ಬ್ರೇಕಿಂಗ್ ನ್ಯೂಸ್
13-01-25 08:43 pm Mangalore Correspondent ಕರಾವಳಿ
ಮಂಗಳೂರು, ಜ.13: ಕಲಾಕೃತಿಯನ್ನು ಕೈಯಲ್ಲಿ ಮೂಡಿಸುವುದೇ ಒಂದು ಕೈಚಳಕ. ಕುಳಿತಲ್ಲೇ ಪೆನ್ಸಿಲ್ ನಲ್ಲಿ ಭಾವಚಿತ್ರ ಬಿಡಿಸುವುದು ಕೆಲವರಿಗಷ್ಟೇ ಒಲಿಯುವ ಅಪರೂಪದ ಕಲೆಗಾರಿಕೆ. ಅಂತಹ ಅದ್ಭುತ ಕಲಾವಿದರು ಮಂಗಳೂರಿನಲ್ಲಿ ಇದೇ ಮೊದಲ ಬಾರಿಗೆ ಒಂದೇ ಕಡೆ ಸೇರಿದ್ದರು. ಹೌದು.. ಕಲಾ ಪರ್ಬ ಎನ್ನುವ ಹೆಸರಲ್ಲಿ ಕಲಾವಿದರ ಮೇಳವನ್ನು ನಗರದ ಕದ್ರಿ ಪಾರ್ಕ್ ನಲ್ಲಿ ಆಯೋಜಿಸಲಾಗಿತ್ತು. ಜಿಲ್ಲಾಡಳಿತ ಮತ್ತು ಶರಧಿ ಪ್ರತಿಷ್ಠಾನದ ವತಿಯಿಂದ ಆಯೋಜಿಸಿದ್ದ ಕಲಾಮೇಳ ಜ.11-12ರಂದು ಅದ್ಭುತವಾಗಿ ಮೂಡಿಬಂದಿತ್ತು.
ರಾಜ್ಯದ ಉದ್ದಗಲದಿಂದ ಸುಮಾರು 108 ಕಲಾಕಾರರು ಮಂಗಳೂರಿಗೆ ಬಂದು ತಮ್ಮ ಸ್ಟಾಲ್ ಹಾಕಿದ್ದರು. ಕುಳಿತಲ್ಲೇ ಕಲಾಕೃತಿ ಬಿಡಿಸಿಡುತ್ತಿದ್ದರು. ಸಾರ್ವಜನಿಕರು ತಮ್ಮ ಮುಖಭಾವದ ಪೆನ್ಸಿಲ್ ಚಿತ್ರವನ್ನು ಕಲಾವಿದರಿಂದ ಬಿಡಿಸಿಕೊಳ್ಳುತ್ತಿದ್ದರು. ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಮೈಸೂರು, ಉಡುಪಿ ಸೇರಿದಂತೆ ವಿವಿಧ ಕಡೆಯ ಕಲಾವಿದರು ಬಂದಿದ್ದರು. ಯಕ್ಷಗಾನ, ಆಕರ್ಷಕ ಸೀನರಿಗಳು, ಖ್ಯಾತನಾಮರ ಚಿತ್ರಗಳನ್ನು ಕ್ಯಾನ್ವಾಸ್ ರೂಪದಲ್ಲಿ ಮಾರಾಟಕ್ಕಿಟ್ಟಿದ್ದರು. ಸಂಜೆಯಾಗುತ್ತಿದ್ದಂತೆ ಮತ, ಭೇದ ಲೆಕ್ಕಿಸದೆ ಎಲ್ಲ ವರ್ಗದ ಜನರೂ ಕದ್ರಿಗೆ ಬಂದು ಒಂದೆಡೆ ಸೇರಿದ್ದು ವಿಶೇಷವಾಗಿತ್ತು.
ಕಲಾಮೇಳದ ಬಗ್ಗೆ ಶರಧಿ ಪ್ರತಿಷ್ಠಾನದ ಪುನೀಕ್ ಶೆಟ್ಟಿ ಅವರಲ್ಲಿ ಕೇಳಿದಾಗ, ಕಲಾವಿದರ ಪಾಲಿಗೆ ಇದೇ ಮೊದಲ ಬಾರಿಗೆ ಮಂಗಳೂರಿನಲ್ಲಿ ಇಂತಹ ಮೇಳ ಆಯೋಜಿಸಲಾಗಿತ್ತು. ರಾಜ್ಯದೆಲ್ಲೆಡೆಯ ಖ್ಯಾತನಾಮ ಕಲಾವಿದರು ಬಂದಿದ್ದರು. ಎರಡು ದಿನದಲ್ಲಿ ಕಲಾವಿದರಿಗೆ 13.86 ಲಕ್ಷ ರೂಪಾಯಿ ಗಳಿಕೆಯಾಗಿದೆ. ಸಾರ್ವಜನಿಕರ ಉತ್ತಮ ಸ್ಪಂದನೆಯಿಂದ ಕಲಾವಿದರು ಉತ್ಸಾಹಗೊಂಡಿದ್ದರು ಎಂದಿದ್ದಾರೆ.
ಮಂಗಳೂರಿನ ಖ್ಯಾತ ಕಾರ್ಟೂನಿಸ್ಟ್ ಜಾನ್ ಚಂದ್ರನ್ ತಮ್ಮ ಕಾರ್ಟೂನ್ ಚಿತ್ರಗಳದ್ದೇ ಸ್ಟಾಲ್ ಹಾಕಿದ್ದರು. ಹಿರಿಯ ಕಲಾವಿದ ಕೋಟಿಪ್ರಸಾದ್ ಆಳ್ವರ ಪ್ರಸಾದ್ ಆರ್ಟ್ ಗ್ಯಾಲರಿ, ಕೆನರಾ ಆರ್ಟ್ ಕೊಡಿಯಾಲಗುತ್ತು, ಉಡುಪಿಯ ಖ್ಯಾತ ಕಲಾವಿದ ಜನಾರ್ದನ ಹಾವಂಜೆ, ಹಿರಿಯ ಕಲಾವಿದ ಗಣೇಶ್ ಸೋಮಯಾಜಿ ಅವರದ್ದೂ ಸ್ಟಾಲ್ ಇತ್ತು. ಮಂಗಳೂರಿನ ಆರ್ಟ್ ಸ್ಕೂಲಿನ ಸೈಯದ್ ಆಸಿಫ್ ಆಲಿ, ಬಿಜಿಎಂ ಚಿಲಿಂಬಿ ಆರ್ಟ್ ಸ್ಕೂಲ್ ನ ಸಮೀರ್ ಆಲಿ- ಶಬೀರ್ ಆಲಿ ಸೋದರರು, ಬೆಂಗಳೂರಿನ ಖ್ಯಾತ ಕಲಾವಿದ ಕೃಷ್ಣ ಚೆಟ್ಟಿಯಾರ್ ಮತ್ತಿತರರು ಪಾಲ್ಗೊಂಡಿದ್ದರು. ಕರಾವಳಿ ಉತ್ಸವದ ಪ್ರಯುಕ್ತ ಜಿಲ್ಲಾಡಳಿತದಿಂದ ಕಲಾಪರ್ಬವನ್ನು ಆಯೋಜಿಸಿದ್ದರಿಂದ ಅಧಿಕಾರಿ ವರ್ಗದವರೂ ಕದ್ರಿಗೆ ಬಂದಿದ್ದರು.
ಇದಲ್ಲದೆ, ಶಾಲಾ ಮಕ್ಕಳಿಗೆ ಚಿತ್ರ ಬಿಡಿಸುವ ಸ್ಪರ್ಧೆ ಆಯೋಜಿಸಲಾಗಿತ್ತು. ಸುಮಾರು 780 ಮಕ್ಕಳು ಈ ಸ್ಪರ್ಧೆಯಲ್ಲಿ ಭಾಗವಹಿಸಿ ಗಮನಸೆಳೆದರು. ಅಸ್ತ್ರ ಸಂಸ್ಥೆಯ ಲಾಂಚುಲಾಲ್ ಸೇರಿದಂತೆ ಹಲವು ಉದ್ಯಮಿಗಳು ಕಾರ್ಯಕ್ರಮಕ್ಕೆ ಸ್ಪಾನ್ಸರ್ ನೀಡಿದ್ದರು.
Mangalore Kadri kalamela 2025, large people throng to see the event, 13 lakhs collected in two days event.
15-03-25 12:33 pm
HK News Desk
DySP Kanakalakshmi arrested, suicide: ಬೋವಿ ನಿ...
14-03-25 11:11 pm
Swamiji, Bagalkot, Police Video: ದುಡ್ಡು ಪಡೆದು...
14-03-25 08:30 pm
Shivarama Hebbar, S.T. Somashekar, Lingaraj P...
14-03-25 03:39 pm
Ranya Rao Gold Smuggling, Ips Ramchandra Rao:...
14-03-25 02:20 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
15-03-25 01:47 pm
Mangalore Correspondent
Mangalore Student Missing, ,Kidnap, Hitein Bh...
15-03-25 12:35 pm
Mangalore, VHP, NIA, Illegal Arms: ಕರಾವಳಿಯಲ್ಲ...
14-03-25 10:35 pm
Mohan Gowda, Mangalore: ಬಿ.ಸಿ.ರೋಡಿನಲ್ಲಿ ಮಾ.16...
14-03-25 09:39 pm
Mangalore tulu Artist Vivek Madur death: ಕಲಾ...
14-03-25 11:02 am
14-03-25 05:02 pm
HK News Desk
Ccb Police, Firearms, Mangalore crime: ವಾಮಂಜೂ...
13-03-25 06:44 pm
Kothanur Police, Bangalore crime, Murder: ನಾಲ...
11-03-25 07:34 pm
Tanishq showroom, Bihar Robbery: ಬಿಹಾರದಲ್ಲಿ ಹ...
10-03-25 10:48 pm
Actress Ranya Rao, CBI, Gold case; ನಟಿ ರನ್ಯಾ...
09-03-25 05:06 pm