ಬ್ರೇಕಿಂಗ್ ನ್ಯೂಸ್
03-12-24 10:11 pm Mangalore Correspondent ಕರಾವಳಿ
ಮಂಗಳೂರು, ಡಿ.3: ಮೂಡುಬಿದ್ರೆ ಬಳಿಯ ನಿಡ್ಡೋಡಿಯಲ್ಲಿ ಅಕ್ರಮವಾಗಿ ಮರಳು ಮಿಶ್ರಿತ ಮಣ್ಣನ್ನು ಆಂಧ್ರಪ್ರದೇಶಕ್ಕೆ ಒಯ್ಯುತ್ತಿದ್ದಾರೆಂದು ಮಾಹಿತಿ ಆಧರಿಸಿ ಉಪ ಲೋಕಾಯುಕ್ತ ಜಸ್ಟಿಸ್ ವೀರಪ್ಪ ಅವರು ಬೆಳ್ಳಂಬೆಳಗ್ಗೆ ದಾಳಿ ನಡೆಸಿದ್ದರು. ಅಧಿಕಾರಿಗಳು ದಾಳಿ ನಡೆಸಿದ್ದನ್ನು ನೋಡಿ ಅಲ್ಲಿದ್ದ ಕಾರ್ಮಿಕರು ಯಂತ್ರಗಳನ್ನು ಬಿಟ್ಟು ಪರಾರಿಯಾಗಿದ್ದಾರೆ.
ಲೈಸನ್ಸ್ ಇಲ್ಲದೆ ಕೋರೆ ನಡೆಸುತ್ತಿದ್ದಾರೆಂದು ನೀಡಿದ್ದ ದೂರನ್ನು ಆಧರಿಸಿ ಲೋಕಾಯುಕ್ತ ಅಧಿಕಾರಿಗಳೊಂದಿಗೆ ದಾಳಿ ನಡೆಸಲಾಗಿತ್ತು. ಪಟ್ಟಾ ಜಮೀನಿನಲ್ಲಿ ಮಣ್ಣು ಸಮತಟ್ಟು ಮಾಡಲೆಂದು ಪರವಾನಗಿ ಪಡೆದು ಕೋರೆ ಮಾಡಲಾಗಿದ್ದು, ಮಣ್ಣನ್ನು ಅಕ್ರಮವಾಗಿ ಹೊರ ರಾಜ್ಯಗಳಿಗೆ ಸಾಗಿಸುತ್ತಿರುವುದಾಗಿ ಆರೋಪ ಕೇಳಿಬಂದಿದೆ. ಈ ಬಗ್ಗೆ ಪ್ರಕರಣ ದಾಖಲಿಸಿ ಯಂತ್ರೋಪಕರಣಗಳನ್ನು ವಶಕ್ಕೆ ಪಡೆಯುವಂತೆ ಮೂಡುಬಿದ್ರೆ ಪೊಲೀಸರಿಗೆ ಉಪ ಲೋಕಾಯುಕ್ತರು ಸೂಚನೆ ನೀಡಿದ್ದಾರೆ.
ವಿಶೇಷ ಅಂದ್ರೆ, ದಾಳಿ ಸಂದರ್ಭದಲ್ಲಿ ಗಣಿ ಇಲಾಖೆಯ ಜಿಲ್ಲಾ ಉಪ ನಿರ್ದೇಶಕಿ ಕೃಷ್ಣವೇಣಿ ಅವರೂ ಇದ್ದರು. ಇತ್ತೀಚೆಗಷ್ಟೇ ಮಂಗಳೂರು, ಬೆಂಗಳೂರಿನಲ್ಲಿ ಅಕ್ರಮ ಆಸ್ತಿ ಮಾಡಿದ್ದಾರೆಂದು ಲೋಕಾಯುಕ್ತ ಅಧಿಕಾರಿಗಳೇ ಈಕೆಯ ಮನೆ, ಕಚೇರಿಗಳಿಗೆ ದಾಳಿ ನಡೆಸಿದ್ದರು. ಬೆಂಗಳೂರಿನಲ್ಲಿ ಎರಡು ಮನೆ ಸೇರಿದಂತೆ 11 ಕೋಟಿಗೂ ಹೆಚ್ಚು ಆಸ್ತಿ ಇರುವ ಬಗ್ಗೆ ಕೇಸು ದಾಖಲು ಮಾಡಿತ್ತು. ಮೇಲ್ನೋಟಕ್ಕೆ ಭ್ರಷ್ಟಾಚಾರ ಮಾಡಿದ್ದಾರೆಂದು ಆರೋಪಕ್ಕೀಡಾದ ಅಧಿಕಾರಿಯೇ ಇಲ್ಲಿ ಗಣಿ ಇಲಾಖೆಯ ಅಧಿಕಾರಿಯಾಗಿ ಉಪ ಲೋಕಾಯುಕ್ತರ ದಾಳಿಯ ವೇಳೆ ಉಪಸ್ಥಿತಿ ಇದ್ದರು.
ಉಪ ಲೋಕಾಯುಕ್ತರು ಅಕ್ರಮ ಕೋರೆಯ ಬಗ್ಗೆ ಪ್ರಶ್ನೆ ಮಾಡಿದಾಗ, ತಾಲೂಕು ಮಟ್ಟದ ಅಧಿಕಾರಿಯೊಬ್ಬರು ಇಲ್ಲಿಂದ ಮಣ್ಣನ್ನು ಎತ್ತಿ ಆಂಧ್ರಕ್ಕೆ ಒಯ್ಯುತ್ತಿದ್ದಾರೆ, ಆಂಧ್ರದಲ್ಲಿ ಸಿಮೆಂಟ್ ಮಿಕ್ಸಿಂಗ್ ಮಾಡಲು ಈ ಮಣ್ಣನ್ನು ಬಳಸುತ್ತಿದ್ದಾರೆ. ಅಲ್ಲಿ ಲ್ಯಾಟರೈಟ್ ಸಿಗ್ತಾ ಇಲ್ಲವೆಂದು ಇಲ್ಲಿನ ಮಣ್ಣು ಬಳಸುತ್ತಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಈ ವೇಳೆ, ಗಣಿ ಇಲಾಖೆಯ ಮಹಿಳಾ ಅಧಿಕಾರಿ ಕೃಷ್ಣವೇಣಿಯನ್ನು ಉಪ ಲೋಕಾಯುಕ್ತರು ಪ್ರಶ್ನೆ ಮಾಡಿದ್ದು, ಏನ್ರೀ ನಿಮ್ಮ ಗಮನಕ್ಕೆ ಬಂದಿರಲಿಲ್ವಾ. ನಿಮ್ಮ ಹೆಡ್ ಯಾರಮ್ಮಾ ಎಂದು ಕೇಳಿದ್ದಾರೆ. ಸ್ಟಾಪ್ ಮಾಡಲು ಏನ್ ಮಾಡಿದ್ದೀರಾ ಎಂದು ಕೇಳಿದಾಗ, ಈಗ ಸ್ಟಾಪ್ ಆಗಿದೆ ಸರ್. ಇನ್ನು ಕೋರ್ಟಿಗೆ ಹಾಕಬೇಕು ಎಂದು ಹೇಳುತ್ತಾರೆ. ವಾಹನ ಬರದಂತೆ ರಸ್ತೆ ಬಂದ್ ಮಾಡಿದ್ದೀರಾ ನೀವು ಎಂದು ಲೋಕಾಯುಕ್ತ ಎಸ್ಪಿ ನಟರಾಜ್ ಪ್ರಶ್ನೆ ಮಾಡಿದ್ದಾರೆ.
ಆಕೆ ಕೇಸ್ ಮಾಡ್ತೀನಿ ಸರ್ ಎಂದು ಹೇಳಿದಾಗ ಗರಂ ಆದ ಜಸ್ಟಿಸ್ ವೀರಪ್ಪ, ಪ್ರತಿ ಬಾರಿಯೂ ಕೇಸ್ ಮಾಡ್ತೀನಿ ಅಂದ ಮಾತ್ರಕ್ಕೆ ಮುಗಿಯೋದಿಲ್ಲ. ಕೇಸ್ ಮಾಡಿ ಏನ್ ಮಾಡಿದ್ದೀರಿ.. ಅವರಿಂದ ಫೈನ್ ರಿಕವರಿ ಮಾಡಿದ್ದೀರಾ.. ಭೂಮಿ ರಕ್ಷಣೆ ಮಾಡೋಕೆ ಏನು ಮಾಡಿದ್ದೀರಾ.. ನೀವು ಮಗು ಅಳ್ತಾ ಇದೆಯಂದು ಹೇಳಿದಂಗಿದೆ. ಮಗು ಅಳದೇ ಇರಲು ಏನು ಮಾಡಿದ್ದೀರಾ ಎಂದರೆ ಕೇಸ್ ಹಾಕಿದೆ ಅಂತೀರಾ.. ನಿಮ್ಮದೆಲ್ಲಾ ಅಡ್ಜಸ್ಟ್ ಮೆಂಟ್ ಆಗಿಹೋಯ್ತಾ.. ಇಷ್ಟೊಂದು ಆಳವಾಗಿ ಹೊಂಡ ತೋಡಿ ಮಾಡಿಟ್ಟಿದ್ದಾರೆ. ಹಿಂಗಾದ್ರೆ ಹೇಗೆ.. ಪರಿಸರಕ್ಕೆ ಎಫೆಕ್ಟ್ ಆಗಲ್ವಾ ಎಂದು ಜೋರು ಮಾಡಿದ್ದಾರೆ. ಸುಮೊಟೋ ಕೇಸು ಹಾಕಿ ಕ್ರಮ ಜರುಗಿಸುವಂತೆ ಪೊಲೀಸರಿಗೆ ಸೂಚನೆ ನೀಡಿದ್ದಾರೆ.
ಈ ರೀತಿ ಗುಂಡಿ ತೋಡಿದರೆ ಇಲ್ಲಿನ ಜನರೇನು ಮಾಡಬೇಕ್ರೀ.. ಮರಗಳ ಸ್ಥಿತಿ ಏನಾಗಬೇಕು. ಇದರಿಂದ ಪರಿಸರ ಅಸಮತೋಲನಕ್ಕೆ ಕಾರಣವಾಗುತ್ತದೆ ಎಂದು ಜಸ್ಟಿಸ್ ವೀರಪ್ಪ ಅಸಮಾಧಾನ ವ್ಯಕ್ತಪಡಿಸಿದರು. ಇದೇ ವೇಳೆ, ಇಂಥ ಗುಂಡಿಗಳಲ್ಲಿ ಕೆಲವೊಮ್ಮೆ ಮಕ್ಕಳು ಆಟವಾಡಲು ಬಂದು ಜೀವ ಕಳಕೊಳ್ಳುತ್ತಿದ್ದಾರೆಂದು ಸ್ಥಳೀಯರು ದೂರು ಹೇಳಿಕೊಂಡರು. ಸ್ಥಳದಲ್ಲಿ ಸಮತಟ್ಟು ಮಾಡಲೆಂದು ಖಾಸಗಿ ವ್ಯಕ್ತಿಗಳು ಲೈಸನ್ಸ್ ಪಡೆದು ನೂರು ಅಡಿ ಆಳಕ್ಕೆ ಗುಂಡಿ ಮಾಡಿಟ್ಟಿದ್ದಾರೆ. ಎಕರೆಗಟ್ಟಲೆ ಜಾಗದಲ್ಲಿ ಗುಂಡಿ ತೋಡಲಾಗಿದ್ದು, ಮಣ್ಣನ್ನು ಅಕ್ರಮವಾಗಿ ಹೊರ ರಾಜ್ಯಗಳಿಗೆ ಒಯ್ದು ದಂಧೆ ನಡೆಸುತ್ತಿದ್ದಾರೆ.
Mangalore Upa Lokayukta Justice B Veerappa slams mines geology officer Krishnaveni over illegal mining. Veerappa who visited Nidodi illegal mining area slammed the officer.
15-03-25 09:18 pm
HK News Desk
Mangalore, Tamil actor Prabhu Deva, Kukke Sub...
15-03-25 03:55 pm
Elephant attack, Belur, Hassan: ಕಾಡಾನೆ ದಾಳಿ ;...
15-03-25 12:33 pm
DySP Kanakalakshmi arrested, suicide: ಬೋವಿ ನಿ...
14-03-25 11:11 pm
Swamiji, Bagalkot, Police Video: ದುಡ್ಡು ಪಡೆದು...
14-03-25 08:30 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
15-03-25 10:00 pm
Mangalore Correspondent
Mangalore court, Moral Police, Acquit: ಹಿಂದು...
15-03-25 08:32 pm
Mangalore Mary Hill, Boy Death; ಮೇರಿಹಿಲ್ ; ಏಳ...
15-03-25 04:11 pm
Dr Vamana Nandavar, Mangalore Death: ತುಳು, ಕನ...
15-03-25 01:47 pm
Mangalore Student Missing, ,Kidnap, Hitein Bh...
15-03-25 12:35 pm
14-03-25 05:02 pm
HK News Desk
Ccb Police, Firearms, Mangalore crime: ವಾಮಂಜೂ...
13-03-25 06:44 pm
Kothanur Police, Bangalore crime, Murder: ನಾಲ...
11-03-25 07:34 pm
Tanishq showroom, Bihar Robbery: ಬಿಹಾರದಲ್ಲಿ ಹ...
10-03-25 10:48 pm
Actress Ranya Rao, CBI, Gold case; ನಟಿ ರನ್ಯಾ...
09-03-25 05:06 pm