ಬ್ರೇಕಿಂಗ್ ನ್ಯೂಸ್
07-12-24 01:20 pm Mangalore Correspondent ಕರಾವಳಿ
ಮಂಗಳೂರು, ಡಿ.7: ಮಂಗಳೂರಿನ ಮೀನುಗಾರಿಕಾ ಬಂದರಿನಿಂದ ನೇರವಾಗಿ ಉಳ್ಳಾಲದ ಕೋಟೆಪುರಕ್ಕೆ ಸೇತುವೆ ನಿರ್ಮಿಸಬೇಕು. ಆಮೂಲಕ ಬಂದರಿಗೆ ಬರುವ ಸರಕು ವಾಹನಗಳು ಮಂಗಳೂರು ನಗರಕ್ಕೆ ಬರದೆ, ನೇರವಾಗಿ ಉಳ್ಳಾಲದ ಮೂಲಕ ಕೇರಳದ ಕಡೆಗೆ ಸಾಗುವಂತಾಗಬೇಕು ಎನ್ನುವುದು ಉಳ್ಳಾಲ ಕ್ಷೇತ್ರದ ಶಾಸಕ ಯುಟಿ ಖಾದರ್ ಕನಸಾಗಿತ್ತು. ಬೋಳಾರದಿಂದ ಉಳ್ಳಾಲದ ಕೋಟೆಪುರಕ್ಕೆ ಸೇತುವೆ ನಿರ್ಮಿಸುವ ಖಾದರ್ ಪ್ರಸ್ತಾಪಕ್ಕೆ ರಾಜ್ಯ ಸಚಿವ ಸಂಪುಟ ಒಪ್ಪಿಗೆ ನೀಡಿದೆ.
ಬೆಂಗಳೂರಿನಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ನೇತ್ರಾವತಿ ನದಿಗೆ ಅಡ್ಡಲಾಗಿ ಹೊಸತೊಂದು ಸೇತುವೆ ನಿರ್ಮಾಣಕ್ಕೆ ರಾಜ್ಯ ಸರಕಾರ ಆಡಳಿತಾತ್ಮಕ ಮಂಜೂರಾತಿ ನೀಡಿದೆ. ಸುಮಾರು 200 ಕೋಟಿ ರೂ. ವೆಚ್ಚದ ಈ ಯೋಜನೆಗೆ ಸಚಿವ ಸಂಪುಟ ಅನುಮತಿ ನೀಡಿದ್ದು, ಆಮೂಲಕ ಈ ಭಾಗದ ಜನರ ದಶಕದ ಬೇಡಿಕೆಗೆ ಅಸ್ತು ಸಿಕ್ಕಿದೆ.
ಈಗಾಗಲೇ ರಾಷ್ಟ್ರೀಯ ಹೆದ್ದಾರಿ 66ರ ಜೆಪ್ಪಿನಮೊಗರು- ಆಡಂಕುದ್ರು ಮಧ್ಯೆ ಸೇತುವೆ ಇದೆ. ಹಿಂದೆ ಒಂದೇ ಸೇತುವೆ ಇದ್ದ ಜಾಗದಲ್ಲಿ 2012ರ ವೇಳೆಗೆ ಮತ್ತೊಂದು ಸೇತುವೆ ರಚಿಸಿ, ಹೋಗುವುದಕ್ಕೆ ಬರುವುದಕ್ಕೆ ಪ್ರತ್ಯೇಕ ರಸ್ತೆ ಮಾಡಲಾಗಿತ್ತು. ಇದರಿಂದಾಗಿ ಈ ಭಾಗದಲ್ಲಿ ಬಹುತೇಕ ಟ್ರಾಫಿಕ್ ಜಾಮ್ ಕಡಿಮೆಯಾಗಿತ್ತು. ಇದೀಗ ಮಂಗಳೂರಿನ ಮೀನುಗಾರಿಕಾ ಬಂದರು ಇರುವ ಬೋಳಾರ ಅಳಿವೆಬಾಗಿಲಿನ ಸಮೀಪದಲ್ಲೇ ಉಳ್ಳಾಲದ ಕೋಟೆಪುರಕ್ಕೆ ಸಂಪರ್ಕಿಸಲು ಸೇತುವೆ ರಚಿಸಲು ರಾಜ್ಯ ಸರಕಾರ ಅನುಮೋದನೆ ನೀಡಿದೆ. ಕೋಟೆಪುರ- ಬೋಳಾರ ಮಧ್ಯೆ 1400 ಮೀಟರ್ ಉದ್ದಕ್ಕೆ ಸೇತುವೆ ರಚನೆಯಾಗಲಿದೆ.
ಈ ಭಾಗದಲ್ಲಿ ಹೊಸ ಸೇತುವೆ ರಚನೆಯಾದರೆ ಮಂಗಳೂರು ನಗರಕ್ಕೆ ಬಹುತೇಕ ಸರಕು ವಾಹನಗಳ ಎಂಟ್ರಿ ತಪ್ಪಲಿದೆ. ಬಂದರಿಗೆ ಕೇರಳ ಭಾಗದಿಂದ ಬಹಳಷ್ಟು ವಾಹನಗಳು ಬರುತ್ತಿದ್ದು, ಅವೆಲ್ಲ ಹೊಸ ಸೇತುವೆಯಿಂದ ಉಳ್ಳಾಲದ ಮೂಲಕ ಕೇರಳ ಕಡೆಗೆ ಸಾಗಲಿವೆ. ಮಂಗಳೂರು ನಗರಕ್ಕೆ ಎಂಟ್ರಿಯಾಗದೆ ಅಲ್ಲಿನ ಟ್ರಾಫಿಕ್ ಜಾಮ್ ತಪ್ಪಲಿದೆ ಎನ್ನುವುದು ದೂರದೃಷ್ಟಿಯ ಯೋಜನೆ. ಇದರಿಂದ ಉಳ್ಳಾಲ ಪೇಟೆಯ ಅಭಿವೃದ್ಧಿಗೂ ಒತ್ತು ಸಿಗಲಿದ್ದು, ಉಳ್ಳಾಲ – ಮಂಗಳೂರು ಮತ್ತಷ್ಟು ಹತ್ತಿರವಾಗುತ್ತದೆ. ಸಮುದ್ರದಿಂದ ಹತ್ತಿರದಲ್ಲೇ ಈ ಸೇತುವೆ ಇರುವುದರಿಂದ ಪ್ರವಾಸಿಗರು ಕೂಡ ಈ ಸೇತುವೆಯತ್ತ ಆಕರ್ಷಿಸುವ ಸಾಧ್ಯತೆಯಿದೆ. ಇದಲ್ಲದೆ, ಮಂಗಳೂರು- ಉಳ್ಳಾಲದ ನಡುವೆ ರಿಂಗ್ ರೋಡ್ ಆಗಿಯೂ ಹೊಸ ಖದರ್ ಮೂಡಿಸಲಿದೆ.
Approval for construction of another bridge to Netravati from Bunder to Kotepura Ullal says Khader. The cost of this project is estimated to 200 crores.
20-06-26 06:40 pm
HK News Staffer
ಬಿಡದಿ ಟೌನ್ ಶಿಪ್ ನೆಪದಲ್ಲಿ 750 ರೈತ ಕುಟುಂಬಗಳು ಬೀ...
20-06-26 01:33 pm
ಪರಿಷತ್ತಿಗೆ ಅಡ್ಡ ಮತದಾನ ಮಾಡ್ತಾರೆಂದು ಮೊದಲೇ ಗೊತ್ತ...
19-06-26 04:18 pm
ರೈ ಅವರೇ ಧನ ಸಹಾಯ ಮಾಡಿ ಬುರುಡೆ ಗ್ಯಾಂಗ್ ನಡೆಸುತ್ತ...
18-06-26 09:57 pm
ಪರಿಷತ್ ಚುನಾವಣೆ; ಮೈತ್ರಿ ಪಕ್ಷಕ್ಕೆ ತೀವ್ರ ಮುಖಭಂಗ,...
18-06-26 07:15 pm
18-06-26 07:17 pm
HK News Staffer
ಮೋದಿ ನೋಡಲು ಶಾಂತ, ಒಳ್ಳೇ ವ್ಯಕ್ತಿಯಂತೆ ಕಾಣ್ತಾರೆ.....
18-06-26 01:23 pm
ಹೊರ್ಮುಜ್ ಬಿಕ್ಕಟ್ಟು; ಒಮಾನ್ ಕರಾವಳಿಯಲ್ಲಿ ಮತ್ತೊಂದ...
15-06-26 11:18 am
ಬಿರಿಯಾನಿ ಹೆಸರಲ್ಲಿ ಮಹಿಳೆಯ ಮಾನ ಕಳೆದ ಟೆಕ್ಕಿ! ತಮಾ...
14-06-26 09:46 pm
ಸಹಕಾರಿ ಬ್ಯಾಂಕುಗಳಲ್ಲಿ ಸರ್ವಾಧಿಕಾರಕ್ಕೆ ಬ್ರೇಕ್ !...
14-06-26 07:17 pm
20-06-26 10:25 pm
HK News Staffer
ಹಳೆ ಬಂದರು - ಲಕ್ಷದ್ವೀಪ ನಡುವೆ ಬಹುನಿರೀಕ್ಷಿತ ಜೆಟ್...
20-06-26 04:21 pm
ಕರಾವಳಿಯಲ್ಲೇ ಕ್ಯಾಬಿನೆಟ್ ಸಭೆ ; ಪ್ರವಾಸೋದ್ಯಮ ಅಭಿ...
19-06-26 09:05 pm
ಬೆಂಗಳೂರು -ಮಂಗಳೂರು 5 ಗಂಟೆ ಪ್ರಯಾಣದ ಕನಸಿಗೆ ಬ್ರೇಕ...
19-06-26 07:48 pm
ಬಂಗ್ಲೆಗುಡ್ಡೆ ಅಸ್ಥಿಪಂಜರಗಳ ಗುರುತು ಪತ್ತೆಗಿಳಿದ ಎಸ...
19-06-26 03:31 pm
20-06-26 09:13 pm
HK News Staffer
ಸೂಲಿಬೆಲೆಯಲ್ಲಿ ಭೀಕರ ಅಪಘಾತ ; ಬಿಎಂಟಿಸಿ ಬಸ್ ಡ್ರೈ...
20-06-26 04:43 pm
ಬೆಂಗಳೂರಿನಲ್ಲಿ ಕಳ್ಳ ಪೊಲೀಸ್ ; ಕೇರಳದ ಉದ್ಯಮಿಗಳನ್ನ...
19-06-26 09:07 pm
ಮೊಬೈಲ್ ಕದ್ದು ಓಡುತ್ತಿದ್ದಾಗಲೇ ಕುಸಿದು ಬಿದ್ದು ಕಳ್...
19-06-26 08:30 pm
ಕೋಡಿ ಬೀಚ್ನಲ್ಲಿ ಬೆಂಗಳೂರು ಮೂಲದ ಯುವಕ ಸಮುದ್ರ ಪಾಲ...
19-06-26 05:47 pm