ಬ್ರೇಕಿಂಗ್ ನ್ಯೂಸ್
26-11-24 05:37 pm Mangaluru Correspondent ಕರಾವಳಿ
ಮಂಗಳೂರು, ನ.26: ಮಂಗಳೂರಿನ ಪೊಲೀಸ್ ಕಮಿಷನರ್ ಬಿಜೆಪಿ ಶಾಸಕರು, ಸಂಸದರ ಪರವಾಗಿ ಕೆಲಸ ಮಾಡುತ್ತಿದ್ದಾರೆ. ಬಿಜೆಪಿ ಸರ್ಕಾರ ಇರುವಾಗಲೂ ನಾವು ಇಷ್ಟೊಂದು ಕಿರುಕುಳ ಅನುಭವಿಸಿರಲಿಲ್ಲ. ಹೆದ್ದಾರಿ ಬದಿ ಪ್ರತಿಭಟನೆ ನಡೆಸುತ್ತೇವೆ ಎಂದರೆ ಕಮಿಷನರ್, ಡಿಸಿಪಿಯವರು ಪ್ರಚಾರಕ್ಕೆ ಮಾಡ್ತೀವಿ ಎನ್ನುತ್ತಿದ್ದಾರೆ. ಒಬ್ಬ ಕಾನ್ಸ್ ಟೇಬಲ್ ಗೆ ಇರುವಷ್ಟು ತಿಳುವಳಿಕೆ ಇಲ್ಲಿನ ಕಮಿಷನರ್ ಗಿಲ್ಲ. ಕಮಿಷನರ್ ಇದೇ ರೀತಿಯಾದರೆ ಕಮಿಷನರ್ ಕಚೇರಿಗೆ ಜಾಥಾ ತೆರಳಿ ಹಠಾವೋ ಮಾಡ್ತೀವಿ ಎಂದು ಡಿವೈಎಫ್ಐ ಮುಖಂಡ ಮುನೀರ್ ಕಾಟಿಪಳ್ಳ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸುರತ್ಕಲ್ ನಿಂದ ನಂತೂರು ವರೆಗಿನ ಹೆದ್ದಾರಿ ನರಕವಾಗಿದೆಯೆಂದು ಸಮಾನ ಮನಸ್ಕ ಸಂಘಟನೆಗಳವರು ಸೇರಿ ಕುಳೂರಿನ ಹೆದ್ದಾರಿ ಬದಿಯಲ್ಲಿ ಪ್ರತಿಭಟನಾ ಧರಣಿ ನಡೆಸಿದ್ದಾರೆ. ಆದರೆ ಪ್ರತಿಭಟನೆಗೆ ಅವಕಾಶ ನೀಡುವುದಿಲ್ಲ ಎಂದು ಪೊಲೀಸ್ ಕಮಿಷನರ್ ಹೇಳಿರುವುದಕ್ಕೆ ಧರಣಿ ನಿರತರ ಆಕ್ರೋಶ ಪೊಲೀಸ್ ಆಯುಕ್ತರ ಮೇಲೆ ತಿರುಗಿದೆ. ನಾವು 5-6 ವರ್ಷಗಳ ಕಾಲ ಪ್ರತಿಭಟನೆ ನಡೆಸಿ ಸುರತ್ಕಲ್ ಟೋಲ್ ಗೇಟ್ ತೆರವು ಮಾಡಿದ್ದೇವೆ. ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಅವರಿಗೆ ಮಂಗಳೂರಿನ ಜನಪರ ಚಳವಳಿ ಬಗ್ಗೆ ತಿಳಿದಿಲ್ಲ. ಪ್ರಶ್ನೆ ಮಾಡಿದರೆ ಎಫ್ಐಆರ್ ಹಾಕುವ ಬೆದರಿಕೆ ಹಾಕುತ್ತಾರೆ.

ಕಚೇರಿಗೆ ಹೋದರೆ ಮುಖಕ್ಕೆ ಮುಖ ಕೊಟ್ಟು ಮಾತನಾಡಲ್ಲ. ಕಚೇರಿಯೊಳಗೆ ಹೋಗಬೇಕಿದ್ದರೆ ಮೊಬೈಲ್ ಹೊರಗಿಟ್ಟು ಹೋಗಬೇಕು. ಇವರು ಜನರ ಜೊತೆ ವ್ಯವಹರಿಸುವ ರೀತಿಯಾ ಇದು. ಮಂಗಳೂರಿನಲ್ಲಿ ಮಸಾಜ್ ಪಾರ್ಲರ್ ದಂಧೆಯಿಂದ ತೊಡಗಿ ಮರಳು ದಂಧೆ, ಮಟ್ಕಾ, ಇಸ್ಪೀಟ್, ಡ್ರಗ್ಸ್, ಮಟ್ಕಾ, ಬೆಟ್ಟಿಂಗ್, ದೋ ನಂಬರ್ ದಂಧೆಗಳೆಲ್ಲ ರಾಜಾರೋಷ ನಡೆಯುತ್ತಿದೆ. ಇದಕ್ಕೆಲ್ಲ ಕಮಿಷನರ್ ಕುಮ್ಮಕ್ಕು ಕೊಟ್ಟಿದ್ದಾರೆ. ನಾವಿಲ್ಲಿ ಬಿಸಿಲಲ್ಲಿ ಕುಳಿತಿದ್ದೇವೆ. ಒಂದು ಟೆಂಟ್ ಹಾಕುವುದಕ್ಕೂ ಅನುಮತಿ ಕೊಟ್ಟಿಲ್ಲ. ತಾಲೂಕು ಕಚೇರಿಯ ಎದುರಲ್ಲೇ ಪ್ರತಿಭಟನೆ ಮಾಡಬೇಕೆಂದು ನೋಟೀಸ್ ಕೊಟ್ಟಿದ್ದಾರೆ. ಇವರು ತಮ್ಮ ಕುಮ್ಮಕ್ಕಿನಿಂದ ನಡೆಯುವ ದೋ ನಂಬರ್ ಬಿಸ್ನೆಸ್ ಮಾಡೋರಿಗೂ ಟೆಂಟ್ ಹಾಕಿ ಕೊಡಿಸಲಿ.

ಈ ಕಮಿಷನರ್ ಬಂದ ಮೇಲೆ ನಮ್ಮ ಮೇಲೆ ಮೂರು ಎಫ್ಐಆರ್ ಮಾಡಿದ್ದಾರೆ. ಮೊನ್ನೆ ಶಾಸಕ ಭರತ್ ಶೆಟ್ಟಿ ರಸ್ತೆಯನ್ನು ಎರಡು ದಿನ ಬಂದ್ ಮಾಡಿ, ಕಾರ್ಯಕ್ರಮ ಮಾಡಿದ್ದರು. ಅದನ್ನು ಪ್ರಶ್ನೆ ಮಾಡುವ ತಾಕತ್ತು ಇವರಿಗಿಲ್ಲ. ಹಿಂದಿನ ಬಿಜೆಪಿ ಸರ್ಕಾರದ ನೀತಿಗಳನ್ನು ಪೊಲೀಸ್ ಕಮಿಷನರ್ ಕಾಂಗ್ರೆಸ್ ಸರಕಾರದ ಆಡಳಿತದಲ್ಲಿ ಜಾರಿಗೆ ತರುತ್ತಿದ್ದಾರೆ. ಪ್ರತಿಭಟನೆ ನಡೆಸುತ್ತೇವೆ ಎಂದರೆ ಹೆದ್ದಾರಿ ಇಲಾಖೆಯ ಪರ್ಮಿಶನ್ ಕೇಳುತ್ತಿದ್ದಾರೆ. ಮಂಗಳೂರಿನ ಮಿನಿ ವಿಧಾನಸೌಧ ಎದುರಲ್ಲೇ ಪ್ರತಿಭಟನೆ ಮಾಡಬೇಕೆಂದು ಫರ್ಮಾನು ಹೊರಡಿಸುತ್ತಾರೆ. ಪ್ರಶ್ನೆ ಮಾಡಿದರೆ ಸರ್ವಾಧಿಕಾರಿ ರೀತಿ ನಡೆದುಕೊಳ್ಳುತ್ತಿದ್ದಾರೆ. ಪ್ರತಿಭಟನೆ ನಡೆಸುತ್ತೇನೆ ಎಂದು ಪೋಸ್ಟ್ ಹಾಕಿದ್ದಕ್ಕೆ ಮನೆಗೆ ಪೊಲೀಸರನ್ನು ಕಳಿಸಿ ಬೆದರಿಸಿದ್ದಾರೆ. ನಾವೇನು ಉಗ್ರಗಾಮಿಗಳಾ.. ಇವರೇನು ಪೊಲೀಸ್ ರಾಜ್ಯ ಮಾಡಲು ಹೊರಟಿದ್ದಾರೆಯೇ.. ಇವರ ವಿರುದ್ಧ ನಾವು ಮುಖ್ಯಮಂತ್ರಿ, ಗೃಹಮಂತ್ರಿಗೆ ದೂರು ನೀಡಲಿದ್ದೇವೆ. ಕ್ರೈಮ್ ಬೆಂಬಲಿಗ, ದಂಧೆಗಳ ಪೋಷಕ ಕಮಿಷನರ್ ಹಠಾವೋ ಹೋರಾಟ ಕೈಗೆತ್ತಿಕೊಳ್ಳುತ್ತೇವೆ, ಅವರಿಗೆ ಸಾಧ್ಯವಿದ್ದರೆ ನಮ್ಮನ್ನು ಎದುರಿಸಲಿ. ಜೈಲಿಗಟ್ಟಲಿ ಎಂದು ಸವಾಲು ಹಾಕಿದರು.
Mangalore DFYI Leader Muneer Katipalla slams Police commissioner Anupam Agarwal is a dictator, alleges as most corrupted. He also said that commissioner takes money to all illegal businesses in city. Spoke during the highway protest held at Nanthoor.
27-03-26 04:49 pm
HK News Staffer
ಶಾರ್ಟ್ ಕಟ್ ದಾರಿಯೆಂದು ತುಂಗಭದ್ರಾ ನದಿಗೆ ನುಗ್ಗಿಸಿ...
27-03-26 04:04 pm
ನಡುರಸ್ತೆಯಲ್ಲೇ ಪತ್ನಿಯ ಕತ್ತು ಕತ್ತರಿಸಿ ಭೀಕರ ಕೊಲೆ...
27-03-26 03:52 pm
ಚಿಕ್ಕಮಗಳೂರಿನಲ್ಲಿ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಬ...
26-03-26 10:27 pm
ಕ್ಲಾಸ್ ರೂಮಿನಲ್ಲೇ ವಿದ್ಯಾರ್ಥಿನಿಗೆ ಪ್ರಪೋಸ್ ಮಾಡಿದ...
26-03-26 09:21 pm
27-03-26 04:07 pm
HK News Staffer
ಗಲ್ಫ್ ಯುದ್ಧದ ಪರಿಣಾಮ ಊಹಿಸುವುದು ಕಷ್ಟ, ಕೋವಿಡ್ನಂ...
27-03-26 12:11 pm
ಅಮೆರಿಕ ಷರತ್ತಿಗೆ ಪಟ್ಟು ಬಿಡದ ಇರಾನ್ ; ಗಲ್ಫ್ ದೇಶಗ...
26-03-26 09:44 pm
ಹೊರ್ಮುಜ್ ಜಲಸಂಧಿ ನಿರ್ಬಂಧಿಸಿದ್ದ ಇರಾನ್ ನೌಕಾಪಡೆ ಮ...
26-03-26 09:00 pm
ಮಂಗಳೂರಿಗೆ ಮತ್ತೆರಡು ಬೃಹತ್ ತೈಲ ಟ್ಯಾಂಕರ್ ಹಡಗು ;...
26-03-26 09:31 am
27-03-26 03:38 pm
HK News Staffer
ಇನಾಯತ್ ಆಲಿ ನೇತೃತ್ವದಲ್ಲಿ ಏ.4ರಂದು ಗುರುಪುರ ಜೋಡುಕ...
26-03-26 10:51 pm
ಮಂಗಳೂರು ಸಿಟಿ ಪೊಲೀಸರ ಹೆಸರಲ್ಲೇ ನಕಲಿ ವೆಬ್ಸೈಟ್ !...
26-03-26 10:29 pm
ನವ ಮಂಗಳೂರು ಬಂದರು ಸ್ಥಾಪನೆಗೊಂಡ ಬಳಿಕ 40 ಸಾವಿರ ಹಡ...
26-03-26 07:19 pm
ಸುಹಾಸ್ ಶೆಟ್ಟಿ ಕೊಲೆ ಪ್ರಕರಣ ; ಸಾಮಾಜಿಕ ಜಾಲತಾಣದಲ್...
25-03-26 08:44 pm
27-03-26 10:02 pm
HK News Staffer
ಲ್ಯಾಂಬೋರ್ಗಿನಿ ಕಾರು ಡ್ರಿಫ್ಟಿಂಗ್ ; ಶೋಕಿ ಮಾಡಿ ತಗ...
27-03-26 09:34 pm
ಹೊಸ ಬಾವಿ ಕೊರೆಯುತ್ತಿದ್ದ ವೇಳೆ ದುರಂತ ; ಮೂವತ್ತು ಅ...
27-03-26 09:32 pm
ಪುಟ್ಟೇನಹಳ್ಳಿ ಠಾಣೆ ಇನ್ಸ್ಪೆಕ್ಟರ್ ತಿಂಗಳ ವಸೂಲಿ 2...
27-03-26 08:37 pm
Rowdy Sheeter Arif Hussain Murder, Mangalore:...
27-03-26 06:51 am