ಬ್ರೇಕಿಂಗ್ ನ್ಯೂಸ್
21-11-24 11:39 am Mangalore Correspondent ಕರಾವಳಿ
ಮಂಗಳೂರು, ನ.21: ರಾಜ್ಯದ ವಕ್ಫ್ ಆಸ್ತಿಯಲ್ಲಿ 29 ಸಾವಿರ ಎಕರೆ ಭೂಮಿಯನ್ನು ಅತಿಕ್ರಮಣ ಮಾಡಿರುವ ಬಗ್ಗೆ ವರದಿ ಕೊಟ್ಟಿದ್ದರೂ, ಬಿಜೆಪಿಯವರು ಜಾರಿಗೆ ತರಲಿಲ್ಲ. ಅನುಷ್ಠಾನಕ್ಕೆ ತರುತ್ತಿದ್ದರೆ ಕಾಂಗ್ರೆಸ್ ನಿರ್ನಾಮ ಆಗುತ್ತಿತ್ತು. ಯಾಕಂದ್ರೆ, ಕಾಂಗ್ರೆಸಿನ ಹಲವಾರು ಕುಳಗಳು ವಕ್ಫ್ ಆಸ್ತಿ ಅತಿಕ್ರಮಣ ಮಾಡಿದವರಿದ್ದಾರೆ. ಕೆಲವರ ತೋಳ್ಬಲಕ್ಕೆ ಬಗ್ಗಿದ್ದರಿಂದ ನಾವು ಕೊಟ್ಟ ವರದಿಯನ್ನು ಬದಿಗೆ ಸರಿಸಿದ್ದರು ಎಂದು ವಕ್ಫ್ ಆಯೋಗದ ಮಾಜಿ ಅಧ್ಯಕ್ಷ ಅನ್ವರ್ ಮಾಣಿಪ್ಪಾಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗೋಷ್ಟಿ ನಡೆಸಿದ ಅವರು, ರಾಜ್ಯದಲ್ಲಿ ವಕ್ಫ್ ಆಸ್ತಿ ಅತಿಕ್ರಮಣದ ಬಗ್ಗೆ ಸಮಗ್ರ ವರದಿ ತಯಾರಿಸಿದ್ದೆ. ಅದರಲ್ಲಿ ವಕ್ಫ್ ಇಲಾಖೆಯ ಬಳಿ ಒಟ್ಟು 54 ಸಾವಿರ ಎಕ್ರೆ ಭೂಮಿಯಿದ್ದು, ಆ ಪೈಕಿ 29 ಸಾವಿರ ಎಕರೆಯನ್ನು ಅತಿಕ್ರಮಣ ಮಾಡಿರುವ ಬಗ್ಗೆ ವರದಿ ಕೊಟ್ಟಿದ್ದೆ. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ರಾಜ್ಯದಲ್ಲಿ ಒಂದೂವರೆ ಲಕ್ಷ ಎಕರೆ ಭೂಮಿಯನ್ನು ವಶಪಡಿಸಲು ರೈತರಿಗೆ ನೋಟೀಸ್ ಕೊಟ್ಟಿದ್ದಾರೆ. ಇದು ಹೇಗೆ ಸಾಧ್ಯ ಎನ್ನುವುದು ನನ್ನ ಪ್ರಶ್ನೆ. ಸಿದ್ದರಾಮಯ್ಯ ಈಮೂಲಕ ಸಮಾಜದಲ್ಲಿ ಹಿಂದು- ಮುಸ್ಲಿಮರ ನಡುವೆ ಬೆಂಕಿ ಹಚ್ಚಲು ಈ ರೀತಿ ಮಾಡಿದ್ದಾರೆಯೇ. ನೋಟೀಸ್ ಕೊಟ್ಟು ಹಿಂಪಡೆದಿದ್ದು ಏಕೆ, ಈ ಬಗ್ಗೆ ಮುಖ್ಯಮಂತ್ರಿಯವರೇ ಸ್ಪಷ್ಟನೆ ನೀಡಬೇಕು ಎಂದು ಹೇಳಿದ್ದಾರೆ.
ನನ್ನ ವರದಿಯನ್ನು ಪರಿಗಣಿಸಿ ಸಿಬಿಐ ತನಿಖೆ ನಡೆಸಿದರೆ ಎಲ್ಲವೂ ಸತ್ಯ ಹೊರಬರಲಿದೆ ಎಂದು ಹೇಳಿದ ಅವರು, ವಕ್ಫ್ ವರದಿ ಆಧಾರದಲ್ಲಿಯೇ ಕೇಂದ್ರ ಸರಕಾರ ವಕ್ಫ್ ತಿದ್ದುಪಡಿ ಕಾಯ್ದೆ ತರುತ್ತಿದೆ. ಪ್ರಧಾನಿ ಸೂಚನೆಯಂತೆ ಕೇಂದ್ರ ಸಚಿವ ಕಿರಣ್ ರಿಜಿಜು ಮತ್ತು ಪ್ರಹ್ಲಾದ ಜೋಷಿಯವರು ದೆಹಲಿಗೆ ಕರೆದು ಮಾತನಾಡಿದ್ದಾರೆ. ನನ್ನ ವರದಿಯನ್ನು ಪರಿಗಣಿಸಿದ್ದಾರೆಂಬ ಭಾವನೆ ನನ್ನಲ್ಲಿದೆ. ರಾಜ್ಯಾದ್ಯಂತ ಸಂಚರಿಸಿ ತಯಾರಿಸಿದ್ದ ವಕ್ಫ್ ವರದಿಯನ್ನು ಕೆಲವರು ಕೋರ್ಟಿನಲ್ಲಿ ಪ್ರಶ್ನೆ ಮಾಡಿದರೂ, ಅದಕ್ಕೆ ಸಹಮತ ಸಿಗಲಿಲ್ಲ. ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ನನ್ನ ವರದಿಯನ್ನು ಅಂಗೀಕರಿಸಿದೆ. ರಾಜ್ಯ ಸರಕಾರವೂ ಅಂಗೀಕರಿಸಿ ತನಿಖೆ ಮಾಡಿಸಲಿ, ಎಷ್ಟೇ ಪ್ರಭಾವಿಗಳಿದ್ದರೂ ಕ್ರಮ ಜರುಗಿಸಲಿ ಎಂದು ಮಾಣಿಪ್ಪಾಡಿ ಹೇಳಿದರು.
ಸುದ್ದಿಗೋಷ್ಟಿಯಲ್ಲಿ ಶ್ರೀರಾಮ ಸೇನೆ ವರಿಷ್ಠ ಪ್ರಮೋದ್ ಮುತಾಲಿಕ್ ಮಾತನಾಡಿ, ದೇಶದ ಹಿತದೃಷ್ಟಿಯಿಂದ ವಕ್ಫ್ ಕುರಿತ ಚಿಂತನ- ಮಂಥನದಲ್ಲಿ ನಾವು ತೊಡಗಿಸಿಕೊಳ್ಳಬೇಕು. ಈ ಕುರಿತ ಹೋರಾಟವನ್ನು ಸ್ವಾಮೀಜಿಗಳು, ಮಠ- ಮಂದಿರಗಳ ಮುಖ್ಯಸ್ಥರು ಗಂಭೀರ ಪರಿಗಣಿಸಬೇಕು. ನಮಗೆ ಸಂಬಂಧಿಸಿದ್ದಲ್ಲ ಎಂದು ಸುಮ್ಮನುಳಿದರೆ ನಾಳೆ ನಿಮ್ಮ ಆಸ್ತಿಯೂ ವಕ್ಫ್ ಪಾಲಾಗಲಿದೆ. ರೈತರು ತಮ್ಮ ಭೂಮಿ ಉಳಿಸಲು ಹೈಕೋರ್ಟ್ ಪೀಠಗಳಲ್ಲ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲು 5-5 ವಕೀಲರ ತಂಡ ನೇಮಕ ಮಾಡಿದ್ದೇವೆ. ವಕ್ಫ್ ಆಸ್ತಿಗೆ ಬೇಲಿ ಹಾಕಲು 3.5 ಕೋಟಿ ರೂ. ನೀಡಿರುವುದು ಸರಿಯಲ್ಲ. ಸರಕಾರ ರಾಜ್ಯದಲ್ಲಿ 328 ಖಬರಸ್ತಾನಗಳಿಗೆ ನೀಡಿರುವ ಸರಕಾರಿ ಭೂಮಿಯನ್ನು ವಾಪಸ್ ಪಡೆಯಬೇಕು ಎಂದು ಗ್ರಹಿಸಿದರು.
ಏಷ್ಯಾದಲ್ಲೇ ಎರಡನೇ ಅತಿದೊಡ್ಡ ಖಬರಸ್ತಾನ ಬೀದರಿನಲ್ಲಿದ್ದು, ಅಲ್ಲಿಯ ಭೂಮಿಯನ್ನೂ ಬಹಳಷ್ಟು ಅತಿಕ್ರಮಣ ಮಾಡಲಾಗಿದೆ. ಕಬರಸ್ತಾನಗಳಿಗೆ ಸರಕಾರ ನೀಡುವುದಿದ್ದರೂ, ಸೆಂಟ್ ಲೆಕ್ಕದಲ್ಲಿ ನೀಡಿದರೆ ಸಾಕಾಗುತ್ತದೆ. ಎಕರೆಗಟ್ಟಲೆ ಭೂಮಿಯನ್ನು ನೀಡುವ ಮೂಲಕ ಒಂದು ವರ್ಗದ ತುಷ್ಟೀಕರಣ ಯಾಕೆ ಮಾಡಬೇಕು. ರಾಜ್ಯಾದ್ಯಂತ ಪ್ರಭಾವಿ ರಾಜಕಾರಣಿಗಳು ಆಸ್ತಿ ಲೂಟಿ ಮಾಡಿದ್ದಾರೆ. ವಕ್ಫ್ ಆಸ್ತಿ ನೋಡಿಕೊಳ್ಳುವ ಮುತವಲ್ಲಿಗಳು ಆಸ್ತಿ ಮಾರಾಟ ಮಾಡಿದ್ದಾರೆ. ಅನ್ವರ್ ಮಾಣಿಪ್ಪಾಡಿ ನೀಡಿರುವ 7 ಸಾವಿರ ಪುಟಗಳ ವರದಿಯಲ್ಲಿ ಎಲ್ಲ ಮಾಹಿತಿ ಇದೆ, ಸಿದ್ದರಾಮಯ್ಯ ಸರಕಾರ ತಾಕತ್ತಿದ್ದರೆ ಇದನ್ನು ಜಾರಿಗೊಳಿಸಲಿ ಎಂದು ಮುತಾಲಿಕ್ ಸವಾಲೆಸೆದರು.
Former chairman of Karnataka State Minorities Commission Anwar Manippady urged the government to recover the encroached 29,000 acres of registered Waqf Board properties.
15-03-25 09:18 pm
HK News Desk
Mangalore, Tamil actor Prabhu Deva, Kukke Sub...
15-03-25 03:55 pm
Elephant attack, Belur, Hassan: ಕಾಡಾನೆ ದಾಳಿ ;...
15-03-25 12:33 pm
DySP Kanakalakshmi arrested, suicide: ಬೋವಿ ನಿ...
14-03-25 11:11 pm
Swamiji, Bagalkot, Police Video: ದುಡ್ಡು ಪಡೆದು...
14-03-25 08:30 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
15-03-25 10:00 pm
Mangalore Correspondent
Mangalore court, Moral Police, Acquit: ಹಿಂದು...
15-03-25 08:32 pm
Mangalore Mary Hill, Boy Death; ಮೇರಿಹಿಲ್ ; ಏಳ...
15-03-25 04:11 pm
Dr Vamana Nandavar, Mangalore Death: ತುಳು, ಕನ...
15-03-25 01:47 pm
Mangalore Student Missing, ,Kidnap, Hitein Bh...
15-03-25 12:35 pm
14-03-25 05:02 pm
HK News Desk
Ccb Police, Firearms, Mangalore crime: ವಾಮಂಜೂ...
13-03-25 06:44 pm
Kothanur Police, Bangalore crime, Murder: ನಾಲ...
11-03-25 07:34 pm
Tanishq showroom, Bihar Robbery: ಬಿಹಾರದಲ್ಲಿ ಹ...
10-03-25 10:48 pm
Actress Ranya Rao, CBI, Gold case; ನಟಿ ರನ್ಯಾ...
09-03-25 05:06 pm