ಬ್ರೇಕಿಂಗ್ ನ್ಯೂಸ್
17-01-25 10:50 pm Mangalore Correspondent ಕರಾವಳಿ
ಮಂಗಳೂರು, ಜ.17: ತನ್ನ ಕಟ್ಟಡದಲ್ಲಿ ಬಾಡಿಗೆ ಇರುವ ಮಹಿಳೆಯೊಬ್ಬರಿಗೆ ಮಾಲೀಕನೇ ಮಾನಸಿಕ ಕಿರುಕುಳ ಕೊಡುವುದಲ್ಲದೆ, ನೀರು, ವಿದ್ಯುತ್ ಕಡಿತಗೊಳಿಸಿ ವಿನಾಕಾರಣ ತೊಂದರೆ ಕೊಡುತ್ತಿರುವ ಆರೋಪ ಕೇಳಿಬಂದಿದೆ.
ಸೋಮೇಶ್ವರ ಗ್ರಾಮದ ಅಂಬಿಕಾ ರೋಡ್ ಬಳಿಯ ಸುಧಾಕರ ಭಂಡಾರಿ ಎಂಬವರ ಕಟ್ಟಡದಲ್ಲಿ ಮಹಿಳೆ ತನ್ನ ಮಕ್ಕಳೊಂದಿಗೆ ಬಾಡಿಗೆಗೆ ಇದ್ದಾರೆ. ಕಳೆದ ಡಿಸೆಂಬರ್ ತಿಂಗಳಿನಿಂದ ರಾತ್ರಿ ವೇಳೆ ಈ ವ್ಯಕ್ತಿ ಮನೆಯ ಬಾಗಿಲು ಬಡಿಯುವುದು, ನಾಯಿ ಬಿಟ್ಟು ಕಿರುಕುಳ ಕೊಡುವುದು ಮಾಡುತ್ತಿದ್ದಾರೆ. ತಿಂಗಳ ಬಾಡಿಗೆಯನ್ನು ಸರಿಯಾಗಿ ಕೊಟ್ಟರೂ, ವಿನಾಕಾರಣ ಮಾನಸಿಕ ಕಿರುಕುಳ ಕೊಡುತ್ತಿದ್ದಾರೆ, ನೀರು ಪೂರೈಕೆ ಮಾಡದೆ ಸತಾಯಿಸುತ್ತಿದ್ದಾರೆಂದು ಮಹಿಳೆ ಉಳ್ಳಾಲ ಠಾಣೆಗೆ ದೂರು ನೀಡಿದ್ದಾರೆ.
ಆದರೆ ಪೊಲೀಸರು ಆರೋಪಿ ವ್ಯಕ್ತಿಯನ್ನು ಕರೆಸಿ ಮುಚ್ಚಳಿಕೆ ಬರೆಸಿ ಕಳಿಸಿಕೊಟ್ಟಿದ್ದಾರೆ. ಹಾಗಿದ್ದರೂ ನೀರು ಕೊಡದೆ ಸತಾಯಿಸುವ ಚಾಳಿ ಮುಂದುವರಿದಿದೆ. ಇದರಿಂದಾಗಿ ಮಹಿಳೆ ತೀವ್ರ ನೊಂದುಕೊಂಡಿದ್ದು, ಮಹಿಳೆಯರ ಆಸರೆಯಾದ ಸಖೀ ಕೇಂದ್ರಕ್ಕೂ ದೂರು ನೀಡಿದ್ದಾರೆ. ಅಲ್ಲಿನ ಸಿಬಂದಿ ಬಂದು ಪರಿಶೀಲನೆ ನಡೆಸಿದ್ದು, ಬಿಟ್ಟಿ ಸಲಹೆ ಕೊಟ್ಟು ಹೋಗಿದ್ದಾರಂತೆ. ತನ್ನ ಕಿರುಕುಳದ ಬಗ್ಗೆ 112 ಸಂಖ್ಯೆಗೂ ಮಹಿಳೆ ದೂರು ನೀಡಿದ್ದು, ಕಟ್ಟಡ ಮಾಲೀಕನ ದುರ್ನಡತೆ ಬಗ್ಗೆ ಹೇಳಿಕೊಂಡಿದ್ದಾರೆ. ಆದರೂ ಪ್ರಯೋಜನ ಆಗಿಲ್ಲ ಎಂದು ಮಹಿಳೆ ದೂರಿದ್ದಾರೆ.
ಈ ಹಿಂದೆ ಸುಧಾಕರ ಭಂಡಾರಿ ತನ್ನ ನಾಯಿಯನ್ನು ಬಿಟ್ಟು ಕಚ್ಚುವಂತೆ ಮಾಡಿದ್ದು ಆನಂತರ ಮಹಿಳೆ ಲೇಡಿಗೋಶನ್ ಆಸ್ಪತ್ರೆಯಲ್ಲಿ ಇಂಜೆಕ್ಷನ್ ಪಡೆದು ಸುಧಾರಿಸಿಕೊಂಡಿದ್ದರು. ಆದರೂ ತಾಯಿ, ಮಕ್ಕಳಿಗೆ ಕಿರುಕುಳ ಕೊಡುವುದು ಬಿಟ್ಟಿಲ್ಲ. ನೀರು, ವಿದ್ಯುತ್ ಮನುಷ್ಯನ ಮೂಲಭೂತ ಹಕ್ಕು. ಅದನ್ನು ಬಾಡಿಗೆದಾರ ನಿರಾಕರಿಸುವ ಹಾಗಿಲ್ಲ. ಅಲ್ಲದೆ, ಅಗ್ರಿಮೆಂಟ್ ಅವಧಿಯಲ್ಲಿ ಮೂಲಭೂತ ಸೌಕರ್ಯ ಒದಗಿಸುವುದು ಕರ್ತವ್ಯ ಆಗಿರುತ್ತದೆ. ಪೊಲೀಸರೇ ಈ ಬಗ್ಗೆ ಕಠಿಣ ಕ್ರಮ ಜರುಗಿಸಬೇಕಾಗಿದೆ.
Mangalore Mental torture to by house owner in ullal, case filed. The owner is alleged of disconnecting curent and water facility to the women who is staying for rent.
21-08-25 10:31 pm
Bangalore Correspondent
Dharmasthala, Acharya Sri Gunadharanandi Maha...
21-08-25 10:21 pm
ಸೌಹಾರ್ದ ಸಹಕಾರಿ ವಿಧೇಯಕಕ್ಕೆ ಮೇಲ್ಮನೆಯಲ್ಲಿ ಸೋಲು ;...
21-08-25 06:24 pm
"ಧರ್ಮದ ಉಳಿವಿಗಾಗಿ ಧರ್ಮ ಯುದ್ಧ" ; ರಾಜ್ಯದ ಎಲ್ಲ ವ...
21-08-25 06:02 pm
Mandya Police Torture, Suicide: ಪೊಲೀಸ್ ಠಾಣೆಯ...
21-08-25 02:03 pm
21-08-25 06:09 pm
HK News Desk
ಹೈದರಾಬಾದ್ ನಲ್ಲಿ ಕಲಬುರಗಿ ಮೂಲದ 2 ವರ್ಷದ ಮಗು ಸೇರ...
21-08-25 12:54 pm
ಹೆದ್ದಾರಿಯಲ್ಲಿ ಗುಂಡಿಗಳು ಬಿದ್ದಿದ್ದರೆ, ಟ್ರಾಫಿಕ್...
20-08-25 10:56 pm
30 ದಿನ ಜೈಲು ಪಾಲಾದರೆ ಪ್ರಧಾನಿ, ಸಿಎಂ, ಸಚಿವರನ್ನು...
20-08-25 06:40 pm
ದೆಹಲಿ ಸಿಎಂ ರೇಖಾ ಗುಪ್ತಾ ಮೇಲೆ ಆಗಂತುಕನಿಂದ ಹಲ್ಲೆ...
20-08-25 11:01 am
21-08-25 09:35 pm
HK News Desk
Vhp, Mangalore, Sharan Pumpwell: ಗಣೇಶೋತ್ಸವ, ದ...
21-08-25 09:12 pm
FIR, YouTuber Sameer MD, Doota Arrest: ಸಾವಿರಾ...
21-08-25 03:44 pm
MRPL Accident, Mangalore: ಕಾಟಿಪಳ್ಳ ; ಟಿಪ್ಪರ್...
21-08-25 02:05 pm
Mahesh Shetty Timarodi, Udupi Police, BL Sant...
21-08-25 11:57 am
21-08-25 11:00 pm
Mangalore Correspondent
ಶೀಲ ಶಂಕೆ ; ಕ್ರಿಮಿನಾಶಕ ಕೊಡಿಸಿ ಕೊಲೆ, ಪ್ರಿಯಕರನೊ...
21-08-25 10:39 pm
Mangalore, Derlakatte, Robbery, Muthoot finan...
20-08-25 08:10 pm
Mangalore Lucky Scheme Scam Fraud, Wahab Kula...
19-08-25 10:52 pm
ಕಸ್ಟಮ್ಸ್ ಅಧಿಕಾರಿಗಳ ಸೋಗಿನಲ್ಲಿ ಚಿನ್ನದ ವ್ಯಾಪಾರಿಯ...
19-08-25 10:30 pm