ಬ್ರೇಕಿಂಗ್ ನ್ಯೂಸ್
06-01-25 08:04 pm Mangalore Correspondent ಕರಾವಳಿ
ಉಳ್ಳಾಲ, ಜ.6: ರಾಜ್ಯದಲ್ಲಿ ಎಲ್ಲಾ ಸಮುದಾಯಗಳಿಗೂ ಅಭಿವೃದ್ಧಿ ನಿಗಮಗಳಿವೆ. ಆದರೆ ಯಾವುದೇ ಸರಕಾರ ಬಂದರೂ ಇದುವರೆಗೂ ಬ್ಯಾರಿ ಸಮುದಾಯದ ಅಭಿವೃದ್ಧಿಗೆ ನಿಗಮ ನೀಡಿಲ್ಲ. ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಕೊಡಗು ಜಿಲ್ಲೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬ್ಯಾರಿ ಸಮುದಾಯದವರಿದ್ದು, ಎಲ್ಲಾ ಸಮುದಾಯಕ್ಕೆ ನಿಗಮ ನೀಡಿದಂತೆ ಬ್ಯಾರಿ ಸಮುದಾಯಕ್ಕೂ ನಿಗಮ ನೀಡಬೇಕು ಎಂದು ಉಳ್ಳಾಲ ದರ್ಗಾ ಅಧ್ಯಕ್ಷ ಬಿ.ಜಿ.ಹನೀಫ್ ಹಾಜಿ ರಾಜ್ಯ ಸರಕಾರಕ್ಕೆ ಆಗ್ರಹಿಸಿದ್ದಾರೆ.
ಅಖಿಲ ಭಾರತ ಬ್ಯಾರಿ ಮಹಾಸಭಾ ವತಿಯಿಂದ ಜನವರಿ 8ರಂದು ಮಂಗಳೂರಿನ ಪುರಭವನದಲ್ಲಿ ನಡೆಯಲಿರುವ 'ಬ್ಯಾರಿ ಜಿಲ್ಲಾ ಪ್ರತಿನಿಧಿಗಳ ಸಮಾವೇಶ'ದ ಪೂರ್ವಭಾವಿ ಸೋಮವಾರ ತೊಕ್ಕೊಟ್ಟಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಬ್ಯಾರಿ ಸಮುದಾಯದವರು ವಿದೇಶದಲ್ಲಿ ದುಡಿದರೂ ಅಥವಾ ಊರಿನಲ್ಲೇ ವ್ಯಾಪಾರ ನಡೆಸಿದರೂ ದೇಶದ ಆರ್ಥಿಕತೆಗೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಇತ್ತೀಚಿಗೆ ವಿದೇಶದಲ್ಲೂ ಕೆಲಸ ನಿರ್ವಹಿಸಲು ಸಂಕಷ್ಟ ಎದುರಾಗಿದೆ. ಶಿಕ್ಷಣ ಮತ್ತು ಸರ್ಕಾರಿ ಹುದ್ದೆಗಳನ್ನ ಪಡೆಯುವಲ್ಲಿ ಬ್ಯಾರಿ ಸಮುದಾಯವು ತೀರಾ ಹಿಂದುಳಿದಿದೆ. ಒಬಿಸಿಯಲ್ಲಿ ಈ ಹಿಂದೆ ಶೇ.4ರಷ್ಟು ಮೀಸಲಾತಿ ಮಾತ್ರ ಇತ್ತಾದರೂ ಹಿಂದಿನ ಸರ್ಕಾರ ಅದನ್ನೂ ರದ್ದುಪಡಿಸಿದೆ. ಒಬಿಸಿಯಲ್ಲೂ ಶೇ.10ರಷ್ಟು ಮೀಸಲಾತಿ ಏರಿಕೆ ಮಾಡಬೇಕು. ಬ್ಯಾರಿ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಿದರೆ ಸಮುದಾಯದ ಮಕ್ಕಳು ಉನ್ನತ ಶಿಕ್ಷಣ ಪಡೆಯಲು ಸಾಧ್ಯ. ಈ ಎಲ್ಲಾ ಬೇಡಿಕೆಗಳ ಆಗ್ರಹಕ್ಕಾಗಿ ಜ.8 ರಂದು ನಗರದ ಪುರಭವನದಲ್ಲಿ ಬ್ಯಾರಿ ಸಮುದಾಯದ ಜಿಲ್ಲಾ ಪ್ರತಿನಿಧಿಗಳ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಇದರಲ್ಲಿ ಹೆಚ್ಚಿನ ಸಂಖ್ಯೆಯ ಸಮುದಾಯ ಭಾಂದವರು ಭಾಗವಹಿಸಿ ತಮ್ಮ ಸಮಸ್ಯೆ, ಅಹವಾಲುಗಳನ್ನ ಸಲ್ಲಿಸುವಂತೆ ಹನೀಫ್ ಹಾಜಿ ಹೇಳಿದರು.
ಮೇಲಂಗಡಿ ಮುಹಿಯುದ್ದೀನ್ ಜುಮಾ ಮಸೀದಿ ಅಧ್ಯಕ್ಷ ಮುಸ್ತಫಾ ಅಬ್ದುಲ್ಲಾ ಮಾತನಾಡಿ ಬ್ಯಾರಿ ಸಾಹಿತ್ಯ ಅಕಾಡೆಮಿಯಿಂದ ಸಮುದಾಯದ ಮಕ್ಕಳಿಗೆ ಶಿಕ್ಷಣವಾಗಲಿ, ಇತರ ಸವಲತ್ತುಗಳಾಗಲಿ ಸಿಗುತ್ತಿಲ್ಲ. ಹಾಡುಗಾರರು, ಸಾಹಿತಿಗಳು, ಕಲಾವಿದರಿಗಷ್ಟೇ ಅಕಾಡೆಮಿ ಸೀಮಿತವಾಗಿದೆ. ನಿಗಮ ಸ್ಥಾಪನೆಯಾದರೆ ಸಮುದಾಯದ ಮಕ್ಕಳಿಗೆ ಉನ್ನತ ಶಿಕ್ಷಣ, ಐಎಎಸ್ ಸೇರಿದಂತೆ ಸ್ಪರ್ಧಾತ್ಮಕ ಪರೀಕ್ಷೆಗಳ ಕೋಚಿಂಗ್ ಸೆಂಟರ್, ವೈದ್ಯಕೀಯ ಚಿಕಿತ್ಸೆ, ವಸತಿ ಯೋಜನೆಯಂತಹ ಅನೇಕ ಸವಲತ್ತುಗಳನ್ನ ಪಡೆಯಬಹುದಾಗಿದೆ ಎಂದರು.
ಪ್ರಮುಖರಾದ ಉಸ್ಮಾನ್ ಕಲ್ಲಾಪು, ಖುಬೈಬ್ ತಂಙಳ್, ಮನ್ಸೂರ್ ಮಂಚಿಲ, ಖಲೀಲ್ ಮುಕ್ಕಚ್ಚೇರಿ, ಮಹಮ್ಮದ್ ಇಸ್ಹಾಕ್, ಅಬ್ದುಲ್ ರಹ್ಮಾನ್, ಸಮೀರ್ ಕಲ್ಲಾಪು,ಸದ್ದಾಂ ಹುಸೈನ್, ಶೌಕತ್ ಕೋಟೆಪುರ, ಕೆ.ಎಸ್.ಮೊಯಿದ್ದೀನ್ ಕುಂಞಿ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
Demand for establishment of corporation for Beary community, District convention to be held in Mangalore on January 8th
15-03-25 03:55 pm
HK News Desk
Elephant attack, Belur, Hassan: ಕಾಡಾನೆ ದಾಳಿ ;...
15-03-25 12:33 pm
DySP Kanakalakshmi arrested, suicide: ಬೋವಿ ನಿ...
14-03-25 11:11 pm
Swamiji, Bagalkot, Police Video: ದುಡ್ಡು ಪಡೆದು...
14-03-25 08:30 pm
Shivarama Hebbar, S.T. Somashekar, Lingaraj P...
14-03-25 03:39 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
15-03-25 04:11 pm
Mangalore Correspondent
Dr Vamana Nandavar, Mangalore Death: ತುಳು, ಕನ...
15-03-25 01:47 pm
Mangalore Student Missing, ,Kidnap, Hitein Bh...
15-03-25 12:35 pm
Mangalore, VHP, NIA, Illegal Arms: ಕರಾವಳಿಯಲ್ಲ...
14-03-25 10:35 pm
Mohan Gowda, Mangalore: ಬಿ.ಸಿ.ರೋಡಿನಲ್ಲಿ ಮಾ.16...
14-03-25 09:39 pm
14-03-25 05:02 pm
HK News Desk
Ccb Police, Firearms, Mangalore crime: ವಾಮಂಜೂ...
13-03-25 06:44 pm
Kothanur Police, Bangalore crime, Murder: ನಾಲ...
11-03-25 07:34 pm
Tanishq showroom, Bihar Robbery: ಬಿಹಾರದಲ್ಲಿ ಹ...
10-03-25 10:48 pm
Actress Ranya Rao, CBI, Gold case; ನಟಿ ರನ್ಯಾ...
09-03-25 05:06 pm