ಬ್ರೇಕಿಂಗ್ ನ್ಯೂಸ್
28-11-24 01:56 pm Mangalore Correspondent ಕರಾವಳಿ
ಮಂಗಳೂರು, ನ.28: ರಸ್ತೆ ದುರವಸ್ಥೆ ಬಗ್ಗೆ ಪ್ರತಿಭಟನೆ ನಡೆಸಿದ್ದಕ್ಕೆ ಸಾಮಾಜಿಕ ಹೋರಾಟಗಾರ ಮುನೀರ್ ಕಾಟಿಪಳ್ಳ ವಿರುದ್ಧ ಎಫ್ಐಆರ್ ಹಾಕಿರುವುದನ್ನು ವಿರೋಧಿಸಿ ಮಾಜಿ ಸಚಿವ ರಮಾನಾಥ ರೈ ಮುಖ್ಯಮಂತ್ರಿಗೆ ದೂರು ಕೊಟ್ಟಿದ್ದಾರೆ. ಬುಧವಾರ ಬೆಂಗಳೂರಿಗೆ ತೆರಳಿದ್ದ ಅವರು ಮಂಗಳೂರು ಪೊಲೀಸ್ ಕಮಿಷನರ್ ವಿರುದ್ಧ ದೂರು ನೀಡಿದ್ದಾರೆಂದು ತಿಳಿದುಬಂದಿದೆ.
ಕಮ್ಯುನಿಸ್ಟ್ ಸಂಘಟನೆಯವರು ಕರಾವಳಿಯಲ್ಲಿ ನಮ್ಮ ಪರವಾಗಿರುವವರು. ಜನಪರ ವಿಚಾರದಲ್ಲಿ ಪ್ರತಿಭಟನೆಗಳಲ್ಲಿ ಭಾಗವಹಿಸುತ್ತಾರೆ. ಇಂಥ ಸಂದರ್ಭದಲ್ಲಿ ಅವರ ಮೇಲೆ ಪದೇ ಪದೇ ಎಫ್ಐಆರ್ ಹಾಕುವುದು ಸರಿಯಲ್ಲ. ನಮ್ಮ ಮಾತನ್ನು ಕೇಳದ ಕಮಿಷನರ್ ನಮಗೆ ಬೇಡ, ಅವರನ್ನು ವರ್ಗಾವಣೆ ಮಾಡಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನಕ್ಕೆ ತಂದಿದ್ದಾರೆ.

ಇದೇ ವೇಳೆ, ಮಂಗಳೂರಿನಲ್ಲಿ ಸ್ಪೀಕರ್ ಯುಟಿ ಖಾದರ್ ಅವರಲ್ಲಿ ಇದೇ ವಿಚಾರದ ಬಗ್ಗೆ ಪ್ರಶ್ನೆ ಹಾಕಲಾಯಿತು. ಪೊಲೀಸರ ಅನುಮತಿ ಪಡೆಯದೆ ಪ್ರತಿಭಟನೆ ಮಾಡುವುದು ತಪ್ಪು. ಪೊಲೀಸರು ಅನುಮತಿ ನಿರಾಕರಿಸಿದ್ದರೆ ಏನಾದರೂ ಕಾರಣ ಇರಬೇಕಲ್ವಾ.. ಅನುಮತಿ ನಿರಾಕರಿಸಿದ್ದು ಯಾಕೆಂದು ಅವರಲ್ಲಿಯೇ ಲಿಖಿತವಾಗಿ ಕೇಳಬೇಕಿತ್ತು. ಅಥವಾ ಐಜಿಪಿ ಅದಕ್ಕಿಂತ ಮೇಲಿನವರಿಂದ ಅನುಮತಿ ಪಡೆಯಲೂ ಬಹುದಿತ್ತು. ಅದು ಬಿಟ್ಟು ಪೊಲೀಸರ ವಿರುದ್ಧವೇ ಪ್ರತಿಭಟನೆ ಮಾಡುವುದು ಸರಿಯಾ.. ಇದಕ್ಕಾಗಿ ಕೇಸು ಹಾಕಿದ್ದಾರೆ. ಕಾನೂನು ಉಲ್ಲಂಘಿಸಿದರೆ ಕೇಸು ಹಾಕೋದು ಫಾರ್ಮಾಲಿಟಿ. ಸಮಾಜದಲ್ಲಿ ಶಾಂತಿ, ಸೌಹಾರ್ದ ಇರಬೇಕಿದ್ದರೆ ಕಾನೂನು, ಪೊಲೀಸ್ ವ್ಯವಸ್ಥೆ ಬೇಕಲ್ವಾ ಎಂದು ಹೇಳಿದ್ದಾರೆ.
![]()
ಕುಳೂರಿನಲ್ಲಿ ರಸ್ತೆ ಬದಿ ಸಮಾನ ಮನಸ್ಕ ಸಂಘಟನೆಗಳ ವತಿಯಿಂದ ನಡೆದ ಪ್ರತಿಭಟನೆಯಲ್ಲಿ ಕಾಂಗ್ರೆಸ್, ಕಮ್ಯುನಿಸ್ಟ್ ಪಕ್ಷಗಳ ಕಾರ್ಯಕರ್ತರು, ನಾಯಕರು ಪಾಲ್ಗೊಂಡಿದ್ದರು. ಈ ವೇಳೆ, ಮುನೀರ್ ಕಾಟಿಪಳ್ಳ ಮಾಧ್ಯಮಕ್ಕೆ ಪ್ರತಿಕ್ರಿಯಿಸುತ್ತ, ಮಂಗಳೂರಿನ ಪೊಲೀಸ್ ಕಮಿಷನರ್ ದೋ ನಂಬರ್ ಬಿಸ್ನೆಸ್ ಗಳಿಗೆ ಕುಮ್ಮಕ್ಕು ನೀಡುತ್ತಿದ್ದಾರೆ, ಜನಪರ ವಿಚಾರಗಳಿಗೆ ವಿರೋಧ ಮಾಡುತ್ತಾರೆ ಎಂದಿದ್ದರು. ಅಲ್ಲದೆ, ಪೊಲೀಸರ ವಿರುದ್ಧವೇ ಧಿಕ್ಕಾರದ ಘೋಷಣೆ ಹಾಕಿದ್ದರು. ಇದನ್ನೇ ನೆಪವಾಗಿಸಿ ಕಾವೂರು ಠಾಣೆಯಲ್ಲಿ ಮುನೀರ್ ಕಾಟಿಪಳ್ಳ ವಿರುದ್ಧ ಎಫ್ಐಆರ್ ದಾಖಲಿಸಲಾಗಿತ್ತು.
Complaint filed against police commissioner Anupam Agarwal to CM by Ramanath Rai for SUMOTO case against DFYI leader Muneer Katipalla.
17-09-26 04:13 pm
HK News Staffer
ಚಿತ್ರರಂಗದ ಸಾರ್ವಕಾಲಿಕ ಶ್ರೇಷ್ಠ ನಟ ಅನಂತನಾಗ್ ಗೆ '...
16-09-26 10:40 pm
Tulu Language, Shivraj Tangadagi: ತುಳುವಿಗೆ 2ನ...
16-09-26 01:51 pm
Pradeep Eshwar, Pratap Simha: ಪೊಲೀಸ್ ಠಾಣೆಗೆ...
15-09-26 09:13 pm
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
17-09-26 08:48 pm
HK News Staffer
Mangalore, DK Shivakumar, Coastal Karnataka,...
17-09-26 08:02 pm
Mangalore, Yathindra Siddaramaiah, Umar Khali...
17-09-26 06:29 pm
ಸಚಿವ ಸಂಪುಟ ಸಭೆಗೆ ಕ್ಷಣಗಣನೆ ; ಪಡೀಲ್ ಜಿಲ್ಲಾಧಿಕಾರ...
17-09-26 05:12 pm
ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಮಸೀದಿ, ಮದರಸಾ ಮೇಲೆ...
17-09-26 09:41 am
17-09-26 02:22 pm
HK News Staffer
Bangalore Murder, Crime: ಪ್ರೀತಿಸಿ ಮದುವೆಯಾಗಿದ್...
17-09-26 01:56 pm
Bangalore kidnap, Crime: ಬೆಂಗಳೂರಿನಲ್ಲಿ ಶಾಕ್...
17-09-26 12:35 pm
Manglore Cyber crime, Stock Market: ಷೇರು ಮಾರ್...
17-09-26 11:45 am
ಬೆಳ್ತಂಗಡಿ; ಗೃಹಪ್ರವೇಶಕ್ಕೆ ಹೋದಾಗ ಮನೆಗೆ ಕನ್ನ, ₹1...
16-09-26 11:18 am