ಬ್ರೇಕಿಂಗ್ ನ್ಯೂಸ್
19-12-25 04:43 pm Mangalore Correspondent ಕರಾವಳಿ
ಮಂಗಳೂರು, ಡಿ.19 : ರಾಜ್ಯದಲ್ಲಿ ಸಂಚಾರಿ ನಿಯಮ ಉಲ್ಲಂಘನೆಯ ದಂಡವನ್ನು 50 ಶೇಕಡಾ ರಿಯಾಯ್ತಿಯಲ್ಲಿ ಕಟ್ಟಲು ರಾಜ್ಯ ಸರ್ಕಾರ ಅವಕಾಶ ನೀಡಿದೆ. ಆದರೆ ಇದನ್ನೇ ದುರುಪಯೋಗ ಮಾಡಿಕೊಂಡ ಸೈಬರ್ ಖದೀಮರು ಸಾರ್ವಜನಿಕರಿಗೆ ಎಪಿಕೆ ಫೈಲ್ಸ್ ಕಳಿಸುವ ಮೂಲಕ ಏಪ್ ಡೌನ್ಲೋಡ್ ಮಾಡಿಕೊಳ್ಳಲು ಸಲಹೆ ನೀಡುತ್ತಿದ್ದು ಜನಸಾಮಾನ್ಯರನ್ನು ಮೋಸದ ಬಲೆಗೆ ಬೀಳಿಸುತ್ತಿದ್ದಾರೆ.
ಇದರ ಬಗ್ಗೆ ಮಂಗಳೂರು ಪೊಲೀಸ್ ಕಮಿಷನರ್ ಸುಧೀರ್ ರೆಡ್ಡಿ ಪ್ರತಿಕ್ರಿಯೆ ನೀಡಿದ್ದು ಟ್ರಾಫಿಕ್ ಫೈನ್ ಕಟ್ಟಲು ಅಂತಹ ಯಾವುದೇ ಏಪ್ಸ್ ಗಳಿಲ್ಲ. ಆ ರೀತಿಯ ಎಪಿಕೆ ಫೈಲ್ಸ್ ಗಳನ್ನು ನಂಬಬೇಡಿ. ಸಾರ್ವಜನಿಕರು ಸಾರಿಗೆ ಇಲಾಖೆಯ ವೆಬ್ ಸೈಟ್ ಅಥವಾ ಕರ್ನಾಟಕ ವನ್ ಸೆಂಟರ್ ಮೂಲಕ ಮಾತ್ರ ಟ್ರಾಫಿಕ್ ದಂಡವನ್ನು ಪಾವತಿ ಮಾಡಿ ಎಂದು ಸಾರ್ವಜನಿಕರಿಗೆ ಸಲಹೆ ನೀಡಿದ್ದಾರೆ.
ಎಪಿಕೆ ಫೈಲ್ಸ್ ಲಿಂಕ್ ಗಳಲ್ಲಿರುವ ಏಪ್ ಗಳನ್ನು ಡೌನ್ಲೋಡ್ ಮಾಡಿದರೆ ನಿಮ್ಮ ಮೊಬೈಲ್ ಹ್ಯಾಕ್ ಆಗಬಹುದು. ಆಮೂಲಕ ಮೊಬೈಲ್ ಸಂಪರ್ಕದಲ್ಲಿರುವ ಬ್ಯಾಂಕ್ ಖಾತೆಗಳ ವಿವರಗಳು ಸೈಬರ್ ವಂಚಕರಿಗೆ ಸಿಗಬಹುದು. ನಿಮ್ಮ ಅಗತ್ಯವೇ ಇಲ್ಲದೆ ಬ್ಯಾಂಕಿನಲ್ಲಿರುವ ಮೊತ್ತವನ್ನು ವಂಚಕರು ಕಬಳಿಸಬಹುದು. ಹೀಗಾಗಿ ಟ್ರಾಫಿಕ್ ಮೊತ್ತವನ್ನು ಪಾವತಿ ಮಾಡುವುದಕ್ಕಾಗಿ ಯಾವುದೇ ರೀತಿಯ ಏಪ್ ಗಳನ್ನು ಡೌನ್ಲೋಡ್ ಮಾಡಿಕೊಳ್ಳಬೇಡಿ. ಯಾವುದೇ ಏಪ್ಸ್ ಗಳನ್ನು ಡೌನ್ಲೋಡ್ ಮಾಡುವುದಿದ್ದರೂ ಪ್ಲೇಸ್ಟೋರ್ ನಿಂದ ಪಡೆಯಬೇಕೇ ವಿನಾ ಇಂತಹ ಡೈರೆಕ್ಟ್ ಫೈಲ್ಸ್ ಗಳಿಂದ ಮಾಡುವಂತಿಲ್ಲ ಅನ್ನೋದು ನೆನಪಿರಲಿ.
ಮೆಸೇಜ್ ಮೂಲಕ ಎಪಿಕೆ ಫೈಲ್ಸ್ ಮೂಲಕ ಬಂದಿದ್ದ ಲಿಂಕ್ ಗಳನ್ನು ನಂಬಿ ಮಂಗಳೂರಿನ ಇಬ್ಬರು ಏಪ್ಸ್ ಡೌನ್ಲೋಡ್ ಮಾಡಿ ತೊಂದರೆಗೆ ಸಿಲುಕಿದ್ದಾರೆ. ಹೀಗಾಗಿ ಯಾರು ಕೂಡ ಈ ರೀತಿಯ ಫೈಲ್ಸ್ ಬಂದಲ್ಲಿ ಸ್ಪಂದಿಸಬೇಡಿ. ತೊಂದರೆಗೆ ಸಿಲುಕಬೇಡಿ ಎಂದು ಕಮಿಷನರ್ ಸುಧೀರ್ ರೆಡ್ಡಿ ಸಾರ್ವಜನಿಕರಿಗೆ ಸಲಹೆ ಮಾಡಿದ್ದಾರೆ.
The Karnataka government has allowed citizens to pay traffic violation fines with a 50% rebate. But cybercriminals are exploiting this opportunity by sending APK file links to the public, urging them to download fake apps — leading many into cyber fraud traps.
15-09-26 09:13 pm
HK News Staffer
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
15-09-26 09:18 pm
HK News Staffer
Satish Kumpala, Manglore: ಕಾಟಾಚಾರಕ್ಕೆ ಸಂಪುಟ ಸ...
15-09-26 07:46 pm
U T Khader, KDP Meeting, Bharath Sheety, Hari...
15-09-26 06:52 pm
Aravind Bolar Controversy, Mangalore: “ಎಂಕ್ ಮ...
15-09-26 05:29 pm
U T Khader, KDP Meeting, Sudheer Reddy Ips: :...
15-09-26 05:27 pm
15-09-26 09:19 pm
HK News Staffer
Mangalore Blackmail: ಫೋಟೋ ಮಾರ್ಫ್ ಮಾಡಿ ಬ್ಲ್ಯಾಕ...
15-09-26 12:55 pm
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm
ಗಣೇಶ ಹಬ್ಬದ ಬೆನ್ನಲ್ಲೇ ಕರ್ನಾಟಕದಲ್ಲಿ ಸರಣಿ ದುರಂತ:...
15-09-26 12:41 pm
ಗಣೇಶೋತ್ಸವದ ಸಂಭ್ರಮದ ನಡುವೆ ಭೀಕರ ದುರಂತ: ಅಗ್ನಿ ಅವ...
15-09-26 10:31 am