ಬ್ರೇಕಿಂಗ್ ನ್ಯೂಸ್
15-01-25 08:01 pm Mangalore Correspondent ಕರಾವಳಿ
ಪುತ್ತೂರು, ಜ.16: ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಮತ್ತು ಮಾಜಿ ಮುಖ್ಯಮಂತ್ರಿ ಡಿವಿ ಸದಾನಂದ ಗೌಡರ ಭಾವಚಿತ್ರದೊಂದಿಗೆ ಬ್ಯಾನರ್ ಹಾಕಿ, ಅದಕ್ಕೆ ಚಪ್ಪಲಿ ಹಾರ ಹಾಕಿದ ಪ್ರಕರಣದಲ್ಲಿ ಪುತ್ತಿಲ ಪರಿವಾರದ ನಾಲ್ವರು ಕಾರ್ಯಕರ್ತರಿಗೆ ಪೊಲೀಸರು ಬಂಧಿಸಿ ಛಡಿಯೇಟು ಕೊಟ್ಟು ಚಿತ್ರಹಿಂಸೆ ನೀಡಿದ್ದರು. ಈ ಬಗ್ಗೆ ಪುತ್ತೂರು ಡಿವೈಎಸ್ಪಿ, ಎಸ್ಐ ಮತ್ತು ಕಾನ್ಸ್ ಟೇಬಲ್ ಒಬ್ಬರ ಮೇಲೆ ಕೇಸು ದಾಖಲಾಗಿತ್ತು. ಪ್ರಕರಣದಲ್ಲಿ ಪೊಲೀಸರು ನೀಡಿದ್ದ ಬಿ ರಿಪೋರ್ಟ್ ಅನ್ನು ಪುತ್ತೂರಿನ ನ್ಯಾಯಾಲಯ ತಿರಸ್ಕರಿಸಿದ್ದು, ಮೂವರು ಪೊಲೀಸರಿಗೂ ಸಮನ್ಸ್ ಮಾಡಿದೆ.
2023ರ ಮೇ ತಿಂಗಳಲ್ಲಿ ಪುತ್ತೂರು ವಿಧಾನಸಭೆ ಕ್ಷೇತ್ರದಲ್ಲಿ ಬಿಜೆಪಿ ಹೀನಾಯ ಸೋಲುಂಡಿದ್ದ ಬೆನ್ನಲ್ಲೇ ಪುತ್ತೂರು ಕೆಎಸ್ಸಾರ್ಟಿಸಿ ಬಸ್ ನಿಲ್ದಾಣ ಬಳಿಯಲ್ಲೇ ಬ್ಯಾನರ್ ಪತ್ತೆಯಾಗಿತ್ತು. ಅದರಲ್ಲಿ ನಳಿನ್ ಮತ್ತು ಡೀವಿ ಸದಾನಂದ ಗೌಡರ ಭಾವಚಿತ್ರ ಹಾಕಿ, ಸೋಲಿಗೆ ಇವರೇ ಹೊಣೆಯೆಂದು ಬರೆದು ಚಪ್ಪಲಿ ಹಾರ ತೊಡಿಸಲಾಗಿತ್ತು. ಈ ವಿಚಾರ ರಾಜ್ಯಾದ್ಯಂತ ಸುದ್ದಿಯಾಗಿದ್ದಲ್ಲದೇ ಇಬ್ಬರು ನಾಯಕರು ಮುಜುಗರಕ್ಕೆ ಒಳಗಾಗಿದ್ದರು. ಘಟನೆ ಕುರಿತಾಗಿ ಪೊಲೀಸ್ ದೂರು ದಾಖಲಾಗಿದ್ದರಿಂದ ಬ್ಯಾನರ್ ಹಾಕಿದವರೆಂದು ನಾಲ್ವರನ್ನು ಬಂಧಿಸಲಾಗಿತ್ತು. ಬಂಧಿಸಲ್ಪಟ್ಟ ಪುರುಷರಕಟ್ಟೆಯ ಅವಿನಾಶ್ ಮತ್ತು ಇತರ ನಾಲ್ವರಿಗೆ ಪೊಲೀಸರು ಬಾಸುಂಡೆ ಬರುವಂತೆ ಬಾರಿಸಿದ್ದರು. ಕಾರ್ಯಕರ್ತರು ಆಸ್ಪತ್ರೆಗೆ ದಾಖಲಾಗಿ ಪೊಲೀಸರ ವಿರುದ್ಧ ನೀಡಿದ್ದರಿಂದ ಮೂವರ ವಿರುದ್ಧ ಕೇಸು ದಾಖಲಾಗಿತ್ತು.
ಪುತ್ತೂರು ಡಿವೈಎಸ್ಪಿ ಡಾ.ವೀರಯ್ಯ ಹಿರೇಮಠ, ಪುತ್ತೂರು ಗ್ರಾಮಾಂತರ ಠಾಣೆಯ ಎಸ್ಐ ಶ್ರೀನಾಥ ರೆಡ್ಡಿ ಹಾಗೂ ಕಾನ್ ಸ್ಟೇಬಲ್ ಹರ್ಷಿತ್ ವಿರುದ್ಧ ಪ್ರಕರಣ ದಾಖಲಾಗಿತ್ತು. ಈ ಬಗ್ಗೆ ತನಿಖೆ ನಡೆಸಿ ವರದಿ ನೀಡಲು ಉಡುಪಿ ಜಿಲ್ಲೆಯ ಡಿವೈಎಸ್ಪಿ ಒಬ್ಬರಿಗೆ ಹೆಚ್ಚುವರಿ ಹೊಣೆ ನೀಡಲಾಗಿತ್ತು. ಪೊಲೀಸ್ ಅಧಿಕಾರಿ, ಈ ದೂರು ಸುಳ್ಳಾಗಿದ್ದು ತನಿಖೆಗೆ ತಕ್ಕುದಾಗಿಲ್ಲ. ತಪ್ಪು ತಿಳುವಳಿಕೆಯಿಂದ ಕೂಡಿದೆ. ಸತ್ಯಾಂಶವಿಲ್ಲ ಎಂದು ತನಿಖೆ ಮುಕ್ತಾಯಗೊಳಿಸಿ ಪುತ್ತೂರಿನ ನ್ಯಾಯಾಲಯಕ್ಕೆ ಆರು ತಿಂಗಳ ಹಿಂದೆ ಬಿ ರಿಪೋರ್ಟ್ ಸಲ್ಲಿಸಿದ್ದರು. ಇದರಂತೆ, ಕೋರ್ಟಿನಿಂದ ಅರ್ಜಿದಾರ ಅಂದರೆ, ಪೊಲೀಸರಿಂದ ಪೆಟ್ಟು ತಿಂದಿದ್ದ ಗಾಯಾಳುಗಳಿಗೆ ವರದಿ ಸಹಿತ ನೋಟಿಸ್ ಹೋಗಿತ್ತು.
ಆನಂತರ, ಅರ್ಜಿದಾರರ ಪರವಾಗಿ ವಕೀಲರಾದ ಪ್ರೀತಮ್ ರೈ ಮತ್ತು ಶಿವಾನಂದ ವಿಟ್ಲ ಹಾಜರಾಗಿ ಪೊಲೀಸರು ಹಾಕಿದ್ದ ಬಿ ರಿಪೋರ್ಟ್ ಅನ್ನು ಚಾಲೆಂಜ್ ಮಾಡಿದ್ದರು. ಅಲ್ಲದೆ, ಅಂದಿನ ಸಂದರ್ಭದಲ್ಲಿ ಬೆನ್ನು, ಕೈ ಕಾಲಿನಲ್ಲಿ ಬಾಸುಂಡೆ ಎದ್ದು ಹಲ್ಲೆಗೀಡಾಗಿದ್ದ ಕಾರ್ಯಕರ್ತರ ಫೋಟೋ ಮತ್ತು ಮಾಧ್ಯಮ ವರದಿಯನ್ನು ಕೋರ್ಟ್ ಗಮನಕ್ಕೆ ತಂದಿದ್ದಾರೆ. ಪೊಲೀಸರು ಬಿ ರಿಪೋರ್ಟ್ ಹಾಕಿ, ಆರೋಪಿತರನ್ನು ಬಚಾವ್ ಮಾಡಿರುವುದಾಗಿ ಕೋರ್ಟಿಗೆ ತಿಳಿಸಿದ್ದಾರೆ. ಪೊಲೀಸರಿಂದ ಹಲ್ಲೆಗೀಡಾಗಿದ್ದ ನಾಲ್ವರು ಯುವಕರನ್ನು ಹಾಜರುಪಡಿಸಿ ಹೇಳಿಕೆಯನ್ನೂ ಮಾಡಲಾಗಿತ್ತು. ಇದರಂತೆ, ಪುತ್ತೂರಿನ 5ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ, ಪೊಲೀಸರ ಬಿ ರಿಪೋರ್ಟ್ ತಿರಸ್ಕರಿಸಿದ್ದಲ್ಲದೆ, ಆರೋಪಿತ ಮೂವರು ಪೊಲೀಸರಿಗೆ ಸಮನ್ಸ್ ಜಾರಿಗೊಳಿಸಿದೆ. ವಿಶೇಷ ಪ್ರಕರಣವೆಂದು ಪರಿಗಣಿಸಿ ಮುಂದಿನ ವಿಚಾರಣೆ ನಡೆಯುವ ಮಾರ್ಚ್ 10ರಂದು ಕೋರ್ಟಿಗೆ ಹಾಜರಾಗಲು ಆದೇಶ ಮಾಡಿದೆ.
Banner criticising Nalin Kumar Kateel, D V Sadananda Gowda in Puttur, DYSP and three other cops issued summons and B report filed by the police has been rejected. Dakshina Kannada district Superintendent of Police Vikram Amate on May 18 suspended Sub-Inspector Srinath Reddy and constable Harshith of Puttur Rural Police Station in connection with the alleged atrocity against persons accused of displaying a banner demeaning Dakshina Kannada Member of Parliament Nalin Kumar Kateel and former CM D.V. Sadananda Gowda. Mr Gowda is an MP and a former Union Minister.
15-03-25 09:18 pm
HK News Desk
Mangalore, Tamil actor Prabhu Deva, Kukke Sub...
15-03-25 03:55 pm
Elephant attack, Belur, Hassan: ಕಾಡಾನೆ ದಾಳಿ ;...
15-03-25 12:33 pm
DySP Kanakalakshmi arrested, suicide: ಬೋವಿ ನಿ...
14-03-25 11:11 pm
Swamiji, Bagalkot, Police Video: ದುಡ್ಡು ಪಡೆದು...
14-03-25 08:30 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
15-03-25 10:00 pm
Mangalore Correspondent
Mangalore court, Moral Police, Acquit: ಹಿಂದು...
15-03-25 08:32 pm
Mangalore Mary Hill, Boy Death; ಮೇರಿಹಿಲ್ ; ಏಳ...
15-03-25 04:11 pm
Dr Vamana Nandavar, Mangalore Death: ತುಳು, ಕನ...
15-03-25 01:47 pm
Mangalore Student Missing, ,Kidnap, Hitein Bh...
15-03-25 12:35 pm
14-03-25 05:02 pm
HK News Desk
Ccb Police, Firearms, Mangalore crime: ವಾಮಂಜೂ...
13-03-25 06:44 pm
Kothanur Police, Bangalore crime, Murder: ನಾಲ...
11-03-25 07:34 pm
Tanishq showroom, Bihar Robbery: ಬಿಹಾರದಲ್ಲಿ ಹ...
10-03-25 10:48 pm
Actress Ranya Rao, CBI, Gold case; ನಟಿ ರನ್ಯಾ...
09-03-25 05:06 pm