ಬ್ರೇಕಿಂಗ್ ನ್ಯೂಸ್
26-11-24 08:23 pm Udupi Correspondent ಕರಾವಳಿ
ಉಡುಪಿ, ನ 26: ಕೊಲ್ಲೂರು ಮೂಕಾಂಬಿಕೆಯ ದರ್ಶನ ಪಡೆಯಲು ದೇಶದ ಮೂಲೆ ಮೂಲೆಗಳಿಂದಲೂ ಭಕ್ತರು ಆಗಮಿಸುತ್ತಾರೆ. ಕೇವಲ ಜನಸಾಮಾನ್ಯರು ಮಾತ್ರವಲ್ಲದೇ, ಖ್ಯಾತ ಸೆಲೆಬ್ರಿಟಿಗಳು ಕೂಡಾ ಇಲ್ಲಿಗೆ ಆಗಮಿಸಿ ದೇವಿಯ ದರ್ಶನ ಪಡೆಯುತ್ತಾರೆ. ಅದರಂತೆ ತಮಿಳು ಚಿತ್ರರಂಗದ ಖ್ಯಾತ ತಾರಾ ದಂಪತಿ ಸೂರ್ಯ ಹಾಗೂ ಜ್ಯೋತಿಕಾ ದೇವಾಲಯಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು.
ಬಳಿಕ ದೇವಾಲಯದಲ್ಲಿ ನಡೆದ ಚಂಡಿಕಾಯಾಗದಲ್ಲಿ ದಂಪತಿ ಭಾಗಿಯಾದರು. ನಿನ್ನೆ ರಾತ್ರಿ ಕೊಲ್ಲೂರಿಗೆ ಆಗಮಿಸಿದ ಕಾಲಿವುಡ್ ದಂಪತಿ ಇಂದು ಪೂರ್ಣಾಹುತಿಯಲ್ಲಿ ಭಾಗಿಯಾದರು. ನಟ ಸೂರ್ಯ ಹಾಗೂ ಜ್ಯೋತಿಕಾ ಅವರನ್ನು ನೋಡಲು ಅಭಿಮಾನಿಗಳು ಮುಗಿಬಿದ್ದರು.
ಸೌತ್ ಸೂಪರ್ ಸ್ಟಾರ್ ಸೂರ್ಯ ಲೇಟೆಸ್ಟ್ ಸಿನಿಮಾ 'ಕಂಗುವ' ಬಿಡುಗಡೆಯಾದಾಗಿನಿಂದಲೂ ಬಾಕ್ಸ್ ಆಫೀಸ್ನಲ್ಲಿ ನಿರಾಶಾದಾಯಕ ಪ್ರದರ್ಶನ ಕಾಣುತ್ತಿದೆ. ಸಿನಿಮಾ ಮೇಲೆ ಹೆಚ್ಚಿನ ನಿರೀಕ್ಷೆಗಳಿತ್ತು. ಬಿಡುಗಡೆಗೂ ಮುನ್ನ ಇದ್ದ ಸದ್ದು ಈಗಿಲ್ಲ. ಭವ್ಯ ದೃಶ್ಯಗಳು, ಸ್ಟಾರ್ ಪವರ್ನಿಂದ ಕೂಡಿದ್ದರೂ ಚಿತ್ರದ ಕಲೆಕ್ಷನ್ ವೇಗ ನಿರೀಕ್ಷಿತ ಮಟ್ಟದಲ್ಲಿಲ್ಲ. ತೆರೆಕಂಡ 12ನೇ ದಿನದಂದು, ಕಂಗುವ ಬಾಕ್ಸ್ ಆಫೀಸ್ ಕಲೆಕ್ಷನ್ನಲ್ಲಿ ಹೆಚ್ಚಿನ ಕುಸಿತ ಕಂಡಿದೆ.
ಸ್ಯಾಕ್ನಿಲ್ಕ್ ಮಾಹಿತಿ ಪ್ರಕಾರ, ಕಂಗುವ ಕಳೆದ ದಿನ 37 ಲಕ್ಷ ರೂ. ಕಲೆಕ್ಷನ್ ಮಾಡಿದೆ. ಚಿತ್ರದ ಪ್ರಮುಖ ಮಾರುಕಟ್ಟೆಯಾಗಿರುವ ತಮಿಳು ಆವೃತ್ತಿಯಿಂದ 16 ಲಕ್ಷ ರೂಪಾಯಿ ಬಂದಿದೆ. ಕಂಗುವ ತನ್ನ ಮೊದಲ 12 ದಿನಗಳಲ್ಲಿ, ಭಾರತದಲ್ಲಿ ಒಟ್ಟು 67.87 ಕೋಟಿ ರೂಪಾಯಿ ಗಳಿಸಿದೆ. ಚಿತ್ರದ ಮೊದಲ ವಾರದ ಪ್ರದರ್ಶನ ನಿರೀಕ್ಷೆಗಿಂತಲೂ ಕಡಿಮೆ ಆಗಿದ್ದು, 64.3 ಕೋಟಿ ರೂ. ವ್ಯವಹಾರ ನಡೆಸಿದೆ. ತಮಿಳುನಾಡಿನಿಂದಲೇ ಒಟ್ಟು 35.63 ಕೋಟಿ ರೂ. ಬಂದಿದೆ. ಎರಡನೇ ವಾರದಲ್ಲಿ, ವಿಶೇಷವಾಗಿ 12ನೇ ದಿನದಂದು ಕಲೆಕ್ಷನ್ನಲ್ಲಿ ಕುಸಿತ ಕಂಡಿದ್ದು, 100 ಕೋಟಿ ರೂ. ದಾಟುತ್ತೋ ಇಲ್ವೋ ಅನ್ನೋ ಗೊಂದಲದಲ್ಲಿ ಅಭಿಮಾನಿಗಳಿದ್ದಾರೆ.
ಈಗ ಸಿನಿಮಾದ ಯಶಸ್ಸಿಗಾಗಿ ಸ್ಟಾರ್ ದಂಪತಿಗಳು ದೇಶದ ಪ್ರಮುಖ ದೇವಸ್ಥಾನಗಳಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ.
Renowned Tamil actor Suriya and his wife, actress Jyothika, were spotted at the Kollur Mookambika Temple in Udupi's Baindoor taluk on Tuesday.
15-03-25 09:18 pm
HK News Desk
Mangalore, Tamil actor Prabhu Deva, Kukke Sub...
15-03-25 03:55 pm
Elephant attack, Belur, Hassan: ಕಾಡಾನೆ ದಾಳಿ ;...
15-03-25 12:33 pm
DySP Kanakalakshmi arrested, suicide: ಬೋವಿ ನಿ...
14-03-25 11:11 pm
Swamiji, Bagalkot, Police Video: ದುಡ್ಡು ಪಡೆದು...
14-03-25 08:30 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
15-03-25 10:00 pm
Mangalore Correspondent
Mangalore court, Moral Police, Acquit: ಹಿಂದು...
15-03-25 08:32 pm
Mangalore Mary Hill, Boy Death; ಮೇರಿಹಿಲ್ ; ಏಳ...
15-03-25 04:11 pm
Dr Vamana Nandavar, Mangalore Death: ತುಳು, ಕನ...
15-03-25 01:47 pm
Mangalore Student Missing, ,Kidnap, Hitein Bh...
15-03-25 12:35 pm
14-03-25 05:02 pm
HK News Desk
Ccb Police, Firearms, Mangalore crime: ವಾಮಂಜೂ...
13-03-25 06:44 pm
Kothanur Police, Bangalore crime, Murder: ನಾಲ...
11-03-25 07:34 pm
Tanishq showroom, Bihar Robbery: ಬಿಹಾರದಲ್ಲಿ ಹ...
10-03-25 10:48 pm
Actress Ranya Rao, CBI, Gold case; ನಟಿ ರನ್ಯಾ...
09-03-25 05:06 pm