ಬ್ರೇಕಿಂಗ್ ನ್ಯೂಸ್
09-09-25 10:47 pm Mangalore Correspondent ಕರಾವಳಿ
ಉಳ್ಳಾಲ, ಸೆ.9 : ಸೋಮೇಶ್ವರ-ಬಟ್ಟಪ್ಪಾಡಿ ಸಂಪರ್ಕದ ರಸ್ತೆಗೆ "ಅಮೃತ ಸೋಮೇಶ್ವರ ರಸ್ತೆ" ಎಂದು ನಾಮಕರಣ ಮಾಡಲು ಸೋಮೇಶ್ವರ ಪುರಸಭೆಯಲ್ಲಿ ಸರ್ವ ಸದಸ್ಯರ ಬೆಂಬಲದಿಂದ ನಿರ್ಣಯ ಕೈಗೊಳ್ಳಲಾಗಿದೆ. ಬೀದಿ ನಾಯಿಗಳ ನಿಗ್ರಹಕ್ಕೆ ಸಂತಾನ ಹರಣ ಮಾತ್ರ ಪರಿಹಾರವೇ...?ಅವುಗಳ ಹಲ್ಲುಗಳನ್ನ ಕೀಳುತ್ತೀರಾ..? ನಾಯಿಗಳಿಂದ ಕಚ್ಚಿಸಿಕೊಳ್ಳೋದನ್ನ ತಡೆಯೋದು ಹೇಗೆಂದು ಸೋಮೇಶ್ವರ ಪುರಸಭಾ ಸದಸ್ಯ ಮನೋಜ್ ಕಟ್ಟೆಮನೆ ಅವರು ಪಶು ಸಂಗೋಪನಾ ಇಲಾಖೆ ಅಧಿಕಾರಿಗಳನ್ನ ಪ್ರಶ್ನಿಸಿದ್ದಾರೆ.
ಸೋಮೇಶ್ವರ ಪುರಸಭೆ ಅಧ್ಯಕ್ಷೆ ಕಮಲ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ಪುರಸಭೆ ಸಭಾಂಗಣದಲ್ಲಿ ಸಾಮಾನ್ಯ ಸಭೆ ನಡೆಯಿತು. ಸೋಮೇಶ್ವರ- ಬಟ್ಟಪ್ಪಾಡಿ ಬೀಚ್ ಸಂಪರ್ಕ ರಸ್ತೆಗೆ ಅಗಲಿದ ಜನಪದ ವಿದ್ವಾಂಸ, ಸಾಹಿತಿ "ಅಮೃತ ಸೋಮೇಶ್ವರ ರಸ್ತೆ" ಎಂದು ನಾಮಕರಣ ಮಾಡುವ ಕುರಿತಂತೆ ಆಕ್ಷೇಪ ಬಂದಿರುವ ಬಗ್ಗೆ ಮುಖ್ಯಾಧಿಕಾರಿ ಮತ್ತಡಿಯವರು ಸಭೆಯಲ್ಲಿ ಪ್ರಸ್ತಾಪಿಸಿದರು. ಈ ವೇಳೆ ಆಡಳಿತ ಪಕ್ಷದ ಸದಸ್ಯರಾದ ಹರೀಶ್ ಕುಂಪಲ ಮಾತನಾಡಿ ಸಾಹಿತಿ ಅಮೃತರು ಸೋಮೇಶ್ವರದ ಹೆಸರನ್ನ ಜಗದಗಲಕ್ಕೆ ಪಸರಿಸಿದ್ದಾರೆ. ರಸ್ತೆಯೊಂದಕ್ಕೆ ಅವರ ಹೆಸರನ್ನ ಇಡುವುದು ನಮಗೆಲ್ಲರಿಗೂ ಹೆಮ್ಮೆಯ ವಿಚಾರವೆಂದರು. ಉಪಾಧ್ಯಕ್ಷ ರವಿಶಂಕರ್ ಮತ್ತು ವಿಪಕ್ಷ ಸದಸ್ಯರು ರಸ್ತೆಗೆ ಅಮೃತರ ನಾಮಕರಣಕ್ಕೆ ಬೆಂಬಲ ಸೂಚಿಸಿದರು. ಮುಖ್ಯಾಧಿಕಾರಿ ಮತ್ತಡಿ ಮಾತನಾಡಿ ಒಂದು ರಸ್ತೆಗೆ ಮಾತ್ರ ಅಮೃತ ಸೋಮೇಶ್ವರ ರಸ್ತೆ ಎಂದು ನಾಮಕರಣ ಮಾಡಲಾಗಿದೆ ಹೊರತು ಬಟ್ಟಪ್ಪಾಡಿ ಎಂಬ ಪ್ರದೇಶದ ಹೆಸರನ್ನ ಅಳಿಸಿಲ್ಲ. ಎಲ್ಲಾ ಸದಸ್ಯರ ಒಪ್ಪಿಗೆ ಮೇರೆಗೆ ಆಕ್ಷೇಪವನ್ನ ತಿರಸ್ಕರಿಸಲಾಗುವುದೆಂದರು.
ಸೋಮೇಶ್ವರ ಉಚ್ಚಿಲ ಕಡಲ ತೀರದ ಬಟ್ಟಪ್ಪಾಡಿ ಪ್ರದೇಶದ ಹೆಸರನ್ನ ಅಳಿಸಿ ರಸ್ತೆಗೆ ಬೇರೆ ನಾಮಕರಣ ಮಾಡುವುದಕ್ಕೆ ವಿರೋಧ ವ್ಯಕ್ತಪಡಿಸಿ ಸ್ಥಳೀಯ ಸಂಘಟನೆಯೊಂದು ಪುರಸಭೆಗೆ ಆಕ್ಷೇಪ ಪತ್ರ ಸಲ್ಲಿಸಿತ್ತು.
ಬೀದಿನಾಯಿಗಳು ಕಚ್ಚದಂತೆ ಹಲ್ಲು ಕೀಳುತ್ತೀರಾ..?
ನಾಯಿಗಳ ಸಂತತಿ ಬೆಳೆಯದಂತೆ ಸಂತಾನ ಹರಣ ಶಸ್ತ್ರ ಚಿಕಿತ್ಸೆ ಮಾಡುತ್ತೀರಿ. ಬೀದಿ ನಾಯಿಗಳ ಹಲ್ಲುಗಳನ್ನ ಕೀಳುತ್ತೀರಾ..?ಜನಸಾಮಾನ್ಯರು, ಮಕ್ಕಳಿಗೆ ನಾಯಿಗಳು ಕಚ್ಚೋದನ್ನ ತಡೆಯೋದಾದರೂ ಹೇಗೆಂದು ಸದಸ್ಯರಾದ ಮನೋಜ್ ಕಟ್ಟೆಮನೆ ಅವರು ಪಶುಸಂಗೋಪನಾ ಅಧಿಕಾರಿ ಡಾ.ರಚನಾ ಅವರಲ್ಲಿ ಪ್ರಶ್ನಿಸಿದರು. ಇದಕ್ಕುತ್ತರಿಸಿದ ಅವರು ಸ್ಥಳೀಯಾಡಳಿತದ ಆದೇಶದ ಮೇರೆಗೆ ಬೀದಿ ನಾಯಿಗಳಿಗೆ ಸಂತಾನ ಹರಣ ಶಸ್ತ್ರ ಚಿಕಿತ್ಸೆ ಮತ್ತು ಆಂಟಿ ರೇಬೀಸ್ ಲಸಿಕೆ ನೀಡುತ್ತೇವೆ. ಬೇರೆನ್ನನ್ನೂ ಮಾಡಲಿಕ್ಕಿಲ್ಲವೆಂದು ನ್ಯಾಯಾಲಯದ ಆದೇಶ ಇದೆ ಎಂದರು. ಸಭೆಯಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷ ಪುರುಷೋತ್ತಮ ಗಟ್ಟಿ ಉಪಸ್ಥಿತರಿದ್ದರು.
The Someshwar Town Council has unanimously passed a resolution to name the Someshwar–Battappady connecting road as “Amrutha Someshwar Road”, in memory of late folk scholar and writer Amrutha Someshwar.
09-09-25 10:52 pm
Bangalore Correspondent
U T Khader: ಯುಟಿ ಖಾದರ್ ಏಕಪಕ್ಷೀಯ ತೀರ್ಮಾನ ತೆಗೆದ...
09-09-25 09:14 pm
Shivamogga Accident: ಸೆ.25ಕ್ಕೆ ಹಸೆಮಣೆ ಏರಬೇಕಿದ...
08-09-25 08:07 pm
ವೀರಶೈವ ಲಿಂಗಾಯತರು ಹಿಂದು ಬದಲು ಇತರರು ಎಂದು ನಮೂದಿಸ...
08-09-25 06:48 pm
ಮಸೀದಿ ಎದುರಲ್ಲಿ ಗಣೇಶ ವಿಸರ್ಜನೆ ವೇಳೆ ಕಲ್ಲು ತೂರಾಟ...
08-09-25 05:21 pm
09-09-25 11:09 pm
HK News Desk
ನೂತನ ಉಪ ರಾಷ್ಟ್ರಪತಿಯಾಗಿ ಎನ್.ಡಿ.ಎ ಮೈತ್ರಿಕೂಟದ ಸಿ...
09-09-25 09:38 pm
ಕಾಸರಗೋಡು ; ರಾಷ್ಟ್ರೀಯ ಹೆದ್ದಾರಿ ದಾಟಲೆತ್ನಿಸಿದ ಮಹ...
08-09-25 11:06 pm
ನೇಪಾಳದಲ್ಲಿ ಸೋಶಿಯಲ್ ಮೀಡಿಯಾ ಬ್ಯಾನ್ ; ದೇಶಾದ್ಯಂತ...
08-09-25 10:59 pm
ಏಳು ವರ್ಷ ಶಿಕ್ಷೆ ಪೂರ್ತಿಗೊಳಿಸಿದ ಬಳಿಕವೂ ಹೆಚ್ಚುವರ...
08-09-25 06:07 pm
09-09-25 10:47 pm
Mangalore Correspondent
Mangalore Accident, Kulur, NHAI: ಕುಳೂರು ರಸ್ತೆ...
09-09-25 08:01 pm
YouTuber Munaf, SIT, Dharmasthala Case: ಎಸ್ಐಟ...
09-09-25 05:59 pm
Mangalore, NHAI, Padmaraj: ಇನ್ನೆಷ್ಟು ಜೀವ ಬಲಿಯ...
09-09-25 05:14 pm
MLA Vedavyas Kamath, Mangalore, Yakshangana:...
09-09-25 04:47 pm
08-09-25 10:34 pm
Mangalore Correspondent
ಮಂಗಳೂರು ಏರ್ಪೋರ್ಟ್ ಟರ್ಮಿನಲ್ ಬಿಲ್ಡಿಂಗ್ ಧ್ವಂಸ ಬೆ...
07-09-25 03:34 pm
Mangalore SAF Police Constable, Arrest: ವಕೀಲ...
06-09-25 08:32 pm
60 Crore Fraud, Actress Shilpa Shetty, Raj Ku...
06-09-25 07:45 pm
ಲಷ್ಕರ್ ಉಗ್ರರ ಹೆಸರಲ್ಲಿ ಮುಂಬೈ ಸ್ಫೋಟದ ಬೆದರಿಕೆ ಸಂ...
06-09-25 05:26 pm