ಬ್ರೇಕಿಂಗ್ ನ್ಯೂಸ್
09-09-25 10:52 pm Bangalore Correspondent ಕರ್ನಾಟಕ
ಬೆಂಗಳೂರು, ಸೆ.9 : ಸೋಮವಾರ ರಾತ್ರಿ ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ‘ಪಾಕಿಸ್ತಾನ ಜಿಂದಾಬಾದ್’ ಘೋಷಣೆ ಕೂಗಿದ ಘಟನೆ ನಡೆದಿದೆ. ಇದೇ ವೇಳೆ, ವಿಜಯಪುರ ಜಿಲ್ಲೆಯಲ್ಲಿ ಪ್ರಚೋದನಕಾರಿ ಆಡಿಯೋ ಒಂದು ವೈರಲ್ ಆಗಿದೆ. ರಾಜ್ಯದಲ್ಲಿ ಒಂದೇ ದಿನ ಎರಡು ದೇಶದ್ರೋಹದ ಘಟನೆಗಳಾಗಿದ್ದು ಎರಡೂ ಕಡೆ ಪೊಲೀಸರು ಸುಮೊಟೊ ಪ್ರಕರಣ ದಾಖಲಿಸಿದ್ದಾರೆ.
ಇದರ ಬೆನ್ನಲ್ಲೇ, ‘ಪಾಕಿಸ್ತಾನ ಜಿಂದಾಬಾದ್’ ಘೋಷಣೆ ಕೂಗಿದ ಕಿಡಿಗೇಡಿಗಳ ವಿರುದ್ಧ ಕ್ರಮಕ್ಕೆ ಒತ್ತಾಯ ಹಿಂದೂ ಪರ ಸಂಘಟನೆಗಳು ಮತ್ತು ಬಿಜೆಪಿ ನಾಯಕರು ಆಗ್ರಹಿಸಿದ್ದಾರೆ. ‘ಪಾಕ್ ಪರ ಘೋಷಣೆ ಕೂಗಿರುವ ಬಗ್ಗೆ ಮಾಹಿತಿ ಬಂದಿದೆ. ಈದ್ ಮಿಲಾದ್ ಮೆರವಣಿಗೆಯ ಬಗ್ಗೆ ವಿಡಿಯೋ ಮಾಡಲಾಗಿದೆ. ಶೀಘ್ರದಲ್ಲೇ ಆರೋಪಿಗಳನ್ನು ಪತ್ತೆ ಹಚ್ಚಿ ಕ್ರಮಕೈಗೊಳ್ಳುತ್ತೇವೆ’ ಎಂದು ಶಿವಮೊಗ್ಗ ಎಸ್ಪಿ ಮಿಥುನ್ ಕುಮಾರ್ ಮಾಹಿತಿ ನೀಡಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಭದ್ರಾವತಿಯ ಗಾಂಧಿ ವೃತ್ತದಲ್ಲಿ ಈದ್ ಮೆರವಣಿಗೆ ಹೋಗುತ್ತಿದ್ದಾಗ ಗುಂಪೊಂದು ಈ ಘೋಷಣೆ ಕೂಗಿದ್ದು ಇದರ 12 ಸೆಕೆಂಡಿನ ವಿಡಿಯೋ ವೈರಲ್ ಆಗಿದೆ.
ವಿಜಯಪುರದಲ್ಲಿ ಸೆ.5ರಂದು ಈದ್ ಮೆರವಣಿಗೆ ನಡೆಯುತ್ತಿದ್ದಾಗ ಪ್ರಚೋದನಕಾರಿ ಸಂದೇಶದ ಆಡಿಯೋ ಪ್ಲೇ ಮಾಡಲಾಗಿದೆ. ಈ ಬಗ್ಗೆ ಮೂವರು ಯುವಕರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಆಡಿಯೋದಲ್ಲಿ 15 ನಿಮಿಷ ಪೊಲೀಸರು ಸುಮ್ಮನಿದ್ದರೆ ನಮ್ಮ ತಾಕತ್ತು ಏನೆಂದು ತೋರಿಸುತ್ತೇವೆ, ಎಲ್ಲರನ್ನೂ ನಿರ್ನಾಮ ಮಾಡುತ್ತೇವೆ, ಆಮೇಲೆ ಅವರು ಹಿಂದುಸ್ತಾನ್ ಮಾಡಲಿ ಎಂದು ಹೇಳುವ ಆಡಿಯೋ ಇದೆಯೆಂದು ಹೇಳಲಾಗುತ್ತಿದೆ. ಪೊಲೀಸರು ಡಿಜೆ ಮಾಲೀಕ, ಆಪರೇಟರ್ ಸೇರಿ ಮೂವರ ವಿರುದ್ಧ ಕೇಸು ದಾಖಲಿಸಿದ್ದಾರೆ.
Karnataka’s Shivamogga and Vijayapura districts witnessed controversies during Eid Milad processions, with videos and audio clips sparking outrage and police action. In Shivamogga’s Bhadravathi, a 12-second video allegedly showing a group of youths shouting “Pakistan Zindabad” during a procession near Gandhi Circle on Tarikere Road went viral on social media.
14-10-26 02:02 pm
HK News Staffer
Siddaramaiah: ಸಿದ್ದರಾಮಯ್ಯ ವಿರುದ್ಧ ನಕಲಿ ಸ್ಟಿಂ...
14-10-26 10:35 am
Siddaramaiah: ವಿವಾದಿತ ವಿಡಿಯೋ ಹಂಚಿಕೆ ; ಮಾನಹಾನಿ...
13-10-26 04:53 pm
ಹಿರಿಯ ಐಪಿಎಸ್ ಅಧಿಕಾರಿ, ಕೆಎಸ್ ಆರ್ ಪಿ ಎಡಿಜಿಪಿ ಎಸ...
13-10-26 03:49 pm
ಸ್ಟಿಂಗ್ ವಿವಾದಕ್ಕೆ ಹೊಸ ತಿರುವು ; ಸಿದ್ದರಾಮಯ್ಯ ಗಟ...
13-10-26 03:38 pm
14-10-26 04:59 pm
HK News Staffer
BMW Car News: ಟೈರ್ ಪಂಕ್ಚರ್ ಆಗಿದ್ದಕ್ಕೆ ರಸ್ತೆ ಬ...
14-10-26 12:54 pm
16 ವರ್ಷದ ಬಾಲಕಿಗೆ ರೋಬೋಟ್ ನಿಂದ ಲೈಂಗಿಕ ಕಿರುಕುಳ!...
14-10-26 10:57 am
ರಾಜಧಾನಿ ದೆಹಲಿಯ ಜಂತರ್ ಮಂತರ್ ನಲ್ಲಿ ಇನ್ನು ಮುಂದೆ...
12-10-26 05:22 pm
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
14-10-26 10:45 pm
HK News Staffer
UT Khader, News, Mangalore: ನವರಾತ್ರಿ ನೆಪದಲ್ಲಿ...
14-10-26 08:40 pm
Kollur Temple News: ಕೊಲ್ಲೂರು ದೇವಸ್ಥಾನದ ಬಳಿ ಅವ...
14-10-26 04:36 pm
Raghupathi Bhat: 'ಕಾಂಗ್ರೆಸ್ನಿಂದ ಬುಲಾವ್, ಬಿಜೆ...
14-10-26 02:00 pm
ಪಾಂಡೇಶ್ವರ ಟ್ರಾಫಿಕ್ ಕರ್ತವ್ಯದಲ್ಲಿದ್ದ ಹೆಡ್ ಕಾನ್ಸ...
13-10-26 11:10 pm
14-10-26 09:09 pm
Mangaluru Staffer
Mangalore Valencia Church, Fr Cyprian Pinto:...
14-10-26 08:55 pm
ಒಡಿಶಾದಿಂದ ಕೇರಳಕ್ಕೆ ಡ್ರಗ್ಸ್ ಸಪ್ಲೈ ; ₹1.78 ಕೋಟಿ...
14-10-26 12:23 pm
ಕೌಟುಂಬಿಕ ಕಲಹ ; ಇಬ್ಬರು ಮಕ್ಕಳೊಂದಿಗೆ ತುಂಗಭದ್ರಾ ಕ...
14-10-26 12:21 pm
ಮುಂಬೈ ಎಟಿಎಸ್ ಅಧಿಕಾರಿಗಳೆಂದು ಪರಿಚಯಿಸಿ ಪುತ್ತೂರಿನ...
12-10-26 10:36 pm