ಬ್ರೇಕಿಂಗ್ ನ್ಯೂಸ್
20-03-26 11:26 pm HK News Staffer ಕರಾವಳಿ
ಮಂಗಳೂರು, ಮಾರ್ಚ್ 20: ತೆಂಕುತಿಟ್ಟು ಯಕ್ಷಗಾನದ ಮೇರು ಪ್ರತಿಭೆ, ಸವ್ಯಸಾಚಿ, ದಶಾವತಾರಿ ಎಂದೇ ಖ್ಯಾತರಾಗಿದ್ದ ಸೂರಿಕುಮೇರು ಗೋವಿಂದ ಭಟ್ (88) ಇನ್ನಿಲ್ಲ. ವೀರ ರಸದ ವೇಷಗಳಿಗೆ ಹೊಸ ಕಳೆಯನ್ನು ಮೂಡಿಸಿದ್ದ ಅಭಿನಯ ಚತುರ, ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಗೋವಿಂದ ಭಟ್ಟರು (88) ತೀರ್ಥಹಳ್ಳಿಯ ತಮ್ಮ ಪುತ್ರನ ನಿವಾಸದಲ್ಲಿ ನಿಧನರಾಗಿದ್ದಾರೆ.
ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾಮದ ಸೂರಿಕುಮೇರು ಎಂಬ ಸಣ್ಣ ಗ್ರಾಮದಲ್ಲಿ ಮಾರ್ಚ್ 22, 1938 ರಂದು ಜನಿಸಿದ್ದ ಗೋವಿಂದ ಭಟ್ಟರು ಯಕ್ಷಗಾನದಲ್ಲಿ ಏರಿದ ಎತ್ತರ ಅದ್ವಿತೀಯವಾಗಿತ್ತು. ತಂದೆ ಶಿವರಾಮ ಭಟ್ಟರು ಮತ್ತು ತಾಯಿ ಪಾರ್ವತಿ ಅಮ್ಮ. ಕಡು ಬಡತನದ ನಡುವೆಯೂ ಏಳನೇ ತರಗತಿಯ ವರೆಗೆ ವಿದ್ಯಾಭ್ಯಾಸ. ಓರಗೆಯವರ ಸಂಪರ್ಕ, ಯಕ್ಷಗಾನದ ಮೇಲಿನ ಅಪಾರ ಪ್ರೀತಿಯಿಂದಾಗಿ 13ನೇ ವಯಸ್ಸಿನಲ್ಲಿಯೇ ಬಣ್ಣ ಹಚ್ಚಿ ರಂಗಪ್ರವೇಶ ಮಾಡಿದ್ದರು.

ಧರ್ಮಸ್ಥಳದ ಮೇಳದಲ್ಲಿ 50 ವರ್ಷಗಳಿಗೂ ಹೆಚ್ಚು ಸುದೀರ್ಘ ಕಾಲ ಸೇವೆ ಸಲ್ಲಿಸಿದ ಗೋವಿಂದ ಭಟ್ಟರು ಮೇಳದ ಪರಿಧಿ ಮೀರಿದ ಖ್ಯಾತಿ ಗಳಿಸಿದ್ದರು. ಅತಿಥಿ ಕಲಾವಿದರ ಕೂಡುವಿಕೆಯ ಆಟದಲ್ಲಿ ಗೋವಿಂದ ಭಟ್ಟರು ಇದ್ದಾರೆ ಅಂದ್ರೆ ಅಲ್ಲೊಂದು ಹೆಚ್ಚುಗಾರಿಕೆ ಇತ್ತು. ಮೇಳದ ಶಿಸ್ತು ಮತ್ತು ಸಂಪ್ರದಾಯದ ಕಾವಲುಗಾರನಂತೆ ಪಾತ್ರಕ್ಕೆ ಮೀರದಂತೆ ಕಂಚಿನ ಕಂಠದ ಮಾತುಗಾರಿಕೆ, ಲಯಬದ್ಧ ನಾಟ್ಯ, ತಾಳಮದ್ದಲೆಗಳ ಅರ್ಥಗಾರಿಕೆ ಅವರನ್ನು ಜನಪ್ರಿಯರನ್ನಾಗಿಸಿತ್ತು.
ಓರಗೆಯ ಕಲಾವಿದರ ನಡುವೆ “ದಶಾವತಾರಿ” ಎಂದೇ ಕರೆಯಲ್ಪಡುತ್ತಿದ್ದ ಇವರು ಯಾವುದೇ ವೇಷಕ್ಕಾದರೂ ಸೈ ಎನಿಸಿದ್ದರು. ವೀರ, ರೌದ್ರ ರಸದ ವೇಷಗಳಿಗೆ ಅವರ ಹಾವಭಾವ ಹೇಳಿ ಮಾಡಿಸಿದಂತಿತ್ತು. ಭೀಮ, ಅರ್ಜುನ, ಭೀಷ್ಮ, ಕರ್ಣ, ಕೌರವ, ದಶರಥ, ವಾಲಿಯಂತಹ ಪ್ರಬುದ್ಧ ಪೌರಾಣಿಕ ಪಾತ್ರಗಳಿಗೆ ಹೊಸ ಆಯಾಮ ನೀಡಿದವರು ಗೋವಿಂದ ಭಟ್ಟರು. ಕುಂಬ್ಳೆ ಸುಂದರ ರಾವ್ ಜೊತೆಗಿನ ಇವರ ಪ್ರತಿಗಾಮಿ ಮಾತುಗಾರಿಕೆ ನೋಡುಗರಲ್ಲಿ, ಕೇಳುಗರಲ್ಲಿ ಅಮೋಘ ಎನಿಸುವಂತಿತ್ತು. ವೀರ ಮತ್ತು ಕರುಣಾ ರಸದ ಪಾತ್ರಗಳಲ್ಲಿ ಇವರನ್ನು ಮೀರಿಸುವ ಮತ್ತೊಬ್ಬರಿಲ್ಲ ಎಂಬ ಮಾತು ಕಲಾವಿದರಲ್ಲಿದೆ. ಇವರು ಪತ್ನಿ, ಮೂವರು ಪುತ್ರರ ಸಹಿತ ಅಪಾರ ಅಭಿಮಾನಿ ವರ್ಗವನ್ನು ಅಗಲಿದ್ದಾರೆ.
ಇವರ ಜೀವಮಾನದ ಸಾಧನೆಗೆ 2016ರಲ್ಲಿ ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ಸರಕಾರದ ರಾಜ್ಯೋತ್ಸವ ಪ್ರಶಸ್ತಿ ದಕ್ಕಿದೆ. ಮಾತ್ರವಲ್ಲ ಅಭಿಮಾನಿಗಳು ಇವರ ಕಲಾ ಜೀವನವನ್ನು ದಾಖಲಿಸಲು ‘ಸವ್ಯಸಾಚಿ’ ಎಂಬ ಸ್ಮರಣ ಸಂಚಿಕೆಯನ್ನು ಅರ್ಪಿಸಿದ್ದರು. ಯಕ್ಷಗಾನದ ಮೇರು ವ್ಯಕ್ತಿತ್ವ ಸೂರಿಕುಮೇರು ಗೋವಿಂದ ಭಟ್ಟರ ನಿಧನಕ್ಕೆ ಯಕ್ಷಗಾನ ಕಲಾವಿದರು, ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ.
21-09-26 12:58 pm
HK News Staffer
ಧರ್ಮಸ್ಥಳ ಬಂಗ್ಲೆಗುಡ್ಡೆ ಕಾಡಿನಲ್ಲಿ ಮತ್ತೆ ಯೂಟ್ಯೂಬ...
20-09-26 07:13 pm
ಗಣೇಶ ಶೋಭಾಯಾತ್ರೆಯಲ್ಲಿ ಪ್ರಚೋದನಕಾರಿ ಭಾಷಣ ; ಮಸೀದಿ...
20-09-26 03:32 pm
ವಂದೇ ಮಾತರಂ ಎರಡೇ ಚರಣ ; ತೀರ್ಥಹಳ್ಳಿಯಲ್ಲಿ ಸಿಎಂ ಡಿ...
19-09-26 05:44 pm
B K Hariprasad: ಉಮರ್ ಖಾಲಿದ್ ರಾಷ್ಟ್ರೀಯವಾದಿ ದೇಶ...
17-09-26 04:13 pm
22-09-26 09:42 am
HK News Staffer
ಡಿಸೆಂಬರ್ ಒಳಗೆ ಸ್ಥಳೀಯ ಸಂಸ್ಥೆಗಳ ಚುನಾವಣೆ ; ಇವಿಎಂ...
19-09-26 05:40 pm
Mamata Banerjee, Sanchita Pradhan, Rejinagar:...
19-09-26 03:37 pm
ಮುಂಬೈನಲ್ಲಿ ಕುಡಿಯುವ ನೀರಿಗೆ ತೀವ್ರ ಬರ ; ಸಮುದ್ರದ...
13-09-26 09:00 pm
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
21-09-26 10:36 pm
HK News Desk
ಮುಸ್ಲಿಂ ಲೀಗ್ ಮನಸ್ಥಿತಿಯನ್ನು ಜನರ ಮೇಲೆ ಹೇರಲು ಹೊರ...
21-09-26 09:49 pm
ನಾಲ್ಕು ದಿನ ರಾಜ್ಯದಲ್ಲಿ ಭಾರೀ ಮಳೆ ಮುನ್ಸೂಚನೆ ; ಸೆ...
21-09-26 09:46 pm
ಸೌಜನ್ಯಾ ಪ್ರಕರಣದಲ್ಲಿ 14 ವರ್ಷಗಳ ಬಳಿಕ ಮರು ತನಿಖೆಗ...
21-09-26 01:37 pm
HYROX ಮೆನ್ಸ್ ಡಬಲ್ಸ್ ಫಿಟ್ನೆಸ್ ಸ್ಪರ್ಧೆಯಲ್ಲಿ ದಕ್...
21-09-26 10:08 am
21-09-26 08:21 pm
HK News Staffer
ಕಳತ್ತೂರಿನಲ್ಲಿ ಮೇಯಲು ಬಿಟ್ಟಿದ್ದ ದನ ಕಳವು ಪ್ರಕರಣ...
21-09-26 06:16 pm
Ramanth Rai Car Accident: ಕಾರ್ಕಳ ; ಮಾಜಿ ಸಚಿವ...
20-09-26 04:39 pm
Bengluru, Crime: ಬೆಂಗಳೂರು ; ಮಧ್ಯರಾತ್ರಿ ಹೋಟೆಲ್...
20-09-26 02:16 pm
ಹುಬ್ಬಳ್ಳಿಯಲ್ಲಿ ಗ್ಯಾಸ್ ಸೋರಿಕೆ ದುರಂತ: ಸಿಲಿಂಡರ್...
20-09-26 01:01 pm