ಬ್ರೇಕಿಂಗ್ ನ್ಯೂಸ್
12-03-25 06:25 pm Mangalore Correspondent ಕರಾವಳಿ
ಪುತ್ತೂರು, ಮಾ.12 : ಸುಡು ಬಿಸಿಲಿನಿಂದ ಕಂಗೆಟ್ಟಿದ್ದ ಕರಾವಳಿಯ ಕೆಲವು ಕಡೆ ಬೇಸಗೆ ಮಳೆಯಾಗಿದೆ. ಪುತ್ತೂರು ತಾಲೂಕಿನ ಸವಣೂರು, ಸುಳ್ಯ, ಕಡಬ ತಾಲೂಕಿನ ಹಲವೆಡೆ ಮಳೆಯಾಗಿದ್ದು ಸುಟ್ಟು ಹೋಗಿದ್ದ ಇಳೆಗೆ ಮಳೆರಾಯನ ಸಿಂಚನವಾಗಿದೆ.
ಕಳೆದ ಎರಡು ವಾರದಿಂದ ಬಿಸಿಲ ಬೇಗೆ ವಿಪರೀತವಾಗಿ ಏರಿಕೆಯಾಗಿದ್ದು, ಉಷ್ಣಾಂಶ 40 ಸೆಲ್ಸಿಯಸ್ ಗಡಿ ದಾಟಿದೆ. ಮಧ್ಯಾಹ್ನ ವೇಳೆಗೆ ಭಾರೀ ಬಿಸಿಲಿನ ಕಾರಣ ಜನರು ಹೊರಗೆ ಹೋಗದ ಸ್ಥಿತಿಯಾಗಿತ್ತು. ಹಿಂದೆಂದೂ ಕಂಡರಿಯದ ಬಿಸಿಲಿನ ಝಳಕ್ಕೆ ಜನರು ಹೈರಾಣಾಗಿದ್ದರು. ಇದರ ಬೆನ್ನಲೇ ಬುಧವಾರ ಸಂಜೆ ನಾಲ್ಕು ಗಂಟೆ ವೇಳೆಗೆ ಪುತ್ತೂರು, ಸುಳ್ಯ ಆಸುಪಾಸಿನಲ್ಲಿ ಮಳೆ ಸುರಿದಿದ್ದು ಇಳೆಯನ್ನು ತಂಪಾಗಿಸಿದೆ.




ಈ ಹಿಂದೆಲ್ಲ ಮಾರ್ಚ್ ತಿಂಗಳಿನಲ್ಲಿ ಕರಾವಳಿ ಕರ್ನಾಟಕದಲ್ಲಿ ಮಳೆ ಬೀಳುವ ವಾಡಿಕೆ ಇಲ್ಲ. ಆದರೆ ಈ ಬಾರಿ ಕಡಬ, ಸುಳ್ಯ , ಪುತ್ತೂರು ತಾಲೂಕಿನ ಕೆಲವಡೆ ಅರ್ಧ ಗಂಟೆ ಕಾಲ ಮಳೆ ಬಿದ್ದಿದೆ. ಕಡಬ ತಾಲೂಕಿನ ಸವಣೂರು, ಚಾರ್ವಾಕದಲ್ಲಿ ಅರ್ಧ ಗಂಟೆಗೂ ಹೆಚ್ಚು ಮಳೆಯಾಗಿದೆ. ಪುತ್ತೂರು ಪೇಟೆಯಲ್ಲಿ ಹನಿ ಮಳೆಯಾದರೆ ಕೆಲವು ಕಡೆ ಸಿಡಿಲು ಸಹಿತ ಮಳೆಯಾಗಿದೆ. ಗ್ರಾಮೀಣ ಭಾಗದಲ್ಲಿ ಸಾಧಾರಣ ಮಳೆ ಸುರಿದಿದೆ.
ದಿಢೀರ್ ಸುರಿದ ಮಳೆಯಿಂದಾಗಿ, ಆಂಗಳದಲ್ಲಿ ಅಡಿಕೆ ಒಣಗಿಸಲು ಹಾಕಿದ ಕೃಷಿಕರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಅಕಾಲಿಕ ಮಳೆ ಗೇರು, ಅಡಿಕೆ ಕೃಷಿಗೆ ಮಾರಕವಾಗಿದ್ದು, ಹಿಂಗಾರದಲ್ಲಿ ನೀರು ನಿಂತರೆ ನಾಳೆಯ ಬಿಸಿಲಿಗೆ ಕರಟಿ ಹೋಗುವ ಸಾಧ್ಯತೆಯಿದೆ. ಎಳೆಯ ಅಡಿಕೆ ಉದುರಿ ಬೀಳುವ ಸಾಧ್ಯತೆ ಇರುತ್ತದೆ.
ಭಾರತೀಯ ಹವಾಮಾನ ಇಲಾಖೆ ಮಾರ್ಚ್ 11 ರಿಂದ 4 ದಿನಗಳ ಕಾಲ ರಾಜ್ಯದ ಕರಾವಳಿ ಹಾಗೂ ದಕ್ಷಿಣ ಒಳನಾಡು ಪ್ರದೇಶಗಳಲ್ಲಿ ಮಳೆಯಾಗುವ ಮುನ್ಸೂಚನೆ ನೀಡಿತ್ತು. ಈಗಲೇ ಬಿಸಿಲು ಹೆಚ್ಚಾಗಿರುವುದರಿಂದ ಎಪ್ರಿಲ್ ತಿಂಗಳಿನಲ್ಲಿ ಬಹುತೇಕ ಪೂರ್ವ ಮುಂಗಾರು ರಾಜ್ಯಕ್ಕೆ ಕಾಲಿಡುವ ಸಾಧ್ಯತೆ ಹೆಚ್ಚಾಗಿದೆ.
In a surprising turn of weather, the towns of Sullia and Kadaba in Coastal Karnataka experienced sudden rains, providing much-needed relief from the oppressive heat that has gripped the region in recent days. Residents had been enduring soaring temperatures, with the mercury rising consistently above seasonal norms, leading to discomfort and concerns about health and water scarcity.
16-09-26 10:40 pm
kannada news
Tulu Language, Shivraj Tangadagi: ತುಳುವಿಗೆ 2ನ...
16-09-26 01:51 pm
Pradeep Eshwar, Pratap Simha: ಪೊಲೀಸ್ ಠಾಣೆಗೆ...
15-09-26 09:13 pm
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
17-09-26 09:41 am
HK News Staffer
Mangalore Jail, Fight, Crime: ಜೈಲಿನಲ್ಲಿ ಬೀಡಿ...
16-09-26 10:46 pm
ಪುತ್ತೂರಿಗೆ ಮೆಡಿಕಲ್ ಕಾಲೇಜು ಅನುಮೋದನೆ, ತುಳು ಭಾಷೆ...
16-09-26 09:56 pm
ಅಪಘಾತದಲ್ಲಿ ಗಾಯಗೊಂಡಿದ್ದ ಯುವಕನ ಮೆದುಳು ಡೆಡ್ ; ಮೂ...
16-09-26 08:49 pm
ಸೆ.18ರಂದು ಸಂಪುಟ ಸಭೆಗೆ ಗಣ್ಯರ ಆಗಮನ ; ಮಂಗಳೂರಿನ ಪ...
16-09-26 06:28 pm
17-09-26 02:22 pm
HK News Staffer
Bangalore Murder, Crime: ಪ್ರೀತಿಸಿ ಮದುವೆಯಾಗಿದ್...
17-09-26 01:56 pm
Bangalore kidnap, Crime: ಬೆಂಗಳೂರಿನಲ್ಲಿ ಶಾಕ್...
17-09-26 12:35 pm
Manglore Cyber crime, Stock Market: ಷೇರು ಮಾರ್...
17-09-26 11:45 am
ಬೆಳ್ತಂಗಡಿ; ಗೃಹಪ್ರವೇಶಕ್ಕೆ ಹೋದಾಗ ಮನೆಗೆ ಕನ್ನ, ₹1...
16-09-26 11:18 am