಇದೆ ಎಂದೂ ಹೇಳಿದರು.


21 ಸಾವಿರ ಅಡಿ ಎತ್ತರದಲ್ಲಿ ಸೈನಿಕ ರಾಕೆಟ್ ಲಾಂಚರ್ ಹಿಡಿದು ಸಾಗುವುದು, ಬೆನ್ನಿಗೆ 25 ಕಿಲೋ ಶಸ್ತ್ರಾಸ್ತ್ರಗಳನ್ನು ಹೊತ್ತು ಸಾಗುವುದು ಸಾಮಾನ್ಯ ಸಂಗತಿಯಲ್ಲ. ಗಡಿಯಲ್ಲಿರುವ ಸೈನಿಕರಿಂದಾಗಿ ನಾವು ಭಯವಿಲ್ಲದೆ ನಿದ್ದೆ ಮಾಡುತ್ತಿದ್ದೇವೆ ಎನ್ನುವ ಅರಿವು ಜನಸಾಮಾನ್ಯರಿಗೆ ಬರಬೇಕು. ಗಡಿಯಲ್ಲಿರುವ ಯೋಧ ತನ್ನ ಎದೆಗೆ ಗುಂಡು ಹಾಕಿಸಿಕೊಂಡಿದ್ದಾನೆ ವಿನಾ ಯಾವುದೇ ನಾಗರಿಕನ ಬೆನ್ನಿಗೆ ಗುಂಡು ಬಿದ್ದಿಲ್ಲ. ನಮ್ಮ ನಾಳೆಗಳಿಗಾಗಿ ಯೋಧರು ತಮ್ಮ ಜೀವನ ಅರ್ಪಿಸಿದ್ದಾರೆ. ಹೀಗಾಗಿ ಮಂಗಳೂರಿನ ಹೆಗ್ಗುರುತಾಗಿ ಈ ಸ್ಥಳವನ್ನು ಅಭಿವೃದ್ಧಿಪಡಿಸುವ ಯೋಜನೆ ಇದೆ. ಪ್ರತಿಯೊಬ್ಬ ನಾಗರಿಕನೂ ಇಲ್ಲಿ ಬಂದು ಒಂದಷ್ಚು ಹೊತ್ತು ಕುಳಿತು ಸೈನಿಕರಿಗೆ ಗೌರವ ಸಲ್ಲಿಸುವಂತೆ ಆಗಬೇಕು ಎಂದು ಹೇಳಿದರು.
ಯುದ್ಧ ಟ್ಯಾಂಕ್ ಬಗ್ಗೆ ಹೇಳಿದ ಮಾಜಿ ಯೋಧ ಕ್ಯಾ.ಗಣೇಶ ಕಾರ್ಣಿಕ್, 1960ರಲ್ಲಿ ಸೇನೆಗೆ ಅರ್ಪಣೆಯಾಗಿದ್ದ ಈ ಟಿ-55 ಟ್ಯಾಂಕ್ ಭೂಸೇನೆಯ ಸಶಸ್ತ್ರ ದಳದ ಬೆನ್ನೆಲುಬಾಗಿ ನಲ್ವತ್ತು ವರ್ಷ ಕಾಲ ಸೇವೆ ನೀಡಿದೆ. 2011ರಲ್ಲಿ ಈ ಟ್ಯಾಂಕ್ ಸೇವೆಯಿಂದ ನಿವೃತ್ತಿ ಪಡೆದಿತ್ತು. 1971ರ ಭಾರತ- ಪಾಕ್ ಯುದ್ಧದಲ್ಲಿ ಗಮನಸೆಳೆಯುವ ಕೆಲಸ ಮಾಡಿತ್ತು. 36 ಟನ್ ಭಾರದ ಈ ಯುದ್ಧ ಟ್ಯಾಂಕ್ ಒಳಗಡೆ ನಾಲ್ಕು ಜನರಿಗಷ್ಟೇ ಕುಳಿತುಕೊಳ್ಳಲು ಅವಕಾಶ ಇರುತ್ತದೆ. 50ರಿಂದ 60 ಕಿಮೀ ವೇಗದಲ್ಲಿ ಚಲಿಸುವ ಸಾಮರ್ಥ್ಯವಿದ್ದು, 100 ಎಂಎಂ ರೈಫಲ್ ಗನ್, 7.62 ಎಂಎಂ ಕೋ ಏಕ್ಸಿಯಲ್ ಮೆಷಿನ್ ಗನ್, 12.7 ಎಂಎಂ ಏಂಟಿ ಏರ್ ಕ್ರಾಫ್ಟ್ ಗನ್, 500 ಕಿಮೀ ಚಲಿಸುವ ಸಾಮರ್ಥ್ಯ ಹೊಂದಿರುತ್ತದೆ ಎಂದು ಹೇಳಿದರು.
ಸೇವೆಯಿಂದ ನಿವೃತ್ತಿ ಪಡೆದ ಇಂತಹ ಯುದ್ಧ ಟ್ಯಾಂಕ್ ಗಳನ್ನು ಯುವಜನರನ್ನು ಸೇನೆಯತ್ತ ಆಕರ್ಷಿಸುವ ಸಲುವಾಗಿ ದೇಶದ ಪ್ರಮುಖ ಸ್ಥಳಗಳಲ್ಲಿ ಇರಿಸಲಾಗುತ್ತಿದೆ. ಇದನ್ನು ಮಂಗಳೂರಿಗೆ ತರಲು ಶ್ರಮಿಸಿದ ಸಂಸದ ಬ್ರಿಜೇಶ್ ಚೌಟರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಕಾರ್ಣಿಕ್ ಹೇಳಿದರು.

ಸೌರಭ್ ಕಾಲಿಯಾ ಕಣ್ಣು ಕಿತ್ತು ಚಿತ್ರಹಿಂಸೆ ನೀಡಿದ್ದರು !
ಇದೇ ವೇಳೆ, ನಿವೃತ್ತ ಯೋಧ ಕರ್ನಲ್ ಶರತ್ ಭಂಡಾರಿ ಕಾರ್ಗಿಲ್ ಯುದ್ಧವನ್ನು ಸ್ಮರಿಸುತ್ತ ಪಾಕಿಸ್ತಾನಿ ಸೈನಿಕರು ಪರ್ವತಗಳ ಶಿಖರದಲ್ಲಿದ್ದರೆ, ಭಾರತೀಯ ಸೈನಿಕರು ಬುಡದಲ್ಲಿದ್ದರು. ಮೇ ತಿಂಗಳ 4ಕ್ಕೆ ಮೊದಲ ಬಾರಿಗೆ ಅಲ್ಲಿ ಶಂಕಾಸ್ಪದ ಚಲನವಲನ ಗಮನಿಸಿದ ಸ್ಥಳೀಯ ಶೆರ್ಪಾಗಳು ನಮ್ಮ ಸೇನೆಗೆ ತಿಳಿಸಿದ್ದರು. ಕ್ಯಾಪ್ಟನ್ ಸೌರಭ್ ಕಾಲಿಯಾ ನೇತೃತ್ವದಲ್ಲಿ ಅಲ್ಲಿಗೆ ತೆರಳಿದವರನ್ನು ಕೊಂದಿದ್ದಲ್ಲದೆ, ಕಾಲಿಯಾ ಕಣ್ಣು ಕಿತ್ತು ಚಿತ್ರಹಿಂಸೆ ನೀಡಿದ್ದರು. ಕಾರ್ಗಿಲ್ ನದ್ದು ಘೋಷಿತ ಯುದ್ಧವಲ್ಲ. ಪಾಕಿಗಳ ಅತಿಕ್ರಮಣವನ್ನು ಹಿಂದಕ್ಕೆ ಓಡಿಸುವ ಕೆಲಸ ಮಾಡಬೇಕಿತ್ತು. ಆದರೆ ಶಿಖರ ಭಾಗದಲ್ಲಿ ಪಾಕ್ ಸೈನಿಕರು ಇದ್ದ ಕಾರಣ ನಮಗೆ ಸವಾಲಾಗಿತ್ತು. ಮೇ 25ರಂದು ಪ್ರಧಾನಿ ವಾಯುಪಡೆ ಬಳಕೆಗೆ ಅನುಮತಿ ನೀಡಿದ ಬಳಿಕ ನಾವು ತಿರುಗಿ ಬಿದ್ದೆವು. ನಮ್ಮ ಯುವಪಡೆಗಳ ಸಶಸ್ತ್ರ ದಾಳಿಯಿಂದಾಗಿ ಒಂದೇ ತಿಂಗಳಲ್ಲಿ ಕಾರ್ಗಿಲ್ ವಶಕ್ಕೆ ಪಡೆದೆವು. ಎಷ್ಟು ಭೀಕರ ದಾಳಿಯಾಗಿತ್ತು ಎಂದರೆ ಕಾರ್ಗಿಲ್ ಭಾಗದ 160 ಕಿಮೀ ಪ್ರದೇಶಕ್ಕೆ 2.5 ಲಕ್ಷಕ್ಕೂ ಹೆಚ್ಚು ಬಾಂಬುಗಳನ್ನು ಸುರಿಸಲಾಗಿತ್ತು. ಒಂದು ಪ್ರದೇಶಕ್ಕೆ ಸುರಿದ ಬಾಂಬುಗಳು ದ್ವಿತೀಯ ಮಹಾಯುದ್ಧಕ್ಕಿಂತ ಹೆಚ್ಚಿನದಾಗಿತ್ತು ಎಂದು ಸ್ಮರಿಸಿದರು.
ಕಾರ್ಯಕ್ರಮದಲ್ಲಿ ಶಾಸಕ ವೇದವ್ಯಾಸ ಕಾಮತ್, ಮಾಜಿ ಸಚಿವ ನಾಗರಾಜ ಶೆಟ್ಟಿ, ಪ್ರದೀಪ ಕಲ್ಕೂರ, ಕರ್ನಲ್ ಶರತ್ ಭಂಡಾರಿ, ಬ್ರಿಗೇಡಿಯರ್ ಐಎನ್ ರೈ, ನಿವೃತ್ತ ಸೈನಿಕರ ಸಂಘದ ಅಧ್ಯಕ್ಷ ಶ್ರೀಕಾಂತ ಶೆಟ್ಟಿ, ದೀಪಕ್ ಅಡ್ಯಂತಾಯ ರಾಷ್ಟ್ರಭಕ್ತ ವೇದಿಕೆಯ ಸತ್ಯಜಿತ್ ಸುರತ್ಕಲ್ ಮತ್ತಿತರರಿದ್ದರು. ನಿವೃತ್ತ ಸೈನಿಕರ ಸಂಘ, ರೋಟರಿ ಮತ್ತು ಲಯನ್ಸ್ ಕ್ಲಬ್ ವತಿಯಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
15-09-26 04:46 pm
HK News Staffer
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
ಬಿಜೆಪಿ ಅಧಿಕಾರಕ್ಕೆ ಬರಲು ನನ್ನ ಸ್ಥಾನ ಬಿಟ್ಟುಕೊಟ್ಟ...
12-09-26 05:56 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
15-09-26 05:29 pm
HK News Staffer
U T Khader, KDP Meeting, Sudheer Reddy Ips: :...
15-09-26 05:27 pm
ಮಂಗಳೂರು ವಿಮಾನ ನಿಲ್ದಾಣಕ್ಕೆ ‘ಕೋಟಿ-ಚೆನ್ನಯ’ ಹೆಸರು...
15-09-26 12:50 pm
ಕರಾವಳಿ ಅಭಿವೃದ್ಧಿಗೆ ಡಿಕೆಶಿ ಸರ್ಕಾರದ ಮಹತ್ವದ ಹೆಜ್...
15-09-26 09:46 am
ತುಳುನಾಡಿನಲ್ಲಿ ವಿಭಿನ್ನ ಗಣೇಶ ಚತುರ್ಥಿ ; ಮಣ್ಣಿನ ಮ...
14-09-26 10:01 pm
15-09-26 12:55 pm
HK News Staffer
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm
ಗಣೇಶ ಹಬ್ಬದ ಬೆನ್ನಲ್ಲೇ ಕರ್ನಾಟಕದಲ್ಲಿ ಸರಣಿ ದುರಂತ:...
15-09-26 12:41 pm
ಗಣೇಶೋತ್ಸವದ ಸಂಭ್ರಮದ ನಡುವೆ ಭೀಕರ ದುರಂತ: ಅಗ್ನಿ ಅವ...
15-09-26 10:31 am
ಜೈಲಿನಲ್ಲಿದ್ದರೂ ಹಳೆ ಚಾಳಿ ಬಿಡದ ಪ್ರಜ್ವಲ್ ರೇವಣ್ಣ...
12-09-26 07:41 pm