ಬ್ರೇಕಿಂಗ್ ನ್ಯೂಸ್
02-01-25 02:09 pm Mangalore Correspondent ಕರಾವಳಿ
ಮಂಗಳೂರು, ಜ.2: ಕರಾವಳಿ ಸೇರಿದಂತೆ ರಾಜ್ಯದಲ್ಲಿ ಈ ಬಾರಿ ತೆಂಗಿನಕಾಯಿ ಇಳುವರಿ ಭಾರೀ ಪ್ರಮಾಣದಲ್ಲಿ ಕುಸಿದಿದೆ. ಹೀಗಾಗಿ ಬೇಡಿಕೆ ಹೆಚ್ಚಿರುವುದರಿಂದ ತೆಂಗಿನಕಾಯಿ ಬೆಲೆಯಲ್ಲಿ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ. ಹಣ ಕೊಡುತ್ತೇವೆ ಎಂದರೂ, ತೆಂಗಿನ ಕಾಯಿ ಸಿಗುತ್ತಾ ಇಲ್ಲ.
ಪ್ರಸ್ತುತ ಹೋಲ್ ಸೇಲ್ ಮಾರುಕಟ್ಟೆಯಲ್ಲಿ ತೆಂಗಿನಕಾಯಿ ಕೆ.ಜಿಗೆ 60 ರೂ. ಇದ್ದರೆ, ಸಾಧಾರಣ ಮಟ್ಟದ ವ್ಯಾಪಾರಸ್ಥರು, ಅಂಗಡಿಗಳಲ್ಲಿ ಕೆ.ಜಿಗೆ 70-75 ರೂ. ಲಗೆ ಮಾರುತ್ತಿದ್ದಾರೆ. ಬಹುತೇಕ ನವೆಂಬರ್, ಡಿಸೆಂಬರ್ ತಿಂಗಳಲ್ಲಿ ತೆಂಗಿನಕಾಯಿ ಕೊಯ್ಲು ಆಗುವುದರಿಂದ ದರ ಕಡಿಮೆ ಆಗಬೇಕಿತ್ತು. ಆದರೆ ಮಂಗಳೂರು, ಕಾಸರಗೋಡು, ಉಡುಪಿ ಭಾಗದಲ್ಲಿ ದರ ಹೆಚ್ಚುತ್ತಲೇ ಇದೆ.
ಇದುವರೆಗೂ ಅಗತ್ಯದಷ್ಟು ತೆಂಗಿನಕಾಯಿ ಕರಾವಳಿ ಜಿಲ್ಲೆಗಳಲ್ಲಿ ಲಭಿಸುತ್ತಿತ್ತು. ಒಂದೆಡೆ ಹಬ್ಬಗಳ ಸೀಸನ್, ಮತ್ತೊಂದು ಕಡೆ ಶಬರಿಮಲೆ ಸೀಸನ್ ಇರುವುದರಿಂದ ತೆಂಗಿನಕಾಯಿಗೆ ಬೇಡಿಕೆ ವಿಪರೀತ ಹೆಚ್ಚಾಗಿದೆ. ತೆಂಗು ಬೆಳೆ ಹೆಚ್ಚಿರುವ ಮಂಡ್ಯ, ತುಮಕೂರಿನಲ್ಲಿಯೂ ಈ ಬಾರಿ ಇಳುವರಿ ಕಡಿಮೆಯಾಗಿದೆ. ಹೀಗಾಗಿ ಆ ಕಡೆಯಿಂದ ಬರುವ ಎಳನೀರು ದರವೂ ಹೆಚ್ಚಾಗಿದೆ.
ಇದೇ ವೇಳೆ, ಕೊಬ್ಬರಿ ಕ್ವಿಂಟಾಲ್ಗೆ 17 ಸಾವಿರ ರೂ.ಗೆ ಏರಿದೆ. ಕೊಬ್ಬರಿ, ತೆಂಗಿನಕಾಯಿ ದರ ಹೆಚ್ಚಿರುವುದರಿಂದ ಮಾರುಕಟ್ಟೆಯಲ್ಲಿ ತೆಂಗಿನೆಣ್ಣೆ ಬೆಲೆಯಲ್ಲೂ ಹೆಚ್ಚಳವಾಗಿದೆ. ಒಂದು ಲೀಟರ್ ತೆಂಗಿನ ಎಣ್ಣೆ ದರ 250 ರೂ. ದಾಟಿದೆ. ಇನ್ನೊಂದೆಡೆ ಬಿಸಿಲ ಝಳ ಹೆಚ್ಚಿರುವುದರಿಂದ ಮಾರುಕಟ್ಟೆಯಲ್ಲಿ ಎಳನೀರಿಗೆ ಭಾರೀ ಬೇಡಿಕೆ ಇದೆ. ಗ್ರಾಮೀಣ ಮಾರುಕಟ್ಟೆಯಲ್ಲಿ ಎಳನೀರು ಒಂದಕ್ಕೆ 40 ರಿಂದ 50 ರೂ. ವರೆಗೆ ಇದ್ದರೆ, ನಗರ ಪ್ರದೇಶಗಳಲ್ಲಿ 65 ರೂ. ವರೆಗೆ ಇದೆ. ಎಳನೀರು ಪೂರೈಕೆಯೂ ಕುಸಿದಿದೆ.
Coconut Prices raise in price for new year Mangalore, 70 per kilo in Dakshina Kannada. Mandya and Tumkuru has seen price drop in coconut.
17-09-26 04:13 pm
HK News Staffer
ಚಿತ್ರರಂಗದ ಸಾರ್ವಕಾಲಿಕ ಶ್ರೇಷ್ಠ ನಟ ಅನಂತನಾಗ್ ಗೆ '...
16-09-26 10:40 pm
Tulu Language, Shivraj Tangadagi: ತುಳುವಿಗೆ 2ನ...
16-09-26 01:51 pm
Pradeep Eshwar, Pratap Simha: ಪೊಲೀಸ್ ಠಾಣೆಗೆ...
15-09-26 09:13 pm
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
17-09-26 08:48 pm
HK News Staffer
Mangalore, DK Shivakumar, Coastal Karnataka,...
17-09-26 08:02 pm
Mangalore, Yathindra Siddaramaiah, Umar Khali...
17-09-26 06:29 pm
ಸಚಿವ ಸಂಪುಟ ಸಭೆಗೆ ಕ್ಷಣಗಣನೆ ; ಪಡೀಲ್ ಜಿಲ್ಲಾಧಿಕಾರ...
17-09-26 05:12 pm
ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಮಸೀದಿ, ಮದರಸಾ ಮೇಲೆ...
17-09-26 09:41 am
17-09-26 02:22 pm
HK News Staffer
Bangalore Murder, Crime: ಪ್ರೀತಿಸಿ ಮದುವೆಯಾಗಿದ್...
17-09-26 01:56 pm
Bangalore kidnap, Crime: ಬೆಂಗಳೂರಿನಲ್ಲಿ ಶಾಕ್...
17-09-26 12:35 pm
Manglore Cyber crime, Stock Market: ಷೇರು ಮಾರ್...
17-09-26 11:45 am
ಬೆಳ್ತಂಗಡಿ; ಗೃಹಪ್ರವೇಶಕ್ಕೆ ಹೋದಾಗ ಮನೆಗೆ ಕನ್ನ, ₹1...
16-09-26 11:18 am