ಬ್ರೇಕಿಂಗ್ ನ್ಯೂಸ್
21-01-25 11:51 pm Mangalore Correspondent ಕರಾವಳಿ
ಮಂಗಳೂರು, ಜ.22: ಕೋಟೆಕಾರು ಬ್ಯಾಂಕ್ ದರೋಡೆ ಪ್ರಕರಣದ್ಲಿ ಮುಂಬೈ ಮೂಲದ ಧಾರಾವಿ ಗ್ಯಾಂಗ್ ಸದಸ್ಯರು ಎನ್ನಲಾದ ಮೂವರನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ. ಆದರೆ ಈ ಮೂವರು ಕೂಡ ತಮಿಳುನಾಡಿನವರು, ಮುಂಬೈನಲ್ಲಿ ನೆಲೆಸಿದ್ದವರು. ಇವರಿಗೆ ಮಂಗಳೂರಿನ ಬ್ಯಾಂಕ್ ಬಗ್ಗೆ ಹೇಗೆ ಗೊತ್ತು ಎನ್ನುವ ಸಂಶಯ ಎಲ್ಲರನ್ನು ಕಾಡುತ್ತಿದೆ. ಆದರೆ, ಪೊಲೀಸ್ ಮಾಹಿತಿ ಪ್ರಕಾರ, ಈ ದರೋಡೆ ಸಂಚನ್ನು ಮಂಗಳೂರಿನ ಒಬ್ಬ ವ್ಯಕ್ತಿ ಇದ್ದುಕೊಂಡೇ ಮುಂಬೈನಲ್ಲೇ ಹೆಣೆಯಲಾಗಿತ್ತಂತೆ.
ಮೂವರು ತಮಿಳಿಗರು, ಇಬ್ಬರು ಉತ್ತರ ಪ್ರದೇಶ ಮತ್ತು ಇಬ್ಬರು ರಾಜಸ್ಥಾನಿಗಳು ಹಾಗೂ ಇನ್ನೊಬ್ಬ ಮಂಗಳೂರು ಮೂಲದ ವ್ಯಕ್ತಿ ಮುಂಬೈನಲ್ಲಿ ಜೈಲಿನಲ್ಲಿ ಜೊತೆಯಾಗಿದ್ದರು. ಇವರಲ್ಲಿ ಈಗ ಬಂಧನಕ್ಕೀಡಾಗಿರುವ ಮುರುಗನ್, ಕಣ್ಣನ್ ಮಣಿ ಮತ್ತು ಜೋಶುವಾ ತಮಿಳಿಗರು. ಇವರಿಗೆ ಮಂಗಳೂರಿನ ಒಬ್ಬಾತ ಕೋಟೆಕಾರು ಬ್ಯಾಂಕಿನ ಬಗ್ಗೆ ಮಾಹಿತಿ ನೀಡಿದ್ದಾನೆ ಎನ್ನಲಾಗುತ್ತಿದೆ. ಇದೇ ಕಾರಣಕ್ಕೆ ಮುರುಗನ್ ಎರಡು ತಿಂಗಳ ಹಿಂದೆಯೇ ಮಂಗಳೂರಿಗೆ ಬಂದು ದರೋಡೆಗೆ ಸ್ಕೆಚ್ ಹಾಕಿದ್ದ ಎನ್ನುವ ಮಾಹಿತಿಯಿದೆ.
ಇಷ್ಟಕ್ಕೂ ಮುರುಗನ್ ತನ್ನ ಒಂಬತ್ತು ಮಂದಿ ಸಹಚರರನ್ನು ಒಟ್ಟುಗೂಡಿಸಿ ದರೋಡೆಗೆ ಸ್ಕೆಚ್ ರೂಪಿಸಿದ್ದ. ಆದರೆ ದರೋಡೆಗೆ ಬಂದಿದ್ದಾಗ, ತನ್ನ ಜೊತೆಗಿದ್ದವರಿಗೇ ಮಾಹಿತಿ ನೀಡಿರಲಿಲ್ಲ. ಇದರಿಂದಾಗಿ ಕೈಗೆ ಬಂದ ತುತ್ತು ಬಾಯಿಗಿಲ್ಲ ಎನ್ನುವಂತಾದ ಜೊತೆಗಿದ್ದವರೇ ಮುಂಬೈನಲ್ಲಿ ದರೋಡೆ ಸ್ಕೆಚ್ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಧಾರಾವಿ ಗ್ಯಾಂಗ್ ಸದಸ್ಯರು ದರೋಡೆಗೆ ಸ್ಕೆಚ್ ಹಾಕಿದ್ದಾರೆ ಎಂದರೆ, ಅದು ದೊಡ್ಡ ಮಟ್ಟದ ಸಂಚೇ ಆಗಿರಬೇಕೆಂದು ಪೊಲೀಸರು ಚುರುಕಾಗಿದ್ದರು. ಮುರುಗನ್ ಮತ್ತು ಜೋಶುವಾ ಇದ್ದ ಮನೆಗಳಿಗೆ ಹೋಗಿ ತಲಾಶ್ ಕೂಡ ಮಾಡಿದ್ದರು. ಆದರೆ ಇವರು ಅಲ್ಲಿಂದ ಎಲ್ಲಿಗೋ ಹೋಗಿರುವುದು ಖಾತ್ರಿಯಾಗಿತ್ತು.
ಇಷ್ಟಾಗುತ್ತಲೇ ಮಂಗಳೂರಿನಲ್ಲಿ ಬ್ಯಾಂಕ್ ದರೋಡೆ ಆಗಿರುವುದು ಮುಂಬೈ ಪೊಲೀಸರಿಗೂ ಸುದ್ದಿ ಹೋಗಿತ್ತು. ಇದರ ಬೆನ್ನಲ್ಲೇ ಮಂಗಳೂರಿನಿಂದ ಆರೋಪಿಗಳಲ್ಲಿ ಒಬ್ಬಾತ ಮುಂಬೈಗೆ ಹೊರಟಿದ್ದು ತಿಳಿಯುತ್ತಲೇ ಪೊಲೀಸ್ ಅಧಿಕಾರಿಗಳು ಮುಂಬೈ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದರು. ಅಷ್ಟರಲ್ಲಿಯೇ ಧಾರಾವಿ ಗ್ಯಾಂಗ್ ಬಗ್ಗೆ ಅತ್ತ ಕಡೆಯಿಂದ ಮಂಗಳೂರಿಗೆ ಸುದ್ದಿ ಬಂದಿತ್ತು. ಹೀಗಾಗಿ ಬ್ಯಾಂಕ್ ದರೋಡೆ ಮಾಡಿರುವುದು ಅದೇ ತಂಡ ಎನ್ನುವುದು ಮಂಗಳೂರಿನ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಖಾತ್ರಿಯಾಗಿತ್ತು. ಮುರುಗನ್, ಜೋಶುವಾ ಫೋಟೋಗಳೂ ಲಭಿಸಿದ್ದವು. ಜೋಶುವಾ ರಾಜೇಂದ್ರನ್ ಮಂಗಳೂರಿನಿಂದ ರೈಲಿನಲ್ಲಿ ಮುಂಬೈಗೆ ಹೋದವನು ಅಲ್ಲಿಂದ ತಮಿಳುನಾಡಿಗೆ ಹೊರಟಿದ್ದ. ಇದು ತಿಳಿಯುತ್ತಲೇ ಮುಂಬೈ ಪೊಲೀಸರ ನೆರವಿನಿಂದ ಅರ್ಧದಲ್ಲೇ ಅರೆಸ್ಟ್ ಮಾಡಿದ್ದರು.
ಮಂಗಳೂರಿನ ಬ್ಯಾಂಕ್ ದರೋಡೆ ಪ್ರಕರಣವನ್ನು ಸುಲಭದಲ್ಲಿ ಪತ್ತೆ ಮಾಡುವುದಕ್ಕೆ ಮುಂಬೈ ಪೊಲೀಸರ ಮಾಹಿತಿಯೇ ಆಧಾರವಾಗಿತ್ತು. ಯಾಕಂದ್ರೆ, ಯಾವುದೇ ಸುಳಿವು ಬಿಟ್ಟುಕೊಡದೆ ಅತ್ಯಂತ ಕರಾರುವಾಕ್ಕಾಗಿ ದರೋಡೆ ಕೃತ್ಯವನ್ನು ಮಾಡಿ ಮುಗಿಸಿದ್ದರು. ಅಲ್ಲದೆ, ಫಿಯೇಟ್ ಕಾರಿನಲ್ಲೇ ಕೇರಳ ಕಡೆಗೆ ಪಾಸ್ ಆಗಿರುವುದೂ ಟೋಲ್ ಗೇಟ್ ನಲ್ಲಿ ಕಂಡುಬಂದಿತ್ತು. ಆದರೆ ಈ ಕಾರಿನ ನಂಬರ್ ಪ್ಲೇಟ್ ಬೆನ್ನು ಹತ್ತಿದಾಗ ನಕಲಿ ಎನ್ನುವುದು ತಿಳಿದುಬಂದಿತ್ತು. ಮುಂಬೈನಿಂದ ಅದೇ ಕಾರಿನಲ್ಲಿ ಬಂದಿದ್ದರೇ ಎಂದು ಕೆಲವು ಟೋಲ್ ಗೇಟ್ ಗಳಲ್ಲಿ ಚೆಕ್ ಮಾಡಿದಾಗ, ಅಲ್ಲಿನ ನಂಬರ್ ಪ್ಲೇಟ್ ಬೇರೆ ಇದ್ದುದೂ ಪತ್ತೆಯಾಗಿತ್ತು. ಆನಂತರ, ನೋಡಿದಾಗ ಆ ಫಿಯೇಟ್ ಕಾರು ಮುಖ್ಯ ಆರೋಪಿ ಮುರುಗನ್ ಹೆಸರಿನಲ್ಲೇ ಇತ್ತು. ಹೆಜಮಾಡಿ ಟೋಲ್ ತಲುಪುವ ಮೊದಲೇ ಅದರ ನಂಬರ್ ಪ್ಲೇಟನ್ನು ಅರ್ಧ ದಾರಿಯಲ್ಲೇ ಬದಲಿಸಿದ್ದರು.
How did kotekar robbery case accused get caught, internal fight on the gang lead to arrest of accused by Mangalore police. During investigation, the police found that eight persons – two each from Rajasthan and Uttar Pradesh, three Tamils living in Mumbai and one man from Mangaluru – were behind the crime. When they had been lodged together in a prison in Mumbai, the eight persons had planned the bank robbery, and subsequently, orchestrated it.As they found that the three Mumbai-based Tamils involved in the heist were from Tirunelveli district, the investigators, with the help of the police here, nabbed Murugandi of Padmaneri near Kalakkad and Joshua of Kallidaikurichi on Monday night. The police also seized ₹2 kg of gold ornaments, ₹3 lakh and a revolver with three bullets from them
29-04-25 10:45 pm
Bangalore Correspondent
CM Siddaramaiah, Belagavi, BJP Suresh Kumar:...
29-04-25 09:51 pm
Protest Kalaburagi, islamabad Locality: ಕಲಬುರ...
29-04-25 09:20 pm
Kudupu Murder, Mob attack, Parameshwar: ಕುಡುಪ...
29-04-25 04:28 pm
Praveen Nettaru, Mohsin Shukur, Karwar Police...
29-04-25 01:04 pm
29-04-25 03:45 pm
HK News Desk
'ನನಗೆ ಪಾಕಿಸ್ತಾನದಲ್ಲಿ ಯಾರೂ ಇಲ್ಲ, ದಯವಿಟ್ಟು ಉಳಿಸ...
28-04-25 06:52 pm
ಪಾಕಿಸ್ತಾನದ ಶಾಂತಿ ಸಮಿತಿ ಕಚೇರಿ ಎದುರೇ ಬಾಂಬ್ ಸ್ಫೋ...
28-04-25 05:53 pm
ಪಾಕ್ ವಿರುದ್ಧ ಯುದ್ದಕ್ಕೆ ಕರೆ ನೀಡಿದ ಕಾಶ್ಮೀರ್ ಸಿಎ...
27-04-25 08:42 pm
Pak, Website Hacked, Indian Army : ಅಲ್ಲಾ ನಮ್ಮ...
27-04-25 07:38 pm
29-04-25 11:00 pm
Mangalore Correspondent
Mangalore, Ullal Nethravathi Bridge: ಉಳ್ಳಾಲ ನ...
29-04-25 05:45 pm
Mangalore, Dr Kalladka Bhat: ಹೆಣ್ಣು ಮಕ್ಕಳು ವ್...
29-04-25 12:40 pm
Vadiraj, Mangalore, B R Ambedkar: ಕಾಂಗ್ರೆಸ್ ಸ...
29-04-25 11:53 am
Highland Hospital Mangalore, FIR, Anti Nation...
29-04-25 11:38 am
29-04-25 09:59 pm
Mangalore Correspondent
Kudupu Murder, Mangalore Crime, Police: ಕುಡುಪ...
29-04-25 02:53 pm
Belthagady, Blackmail, Mangalore crime: ಬೆಳ್ತ...
28-04-25 11:39 am
Shootout Bakrebail, Mangalore Crime: ಬಾಕ್ರಬೈಲ...
28-04-25 11:24 am
Mangalore crime, Murder, Kudupu: ಕುಡುಪು ಬಳಿಯಲ...
27-04-25 10:59 pm