ಧರ್ಮಸ್ಥಳ ಕೇಸ್ ; ವಿಚಾರಣೆ ಮುಗಿಸಿ ಸತ್ಯಕ್ಕೆ ಜಯ ಎನ್ನುತ್ತ ತೆರಳಿದ ಕೇರಳದ ಯೂಟ್ಯೂಬರ್, ಬಂಗ್ಲೆಗುಡ್ಡೆ ಕಾಡಿಗೆ ವಿಠಲ ಗೌಡ ಕರೆದೊಯ್ದು ಮತ್ತೆ ಮಹಜರು  

10-09-25 10:50 pm       Mangalore Correspondent   ಕರಾವಳಿ

ಧರ್ಮಸ್ಥಳ ಅಸಹಜ ಸಾವುಗಳ ತನಿಖೆ ನಡೆಸುತ್ತಿರುವ ಎಸ್ಐಟಿ ಅಧಿಕಾರಿಗಳು ದೂರುದಾರನಿಗೆ ಬುರುಡೆ ಕೊಟ್ಟಿದ್ದಾರೆ ಎನ್ನಲಾದ ಸೌಜನ್ಯಾ ಮಾವ ವಿಠಲ ಗೌಡರನ್ನು ಬುಧವಾರ ಸಂಜೆ ಮತ್ತೆ ಬಂಗ್ಲೆಗುಡ್ಡೆ ಕಾಡಿಗೆ ಕರೆದೊಯ್ದು ಮಹಜರು ನಡೆಸಿದ್ದಾರೆ. ಎಸ್ಪಿ ಸೈಮನ್ ನೇತೃತ್ವದಲ್ಲಿ ತನಿಖೆ ನಡೆಸಿದ್ದು, 40 ನಿಮಿಷದಲ್ಲಿ ಮತ್ತೆ ಅಲ್ಲಿಂದ ಹಿಂತಿರುಗಿದ್ದಾರೆ.

ಬೆಳ್ತಂಗಡಿ, ಸೆ.10 : ಧರ್ಮಸ್ಥಳ ಅಸಹಜ ಸಾವುಗಳ ತನಿಖೆ ನಡೆಸುತ್ತಿರುವ ಎಸ್ಐಟಿ ಅಧಿಕಾರಿಗಳು ದೂರುದಾರನಿಗೆ ಬುರುಡೆ ಕೊಟ್ಟಿದ್ದಾರೆ ಎನ್ನಲಾದ ಸೌಜನ್ಯಾ ಮಾವ ವಿಠಲ ಗೌಡರನ್ನು ಬುಧವಾರ ಸಂಜೆ ಮತ್ತೆ ಬಂಗ್ಲೆಗುಡ್ಡೆ ಕಾಡಿಗೆ ಕರೆದೊಯ್ದು ಮಹಜರು ನಡೆಸಿದ್ದಾರೆ. ಎಸ್ಪಿ ಸೈಮನ್ ನೇತೃತ್ವದಲ್ಲಿ ತನಿಖೆ ನಡೆಸಿದ್ದು, 40 ನಿಮಿಷದಲ್ಲಿ ಮತ್ತೆ ಅಲ್ಲಿಂದ ಹಿಂತಿರುಗಿದ್ದಾರೆ.

ಸೆ.6ರಂದು ಶನಿವಾರ ವಿಠಲ ಗೌಡರನ್ನು ಇದೇ ಕಾಡಿಗೆ ಕರೆದೊಯ್ದು ಮಹಜರು ನಡೆಸಿದ್ದು, ಆ ಸಂದರ್ಭದಲ್ಲಿ ನೆಲದ ಮೇಲ್ಮೈನಲ್ಲಿಯೇ ಶವದ ಅವಶೇಷಗಳು ಸಿಕ್ಕಿದ್ದವು ಎನ್ನುವ ಮಾಹಿತಿಗಳಿದ್ದವು. ಆನಂತರ, ಆ ಜಾಗಕ್ಕೆ ಪೊಲೀಸ್ ಭದ್ರತೆ ಒದಗಿಸಲಾಗಿತ್ತು. ಆ ಸಂದರ್ಭ ಸಿಕ್ಕಿದ್ದ ಮೂಳೆಗಳನ್ನು ಸಂಗ್ರಹಿಸಿದ್ದ ಅಧಿಕಾರಿಗಳು ಅದನ್ನು ಬೆಂಗಳೂರಿನ ಮಡಿವಾಳದ ಎಫ್ಎಸ್ಎಲ್ ಪ್ರಯೋಗಾಲಯಕ್ಕೆ ಕಳುಹಿಸಿದ್ದರು.

ಆದರೆ ಆ ಜಾಗಕ್ಕೆ ಹೊರಗಿನ ವ್ಯಕ್ತಿಗಳು ಹೋಗದಂತೆ ಪೊಲೀಸ್ ಭದ್ರತೆ ಒದಗಿಸಲಾಗಿತ್ತು. ದೂರುದಾರ ತಂದಿದ್ದ ತಲೆಬುರುಡೆಯನ್ನು ವಿಠಲ ಗೌಡ ಇದೇ ಕಾಡಿನಿಂದ ತೆಗೆದುಕೊಟ್ಟಿದ್ದರು ಎನ್ನಲಾಗುತ್ತಿದೆ. ಇದೇ ಮಾಹಿತಿ ಆಧರಿಸಿ ವಿಠಲ ಗೌಡರನ್ನು ಎಸ್ಐಟಿ ಅಧಿಕಾರಿಗಳು ಕರೆಸಿಕೊಂಡು ಸತತ ವಿಚಾರಣೆ ನಡೆಸುತ್ತಿದ್ದಾರೆ. ಅಲ್ಲದೆ, ಬುರುಡೆಯ ವಿಡಿಯೋ ಚಿತ್ರೀಕರಣ ನಡೆಸಿದ್ದಾರೆ ಎನ್ನಲಾದ ಕೇರಳದ ಯೂಟ್ಯೂಬರ್ ಮನಾಫ್, ಅಭಿಷೇಕ್, ಜಯನ್, ಮಟ್ಟಣ್ಣನವರ್ ಅವರನ್ನೂ ಸತತ ಮೂರು ದಿನಗಳಿಂದ ವಿಚಾರಣೆ ನಡೆಸುತ್ತಿದ್ದಾರೆ.

ಬುಧವಾರ ಸಂಜೆ ವೇಳೆಗೆ ಮೂರು ದಿನಗಳ ವಿಚಾರಣೆ ಮುಗಿಸಿ ಕೇರಳ ಯೂಟ್ಯೂಬರ್ ಮನಾಫ್ ಮತ್ತು ಅಭಿಷೇಕ್ ಬೆಳ್ತಂಗಡಿಯಿಂದ ತೆರಳಿದ್ದಾರೆ. ಈ ವೇಳೆ ಮಾಧ್ಯಮಕ್ಕೆ ಮಾತನಾಡಿದ ಮನಾಫ್, ಎಸ್ಐಟಿ ಒಳ್ಳೆಯ ರೀತಿಯಲ್ಲೇ ತನಿಖೆ ನಡೆಸ್ತಾ ಇದೆ. ನಮ್ಮಲ್ಲಿರುವ ಎಲ್ಲ ದಾಖಲೆಗಳನ್ನು ಅಧಿಕಾರಿಗಳಿಗೆ ನೀಡಿದ್ದೇವೆ. ಕೇಳಿರುವ ಪ್ರಶ್ನೆಗಳಿಗೆ ಉತ್ತರಿಸಿದ್ದೇವೆ, ನಮ್ಮ ವಿಚಾರಣೆ ಇಲ್ಲಿಗೆ ಮುಗಿದಿದ್ದು, ಬಿಟ್ಟು ಕಳಿಸಿದ್ದಾರೆ. 40 ವರ್ಷಗಳ ವಿಚಾರ ನಾಲ್ಕು ದಿನದಲ್ಲಿ ಮುಗಿಯಲ್ಲ. ಎಲ್ಲ ವಿಚಾರಗಳ ಬಗ್ಗೆ ದೀರ್ಘ ಕಾಲ ತನಿಖೆ ನಡೆಯುತ್ತದೆ. ಸತ್ಯಕ್ಕೆ ಜಯವಾಗಲಿದೆ ಎನ್ನುವ ವಿಶ್ವಾಸ ನಮಗಿದೆ ಎಂದು ಹೇಳಿದ್ದಾರೆ.

In a fresh development in the investigation into the suspicious deaths in Dharmasthala, the Special Investigation Team (SIT) once again took Vitala Gowda — the uncle of the deceased Soujanya and a key figure in the case — to the Banglegudde forest on Wednesday evening for a spot inspection.