ಮಹಾ ಸಿಎಂ ದೇವೇಂದ್ರ ಫಡ್ನವೀಸ್ - ಎಂಎನ್ಎಸ್ ಮುಖ್ಯಸ್ಥ ರಾಜ್ ಠಾಕ್ರೆ ಭೇಟಿ ; ಹೊಸ ರಾಜಕೀಯ ಸಮೀಕರಣದ ಕುತೂಹಲ, ರಾಜಕೀಯ ಚರ್ಚೆ ನಿರಾಕರಿಸಿದ ಠಾಕ್ರೆ 

21-08-25 06:09 pm       HK News Desk   ದೇಶ - ವಿದೇಶ

ಮಹತ್ವದ ಬೆಳವಣಿಗೆಯೊಂದರಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌ ಅವರನ್ನು ಮಹಾರಾಷ್ಟ್ರ ನವನಿರ್ಮಾಣ ಸೇನೆ(ಎಂಎನ್‌ಎಸ್‌) ಮುಖ್ಯಸ್ಥ ರಾಜ್‌ ಠಾಕ್ರೆ ಗುರುವಾರ ಭೇಟಿ ಮಾಡಿದ್ದು ಹೊಸ ರಾಜಕೀಯ ಸಂಚಲನಕ್ಕೆ ಕಾರಣವಾಗಿದೆ.

ಮುಂಬೈ, ಆ.21 : ಮಹತ್ವದ ಬೆಳವಣಿಗೆಯೊಂದರಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌ ಅವರನ್ನು ಮಹಾರಾಷ್ಟ್ರ ನವನಿರ್ಮಾಣ ಸೇನೆ(ಎಂಎನ್‌ಎಸ್‌) ಮುಖ್ಯಸ್ಥ ರಾಜ್‌ ಠಾಕ್ರೆ ಗುರುವಾರ ಭೇಟಿ ಮಾಡಿದ್ದು ಹೊಸ ರಾಜಕೀಯ ಸಂಚಲನಕ್ಕೆ ಕಾರಣವಾಗಿದೆ. ಆದರೆ ಈ ಭೇಟಿ ರಾಜಕೀಯ ಹಿನ್ನೆಲೆಯಿಂದಲ್ಲ, ನಗರ ಯೋಜನೆ ಹಾಗೂ ಸಂಚಾರ ದಟ್ಟಣೆಯ ವಿಷಯಗಳ ಬಗ್ಗೆ ಚರ್ಚೆ ಮಾಡಲು ನಿಗದಿಯಾಗಿತ್ತು ಎಂದು ರಾಜ್‌ ಠಾಕ್ರೆ ಸ್ಪಷ್ಟಪಡಿಸಿದ್ದಾರೆ. 

ಆದರೂ ಬೆಸ್ಟ್ ಕ್ರೆಡಿಟ್ ಸೊಸೈಟಿ ಚುನಾವಣೆಯಲ್ಲಿ ಠಾಕ್ರೆ ಬ್ರ್ಯಾಂಡ್ ಮ್ಯಾಜಿಕ್ ನಡೆಯದೆ ಸೋಲು ಅನುಭವಿಸಿದ ಒಂದು ದಿನದ ನಂತರ, ರಾಜ್ ಠಾಕ್ರೆ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ಅಧಿಕೃತ ವರ್ಷಾ ಬಂಗಲೆಯಲ್ಲಿ ಭೇಟಿಯಾಗಿರುವುದು ಹೊಸ ರಾಜಕೀಯ ಬೆಳವಣಿಗೆಯ ಲೆಕ್ಕಾಚಾರಗಳನ್ನು ತೆರೆದಿಟ್ಟಿದೆ. ವಿಶೇಷವಾಗಿ ಗ್ರೇಟರ್‌ ಮುಂಬೈನಲ್ಲಿ 400 ಮಿ.ಮೀ.  ಮಳೆ ಸುರಿದಿದ್ದು ಇದರಿಂದ ಉಂಟಾಗಿರುವ ಸಮಸ್ಯೆ ಹಾಗೂ ನಗರ ಯೋಜನೆ ಮತ್ತು ಸಂಚಾರ ದಟ್ಟಣೆ ಕುರಿತು ಚರ್ಚಿಸಲು ಭೇಟಿ ನಿಗದಿಯಾಗಿತ್ತು. ಇದರಲ್ಲಿ ಯಾವುದೇ ರಾಜಕೀಯ ಸಮೀಕರಣಗಳಿಲ್ಲ ಎಂದು ರಾಜ್‌ ಠಾಕ್ರೆ ತಿಳಿಸಿದ್ದಾರೆ. 

ಭಾರೀ ಮಳೆಯ ಸಂದರ್ಭ ವಿಪರೀತ ಟ್ರಾಫಿಕ್ ಜಾಮ್ ಇತ್ತು. ಮುಂಬೈನಲ್ಲಿ ಸಂಚಾರದಲ್ಲಿ ಶಿಸ್ತು ಕಾಣುತ್ತಿಲ್ಲ. ಜನ ಸಿಕ್ಕ ಸಿಕ್ಕಲ್ಲಿ ಕಾರುಗಳನ್ನು ನಿಲ್ಲಿಸುತ್ತಿದ್ದಾರೆ. ಈ ಬಗ್ಗೆ ಸರ್ಕಾರ, ಅಧಿಕಾರಿಗಳು ಗಮನ ಹರಿಸುತ್ತಿಲ್ಲ, ಮೂಲಭೂತ ವಿಷಯಗಳತ್ತ ಯಾರೂ ಗಮನ ಹರಿಸುತ್ತಿಲ್ಲ, ಈ ವಿಷಯವನ್ನು ಮುಖ್ಯಮಂತ್ರಿಯವರ ಗಮನಕ್ಕೆ ತರಲಾಗಿದೆ ಎಂದು ರಾಜ್ ಠಾಕ್ರೆ ಹೇಳಿದರು. ಪಾರ್ಕಿಂಗ್ ಸ್ಥಳಗಳನ್ನು ಅಭಿವೃದ್ಧಿಪಡಿಸಬೇಕು ಮತ್ತು ಸರ್ಕಾರ ಅಥವಾ ಪುರಸಭೆಯ ಮಟ್ಟದಲ್ಲಿ ಶಿಸ್ತು ಹೇರಲು ಸಾಧ್ಯವಾದ ಎಲ್ಲ ಕೆಲಸವನ್ನೂ ಮಾಡಬೇಕು ಎಂದು ಎಂಎನ್‌ಎಸ್ ಮುಖ್ಯಸ್ಥ ರಾಜ್‌ ಠಾಕ್ರೆ ಹೇಳಿದರು

In a significant development, Maharashtra Navnirman Sena (MNS) chief Raj Thackeray met Maharashtra Chief Minister Devendra Fadnavis on Thursday, triggering speculation about potential new political alignments. However, Thackeray clarified that the meeting was not political in nature, but focused on urban planning and traffic-related issues in Mumbai.