ಬ್ರೇಕಿಂಗ್ ನ್ಯೂಸ್
22-03-26 05:07 pm HK News Staffer ಕರಾವಳಿ
ಮಂಗಳೂರು, ಮಾರ್ಚ್ 22: ಗಲ್ಫ್ ಯುದ್ಧದಿಂದಾಗಿ ಭಾರತದಲ್ಲಿ ಅಡುಗೆ ಅನಿಲಕ್ಕೆ ತೀವ್ರ ಅಭಾವ ಎದುರಾಗಿರುವ ಮಧ್ಯೆಯೇ ರಷ್ಯಾ ಮತ್ತು ಅಮೆರಿಕದಿಂದ ಭಾರತಕ್ಕೆ ತೈಲ ಪೂರೈಕೆಯಾಗಿದೆ. ರಷ್ಯಾದಿಂದ ಚೀನಾಕ್ಕೆ ಹೊರಟಿದ್ದ ತೈಲ ಟ್ಯಾಂಕರ್ ಅಕ್ವಾ ಟೈಟಾನ್ ಶನಿವಾರ ಮಂಗಳೂರು ತಲುಪಿದ್ದರೆ, ಭಾನುವಾರ ಬೆಳಗ್ಗೆ ಅಮೆರಿಕದ ಟೆಕ್ಸಾಸ್ ನಿಂದ ತೈಲ ಹಡಗು ಮಂಗಳೂರು ಬಂದರು ತಲುಪಿದೆ.
ಒಂದು ಲಕ್ಷ ಟನ್ ತೈಲವನ್ನು ಹೊಂದಿರುವ ರಷ್ಯಾ ಮೂಲದ ಅಕ್ವಾ ಟೈಟಾನ್ ಹಡಗು ಕಳೆದ ಜನವರಿಯಲ್ಲಿ ಬಾಲ್ಟಿಕ್ ಸೀ ಪೋರ್ಟ್ ನಿಂದ ಚೀನಾದ ರಿಝಾವೋ ಬಂದರಿಗೆ ಹೊರಟಿತ್ತು. ಇದರ ಮಧ್ಯೆ ಮಾರ್ಚ್ 17ರ ವೇಳೆಗೆ ಭಾರತದಿಂದ ರಷ್ಯಾಕ್ಕೆ ತೈಲದ ಬೇಡಿಕೆ ಬಂದಿದ್ದರಿಂದ ಚೀನಾಕ್ಕೆ ಹೊರಟಿದ್ದ ಈ ಟ್ಯಾಂಕರನ್ನು ಭಾರತದ ಕಡೆಗೆ ತಿರುಗಿಸಲಾಗಿತ್ತು. ಅದೀಗ ಮಂಗಳೂರು ತೀರದಿಂದ 12 ನಾಟಿಕಲ್ ಮೈಲು ದೂರದ ಎಂಆರ್ ಪಿಎಲ್ ಜೆಟ್ಟಿಗೆ ಬಂದಿದ್ದು, ಅಲ್ಲಿಂದ ತೈಲವನ್ನು ಭೂಗತ ತೈಲ ಸಂಗ್ರಹಾಗಾರದಲ್ಲಿ ಶೇಖರಿಸಲಾಗುತ್ತಿದೆ. ಭೂ ಮೇಲ್ಮೈಯಿಂದ 225 ಮೀಟರ್ ಒಳಗಿರುವ ಈ ತೈಲಾಗಾರ ಭಾರತದ ಅತಿದೊಡ್ಡ ಸಂಗ್ರಹಾಗಾರಗಳಲ್ಲಿ ಒಂದಾಗಿದ್ದು, 80 ಸಾವಿರ ಮೆಟ್ರಿಕ್ ಟನ್ ತೈಲ ಹಿಡಿದಿಡುವ ಸಾಮರ್ಥ್ಯ ಹೊಂದಿದೆ.
ಇದರ ಬೆನ್ನಲ್ಲೇ ಭಾನುವಾರ ಬೆಳಗ್ಗೆ ಅಮೆರಿಕದ ಟೆಕ್ಸಾಸ್ ನಿಂದ ಹೊರಟಿದ್ದ ತೈಲ ಹಡಗು ಮಂಗಳೂರು ಬಂದರು ತಲುಪಿದೆ. ಇದರಲ್ಲಿ 16,714 ಮೆಟ್ರಿಕ್ ಟನ್ ಎಲ್ಪಿಜಿಯಿದ್ದು, ಅದನ್ನು ನೇರವಾಗಿ ಆಯಿಲ್ ಕಂಪನಿಗಳ ಮೂಲಕ ಪೂರೈಕೆ ಮಾಡಲಿದೆ. ಏಕಕಾಲದಲ್ಲಿ ಮಂಗಳೂರಿಗೆ ಎರಡು ತೈಲದ ಹಡಗು ಬಂದಿರುವುದರಿಂದ ದಕ್ಷಿಣ ಭಾರತದ ಇಂಧನ ಬೇಡಿಕೆಗೆ ದೊಡ್ಡ ಬಲ ಸಿಕ್ಕಂತಾಗಿದೆ. ಇರಾನ್ ಯುದ್ಧದಿಂದಾಗಿ ಹೊರ್ಮುಜ್ ಜಲಸಂಧಿಯಲ್ಲಿ ತೈಲದ ಟ್ಯಾಂಕರ್ ಬರಲು ಅಡ್ಡಿಯಾಗಿದ್ದರಿಂದ ಭಾರತದಲ್ಲಿ ಎಲ್ಪಿಜಿ ಕೊರತೆ ಎದುರಾಗಿತ್ತು. ಕಮರ್ಷಿಯಲ್ ಗ್ಯಾಸ್ ಸಿಗದೆ ದೇಶಾದ್ಯಂತ ಪ್ರಮುಖ ನಗರಗಳಲ್ಲಿ ಹೊಟೇಲುಗಳು ಮುಚ್ಚುವಂತಾಗಿದೆ.


ರಷ್ಯಾದಿಂದ ಬರತ್ತೆ ಏಳು ತೈಲ ಹಡಗು:
ಹೊರ್ಮುಜ್ ಜಲಸಂಧಿ ಮೂಲಕ ಭಾರತಕ್ಕೆ ಶೇಕಡಾ 50ರಷ್ಟು ಎಲ್ಎನ್ ಜಿ ಮತ್ತು ಎಲ್ಪಿಜಿ ಪೂರೈಕೆ ಆಗುತ್ತಿತ್ತು. ಯುದ್ಧದ ಪರಿಣಾಮ ಈ ದಾರಿಯಲ್ಲಿ ತೈಲ ಹಡಗುಗಳಿಗೆ ಬರಲು ತೊಂದರೆಯಾಗಿತ್ತು. ಇದೇ ವೇಳೆ, ರಷ್ಯಾಕ್ಕೆ ಕೋರಿಕೆ ಹೋಗಿದ್ದರಿಂದ ತೈಲದ ಹಡಗು ಹೊತ್ತ ಏಳು ಟ್ಯಾಂಕರನ್ನು ಭಾರತದ ಕಡೆಗೆ ತಿರುಗಿಸಲಾಗಿದೆ. ರಷ್ಯಾದ ಇನ್ನೊಂದು ತೈಲ ಹಡಗು ಸುಯೆಜ್ ಮ್ಯಾಕ್ಸ್ ಝೌಝೌ ಮಾರ್ಚ್ 25ರಂದು ಗುಜರಾತಿನ ಸಿಕ್ಕಾ ಬಂದರು ತಲುಪುವ ನಿರೀಕ್ಷೆಯಿದೆ.
ರಷ್ಯಾದಿಂದ ಒಟ್ಟು ಏಳು ತೈಲ ಹಡಗು ಭಾರತಕ್ಕೆ ಬರಲಿದ್ದು, ಆಮೂಲಕ ದೇಶದಲ್ಲಿ ತೈಲದ ಬಿಕ್ಕಟ್ಟು ಶಮನ ಮಾಡುವ ಸಾಧ್ಯತೆಯಿದೆ. ಈ ಹಡಗುಗಳಲ್ಲಿ ಸುಮಾರು 30 ಮಿಲಿಯನ್ ಬ್ಯಾರೆಲ್ ತೈಲವಿದ್ದು, ಭಾರತದ ತೈಲ ಸಂಗ್ರಹಣೆಗೆ ದೊಡ್ಡ ಕೊಡುಗೆ ನೀಡಲಿದೆ. ಕಳೆದ ವಾರ ಹೊರ್ಮುಜ್ ಜಲಸಂಧಿಯಲ್ಲಿ ಸಿಲುಕಿದ್ದ ಭಾರತದ ಶಿವಾಲಿಕ್, ನಂದಾದೇವಿ ಮತ್ತು ಜಗ್ ಲಾಡ್ಕಿ ಹಡಗುಗಳು ಗುಜರಾತಿನ ಮುಂದ್ರಾ ಬಂದರು ತಲುಪಿತ್ತು.
Russia’s 100,000-ton oil tanker Aqua Titan docks at Mangaluru, followed by a US LPG ship from Texas 🇷🇺🇺🇸 Big relief for South India as fuel supply improves amid Hormuz disruption pic.twitter.com/QLuopWUy6M
— Headline Karnataka (@hknewsonline) March 22, 2026
21-09-26 12:58 pm
HK News Staffer
ಧರ್ಮಸ್ಥಳ ಬಂಗ್ಲೆಗುಡ್ಡೆ ಕಾಡಿನಲ್ಲಿ ಮತ್ತೆ ಯೂಟ್ಯೂಬ...
20-09-26 07:13 pm
ಗಣೇಶ ಶೋಭಾಯಾತ್ರೆಯಲ್ಲಿ ಪ್ರಚೋದನಕಾರಿ ಭಾಷಣ ; ಮಸೀದಿ...
20-09-26 03:32 pm
ವಂದೇ ಮಾತರಂ ಎರಡೇ ಚರಣ ; ತೀರ್ಥಹಳ್ಳಿಯಲ್ಲಿ ಸಿಎಂ ಡಿ...
19-09-26 05:44 pm
B K Hariprasad: ಉಮರ್ ಖಾಲಿದ್ ರಾಷ್ಟ್ರೀಯವಾದಿ ದೇಶ...
17-09-26 04:13 pm
22-09-26 09:42 am
HK News Staffer
ಡಿಸೆಂಬರ್ ಒಳಗೆ ಸ್ಥಳೀಯ ಸಂಸ್ಥೆಗಳ ಚುನಾವಣೆ ; ಇವಿಎಂ...
19-09-26 05:40 pm
Mamata Banerjee, Sanchita Pradhan, Rejinagar:...
19-09-26 03:37 pm
ಮುಂಬೈನಲ್ಲಿ ಕುಡಿಯುವ ನೀರಿಗೆ ತೀವ್ರ ಬರ ; ಸಮುದ್ರದ...
13-09-26 09:00 pm
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
21-09-26 10:36 pm
HK News Desk
ಮುಸ್ಲಿಂ ಲೀಗ್ ಮನಸ್ಥಿತಿಯನ್ನು ಜನರ ಮೇಲೆ ಹೇರಲು ಹೊರ...
21-09-26 09:49 pm
ನಾಲ್ಕು ದಿನ ರಾಜ್ಯದಲ್ಲಿ ಭಾರೀ ಮಳೆ ಮುನ್ಸೂಚನೆ ; ಸೆ...
21-09-26 09:46 pm
ಸೌಜನ್ಯಾ ಪ್ರಕರಣದಲ್ಲಿ 14 ವರ್ಷಗಳ ಬಳಿಕ ಮರು ತನಿಖೆಗ...
21-09-26 01:37 pm
HYROX ಮೆನ್ಸ್ ಡಬಲ್ಸ್ ಫಿಟ್ನೆಸ್ ಸ್ಪರ್ಧೆಯಲ್ಲಿ ದಕ್...
21-09-26 10:08 am
21-09-26 08:21 pm
HK News Staffer
ಕಳತ್ತೂರಿನಲ್ಲಿ ಮೇಯಲು ಬಿಟ್ಟಿದ್ದ ದನ ಕಳವು ಪ್ರಕರಣ...
21-09-26 06:16 pm
Ramanth Rai Car Accident: ಕಾರ್ಕಳ ; ಮಾಜಿ ಸಚಿವ...
20-09-26 04:39 pm
Bengluru, Crime: ಬೆಂಗಳೂರು ; ಮಧ್ಯರಾತ್ರಿ ಹೋಟೆಲ್...
20-09-26 02:16 pm
ಹುಬ್ಬಳ್ಳಿಯಲ್ಲಿ ಗ್ಯಾಸ್ ಸೋರಿಕೆ ದುರಂತ: ಸಿಲಿಂಡರ್...
20-09-26 01:01 pm