ಬ್ರೇಕಿಂಗ್ ನ್ಯೂಸ್
03-12-24 11:05 pm Mangalore Correspondent ಕರಾವಳಿ
ಮಂಗಳೂರು, ಡಿ.3: ಮಂಗಳೂರಿನಲ್ಲಿ ನಡೆಯುತ್ತಿರುವ ಫ್ರಾಡ್ ಸ್ಕೀಮ್ ಗಳ ಬಗ್ಗೆ ಉಪ ಲೋಕಾಯುಕ್ತ ಜಸ್ಟಿಸ್ ವೀರಪ್ಪ ಅವರು ಕಳವಳ ವ್ಯಕ್ತಪಡಿಸಿದ್ದಾರೆ. ಸ್ಕೀಮ್ ನಡೆಸುವವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸುವಂತೆ ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಅವರಿಗೆ ಸೂಚಿಸಿದ್ದಾರೆ.
ಎರಡು ದಿನಗಳ ಕಾಲ ಸರ್ಕಾರಿ ಅಧಿಕಾರಿಗಳ ವಿರುದ್ಧ ನೂರಾರು ದೂರುಗಳನ್ನು ಸ್ವೀಕರಿಸಿದ ಅವರು ಮಂಗಳವಾರ ಸಂಜೆ ಸುದ್ದಿಗೋಷ್ಟಿ ನಡೆಸಿ ಮಾಹಿತಿ ನೀಡಿದ್ದಾರೆ.
ಬೆಂಗಳೂರು ಮೊದಲು ಗಾರ್ಡನ್ ಸಿಟಿ ಆಗಿತ್ತು. ಈಗ ಗಾರ್ಬೇಜ್ ಸಿಟಿ ಆಗಿದೆ. ಹಿಂದೆ ಸಾವಿರ ಕೆರೆ ಇತ್ತು, ಈವಾಗ ಅಲ್ಲಿ ನೂರು ಕೆರೆನೂ ಇಲ್ಲ. ಇದರಿಂದಾಗಿ ಗಾರ್ಡನ್ ಸಿಟಿ ಹಾಳಾಗಿ ಹೋಗಿದೆ ಎಂದು ಹೇಳಿದ ಅವರು, ಪಚ್ಚನಾಡಿ ಕಸ ವಿಲೇವಾರಿ ಘಟಕಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇನೆ. ಘಟಕದಲ್ಲಿ 9 ಲಕ್ಷ ಟನ್ ಕಸದ ರಾಶಿ ಬಾಕಿ ಉಳಿದಿದ್ದು ಈವರೆಗೆ ಕೇವಲ ಒಂದು ಲಕ್ಷ ಟನ್ ಕಸವನ್ನು ವಿಲೇವಾರಿ ಮಾಡಲಾಗಿದೆ. ಉಳಿದ ಕಸ ವಿಲೇವಾರಿಗೆ ಸೂಕ್ತ ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿದೆ. ಈ ಕುರಿತು ಲೋಕಾಯುಕ್ತದಿಂದ ಸುಮೊಟೋ ಕೇಸ್ ದಾಖಲಿಸುತ್ತೇವೆ ಎಂದರು.
ವಿದ್ಯಾರ್ಥಿ ನಿಲಯ, ಕಾರಾಗೃಹ ಸೇರಿದಂತೆ ಸರಕಾರಿ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಅಗತ್ಯ ಸೌಲಭ್ಯಗಳನ್ನು ಅಳವಡಿಸಲು ಸೂಚನೆ ನೀಡಲಾಗಿದೆ. ಅಲ್ಲದೆ, ವೈದ್ಯರು ಹೊರಗಡೆ ಚೀಟಿ ಬರೆದು ಕೊಡದಂತೆ ಸೂಚಿಸಿದ್ದೇನೆ. ಸರ್ಕಾರಿ ಆಸ್ಪತ್ರೆಗೆ ಬಡ ರೋಗಿಗಳು ಬರುತ್ತಿದ್ದು ಅವರಿಗೆ ಚೀಟಿ ಕೊಟ್ಟು ಹೊರಗಡೆ ಕಳಿಸುವುದು ತಪ್ಪು. ಅದರಿಂದ ಸರ್ಕಾರದ ಆಸ್ಪತ್ರೆ ಉದ್ದೇಶ ಈಡೇರುವುದಿಲ್ಲ ಎಂದರು.
ಸಾರ್ವಜನಿಕ ಅಹವಾಲು ಕುಂದು ಕೊರತೆ ಸಭೆಯಲ್ಲಿ 193 ದೂರುಗಳು ಬಂದಿವೆ. ಈ ಪೈಕಿ 81 ದೂರುಗಳನ್ನು ಸ್ಥಳದಲ್ಲೇ ವಿಲೇವಾರಿ ಮಾಡಲಾಗಿದೆ ಎಂದ ಉಪ ಲೋಕಾಯುಕ್ತರು, ಭ್ರಷ್ಟ ಅಧಿಕಾರಿಗಳನ್ನು ಟ್ರಾಪ್ ಮಾಡುವ ಲೋಕಾಯುಕ್ತ ಅಧಿಕಾರಿಗಳ ಮೇಲೆಯೂ ನಿಗಾ ಇಡಲಾಗುತ್ತಿದೆ. ಲೋಕಾಯುಕ್ತ ಅಧಿಕಾರಿಗಳನ್ನು ನಾವೇ ಟ್ರಾಕ್ ಮಾಡುತ್ತಿದ್ದೇವೆ. ಈಗಾಗಲೇ ಸುಮಾರು ಅಧಿಕಾರಿಗಳನ್ನು ಸಂಸ್ಥೆಯಿಂದಲೇ ಹೊರಗೆ ಹಾಕಿದ್ದೇವೆ ಎಂದರು.
ಲೋಕಾಯುಕ್ತ ಅಧಿಕಾರಿ ಭ್ರಷ್ಟಾಚಾರದಲ್ಲಿ ತೊಡಗಿರುವ ಬಗ್ಗೆ ಮಾಹಿತಿ ಬಂದರೆ ತನಿಖೆ ನಡೆಸುತ್ತೇವೆ. ಅಂಥವರ ಮೇಲೆ ಕಾನೂನು ಬದ್ಧವಾಗಿ ಕಠಿಣ ಕ್ರಮ ಕೈಗೊಳ್ಳುತ್ತೇವೆ. ನಾವು ಲೋಕಾಯುಕ್ತ ಪೊಲೀಸರನ್ನೂ ಬಿಡಲ್ಲಾ, ಲೋಕಲ್ ಪೊಲೀಸರನ್ನು ಬಿಡಲ್ಲಾ.. ಕೇವಲ ಮಾಹಿತಿ ಬಂದರೆ ಸಾಕು ಸುಮೊಟೋ ಕೇಸು ಹಾಕುತ್ತೇವೆ ಎಂದು ಹೇಳಿದರು.
Fraud illegal lucky draw companies in Mangalore, Upa Lokayukta Justice Veerappa orders for FIR to police commissioner Anupam Agarwal
15-03-25 09:18 pm
HK News Desk
Mangalore, Tamil actor Prabhu Deva, Kukke Sub...
15-03-25 03:55 pm
Elephant attack, Belur, Hassan: ಕಾಡಾನೆ ದಾಳಿ ;...
15-03-25 12:33 pm
DySP Kanakalakshmi arrested, suicide: ಬೋವಿ ನಿ...
14-03-25 11:11 pm
Swamiji, Bagalkot, Police Video: ದುಡ್ಡು ಪಡೆದು...
14-03-25 08:30 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
15-03-25 10:00 pm
Mangalore Correspondent
Mangalore court, Moral Police, Acquit: ಹಿಂದು...
15-03-25 08:32 pm
Mangalore Mary Hill, Boy Death; ಮೇರಿಹಿಲ್ ; ಏಳ...
15-03-25 04:11 pm
Dr Vamana Nandavar, Mangalore Death: ತುಳು, ಕನ...
15-03-25 01:47 pm
Mangalore Student Missing, ,Kidnap, Hitein Bh...
15-03-25 12:35 pm
14-03-25 05:02 pm
HK News Desk
Ccb Police, Firearms, Mangalore crime: ವಾಮಂಜೂ...
13-03-25 06:44 pm
Kothanur Police, Bangalore crime, Murder: ನಾಲ...
11-03-25 07:34 pm
Tanishq showroom, Bihar Robbery: ಬಿಹಾರದಲ್ಲಿ ಹ...
10-03-25 10:48 pm
Actress Ranya Rao, CBI, Gold case; ನಟಿ ರನ್ಯಾ...
09-03-25 05:06 pm