ಬ್ರೇಕಿಂಗ್ ನ್ಯೂಸ್
05-01-25 10:51 pm Mangalore Correspondent ಕರಾವಳಿ
ಉಳ್ಳಾಲ, ಜ.5: ಉಳ್ಳಾಲ ತಾಲೂಕಿನ ಪ್ರತಿಷ್ಟಿತ ಕೋಟೆಕಾರು ವ್ಯವಸಾಯ ಸೇವಾ ಸಹಕಾರ ಸಂಘದ ಮುಂದಿನ 5 ವರ್ಷಗಳ ಅವಧಿಗೆ ಆಡಳಿತ ನಿರ್ದೇಶಕರ ಚುನಾವಣೆ ಭಾನುವಾರ ನಡೆದಿದ್ದು, ಕೃಷ್ಣ ಶೆಟ್ಟಿ ಕೆಳಗಿನ ಕೋಟೆಕಾರು ಗುತ್ತು ಅವರ ನೇತೃತ್ವದ ಕೋಟೆಕಾರು ಸಹಕಾರ ಅಭಿವೃದ್ಧಿ ಸಮಿತಿಯ ಸಮಾನ ಮನಸ್ಕ ಅಭ್ಯರ್ಥಿಗಳು 12 ಕ್ಷೇತ್ರಗಳಲ್ಲೂ ಸ್ಪರ್ಧಿಸಿ ಗೆದ್ದು ಬೀಗಿದ್ದಾರೆ. 12 ಕ್ಷೇತ್ರದಲ್ಲೂ ಸ್ಫರ್ಧಿಸಿದ್ದ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಖಾತೆ ತೆರೆಯುವಲ್ಲಿ ಮುಗ್ಗರಿಸಿದ್ದಾರೆ.
ಭಾನುವಾರ ಕೋಟೆಕಾರಿನ ಸ್ಟೆಲ್ಲಾ ಮೆರೀಸ್ ಶಾಲೆಯಲ್ಲಿ ಬೆಳಗ್ಗೆ 9 ರಿಂದ 4 ಗಂಟೆಯ ವರೆಗೆ ಸಂಘದ ಸದಸ್ಯರಿಂದ ಮತದಾನ ಪ್ರಕ್ರಿಯೆ ನಡೆದಿದ್ದು, ಸಂಜೆ ವೇಳೆ ಮತ ಎಣಿಕೆ ನಡೆದಿದೆ. ಚುನಾವಣಾ ಅಧಿಕಾರಿಯಾಗಿದ್ದ ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಚೇರಿ ಮಂಗಳೂರು ಇಲ್ಲಿನ ಅಧೀಕ್ಷಕರಾದ ಬಿ.ನಾಗೇಂದ್ರ ಅವರು ಫಲಿತಾಂಶವನ್ನು ಘೋಷಿಸಿದರು. ಫಲಿತಾಂಶದಲ್ಲಿ ಕೋಟೆಕಾರು ಸಹಕಾರ ಅಭಿವೃದ್ಧಿ ಸಮಿತಿಯ ಸಮಾನ ಮನಸ್ಕ 12 ಅಭ್ಯರ್ಥಿಗಳೂ ಜಯ ಗಳಿಸಿದ್ದಾರೆ.
ಸಾಲಗಾರ ಸಾಮಾನ್ಯ ಕ್ಷೇತ್ರದಲ್ಲಿ ಅಬ್ಬುಸಾಲಿ ಕೆ.ಬಿ, ಕೃಷ್ಣಪ್ಪ ಸಾಲ್ಯಾನ್, ಗಂಗಾಧರ ಯು, ರಾಘವ ಉಚ್ಚಿಲ್, ರಾಘವ ಆರ್.ಉಚ್ಚಿಲ್, ಸಾಲಗಾರ ಅನುಸೂಚಿತ ಜಾತಿ ಕ್ಷೇತ್ರದಲ್ಲಿ ಕೃಷ್ಣಪ್ಪ, ಸಾಲಗಾರ ಅನುಸೂಚಿತ ಪಂಗಡ ಕ್ಷೇತ್ರದಲ್ಲಿ ಬಾಬು ನಾಯಕ್ , ಸಾಲಗಾರ ಹಿಂದುಳಿದ ವರ್ಗ "ಎ" ಕ್ಷೇತ್ರದಲ್ಲಿ ಅರುಣ್ ಕುಮಾರ್ ಯು, ಸಾಲಗಾರ ಹಿಂದುಳಿದ ವರ್ಗ "ಬಿ" ಕ್ಷೇತ್ರದಲ್ಲಿ ಕೃಷ್ಣ ಶೆಟ್ಟಿ ಕೆಳಗಿನ ಕೋಟೆಕಾರು ಗುತ್ತು, ಸಾಲಗಾರ ಮಹಿಳಾ ಮೀಸಲು ಸ್ಥಾನ ಕ್ಷೇತ್ರದಲ್ಲಿ ಸುನಿತಾ ಲೋಬೊ, ಸುರೇಖಾ ಚಂದ್ರಹಾಸ್ ಜಯ ಗಳಿಸಿದ್ದಾರೆ.
ಸಾಲಗಾರರಲ್ಲದ ಕ್ಷೇತ್ರದಲ್ಲಿ ಉದಯ ಕುಮಾರ್ ಶೆಟ್ಟಿ ಕೊಂಡಾಣಗುತ್ತು ಜಯ ಗಳಿಸಿದ್ದಾರೆ.
ಮತದಾನ ಕೇಂದ್ರದ ಬಳಿಯಲ್ಲೇ ಕೆಲವರಿಗೆ ಸಂಘದ ಸದಸ್ಯತನದ ನಕಲಿ ಗುರುತಿನ ಕಾರ್ಡ್ ಗಳನ್ನ ನೀಡಿ ಮತದಾನ ನಡೆಸುತ್ತಿರುವ ಬಗ್ಗೆ ಬಿಜೆಪಿ ಕಾರ್ಯಕರ್ತರು ಆಕ್ಷೇಪ ವ್ಯಕ್ತಪಡಿಸಿದ ಘಟನೆ ನಡೆದಿದೆ.
Mangalore Kotekar Samaja Seva Sahakari Sangha bank election, major victory. BJP members thronged to open bank accounts soon after their leaders were announced as winners.
21-08-25 10:31 pm
Bangalore Correspondent
Dharmasthala, Acharya Sri Gunadharanandi Maha...
21-08-25 10:21 pm
ಸೌಹಾರ್ದ ಸಹಕಾರಿ ವಿಧೇಯಕಕ್ಕೆ ಮೇಲ್ಮನೆಯಲ್ಲಿ ಸೋಲು ;...
21-08-25 06:24 pm
"ಧರ್ಮದ ಉಳಿವಿಗಾಗಿ ಧರ್ಮ ಯುದ್ಧ" ; ರಾಜ್ಯದ ಎಲ್ಲ ವ...
21-08-25 06:02 pm
Mandya Police Torture, Suicide: ಪೊಲೀಸ್ ಠಾಣೆಯ...
21-08-25 02:03 pm
21-08-25 06:09 pm
HK News Desk
ಹೈದರಾಬಾದ್ ನಲ್ಲಿ ಕಲಬುರಗಿ ಮೂಲದ 2 ವರ್ಷದ ಮಗು ಸೇರ...
21-08-25 12:54 pm
ಹೆದ್ದಾರಿಯಲ್ಲಿ ಗುಂಡಿಗಳು ಬಿದ್ದಿದ್ದರೆ, ಟ್ರಾಫಿಕ್...
20-08-25 10:56 pm
30 ದಿನ ಜೈಲು ಪಾಲಾದರೆ ಪ್ರಧಾನಿ, ಸಿಎಂ, ಸಚಿವರನ್ನು...
20-08-25 06:40 pm
ದೆಹಲಿ ಸಿಎಂ ರೇಖಾ ಗುಪ್ತಾ ಮೇಲೆ ಆಗಂತುಕನಿಂದ ಹಲ್ಲೆ...
20-08-25 11:01 am
21-08-25 09:35 pm
HK News Desk
Vhp, Mangalore, Sharan Pumpwell: ಗಣೇಶೋತ್ಸವ, ದ...
21-08-25 09:12 pm
FIR, YouTuber Sameer MD, Doota Arrest: ಸಾವಿರಾ...
21-08-25 03:44 pm
MRPL Accident, Mangalore: ಕಾಟಿಪಳ್ಳ ; ಟಿಪ್ಪರ್...
21-08-25 02:05 pm
Mahesh Shetty Timarodi, Udupi Police, BL Sant...
21-08-25 11:57 am
21-08-25 11:00 pm
Mangalore Correspondent
ಶೀಲ ಶಂಕೆ ; ಕ್ರಿಮಿನಾಶಕ ಕೊಡಿಸಿ ಕೊಲೆ, ಪ್ರಿಯಕರನೊ...
21-08-25 10:39 pm
Mangalore, Derlakatte, Robbery, Muthoot finan...
20-08-25 08:10 pm
Mangalore Lucky Scheme Scam Fraud, Wahab Kula...
19-08-25 10:52 pm
ಕಸ್ಟಮ್ಸ್ ಅಧಿಕಾರಿಗಳ ಸೋಗಿನಲ್ಲಿ ಚಿನ್ನದ ವ್ಯಾಪಾರಿಯ...
19-08-25 10:30 pm