ಬ್ರೇಕಿಂಗ್ ನ್ಯೂಸ್
08-12-25 11:23 am Mangalore Correspondent ಕರಾವಳಿ
ಮಂಗಳೂರು, ಡಿ.8 : ಇಂಡಿಗೋ ವಿಮಾನ ಸೇವೆಯ ಬಿಕ್ಕಟ್ಟು ಮುಂದುವರೆದಿದ್ದು, ಮಂಗಳೂರು ಏರ್ಪೋರ್ಟ್ ನಿಂದ ಬೆಂಗಳೂರು, ಮುಂಬೈಗೆ ಹೋಗಬೇಕಿದ್ದ ಬಹುತೇಕ ವಿಮಾನಗಳನ್ನು ಡಿ.13ರ ವರೆಗೆ ರದ್ದುಪಡಿಸಲಾಗಿದೆ. ಡಿಸೆಂಬರ್ 8 ರಿಂದ 13ರ ವರೆಗೆ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸುವ ಮತ್ತು ಹೊರಡುವ ಒಟ್ಟು 44 ವಿಮಾನಗಳು ರದ್ದಾಗಿವೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮಂಗಳೂರು-ಬೆಂಗಳೂರು, ಬೆಂಗಳೂರು-ಮಂಗಳೂರು, ಮಂಗಳೂರು-ಮುಂಬೈ, ಮುಂಬೈ-ಮಂಗಳೂರು ನಡುವೆ ಇಂಡಿಗೋ ವಿಮಾನ ಸಂಚಾರ ಇರುವುದಿಲ್ಲ ಎಂದು ವಿಮಾನ ನಿಲ್ದಾಣ ಮೂಲಗಳು ತಿಳಿಸಿವೆ. ಮಂಗಳೂರಿನಿಂದ ಹೊರ ರಾಷ್ಟ್ರಗಳಿಗೂ ಇಂಡಿಗೋ ವಿಮಾನ ಸಂಚಾರ ಇಲ್ಲ. ಕೇವಲ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನಗಳು ದೇಶೀಯ ಹಾಗೂ ಅಂತಾರಾಷ್ಟ್ರೀಯ ಸಂಚಾರ ನಡೆಸುತ್ತಿವೆ.
ಕಳೆದ ಮೂರು ದಿನಗಳಿಂದ ಇಂಡಿಗೋ ವಿಮಾನ ಸಂಚಾರ ರದ್ದತಿಯಿಂದಾಗಿ ದೇಶೀಯ ಪ್ರಯಾಣಕ್ಕೆ ಭಾರೀ ತೊಂದರೆಯಾಗಿದ್ದು ಪ್ರಯಾಣಿಕರು ಸಂಕಷ್ಟಕ್ಕೀಡಾಗಿದ್ದಾರೆ. ಈ ನಡುವೆ, ಕೇಂದ್ರ ಸರ್ಕಾರ ಇಂಡಿಗೋ ಸಂಸ್ಥೆಗೆ ಚಾಟಿ ಬೀಸಿದ ಬಳಿಕ ಟಿಕೆಟ್ ಬುಕ್ಕಿಂಗ್ ಹಣವನ್ನು ಮರಳಿಸಲಾಗುತ್ತಿದೆ. ಮೂರು ದಿನಗಳಲ್ಲಿ ದೇಶಾದ್ಯಂತ 650 ವಿಮಾನಗಳು ರದ್ದುಗೊಂಡಿದ್ದು ದೆಹಲಿ, ಮುಂಬೈ, ಹೈದ್ರಾಬಾದ್, ಬೆಂಗಳೂರಿನಲ್ಲಿ ತೀವ್ರ ಬಿಕ್ಕಟ್ಟು ಎದುರಾಗಿದೆ. ಇದೇ ವೇಳೆ, 610 ಕೋಟಿ ರೂಪಾಯಿ ಟಿಕೆಟ್ ಬುಕ್ಕಿಂಗ್ ಹಣವನ್ನು ಮರಳಿಸಲಾಗಿದೆ ಎಂದು ಇಂಡಿಗೋ ಮಾಹಿತಿ ನೀಡಿದೆ.
ಇಂಡಿಗೋ ವಿಮಾನ ಸಂಸ್ಥೆಯಲ್ಲಾದ ತೊಂದರೆ ಬಗ್ಗೆ ಪೈಲಟ್ಗಳು ಪತ್ರ ಬರೆದಿದ್ದು ಇಂದಿನ ಬಿಕ್ಕಟ್ಟಿಗೆ ಆಡಳಿತ ಮಂಡಳಿ ಮತ್ತು ಸಿಇಓ ಕಾರಣ ಎಂದು ದೂರಿದೆ. ದೇಶದ ನಾಗರಿಕರು ಮತ್ತು ಆಡಳಿತ ಮಂಡಳಿಗೆ ಬರೆದ ಪತ್ರದಲ್ಲಿ ಕಾರ್ಯಾಚರಣೆ ವೈಫಲ್ಯಕ್ಕೆ ಸಿಇಓ ಪೀಟರ್ ಎಲ್ಬರ್ಟ್ ನಿರ್ಧಾರಗಳು ಕಾರಣ. ಕಳೆದ ಒಂದು ವರ್ಷದಿಂದ ಹೊಂದಾಣಿಕೆ ಇಲ್ಲದ ಪಾಳಿಗಳು, ನಿದ್ದೆಯಿಲ್ಲದ ರಾತ್ರಿಗಳು, ಸೂಕ್ತ ವೇತನ ನೀಡದ ನಿಯಮಗಳು, ಸಿಬಂದಿಯನ್ನು ಅವಮಾನಿಸಿದ ನಡೆಗಳಿಂದಾಗಿ ಸಂಸ್ಥೆಗೆ ಈ ಸ್ಥಿತಿ ಬಂದಿದೆ ಎಂದು ಹೇಳಿದ್ದಾರೆ.
ಇದೇ ವೇಳೆ, ಇಂಡಿಗೋ ಸಂಸ್ಥೆಯ ಮೂಲ ಕಂಪನಿ ಇಂಟರ್ ಗ್ಲೋಬ್ ಏವಿಯೇಷನ್, ಅವ್ಯವಸ್ಥೆ ಸರಿಪಡಿಸಲು ತುರ್ತು ನಿರ್ವಹಣಾ ತಂಡವನ್ನು ರಚಿಸಿದೆ. ಕೇಂದ್ರದಿಂದ 24 ಗಂಟೆ ಕಾರ್ಯಾಚರಣೆ ಸಲುವಾಗಿ ಸಮನ್ವಯ ಕೇಂದ್ರ ರಚಿಸಲಾಗಿದೆ. ಅಲ್ಲದೆ, ವಿಮಾನ ರದ್ದುಪಡಿಸುವ ಬಗ್ಗೆ ಎರಡು ದಿನ ಮೊದಲೇ ಮಾಹಿತಿ ನೀಡಲು ಖಡಕ್ ಸೂಚನೆಗಳನ್ನು ನೀಡಿದೆ. ಇದರಂತೆ, ಏರ್ಪೋರ್ಟ್ ನಲ್ಲಿ ಪ್ರಯಾಣಿಕರ ದಟ್ಟಣೆ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದೆ.
The ongoing IndiGo crisis has led to the cancellation of 44 flights to and from Mangaluru International Airport until December 13. Pilots have accused the airline’s management and CEO of operational failures, citing poor scheduling, lack of rest, and staff mistreatment. The central government has directed IndiGo to refund ticket fares, with ₹610 crore already refunded nationwide.
24-06-26 05:55 pm
HK News Staffer
ಅಡ್ಡ ಮತದಾನ ; ರಾಜ್ಯ ನಾಯಕತ್ವದ ನಿರ್ಲಕ್ಷ್ಯವೇ ಕಾರಣ...
23-06-26 05:58 pm
ಅಡ್ಡ ಮತದಾನ; ಧರ್ಮಸ್ಥಳದಲ್ಲಿ ಶಾಸಕರು ಬಂದು ಆಣೆ ಮಾಡ...
22-06-26 08:18 pm
ವಿಧಾನ ಪರಿಷತ್ ಚುನಾವಣೆಗೂ ಮುನ್ನ ರಹಸ್ಯ ಸಭೆ ; ಬಿಜೆ...
22-06-26 03:44 pm
ಆಸ್ಪತ್ರೆ ಸಿಬ್ಬಂದಿ ಸ್ಪಂದಿಸದಿದ್ದರೆ ಚಿಂತೆ ಬೇಡ ;...
22-06-26 12:51 pm
24-06-26 01:51 pm
HK News Staffer
ಮಾಹಿತಿ ಹಕ್ಕು ನಿಯಮಗಳಿಗೆ ಮಹಾರಾಷ್ಟ್ರ ಸರ್ಕಾರ ತಿದ್...
23-06-26 10:47 pm
ಟಿಎಂಸಿಯಲ್ಲಿ ರಾಜಕೀಯ ಭೂಕಂಪ ; ಮಮತಾ ಬ್ಯಾನರ್ಜಿ ಅಧ...
23-06-26 12:21 pm
ಕತಾರ್ ಕೈಗಾರಿಕಾ ಪ್ರದೇಶದಲ್ಲಿ ಭಾರೀ ಸ್ಫೋಟ ; 54 ಜನ...
22-06-26 12:55 pm
ಮರಳು ಮಾಫಿಯಾ ಅಟ್ಟಹಾಸಕ್ಕೆ ಬಿಜೆಪಿ ನಾಯಕ ಸಜೀವ ದಹನ;...
18-06-26 07:17 pm
23-06-26 06:02 pm
HK News Staffer
ಬಸ್ ಚಲಿಸುತ್ತಿದ್ದಾಗಲೇ ಬಿಪಿ ಲೋ ಆಗಿ ಕುಸಿದ ಚಾಲಕ !...
23-06-26 03:18 pm
ಮುಸ್ಲಿಮರಿಗೆ ಸಚಿವ ಸ್ಥಾನ ; ಕಾಂಗ್ರೆಸಿಗೆ ಓಟ್ ಹಾಕದ...
23-06-26 11:49 am
ಉಡುಪಿ ಕೋರ್ಟ್ಗೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ; ಕೆ...
22-06-26 05:23 pm
Dr Kakkillaya News: ಕೊರಾನಾ ಮಾಸ್ಕ್ ಹಾಕಿಲ್ಲವೆಂದ...
21-06-26 08:59 pm
24-06-26 09:28 pm
HK News Desk
30 ಲಕ್ಷ ಸಾಲ, ಲಿವ್-ಇನ್ ಸಂಬಂಧಕ್ಕೆ ಪೋಷಕರ ವಿರೋಧ ;...
24-06-26 08:53 pm
ರಾಮ ಮಂದಿರವನ್ನ ಸ್ಫೋಟಿಸಲು ಪ್ಲಾನ್ ಮಾಡಿದ್ವಿ ! ;...
24-06-26 07:53 pm
ಅಯೋಧ್ಯೆ ರಾಮ ಮಂದಿರ ಹೆಸರಲ್ಲಿ ದೇಣಿಗೆ ; 200 ಕೋಟಿ...
24-06-26 05:57 pm
Mangalore Minor student Suicide: ಅಪ್ರಾಪ್ತೆಗೆ...
24-06-26 02:25 pm