ಬ್ರೇಕಿಂಗ್ ನ್ಯೂಸ್
24-01-26 08:04 pm Mangaluru Staffer ಕರಾವಳಿ
ಉಳ್ಳಾಲ, ಜ.24: ಗುರುವಿಲ್ಲದ ಏಕಲವ್ಯನೆಂಬ ಖ್ಯಾತಿಯ ಚಿತ್ರ ಕಲಾವಿದ, ಸಂಗೀತ ಸಂಯೋಜಕ ಮುಡಿಪು ನಿವಾಸಿ ಸತೀಶ್ (48) ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಶನಿವಾರ ಮುಡಿಪು ಮಿತ್ತಬರೆ ಸಮೀಪ ನಡೆದಿದೆ. -ಶನಿವಾರ ಬೆಳಗ್ಗೆ 9 ಗಂಟೆ ಸುಮಾರಿಗೆ ಮನೆ ಸಮೀಪದ ಮರಕ್ಕೆ ಸತೀಶ್ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕುಟುಂಬ ಕಲಹದಿಂದ ನೊಂದು ಅವರು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಶಂಕಿಸಲಾಗಿದೆ. ಮೃತ ಸತೀಶ್ ಅವರು ಪತ್ನಿ, ಪುತ್ರನನ್ನು ಅಗಲಿದ್ದಾರೆ. ಮುಡಿಪುವಿನಲ್ಲಿ ಸುಮಾರು ಮೂರೂವರೆ ದಶಕಗಳಿಂದ ‘ಸ್ವಾತಿ ಆರ್ಟ್ಸ್’ ಹೆಸರಿನಲ್ಲಿ ಬ್ಯಾನರ್ ಬರೆಯುವ ಕಾಯಕ ಸಹಿತ ಲಲಿತ ಕಲೆಗೆ ಸಂಬಂಧಿಸಿ ಸೃಜನಶೀಲ ಚಟುವಟಿಕೆಗಳನ್ನು ನಡೆಸುತ್ತಿದ್ದ ಅವರು ಗುರು ಮುಖೇನ ಚಿತ್ರ ಅಥವಾ ಸಂಗೀತ ಕಲಿತವರಲ್ಲ. ಸ್ವಯಂ ಆಸಕ್ತಿಯಿಂದ ಚಿತ್ರಕಲೆ ಹಾಗೂ ಸಂಗೀತ ಕಲಿತು ಅದನ್ನೇ ವೃತ್ತಿಯಾಗಿ ಸ್ವೀಕರಿಸಿ ಜೀವನ ಸಾಗಿಸುತ್ತಿದ್ದರು.
ಸ್ವತಃ ಕೀಬೋರ್ಡ್ ಪ್ಲೇಯರ್ ಆಗಿ ಸಾವಿರಾರು ಕಾರ್ಯಕ್ರಮಗಳಿಗೆ ಸಂಗೀತ ನೀಡಿದ್ದಲ್ಲದೇ, ಸಂಗೀತ ಸಂಯೋಜಕರೂ ಆಗಿದ್ದರು. ಕೀಬೋರ್ಡ್ ತರಬೇತಿ ತರಗತಿ ನಡೆಸಿ ಅನೇಕ ಶಿಷ್ಯರಿಗೆ ಸಂಗೀತ ಶಿಕ್ಷಣವನ್ನೂ ನೀಡಿದ್ದಾರೆ. ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಪರದೆ ಸಹಿತ ರಂಗಸಜ್ಜಿಕೆ, ಮೇಕಪ್, ಸಿಮೆಂಟ್ ಶಿಲ್ಪ, ಕ್ರಾಫ್ಟಿಂಗ್, ಬ್ಯಾನರ್ ಬರಹ ಕ್ಷೇತ್ರಗಳಲ್ಲೂ ದುಡಿದ ಸೃಜನಶೀಲರಾಗಿದ್ದರು. ಅವರಿಂದ ತರಬೇತಿ ಮತ್ತು ಪ್ರೇರಣೆ ಪಡೆದ ಅನೇಕ ಮಂದಿ ಕಲಾವೃತ್ತಿಯಲ್ಲಿ ಹೆಸರುವಾಸಿಯಾಗಿದ್ದಾರೆ.
Swathi Satish (48), a multi-faceted artist and music composer popularly known as a “self-taught Ekalavya” in the fields of art and music, died by suicide on Saturday morning near Mittabare, Mudipu. According to sources, Satish was found hanging from a tree close to his residence at around 9 a.m. Police suspect that family-related issues may have driven him to take the extreme step. He is survived by his wife and son.
15-09-26 09:13 pm
HK News Staffer
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
15-09-26 09:18 pm
HK News Staffer
Satish Kumpala, Manglore: ಕಾಟಾಚಾರಕ್ಕೆ ಸಂಪುಟ ಸ...
15-09-26 07:46 pm
U T Khader, KDP Meeting, Bharath Sheety, Hari...
15-09-26 06:52 pm
Aravind Bolar Controversy, Mangalore: “ಎಂಕ್ ಮ...
15-09-26 05:29 pm
U T Khader, KDP Meeting, Sudheer Reddy Ips: :...
15-09-26 05:27 pm
15-09-26 09:19 pm
HK News Staffer
Mangalore Blackmail: ಫೋಟೋ ಮಾರ್ಫ್ ಮಾಡಿ ಬ್ಲ್ಯಾಕ...
15-09-26 12:55 pm
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm
ಗಣೇಶ ಹಬ್ಬದ ಬೆನ್ನಲ್ಲೇ ಕರ್ನಾಟಕದಲ್ಲಿ ಸರಣಿ ದುರಂತ:...
15-09-26 12:41 pm
ಗಣೇಶೋತ್ಸವದ ಸಂಭ್ರಮದ ನಡುವೆ ಭೀಕರ ದುರಂತ: ಅಗ್ನಿ ಅವ...
15-09-26 10:31 am