ಬ್ರೇಕಿಂಗ್ ನ್ಯೂಸ್
15-02-25 04:59 pm Mangalore Correspondent ಕರಾವಳಿ
ಮಂಗಳೂರು, ಫೆ.15: ಬಿಜೆಪಿಗರ ರಾಜಕೀಯ ಮೇಲಾಟದಲ್ಲಿ ಒಮ್ಮೆ ಉದ್ಘಾಟನೆಯಾಗಿದ್ದ ನಗರದ ಜಪ್ಪಿನಮೊಗರಿನ ಹೊಸ ಆರೋಗ್ಯ ಕೇಂದ್ರವನ್ನು ಆರೋಗ್ಯ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಮತ್ತೆ ಉದ್ಘಾಟನೆ ಮಾಡಿದ್ದಾರೆ. ಇದೇ ವೇಳೆ, ಸಚಿವರು ಬಿಜೆಪಿ ನಾಯಕರು ಡರ್ಟಿ ಪಾಲಿಟಿಕ್ಸ್ ಮಾಡಿದ್ದಾರೆ. ರಾಜಕೀಯ ವಾತಾವರಣ ಕೆಡಿಸುವ ಕೆಲಸ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಉದ್ಘಾಟನೆ ಕಾರ್ಯಕ್ರಮದ ಬಳಿಕ ಸಮಾರಂಭದಲ್ಲಿ ಮಾತನಾಡಿದ ಸಚಿವ ಗುಂಡೂರಾವ್, ನೇರವಾಗಿ ಶಾಸಕ ವೇದವ್ಯಾಸ ಕಾಮತ್ ವಿರುದ್ಧ ಕಿಡಿಕಾರಿದರು. ಇವರು ಚೀಪ್ ರಾಜಕೀಯ ಮಾಡುತ್ತಿದ್ದಾರೆ. ನಾವು ಎಲ್ಲರನ್ನು ಕರೆದು ಬೆಂಗಳೂರಿನಲ್ಲಿ ಇನ್ವೆಸ್ಟ್ ಕರ್ನಾಟಕ ಮಾಡಿಲ್ವಾ.. ಅಭಿವೃದ್ಧಿ ವಿಚಾರದಲ್ಲಿ ಈ ರೀತಿ ಡರ್ಟಿ ರಾಜಕೀಯ ಮಾಡೋದಾ.. ಇವರು ತಮ್ಮ ಸ್ವಂತ ದುಡ್ಡಿನಲ್ಲಿ ಮಾಡಿದ್ದಲ್ಲ, ಇವರದೇ ಹಣ, ಭೂಮಿ ಆಗಿರುತ್ತಿದ್ದರೆ ಕೇಳುತ್ತಿರಲಿಲ್ಲ. ನಾನೇನು ವರ್ಷಕ್ಕೊಮ್ಮೆ ಬರುವ ಉಸ್ತುವಾರಿ ಅಲ್ಲ, ತಿಂಗಳಲ್ಲಿ 2-3 ಬಾರಿ ಮಂಗಳೂರಿಗೆ ಬರುತ್ತೇನೆ. ಒಂದು ಫೋನ್ ಮಾಡಬಹುದಿತ್ತಲ್ವಾ.. ಶಾಸಕನ ನಡೆಯಿಂದ ಮುಜುಗರ ಸೃಷ್ಟಿ ಆಗಿದೆ ಎಂದು ಹೇಳಿದರು.




ಉದ್ಘಾಟನೆಯನ್ನು ಸೂಚಿಸುವ ಕಲ್ಲಿನಲ್ಲೂ ಇವರದೇ ಹೆಸರು ಹಾಕಿದ್ದಾರೆ. ಇಷ್ಟೆಲ್ಲ ಆಗುವಾಗ ಅಧಿಕಾರಿಗಳು ಸುಮ್ಮನಿದ್ರಾ.. ಏನೂ ಗೊತ್ತೇ ಆಗಲಿಲ್ವಾ.. ಯಾಕೆ ನನ್ನ ಗಮನಕ್ಕೆ ತಂದಿಲ್ಲ. ಇದಕ್ಕೆ ಯಾರು ಕಾರಣ ಅಂತ ವರದಿ ಕೊಡಬೇಕು ಎಂದು ವೇದಿಕೆಯಲ್ಲಿದ್ದ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಗೆ ಸೂಚನೆ ನೀಡಿದರು. ಎಂಎಲ್ಸಿ ಐವಾನ್ ಡಿಸೋಜ, ಇಲ್ಲಿನ ಬಿಜೆಪಿ ಶಾಸಕರು ರಾಜಕೀಯದ ಸಣ್ಣತನ ತೋರಿಸಿದ್ದಾರೆ. ಇವತ್ತು ಕೂಡ ನಮ್ಮ ಶಾಸಕರು ಕಾರ್ಯಕ್ರಮಕ್ಕೆ ಬಂದಿಲ್ಲ, ಇದೇನಾ ಇವರು ಸರ್ಕಾರಿ ಕಾರ್ಯಕ್ರಮಕ್ಕೆ ಕೊಡುವ ಗೌರವ ಎಂದು ಪ್ರಶ್ನಿಸಿದರು.
Mangalore Inauguration of development works in Mangaladevi ward, minister Dinesh Gundurao slams Vedavyas Kamath. He said its a cheap politics by BJP to inaugurate the building without my knowledge. He also has instructed chief secretaries to take action against officials who violated the protocol during the inauguration of development works in Mangaladevi ward of the MCC.
17-09-26 04:13 pm
HK News Staffer
ಚಿತ್ರರಂಗದ ಸಾರ್ವಕಾಲಿಕ ಶ್ರೇಷ್ಠ ನಟ ಅನಂತನಾಗ್ ಗೆ '...
16-09-26 10:40 pm
Tulu Language, Shivraj Tangadagi: ತುಳುವಿಗೆ 2ನ...
16-09-26 01:51 pm
Pradeep Eshwar, Pratap Simha: ಪೊಲೀಸ್ ಠಾಣೆಗೆ...
15-09-26 09:13 pm
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
17-09-26 06:29 pm
HK News Staffer
ಸಚಿವ ಸಂಪುಟ ಸಭೆಗೆ ಕ್ಷಣಗಣನೆ ; ಪಡೀಲ್ ಜಿಲ್ಲಾಧಿಕಾರ...
17-09-26 05:12 pm
ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಮಸೀದಿ, ಮದರಸಾ ಮೇಲೆ...
17-09-26 09:41 am
Mangalore Jail, Fight, Crime: ಜೈಲಿನಲ್ಲಿ ಬೀಡಿ...
16-09-26 10:46 pm
ಪುತ್ತೂರಿಗೆ ಮೆಡಿಕಲ್ ಕಾಲೇಜು ಅನುಮೋದನೆ, ತುಳು ಭಾಷೆ...
16-09-26 09:56 pm
17-09-26 02:22 pm
HK News Staffer
Bangalore Murder, Crime: ಪ್ರೀತಿಸಿ ಮದುವೆಯಾಗಿದ್...
17-09-26 01:56 pm
Bangalore kidnap, Crime: ಬೆಂಗಳೂರಿನಲ್ಲಿ ಶಾಕ್...
17-09-26 12:35 pm
Manglore Cyber crime, Stock Market: ಷೇರು ಮಾರ್...
17-09-26 11:45 am
ಬೆಳ್ತಂಗಡಿ; ಗೃಹಪ್ರವೇಶಕ್ಕೆ ಹೋದಾಗ ಮನೆಗೆ ಕನ್ನ, ₹1...
16-09-26 11:18 am