ಬ್ರೇಕಿಂಗ್ ನ್ಯೂಸ್
28-11-24 02:13 pm Mangalore Correspondent ಕರಾವಳಿ
ಬೆಳ್ತಂಗಡಿ, ನ.28: ಪ್ರೀತಿಸುತ್ತಿದ್ದ ಯುವಕ ಮದುವೆಯಾಗಲು ನಿರಾಕರಿಸಿದ್ದಾನೆಂದು ನೊಂದುಕೊಂಡ ಅಪ್ರಾಪ್ತ ಯುವತಿಯೊಬ್ಬಳು ಇಲಿ ಪಾಷಾಣ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳ್ತಂಗಡಿ ತಾಲೂಕಿನ ಮಿತ್ತಬಾಗಿಲು ಗ್ರಾಮದಲ್ಲಿ ನಡೆದಿದೆ.
ಹೃಷ್ವಿ(17) ಇಲಿ ಪಾಷಾಣ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಯುವತಿ. ಈಕೆ ನ.20 ರಂದು ವಿಷ ಸೇವಿಸಿದ್ದು ಚಿಕಿತ್ಸೆ ಫಲಕಾರಿಯಾಗದ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾಳೆ. ಈಕೆ ತನ್ನ ಸಂಬಂಧಿ ಚಾರ್ಮಾಡಿ ನಿವಾಸಿ ಪ್ರವೀಣ್ ಎಂಬಾತನನ್ನು ಪ್ರೀತಿಸುತ್ತಿದ್ದು ಮದುವೆ ಆಗುವುದಾಗಿ ನಂಬಿಸಿ ಒಟ್ಟಿಗೆ ತಿರುಗಾಡಿದ್ದರು. ಬಳಿಕ ಮದುವೆ ಆಗುವುದಿಲ್ಲ ಎಂದು ಪ್ರವೀಣ್ ಮೋಸ ಮಾಡಿದ್ದು ಇದರಿಂದ ನೊಂದ ಯುವತಿ ಸಾವಿಗೆ ಶರಣಾಗಿದ್ದಾಳೆ.
ಇವರ ಲವ್ ಆಕೆಯ ಮನೆಯವರಿಗೂ ಗೊತ್ತಿತ್ತು. ಮದುವೆ ಮಾಡಿಕೊಡುವುದಕ್ಕೂ ಒಪ್ಪಿದ್ದರು ಎನ್ನಲಾಗಿದೆ. ಆದರೆ 18 ವರ್ಷ ಪೂರ್ತಿಯಾಗದ ಕಾರಣ ಒಂದು ವರ್ಷದ ಬಳಿಕ ಮದುವೆ ಮಾಡಿ ಕೊಡೋದಾಗಿ ಮನೆಯವರು ಹೇಳಿದ್ದರಂತೆ. ಈ ನಡುವೆ, ಕೆಲವು ವಾರಗಳಿಂದ ಪ್ರವೀಣ್ ಯುವತಿ ಜೊತೆ ಸಂಪರ್ಕ ಕಟ್ ಮಾಡಿದ್ದು ನಿನ್ನನ್ನು ಮದುವೆಯಾಗೋದಿಲ್ಲ. ಲವ್ ಬ್ರೇಕಪ್ ಮಾಡುತ್ತೇನೆ ಅಂದಿದ್ನಂತೆ. ಇದರಿಂದ ನೊಂದ ಯುವತಿ ನಾನು ಸಾಯ್ತೀನಿ ಅಂತ ವಾಟ್ಸಪ್ ನಲ್ಲಿ ಮೆಸೇಜ್ ಮಾಡಿದ್ದಳು. ಆದರೆ ಯುವಕ ಅದನ್ನು ಕ್ಯಾರ್ ಮಾಡಿರಲಿಲ್ಲ.
ಇದರ ಬೆನ್ನಲ್ಲೇ ಮನೆಯಲ್ಲಿ ಇಲಿಗೆ ಹಾಕುವ ವಿಷವನ್ನು ಕುಡಿದಿದ್ದು ಅಸ್ವಸ್ಥಗೊಂಡಿದ್ದಳು. ಇತ್ತ ಆಸ್ಪತ್ರೆಯಲ್ಲಿ ಯುವತಿ ಸಾವನ್ನಪ್ಪುತ್ತಲೇ ಪ್ರವೀಣ್ ಮೊಬೈಲ್ ಸ್ವಿಚ್ ಆಫ್ ಮಾಡಿದ್ದು ಪರಾರಿಯಾಗಿದ್ದಾನೆ. ಆರೋಪಿ ಪ್ರವೀಣ್ ವಿರುದ್ಧ ಬೆಳ್ತಂಗಡಿ ಠಾಣೆಗೆ ಯುವತಿ ತಾಯಿ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ. ಕ್ಷಣಿಕ ಸಿಟ್ಟಿಗೆ ಬುದ್ಧಿ ಕೊಟ್ಟು ಯುವತಿ ತನ್ನ ಬಾಳು ಹಾಳು ಮಾಡಿಕೊಂಡಿದ್ದಾಳೆ. ಸಾಕಿ ಸಲಹಿದ ಹೆತ್ತವರಿಗೆ ಶಾಕ್ ನೀಡಿದ್ದಾಳೆ.
Belthangady suicide, 17 year old girl dies after love break up, case filed against boy. A teenaged girl who had attempted suicide has succumbed at the hospital on November 26. The deceased is Rishi (17), daughter of Rajesh-Aruna couple hailing from Mittabagilu Nelligudde.
15-03-25 09:18 pm
HK News Desk
Mangalore, Tamil actor Prabhu Deva, Kukke Sub...
15-03-25 03:55 pm
Elephant attack, Belur, Hassan: ಕಾಡಾನೆ ದಾಳಿ ;...
15-03-25 12:33 pm
DySP Kanakalakshmi arrested, suicide: ಬೋವಿ ನಿ...
14-03-25 11:11 pm
Swamiji, Bagalkot, Police Video: ದುಡ್ಡು ಪಡೆದು...
14-03-25 08:30 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
15-03-25 10:00 pm
Mangalore Correspondent
Mangalore court, Moral Police, Acquit: ಹಿಂದು...
15-03-25 08:32 pm
Mangalore Mary Hill, Boy Death; ಮೇರಿಹಿಲ್ ; ಏಳ...
15-03-25 04:11 pm
Dr Vamana Nandavar, Mangalore Death: ತುಳು, ಕನ...
15-03-25 01:47 pm
Mangalore Student Missing, ,Kidnap, Hitein Bh...
15-03-25 12:35 pm
14-03-25 05:02 pm
HK News Desk
Ccb Police, Firearms, Mangalore crime: ವಾಮಂಜೂ...
13-03-25 06:44 pm
Kothanur Police, Bangalore crime, Murder: ನಾಲ...
11-03-25 07:34 pm
Tanishq showroom, Bihar Robbery: ಬಿಹಾರದಲ್ಲಿ ಹ...
10-03-25 10:48 pm
Actress Ranya Rao, CBI, Gold case; ನಟಿ ರನ್ಯಾ...
09-03-25 05:06 pm