ಬ್ರೇಕಿಂಗ್ ನ್ಯೂಸ್
21-01-25 07:43 pm Mangalore Correspondent ಕರಾವಳಿ
ಮಂಗಳೂರು, ಜ.21: ಕೋಟೆಕಾರು ಸಹಕಾರಿ ಬ್ಯಾಂಕ್ ದರೋಡೆ ಪ್ರಕರಣಕ್ಕೆ ಸಂಬಂಧಿಸಿ ಬ್ಯಾಂಕಿನ ಅಧ್ಯಕ್ಷ ಕೃಷ್ಣ ಶೆಟ್ಟಿ ಕಳವಾದ ಒಟ್ಟು ಚಿನ್ನದ ಬಗ್ಗೆ ಮತ್ತೆ ಮಾಹಿತಿ ನೀಡಿದ್ದಾರೆ. ಒಟ್ಟು 15 ಕೋಟಿಯಷ್ಟು ಚಿನ್ನಾಭರಣ ದರೋಡೆ ಆಗಿದೆ. ಅಲ್ಲದೆ, 11 ಲಕ್ಷ 70 ಸಾವಿರ ನಗದು ಕೂಡ ಕಳವು ಮಾಡಿದ್ದಾರೆ. ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದೇವೆ ಎಂದು ತಿಳಿಸಿದ್ದಾರೆ.
ಆರೋಪಿ ಕಾಲಿಗೆ ಗುಂಡು ಹಾರಿಸಿದ ಅಲಂಕಾರಗುಡ್ಡೆ ಸ್ಥಳಕ್ಕೆ ಬ್ಯಾಂಕಿನ ಅಧ್ಯಕ್ಷ ಕೃಷ್ಣ ಶೆಟ್ಟಿ ಭೇಟಿ ನೀಡಿದ್ದು, ಸ್ಥಳದಲ್ಲಿದ್ದ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ್ದಾರೆ. ಸ್ಥಳೀಯರ ಬಗ್ಗೆ ನಿಮಗೇನಾದರೂ ಸಂಶಯ ಇದೆಯೇ ಎಂದು ಕೇಳಿದ್ದಕ್ಕೆ, ನಮಗೇನೂ ಇಲ್ಲ. ಪೊಲೀಸರು ತನಿಖೆ ನಡೆಸುತ್ತಾರೆ ಎಂದಿದ್ದಾರೆ.
ಒಟ್ಟು ಕಳವಾದ ಚಿನ್ನಾಭರಣದ ಬಗ್ಗೆ ಲೆಕ್ಕಾಚಾರ ಆಗಿದೆಯೇ ಎಂದು ಕೇಳಿದ್ದಕ್ಕೆ, ಎಲ್ಲ ಲೆಕ್ಕ ಮುಗಿದಿದೆ, ಒಟ್ಟು 15 ಕೋಟಿಗೂ ಹೆಚ್ಚು ಮೌಲ್ಯದ ಚಿನ್ನಾಭರಣ ಕಳವಾಗಿದೆ. ಎಂಟು ಕೋಟಿಯ ಚಿನ್ನ ಲಾಕರಿನಲ್ಲಿ ಉಳಿದಿದೆ. ಈ ಬಗ್ಗೆ ಪೊಲೀಸರಿಗೂ ಮಾಹಿತಿ ನೀಡಿದ್ದೇವೆ ಎಂದಿದ್ದಾರೆ. ಮತ್ತೆ ಎಫ್ಐಆರ್ ನಲ್ಲಿ ಕಡಿಮೆ ಯಾಕೆ ತೋರಿಸಿದ್ದು ಎಂದು ಕೇಳಿದ್ದಕ್ಕೆ, ಅದು ಅಂದಾಜು ಹಾಕಿರೋದು, ನಾವು ಆಮೇಲೆ ಹೆಚ್ಚುವರಿ ಇರುವುದನ್ನು ಹೇಳಿದ್ದೇವೆ ಎಂದಿದ್ದಾರೆ.
ಇನ್ಶೂರೆನ್ಸ್ ಎಷ್ಟು ಸಿಗಬಹುದು ಎಂದು ಕೇಳಿದ್ದಕ್ಕೆ, ಇನ್ಶೂರೆನ್ಸ್ 19 ಕೋಟಿ ಇದೆ, ಮಹಜರು ಎಲ್ಲ ಆದಬಳಿಕ ಇನ್ಶೂರೆನ್ಸ್ ಪ್ರಕ್ರಿಯೆ ಆಗುತ್ತದೆ. ಒಂದು ವರ್ಷ ಬೇಕಾಗಬಹುದು. ಎಷ್ಟು ಸಿಗುತ್ತೆ ಎಂದು ನೋಡಬೇಕು ಎಂದು ಹೇಳಿದ್ದಾರೆ. ಪೊಲೀಸರು ಆರಂಭದಲ್ಲಿ 10ರಿಂದ 12 ಕೋಟಿ ಮೌಲ್ಯದ ಚಿನ್ನ ದರೋಡೆಯಾಗಿದೆ ಎಂದು ಹೇಳಿದ್ದರೂ, ಆನಂತರ ನಾಲ್ಕು ಕೋಟಿ ಚಿನ್ನವೆಂದು ಕಡಿಮೆ ತೋರಿಸಿದ್ದರು. ಪೊಲೀಸರ ಈ ನಡೆ ಸಂಶಯಕ್ಕೆ ಕಾರಣವಾಗಿತ್ತು.
Mangalore Kotekar bank robbery, 15 crore worth gold has been stolen says Bank president Krishna Shetty. Speaking to the media persons at the spot where the accused was shot to the leg by police he said that more than 15 crores of gold has been stolen and the FIR will be changed from 4 crores.
17-09-26 04:13 pm
HK News Staffer
ಚಿತ್ರರಂಗದ ಸಾರ್ವಕಾಲಿಕ ಶ್ರೇಷ್ಠ ನಟ ಅನಂತನಾಗ್ ಗೆ '...
16-09-26 10:40 pm
Tulu Language, Shivraj Tangadagi: ತುಳುವಿಗೆ 2ನ...
16-09-26 01:51 pm
Pradeep Eshwar, Pratap Simha: ಪೊಲೀಸ್ ಠಾಣೆಗೆ...
15-09-26 09:13 pm
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
17-09-26 08:02 pm
HK News Staffer
Mangalore, Yathindra Siddaramaiah, Umar Khali...
17-09-26 06:29 pm
ಸಚಿವ ಸಂಪುಟ ಸಭೆಗೆ ಕ್ಷಣಗಣನೆ ; ಪಡೀಲ್ ಜಿಲ್ಲಾಧಿಕಾರ...
17-09-26 05:12 pm
ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಮಸೀದಿ, ಮದರಸಾ ಮೇಲೆ...
17-09-26 09:41 am
Mangalore Jail, Fight, Crime: ಜೈಲಿನಲ್ಲಿ ಬೀಡಿ...
16-09-26 10:46 pm
17-09-26 02:22 pm
HK News Staffer
Bangalore Murder, Crime: ಪ್ರೀತಿಸಿ ಮದುವೆಯಾಗಿದ್...
17-09-26 01:56 pm
Bangalore kidnap, Crime: ಬೆಂಗಳೂರಿನಲ್ಲಿ ಶಾಕ್...
17-09-26 12:35 pm
Manglore Cyber crime, Stock Market: ಷೇರು ಮಾರ್...
17-09-26 11:45 am
ಬೆಳ್ತಂಗಡಿ; ಗೃಹಪ್ರವೇಶಕ್ಕೆ ಹೋದಾಗ ಮನೆಗೆ ಕನ್ನ, ₹1...
16-09-26 11:18 am