ಲಷ್ಕರ್ ಉಗ್ರರ ಹೆಸರಲ್ಲಿ ಮುಂಬೈ ಸ್ಫೋಟದ ಬೆದರಿಕೆ ಸಂದೇಶ ; ಬಿಹಾರ ಮೂಲದ ಜ್ಯೋತಿಷಿ ಬಂಧನ, ಸ್ನೇಹಿತನನ್ನು ಸಿಕ್ಕಿಸಲು ಹೋಗಿ ಪೊಲೀಸರ ಕೈಗೆ ಸಿಕ್ಕಿಬಿದ್ದ ಪೋಲಿ ! 

06-09-25 05:26 pm       HK News Desk   ಕ್ರೈಂ

ಲಷ್ಕರ್ ಉಗ್ರವಾದಿ ಸಂಘಟನೆಯ 14 ಉಗ್ರರು 400 ಕೆಜಿ ಆರ್ ಡಿಎಕ್ಸ್ ನೊಂದಿಗೆ ನಗರಕ್ಕೆ ಪ್ರವೇಶಿಸಿದ್ದಾರೆ ಎಂದು ಮುಂಬೈ ಪೊಲೀಸರಿಗೆ ಬೆದರಿಕೆ ಸಂದೇಶ ಕಳುಹಿಸಿದ ಆರೋಪದಲ್ಲಿ ದೆಹಲಿ ಹೊರವಲಯದ ನೋಯ್ಡಾದಲ್ಲಿ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. 

ಮುಂಬೈ, ಸೆ.6: ಲಷ್ಕರ್ ಉಗ್ರವಾದಿ ಸಂಘಟನೆಯ 14 ಉಗ್ರರು 400 ಕೆಜಿ ಆರ್ ಡಿಎಕ್ಸ್ ನೊಂದಿಗೆ ನಗರಕ್ಕೆ ಪ್ರವೇಶಿಸಿದ್ದಾರೆ ಎಂದು ಮುಂಬೈ ಪೊಲೀಸರಿಗೆ ಬೆದರಿಕೆ ಸಂದೇಶ ಕಳುಹಿಸಿದ ಆರೋಪದಲ್ಲಿ ದೆಹಲಿ ಹೊರವಲಯದ ನೋಯ್ಡಾದಲ್ಲಿ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. 

ತನ್ನ ವಿರುದ್ಧ ಕೇಸ್ ದಾಖಲಿಸಿದ ಸ್ನೇಹಿತನನ್ನು ಅಪರಾಧ ಪ್ರಕರಣದಲ್ಲಿ ಸಿಲುಕಿಸಿ ಸೇಡು ತೀರಿಸಲು ಈ ರೀತಿ ಹುಸಿ ಬೆದರಿಕೆ ಸಂದೇಶ ಕಳುಹಿಸಿದ್ದಾಗಿ ಒಪ್ಪಿಕೊಂಡಿದ್ದಾಗಿ ಪೊಲೀಸರು ತಿಳಿಸಿದ್ದಾರೆ. ಬಂಧಿತ ಆರೋಪಿ ಬಿಹಾರದ ಪಾಟ್ನಾ ಮೂಲದ ಅಶ್ವನಿ ಕುಮಾರ್ (51) ಎಂಬಾತನಾಗಿದ್ದು ಐದು ವರ್ಷಗಳಿಂದ ನೋಯ್ಡಾದ ಸೆಕ್ಟರ್ 79ರಲ್ಲಿ ಹೌಸಿಂಗ್ ಸೊಸೈಟಿಯಲ್ಲಿ ವಾಸಿಸುತ್ತಿದ್ದ. ತನ್ನನ್ನು ಜ್ಯೋತಿಷಿ ಮತ್ತು ವಾಸ್ತು ತಜ್ಞ ಎಂದು ಹೇಳಿಕೊಂಡಿದ್ದ.‌

ಬೆದರಿಕೆ ಸಂದೇಶದ ಬೆನ್ನತ್ತಿದ ಪೊಲೀಸರಿಗೆ ಅದರ ಮೂಲ ನೋಯ್ಡಾ ಎಂಬುದು ಗೊತ್ತಾಗಿತ್ತು. ತಕ್ಷಣ ಅಲ್ಲಿನ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿ ಅಶ್ವಿನಿ ಕುಮಾರ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿತ್ತು. ಮುಂಬೈ ಪೊಲೀಸರು ತೆರಳಿ ವಶಕ್ಕೆ ಪಡೆದ ನಂತರವೇ ಆರೋಪಿ ಬಂಧನದ ಬಗ್ಗೆ ತಿಳಿಸಲಾಗಿದೆ.‌

ಸ್ನೇಹಿತನನ್ನು ಸಿಕ್ಕಿಸಲು ಹೋಗಿ ತಾನೇ ಸಿಕ್ಕಿಬಿದ್ದ ! 

2023 ರಲ್ಲಿ ಪಾಟ್ನಾದಲ್ಲಿ ತನ್ನ ವಿರುದ್ಧ ದೂರು ದಾಖಲಿಸಿದ ಸ್ನೇಹಿತನ ವಿರುದ್ಧ ಸೇಡು ತೀರಿಸಿಕೊಳ್ಳಲು ಕುಮಾರ್ ಸಂಚು ಹೂಡಿದ್ದ. ಆ ಪ್ರಕರಣದಲ್ಲಿ ಮೂರು ತಿಂಗಳು ಜೈಲು ಶಿಕ್ಷೆಗೊಳಗಾಗಿದ್ದ ಅಶ್ವಿನಿ, ಇದಕ್ಕಾಗಿ ಸೇಡು ತೀರಿಸಲು ತನ್ನ ಸ್ನೇಹಿತನ ಹೆಸರಲ್ಲಿ ಮುಂಬೈ ಪೊಲೀಸರಿಗೆ ಬೆದರಿಕೆ ಸಂದೇಶ ಕಳುಹಿಸಿದ್ದ. ಆದರೆ ಈಗ ಆತನೇ ಪೊಲೀಸರಿಗೆ ಸಿಕ್ಕಿಬಿದ್ದು ಮತ್ತೆ ಜೈಲು ಸೇರಿದ್ದಾನೆ.‌

ಅನಂತ ಚತುರ್ಥಿ ದಿನ ಗಣೇಶ ವಿಸರ್ಜನೆಗೆ ಸಿದ್ಧತೆ ನಡೆಯುತ್ತಿರುವಾಗಲೇ 34 ವಾಹನಗಳಲ್ಲಿ 400 ಕೆಜಿ ಆರ್‌ಡಿಎಕ್ಸ್‌ ಸ್ಫೋಟಿಸಿ ಮಾರಣ ಹೋಮ ನಡೆಸುತ್ತೇವೆ, ಇದಕ್ಕಾಗಿ 14 ಲಷ್ಕರ್ ಉಗ್ರರು ಮುಂಬೈ ಪ್ರವೇಶಿಸಿದ್ದಾರೆ ಎಂದು ವಾಟ್ಸಾಪ್‌ನಲ್ಲಿ ಬೆದರಿಕೆ ಸಂದೇಶ ಹಾಕಲಾಗಿತ್ತು. ಮುಂಬೈ ಪೊಲೀಸರು ಎಲ್ಲೆಡೆ ಕಟ್ಟೆಚ್ಚರ ವಹಿಸಿದ್ದರು.

A 51-year-old man from Noida has been arrested by the Mumbai Police for allegedly sending a hoax terror threat in the name of the Lashkar-e-Taiba terror outfit, claiming that 14 militants had entered Mumbai with 400 kg of RDX to carry out deadly blasts. The accused, identified as Ashwini Kumar, a native of Patna, Bihar, had been living in a housing society in Sector 79 of Noida for the past five years.