ಬ್ರೇಕಿಂಗ್ ನ್ಯೂಸ್
23-01-26 09:21 pm Mangaluru Staffer ಕರಾವಳಿ
ಮಂಗಳೂರು, ಜ.23: ಯೆನಪೋಯ ನರ್ಸಿಂಗ್ ಕಾಲೇಜಿನ ಮಾನಸಿಕ ಆರೋಗ್ಯ ನರ್ಸಿಂಗ್ ವಿಭಾಗದ ವತಿಯಿಂದ ವೈದ್ಯಕೀಯ–ಶಸ್ತ್ರಚಿಕಿತ್ಸಾ ನರ್ಸಿಂಗ್ ವಿಭಾಗದ ಸಹಯೋಗದಲ್ಲಿ “ಬದಲಾಗುತ್ತಿರುವ ಜಗತ್ತಿಗೆ ನವೀನತೆ, ಏಕೀಕರಣ ಮತ್ತು ಸಮಗ್ರ ದೃಷ್ಟಿಕೋನಗಳೊಂದಿಗೆ ನರ-ಮನೋವೈದ್ಯಕೀಯದ ಪುನರ್ವ್ಯಾಖ್ಯಾನ” ಎಂಬ ವಿಷಯದ ಮೇಲೆ ರಾಷ್ಟ್ರೀಯ ಸಮ್ಮೇಳನವನ್ನು ಜ.23ರಂದು ಯೆನಪೋಯ (ಡೀಮ್ಡ್ ಟು ಬಿ) ವಿಶ್ವವಿದ್ಯಾಲಯದ EMD ಸಭಾಂಗಣದಲ್ಲಿ ನಡೆಯಿತು.
ಮುಖ್ಯ ಅತಿಥಿಗಳಾಗಿ ಯೆನೆಪೋಯ (ಡೀಮ್ಡ್ ಟು ಬಿ) ವಿಶ್ವವಿದ್ಯಾಲಯ ಕುಲಪತಿ ಡಾ.ಗಂಗಾಧರ ಸೋಮಯಾಜಿ ಕೆ.ಎಸ್. ಮತ್ತು ನಿಟ್ಟೆ ಉಷಾ ನರ್ಸಿಂಗ್ ವಿಜ್ಞಾನ ಸಂಸ್ಥೆಯ ಪ್ರಾಂಶುಪಾಲರಾದ ಡಾ.ಫಾತಿಮಾ ಡಿಸಿಲ್ವ ಅವರು ನರ ಮನೋ ವೈದ್ಯಕೀಯದ ವೈಶಿಷ್ಟ್ಯವನ್ನು ಒತ್ತಿ ಹೇಳಿ, ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ ಕ್ಷೇತ್ರದಲ್ಲಿನ ಇತ್ತೀಚಿನ ತಂತ್ರಜ್ಞಾನಗಳು ಬೀರುತ್ತಿರುವ ಪ್ರಭಾವವನ್ನು ವಿವರಿಸಿದರು.




ಅಧ್ಯಕ್ಷತೆ ವಹಿಸಿದ್ದ ಯೆನಪೋಯ ನರ್ಸಿಂಗ್ ಕಾಲೇಜಿನ ಡೀನ್ ಡಾ. ಲೀನಾ ಕೆ.ಸಿ., ನರ ಮನೋ ವೈದ್ಯಕೀಯದಲ್ಲಿ ಆಧುನಿಕ ತಂತ್ರಜ್ಞಾನದ ಬಳಸಿಕೊಳ್ಳುವಿಕೆ ಮತ್ತು ಕೃತಕ ಬುದ್ಧಿಮತ್ತೆಯ ಉಪಯುಕ್ತತೆ ಬಗ್ಗೆ ವಿವರಿಸಿದರು. ಅತಿಥಿಗಳಾಗಿ ಪ್ರೊ. ವೈಸ್ ಚಾನ್ಸಲರ್ ಡಾ.ಬಿ.ಹೆಚ್. ಶ್ರೀಪತಿ ರಾವ್ ಹಾಗೂ ಯೆನಪೋಯ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಡಾ.ಬಿ.ಟಿ. ನಂದೀಶ್ ಉಪಸ್ಥಿತರಿದ್ದರು.
ಕಾರ್ಯಕ್ರಮದ ಆಯೋಜನಾ ಪ್ರಮುಖರೂ ಆದ ಮಾನಸಿಕ ಆರೋಗ್ಯ ನರ್ಸಿಂಗ್ ವಿಭಾಗದ ಹೆಡ್ ಡಾ.ಬಿನಿಶಾ ಪಪ್ಪಚ್ಚನ್ ಸ್ವಾಗತಿಸಿದರು. ವೈದ್ಯಕೀಯ ಶಸ್ತ್ರಚಿಕಿತ್ಸಾ ನರ್ಸಿಂಗ್ ವಿಭಾಗದ ಹೆಡ್ ಪ್ರೊ. ಶಶಿಕುಮಾರ್ ಜವಡಗಿ ವಂದಿಸಿದರು. ಭಾರತದ ವಿವಿಧ ರಾಜ್ಯಗಳಿಂದ ಒಟ್ಟು 184 ಪ್ರತಿನಿಧಿಗಳು ಈ ರಾಷ್ಟ್ರೀಯ ಸಮ್ಮೇಳನದಲ್ಲಿ ಭಾಗವಹಿಸಿದ್ದರು.
ಈ ಕಾರ್ಯಕ್ರಮವನ್ನು ಯೆನೆಪೊಯಾ ನರ್ಸಿಂಗ್ ಕಾಲೇಜಿನ ಮೆಡಿಕಲ್ ಸರ್ಜಿಕಲ್ ನರ್ಸಿಂಗ್ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಮಿಸ್ ಡೈಸಿ ಡಿಸೋಜ ಅವರು ನಿರೂಪಿಸಿದರು.
Yenepoya Nursing College, through its Department of Mental Health Nursing in collaboration with the Department of Medical Surgical Nursing, successfully organized a National Conference titled “Redefining Neuropsychiatry: Innovation, Integration & Holistic Approaches for a Changing World” on January 23, 2026, at the EMD Hall, Yenepoya (Deemed to be) University.
15-09-26 09:13 pm
HK News Staffer
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
15-09-26 09:18 pm
HK News Staffer
Satish Kumpala, Manglore: ಕಾಟಾಚಾರಕ್ಕೆ ಸಂಪುಟ ಸ...
15-09-26 07:46 pm
U T Khader, KDP Meeting, Bharath Sheety, Hari...
15-09-26 06:52 pm
Aravind Bolar Controversy, Mangalore: “ಎಂಕ್ ಮ...
15-09-26 05:29 pm
U T Khader, KDP Meeting, Sudheer Reddy Ips: :...
15-09-26 05:27 pm
15-09-26 09:19 pm
HK News Staffer
Mangalore Blackmail: ಫೋಟೋ ಮಾರ್ಫ್ ಮಾಡಿ ಬ್ಲ್ಯಾಕ...
15-09-26 12:55 pm
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm
ಗಣೇಶ ಹಬ್ಬದ ಬೆನ್ನಲ್ಲೇ ಕರ್ನಾಟಕದಲ್ಲಿ ಸರಣಿ ದುರಂತ:...
15-09-26 12:41 pm
ಗಣೇಶೋತ್ಸವದ ಸಂಭ್ರಮದ ನಡುವೆ ಭೀಕರ ದುರಂತ: ಅಗ್ನಿ ಅವ...
15-09-26 10:31 am