ಬ್ರೇಕಿಂಗ್ ನ್ಯೂಸ್
15-03-25 04:11 pm Mangalore Correspondent ಕರಾವಳಿ
ಮಂಗಳೂರು, ಮಾ.15 : 13 ವರ್ಷದ ಹುಡುಗನೊಬ್ಬ ಅಪಾರ್ಟ್ಮೆಂಟ್ ಕಟ್ಟಡದ ಐದನೇ ಮಹಡಿಯಿಂದ ಕೆಳಕ್ಕೆ ಬಿದ್ದು ಮೃತಪಟ್ಟ ಘಟನೆ ನಗರದ ಮೇರಿಹಿಲ್ ಬಳಿಯಲ್ಲಿ ಶನಿವಾರ (ಮಾ.15) ಬೆಳಗ್ಗೆ ನಡೆದಿದೆ.
ಏಳನೇ ಕ್ಲಾಸ್ ಓದುತ್ತಿದ್ದ ಸಮರ್ಜಿತ್ ಭಂಡಾರಿ(13) ದುರಂತ ಸಾವಿಗೀಡಾದ ವಿದ್ಯಾರ್ಥಿ. ಬೆಳಗ್ಗೆ 5.30ರಿಂದ 6 ಗಂಟೆ ನಡುವೆ ಘಟನೆ ನಡೆದಿದ್ದು, ಕೂಡಲೇ ಮನೆಯವರು ಬಾಲಕನನ್ನು ಎಜೆ ಆಸ್ಪತ್ರೆಗೆ ಕರೆತಂದಿದ್ದರು. ಆದರೆ ತಲೆ ಮತ್ತು ಬೆನ್ನು ಮೂಳೆಗೆ ತೀವ್ರ ಪೆಟ್ಟು ಬಿದ್ದಿದ್ದರಿಂದ ಅಷ್ಟರಲ್ಲಿಯೇ ಮೃತಪಟ್ಟಿದ್ದಾನೆ. ಆಸ್ಪತ್ರೆ ಆವರಣದಲ್ಲಿ ಕುಟುಂಬಸ್ಥರು. ಅಪಾರ್ಟ್ಮೆಂಟಿನ ಇತರ ಕುಟುಂಬ ಸದಸ್ಯರು ಸೇರಿದ್ದು ಎಲ್ಲರೂ ಶಾಕ್ ಗೆ ಒಳಗಾಗಿದ್ದರು. ಮನೆಯವರು ತೀವ್ರ ಆಘಾತಕ್ಕೆ ಒಳಗಾಗಿದ್ದರು. ಕಾವೂರು ಠಾಣೆಯಲ್ಲಿ ಅಸಹಜ ಸಾವು ಎಂದು ಪ್ರಕರಣ ದಾಖಲಾಗಿದೆ.
ಹುಡುಗನಿಗೆ ಪರೀಕ್ಷೆ ನಡೆಯುತ್ತಿದ್ದು ಎಕ್ಸಾಂ ಭಯದಲ್ಲಿ ಏನೋ ಮಾಡಿರಬೇಕು. ಇವರ ಮನೆ ಎರಡನೇ ಮಹಡಿಯಲ್ಲಿದ್ದು, ಎಲ್ಲಿಂದ ಬಿದ್ದಿದ್ದಾನೆಂದು ಸರಿಯಾಗಿ ಮಾಹಿತಿ ಇಲ್ಲ. ಮನೆಯವರ ಹೇಳಿಕೆ ಪ್ರಕಾರ ಐದನೇ ಮಹಡಿಯೆಂದು ಕೇಸು ದಾಖಲಿಸಿದ್ದೇವೆ. ಕಟ್ಟಡದಿಂದ ಸ್ವಲ್ಪ ದೂರಕ್ಕೆ ಹೋಗಿ ಬಿದ್ದಿದ್ದಾನೆ. ಕಟ್ಟಡದಲ್ಲಿ ಆರಡಿ ಎತ್ತರಕ್ಕೆ ಗ್ರಿಲ್ಸ್ ಇದೆ, ಅದರ ಎಡೆಯಲ್ಲಿ ಆಕಸ್ಮಿಕವಾಗಿ ಬೀಳುವ ಸಾಧ್ಯತೆ ಇಲ್ಲ ಎಂದು ಕಾವೂರು ಇನ್ಸ್ ಪೆಕ್ಟರ್ ತಿಳಿಸಿದ್ದಾರೆ. ಪರೀಕ್ಷೆ ಭಯದಲ್ಲಿ ಈ ರೀತಿ ಮಾಡಿದ್ದಾನೆಯೇ ಅಥವಾ ಬೇರಾವುದೇ ಕಾರಣ ಇದೆಯೇ ಎಂದು ತನಿಖೆ ಮಾಡುತ್ತಿದ್ದೇವೆ ಎಂದಿದ್ದಾರೆ.
ಸಮರ್ಜಿತ್ ಓದುವುದರಲ್ಲಿ ಮತ್ತು ಶಾಲೆಯಲ್ಲಿ ಭಾರೀ ಚುರುಕಾಗಿದ್ದ ಹುಡುಗ. ಯೂಟ್ಯೂಬ್ ಮಾಡಿಯೂ ಸಣ್ಣ ವಯಸ್ಸಿನಲ್ಲೇ ಚುರುಕುತನ ತೋರಿಸಿದ್ದ. ಹುಡುಗನ ಹಠಾತ್ ಸಾವು ಕುಟುಂಬಕ್ಕೆ ತೀವ್ರ ಶಾಕ್ ನೀಡಿದೆ.
13 Year Old Boy Falls from Apartment Building in Mary Hill, Mangalore. The deceased has been identified as Master Samarjit Bhandary. Following the incident, a case has been registered under Unnatural Death Report.
16-09-26 10:40 pm
kannada news
Tulu Language, Shivraj Tangadagi: ತುಳುವಿಗೆ 2ನ...
16-09-26 01:51 pm
Pradeep Eshwar, Pratap Simha: ಪೊಲೀಸ್ ಠಾಣೆಗೆ...
15-09-26 09:13 pm
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
17-09-26 09:41 am
HK News Staffer
Mangalore Jail, Fight, Crime: ಜೈಲಿನಲ್ಲಿ ಬೀಡಿ...
16-09-26 10:46 pm
ಪುತ್ತೂರಿಗೆ ಮೆಡಿಕಲ್ ಕಾಲೇಜು ಅನುಮೋದನೆ, ತುಳು ಭಾಷೆ...
16-09-26 09:56 pm
ಅಪಘಾತದಲ್ಲಿ ಗಾಯಗೊಂಡಿದ್ದ ಯುವಕನ ಮೆದುಳು ಡೆಡ್ ; ಮೂ...
16-09-26 08:49 pm
ಸೆ.18ರಂದು ಸಂಪುಟ ಸಭೆಗೆ ಗಣ್ಯರ ಆಗಮನ ; ಮಂಗಳೂರಿನ ಪ...
16-09-26 06:28 pm
17-09-26 02:22 pm
HK News Staffer
Bangalore Murder, Crime: ಪ್ರೀತಿಸಿ ಮದುವೆಯಾಗಿದ್...
17-09-26 01:56 pm
Bangalore kidnap, Crime: ಬೆಂಗಳೂರಿನಲ್ಲಿ ಶಾಕ್...
17-09-26 12:35 pm
Manglore Cyber crime, Stock Market: ಷೇರು ಮಾರ್...
17-09-26 11:45 am
ಬೆಳ್ತಂಗಡಿ; ಗೃಹಪ್ರವೇಶಕ್ಕೆ ಹೋದಾಗ ಮನೆಗೆ ಕನ್ನ, ₹1...
16-09-26 11:18 am