ಬ್ರೇಕಿಂಗ್ ನ್ಯೂಸ್
17-02-25 01:41 pm Mangalore Correspondent ಕರಾವಳಿ
ಮಂಗಳೂರು, ಫೆ.17: ಜಪ್ಪಿನಮೊಗರು ಆರೋಗ್ಯ ಕೇಂದ್ರ ಉದ್ಘಾಟನೆ ಕಾರ್ಯಕ್ರಮದಲ್ಲಿ ಶಿಷ್ಟಾಚಾರ ಉಲ್ಲಂಘನೆ ಆಗಿದೆ, ಇಲ್ಲಿನ ಶಾಸಕರೇ ಇದಕ್ಕೆ ಕಾರಣ ಎಂಬ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಆಕ್ಷೇಪದ ಬಗ್ಗೆ ಶಾಸಕ ವೇದವ್ಯಾಸ ಕಾಮತ್ ಜಿಪಂ ಸಭಾಂಗಣದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಪ್ರಸ್ತಾಪಿಸಿ ಆಕ್ರೋಶ ವ್ಯಕ್ತಪಡಿಸಿದ ಪ್ರಸಂಗ ನಡೆದಿದ್ದು ಸಚಿವರು ಮತ್ತು ಶಾಸಕರ ನಡುವೆ ಮಾತಿನ ವಾಗ್ಯುದ್ಧಕ್ಕೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಸಾಕ್ಷಿಯಾದರು.
ಮೊನ್ನೆ ನಡೆದ ಘಟನೆ ಬಗ್ಗೆ ನನ್ನ ಮೇಲೆ ಆರೋಪ ಮಾಡಿದ್ದೀರಿ, ನಿಮ್ಮ ಅಧಿಕಾರಿಗಳು ಮಾಡಿದ ಲೋಪಕ್ಕೆ ನನ್ನನ್ನು ಹೊಣೆ ಮಾಡುವುದು ಯಾಕೆ ? ಮಹಾನಗರ ಪಾಲಿಕೆಯಿಂದ ಕಾರ್ಯಕ್ರಮ ಆಯೋಜನೆ ಮಾಡಿದ ಬಗ್ಗೆ ಆಮಂತ್ರಣ ಪತ್ರಿಕೆ ಸಿಕ್ಕಿತ್ತು. ಅದರಲ್ಲಿ ನಿಮ್ಮ ಹೆಸರು ಮತ್ತು ಐವಾನ್ ಡಿಸೋಜ ಹೆಸರೂ ಇತ್ತು. ನಿಮಗೆ ಆಮಂತ್ರಣ ಸಿಕ್ಕಿಲ್ಲ ಅಂದರೆ ಹೇಗೆ ? ಹಾಗೆ ಮಾಡಿದ್ದರೆ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಿ.. ಈ ಬಗ್ಗೆ ನಿಮ್ಮ ಸ್ಪಷ್ಟನೆ ಬೇಕು ಎಂದು ಶಾಸಕ ವೇದವ್ಯಾಸ ಕಾಮತ್ ಒತ್ತಾಯ ಮಾಡಿದರು.
ಈ ವಿಷಯ ಕೆಡಿಪಿ ಸಭೆಯಲ್ಲಿ ಯಾಕೆ ಎನ್ನುತ್ತಲೇ ಆಕ್ಷೇಪ ಎತ್ತಿದ ಸಚಿವ ದಿನೇಶ್ ಗುಂಡೂರಾವ್, ಮಹಾನಗರ ಪಾಲಿಕೆಯ ಕಮಿಷನರ್ ರವಿಚಂದ್ರ ನಾಯಕ್ ಬಳಿ ಉತ್ತರ ಕೇಳಿದರು. ನಾವು ಆಮಂತ್ರಣ ಪತ್ರಿಕೆ ಮಾಡಿಸಿಲ್ಲ. ನಾವು ಆ ಕಾರ್ಯಕ್ರಮಕ್ಕೂ ಹೋಗಿಲ್ಲ. ಆನಂತರದ ಅಧಿಕೃತ ಕಾರ್ಯಕ್ರಮದ ಬಗ್ಗೆ ಶಾಸಕರಿಗೂ ಆಮಂತ್ರಣ ಪತ್ರಿಕೆ ತಲುಪಿಸಿದ್ದೇವೆ ಎಂದು ಹೇಳಿದರು. ಹಾಗಾದರೆ ಕಾರ್ಯಕ್ರಮ ಆಯೋಜನೆ ಮಾಡಿದವರು ಯಾರು ಎಂದು ಉಸ್ತುವಾರಿ ಸಚಿವರು ಪ್ರಶ್ನೆ ಮಾಡಿದರು. ಸ್ಮಾರ್ಟ್ ಸಿಟಿಯಿಂದ ಯಾರು ಬಂದಿದ್ದೀರಿ, ನೀವು ಕಾರ್ಯಕ್ರಮ ಮಾಡಿಸಿದ್ದೀರಾ ಎಂದು ಪ್ರಶ್ನೆ ಮಾಡಿದರು. ಕಾರ್ಯಕ್ರಮ ಮಾಡಿದ ಮೇಲೆ ಅದರ ಖರ್ಚು, ಎಲ್ಲ ಇರ್ತದೆ, ಯಾರಾದರೂ ಆಯೋಜನೆ ಮಾಡಿರಬೇಕಲ್ವಾ ಎಂದು ಪ್ರಶ್ನಿಸಿದರು.
ಸ್ಮಾರ್ಟ್ ಸಿಟಿಯಿಂದ ಸಭೆಗೆ ಬಂದಿದ್ದ ಎಂಡಿ ರಾಜು, ನನಗೇನೂ ಮಾಹಿತಿ ಇಲ್ಲ. ನಾವು ಕಾರ್ಯಕ್ರಮ ಆಯೋಜಿಸಿಲ್ಲ ಸರ್ ಎಂದು ಹೇಳಿದರು. ಶಾಸಕ ವೇದವ್ಯಾಸ ಕಾಮತ್ ಅವರು ಮತ್ತೆ ಆಕ್ರೋಶ ವ್ಯಕ್ತಪಡಿಸುತ್ತ, ನಿಮ್ಮದೇ ಅಧಿಕಾರಿಗಳು ಕಾರ್ಯಕ್ರಮ ಮಾಡಿಸಿದ್ದು. ನನಗೆ ಆಮಂತ್ರಣ ಪತ್ರಿಕೆ ಕಳಿಸಿಕೊಟ್ಟಿದ್ದಾರೆ. ನಿಮ್ಮ ಗಮನಕ್ಕೂ ತಂದಿರಬೇಕಲ್ವಾ.. ಎಂದು ಪ್ರಶ್ನಿಸಿದರು. ಈ ವೇಳೆ, ಆಕ್ಷೇಪ ಎತ್ತಿದ ಎಂಎಲ್ಸಿ ಐವಾನ್ ಡಿಸೋಜ, ಇಲ್ಲಿ ಅನಗತ್ಯ ವಿಚಾರ ಚರ್ಚೆ ಏಕೆ ಮಾಡುತ್ತೀರಿ, ಇಲ್ಲಿ ಜಿಲ್ಲೆಯ ಅಭಿವೃದ್ಧಿ ಕಾರ್ಯಕ್ರಮಗಳ ಪರಿಶೀಲನೆ ಆಗುತ್ತಿದೆ, ಅಜೆಂಡಾ ಹೊರತುಪಡಿಸಿ ಇತರೇ ವಿಷಯ ಬೇಕಾಗಿಲ್ಲ ಎಂದು ಹೇಳಿದರು. ನಾನು ಉಸ್ತುವಾರಿ ಸಚಿವರಲ್ಲಿ ಕೇಳುತ್ತಿದ್ದೇನೆ. ನಿಮ್ಮ ಉಪದೇಶ ಬೇಕಾಗಿಲ್ಲ. ಸಚಿವರು ಕಾರ್ಯಕ್ರಮದ ವೇದಿಕೆಯಲ್ಲಿ ನನ್ನ ಬಗ್ಗೆ ಆರೋಪ ಮಾಡಿದ್ದಾರೆ, ಅದಕ್ಕೆ ಸ್ಪಷ್ಟನೆ ಬೇಕು ಎಂದು ಶಾಸಕ ಕಾಮತ್ ಆಗ್ರಹ ಮಾಡಿದರು.
ಒಂದು ಕಾರ್ಯಕ್ರಮ ಅಂದ ಮೇಲೆ ಹಲವು ಏರ್ಪಾಡು ಆಗಬೇಕಾಗುತ್ತೆ. ಇದೆಲ್ಲ ಪವಾಡದ ರೀತಿ ಹೇಗೆ ಆಗುತ್ತದೆ. ಮಹಾನಗರ ಪಾಲಿಕೆ, ಸ್ಮಾರ್ಟ್ ಸಿಟಿಯಿಂದ ಮಾಡಿಸಿಲ್ಲ ಎಂದರೆ ಯಾರು ಆಯೋಜನೆ ಮಾಡಿದ್ದಾರೆ. ಹಾಗಾದರೆ ನೀವೇ ಮಾಡಿಸಿರಬೇಕು. ಇದೆಲ್ಲ ನಾಟಕ ಮಾಡೋದು ಬಿಟ್ಟು ಕುಳಿತುಕೊಳ್ಳಿ. ಟಿವಿ ಕ್ಯಾಮರಾ ಇದೆಯೆಂದು ಮಾತನಾಡಬೇಡಿ ಎಂದು ಸಚಿವ ಗುಂಡೂರಾವ್, ಶಾಸಕ ಕಾಮತ್ ಮಾತಿಗೆ ಆಕ್ಷೇಪ ವ್ಯಕ್ತಪಡಿಸಿದರು. ಇದರಿಂದ ಸಿಟ್ಟಿಗೆದ್ದ ಶಾಸಕ ವೇದವ್ಯಾಸ ಕಾಮತ್, ನಾನು ಮಾಡಿಸಿದ್ದೇನೆ ಅಂತ ಪ್ರೂವ್ ಮಾಡ್ತೀರಾ ಸಚಿವರೇ.. ಹೇಗೆ ಹೇಳುತ್ತೀರಿ ನಾನು ಮಾಡಿಸಿದ್ದೇನೆ ಅಂತ. ನನಗೆ ಆಮಂತ್ರಣ ಪತ್ರಿಕೆ ಬಂದಿತ್ತು. ನಿಮ್ಮ ಹೆಸರೆಲ್ಲ ಇದೆ, ಅದು ಅನಧಿಕೃತ ಎಂದಾಗಿದ್ದರೆ ನೀವು ತಿಳಿಸಬೇಕಿತ್ತು. ನಾನೇನಾದರೂ ಹೊರಗಿನವನೇ.., ಕ್ಷೇತ್ರದ ಶಾಸಕನಾಗಿ, ಕಾರ್ಯಕ್ರಮದ ಅಧ್ಯಕ್ಷನಾಗಿ ನನ್ನನ್ನು ಮಾಡಿ ಅನಧಿಕೃತ ಎಂದರೆ ಹೇಗೆ ಎಂದು ಪ್ರಶ್ನಿಸಿದರು. ನೀವು ಮಾಡಿಸಿಲ್ಲಾಂದ್ರೆ ಏನೋ ಮ್ಯಾಜಿಕ್ ಆಗಿರಬೇಕು, ಮ್ಯಾಜಿಕ್ ಎಂದು ದಿನೇಶ್ ಗುಂಡೂರಾವ್ ಕಿಚಾಯಿಸಿದರು.
ಸಚಿವರು ಮತ್ತು ಶಾಸಕರು ಪರಸ್ಪರ ವಾಗ್ಯುದ್ಧ ಮಾಡಿದರೂ ಸಭೆಯಲ್ಲಿದ್ದ ಬಿಜೆಪಿ ಶಾಸಕ ರಾಜೇಶ್ ನಾಯ್ಕ್, ಎಂಎಎಲ್ಸಿಗಳಾದ ಧನಂಜಯ ಸರ್ಜಿ, ಕಿಶೋರ್ ಕುಮಾರ್ ಅವರು ಶಾಸಕ ಕಾಮತ್ ನೆರವಿಗೆ ಬರಲಿಲ್ಲ. ಕೊನೆಗೆ ಮಾತನಾಡಿದ ಎಂಎಲ್ಸಿ ಕಿಶೋರ್ ಕುಮಾರ್, ನನಗೂ ಆಮಂತ್ರಣ ಪತ್ರಿಕೆ ಬಂದಿತ್ತು. ಆದರೆ ಇಲ್ಲಿ ಆ ವಿಚಾರದ ಬಗ್ಗೆ ಚರ್ಚೆ ಬೇಡ. ಇಲ್ಲಿ ಅಭಿವೃದ್ಧಿ ವಿಚಾರದ ಬಗ್ಗೆ ಚರ್ಚೆ ಮಾಡೋಣ. ಆ ರೀತಿ ಮುಂದೆ ಆಗದಂತೆ ನೋಡಿಕೊಳ್ಳಿ ಸಚಿವರೇ ಎಂದು ಹೇಳಿ ಚರ್ಚೆಗೆ ತೆರೆ ಎಳೆದರು. ಕೆಡಿಪಿ ಸಭೆಗೆ ಈ ಬಾರಿ ಭೋಜೇಗೌಡ ಬಂದಿರಲಿಲ್ಲ. ಶಾಸಕರಾದ ಅಶೋಕ ರೈ, ಹರೀಶ್ ಪೂಂಜ, ಭರತ್ ಶೆಟ್ಟಿ, ಉಮಾನಾಥ ಕೋಟ್ಯಾನ್ ಕೂಡ ಉಪಸ್ಥಿತಿ ಇರಲಿಲ್ಲ.
Kdp meeting in Mangalore, war of words between minster Dinesh Gundurao and MLA Vedavyas Kamath over inauguration of Jeepu health care centre without the knowledge of the incharge minister.
14-03-25 11:11 pm
Bangalore Correspondent
Swamiji, Bagalkot, Police Video: ದುಡ್ಡು ಪಡೆದು...
14-03-25 08:30 pm
Shivarama Hebbar, S.T. Somashekar, Lingaraj P...
14-03-25 03:39 pm
Ranya Rao Gold Smuggling, Ips Ramchandra Rao:...
14-03-25 02:20 pm
ಕುದುರೆಮುಖ ರಾಷ್ಟ್ರೀಯ ಅರಣ್ಯಕ್ಕೆ ಬೆಂಕಿ ; ಸ್ಥಳೀಯರ...
13-03-25 02:56 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
14-03-25 10:35 pm
Mangalore Correspondent
Mohan Gowda, Mangalore: ಬಿ.ಸಿ.ರೋಡಿನಲ್ಲಿ ಮಾ.16...
14-03-25 09:39 pm
Mangalore tulu Artist Vivek Madur death: ಕಲಾ...
14-03-25 11:02 am
Mangalore Accident, Kapikad, Murder: ನೆರೆಮನೆ...
13-03-25 09:20 pm
PFI, Mangalore Crime, Police: ಪಿಎಫ್ಐ ಮುಖಂಡರಿಗ...
13-03-25 08:46 pm
14-03-25 05:02 pm
HK News Desk
Ccb Police, Firearms, Mangalore crime: ವಾಮಂಜೂ...
13-03-25 06:44 pm
Kothanur Police, Bangalore crime, Murder: ನಾಲ...
11-03-25 07:34 pm
Tanishq showroom, Bihar Robbery: ಬಿಹಾರದಲ್ಲಿ ಹ...
10-03-25 10:48 pm
Actress Ranya Rao, CBI, Gold case; ನಟಿ ರನ್ಯಾ...
09-03-25 05:06 pm