ಬ್ರೇಕಿಂಗ್ ನ್ಯೂಸ್
13-12-20 12:04 pm Udupi Correspondent ಕರಾವಳಿ
ಉಡುಪಿ, ಡಿ.13: ನಾಡು ಕಂಡ ಅಪರೂಪದ ಸಾಧಕ, ಸಂಸ್ಕೃತ, ಕನ್ನಡ ಭಾಷೆಯ ವಿದ್ವಾಂಸ, ಪದ್ಮಶ್ರೀ ಪುರಸ್ಕೃತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯ ಇನ್ನಿಲ್ಲ. ಉಡುಪಿಯ ಅಂಬಲಪಾಡಿಯ ತಮ್ಮ ನಿವಾಸದಲ್ಲಿ ಇಂದು ಬೆಳಗ್ಗೆ ಅವರು ಕೊನೆಯುಸಿರೆಳೆದಿದ್ದಾರೆ.
ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾಗಿರುವ ಗೋವಿಂದಾಚಾರ್ಯ ಪ್ರವಚನಕಾರ, ಮಧ್ವ ಸಿದ್ಧಾಂತದ ಪ್ರತಿಪಾದಕರಾಗಿದ್ದರು. ಅನೇಕ ಅಂಕಣ, ಲೇಖನಗಳನ್ನು ಬರೆದಿದ್ದ ಬನ್ನಂಜೆ ಅವರು ನಟ ಡಾ.ವಿಷ್ಣುವರ್ಧನ್ ಅವರ ಆಧ್ಯಾತ್ಮಿಕ ಗುರುಗಳಾಗಿದ್ದರು.
ಉಡುಪಿ ಜಿಲ್ಲೆಯ ಅಂಬಲಪಾಡಿಯಲ್ಲಿ 1936 ಆಗಸ್ಟ್ 3ರಂದು ಬನ್ನಂಜೆಯಲ್ಲಿ ವಿದ್ವಾಂಸರಾದ ತರ್ಕಕೇಸರಿ ಶ್ರೀ ನಾರಾಯಣಾಚಾರ್ಯರ ಪುತ್ರರಾಗಿ ಜನಿಸಿದ ಗೋವಿಂದಾಚಾರ್ಯರು ಬಾಲ್ಯದಲ್ಲಿ ವೈದಿಕ ಶಿಕ್ಷಣವನ್ನು ತಂದೆಯಿಂದಲೇ ಪಡೆದಿದ್ದರು. ಬಳಿಕ ಉಡುಪಿಯ ಶ್ರೀ ವಿದ್ಯಾಮಾನ್ಯ ತೀರ್ಥಸ್ವಾಮೀಜಿ, ಕಲಿಯೂರು ಮಠ ಮತ್ತು ಶ್ರೀ ವಿದ್ಯಾಸಮುದ್ರ ತೀರ್ಥರು, ಕಾಣಿಯೂರು ಮಠ ಇವರಿಂದ ಶಿಕ್ಷಣ ಪಡೆದಿದ್ದರು.
ತಮ್ಮ ಪ್ರವಚನದ ಮೂಲಕ ವಿಶ್ವದಲ್ಲೇ ವೇದ ಪುರಾಣಗಳ ಕುರಿತು ಹೊಸ ಸಂಚಲನ ಮೂಡಿಸಿದವರು. ಕನ್ನಡ ಮತ್ತು ಸಂಸ್ಕೃತ ಭಾಷೆಗಳಲ್ಲಿ ಅನೇಕ ಕೃತಿಗಳನ್ನು ರಚಿಸಿದ್ದಾರೆ. ಪುರುಷ ಸೂಕ್ತ , ಶಿವ ಸೂಕ್ತ , ಶ್ರೀ ಸೂಕ್ತ ಸೇರಿದಂತೆ ಹಲವು ಸೂಕ್ತ ಮಂತ್ರಗಳಿಗೆ ಮತ್ತು ಮದ್ವಾಚಾರ್ಯರ ಮಾಧ್ವ ರಾಮಾಯಣ ಕೃತಿಯನ್ನು ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ಉಡುಪಿಯ ಅಷ್ಠ ಮಠಗಳಿಗೆ ನಿಕಟವರ್ತಿಯಾಗಿ ಪಾಠ ಪ್ರವಚನದ ಜೊತೆಗೆ ಅಗತ್ಯ ಸಲಹೆ ನೀಡುತ್ತಿದ್ದರು. ಅವರ ಅಗಲುವಿಕೆಯಿಂದ ಆಧ್ಯಾತ್ಮದ ಲೋಕದ ಅಮೂಲ್ಯ ಮಣಿಯೊಂದು ಕಣ್ಮರೆಯಾಗಿದೆ.
ಹದಿಮೂರನೆಯ ಶತಮಾನದಲ್ಲಿ ಶ್ರೀ ಮಧ್ವಾಚಾರ್ಯರ ನೇರ ಶಿಷ್ಯರಾದ ಶ್ರೀ ಹೃಷೀಕೇಶ ತೀರ್ಥರು ರಚಿಸಿದ್ದ ಮಧ್ವಾಚಾರ್ಯರ ಸಂಸ್ಕೃತ ವ್ಯಾಖ್ಯಾನಗಳನ್ನು ಸುಮಾರು 2000 ಪುಟಗಳಷ್ಟು ಸುದೀರ್ಘವಾದ ಗ್ರಂಥರೂಪವಾಗಿ ಅಚ್ಚುಕಟ್ಟಾಗಿ ಓದುಗರ ಮುಂದಿಟ್ಟಿದ್ದಾರೆ. ಮಧ್ವಾಚಾರ್ಯರ ಹಲವಾರು ಘನವೇತ್ತ ಕೃತಿಗಳೂ ಕೂಡ ಈ ಗ್ರಂಥದ ಭಾಗವಾಗಿವೆ. ಅವರ ‘ಆಚಾರ್ಯ ಮಧ್ವ: ಬದುಕು ಬರಹ’ ಕೃತಿಯನ್ನು ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರವು ಪ್ರಕಟಿಸಿದೆ.
ಅದ್ಭುತ ಸ್ಮರಣ ಶಕ್ತಿಗೆ ಇನ್ನೊಂದು ಹೆಸರೇ ಬನ್ನಂಜೆ ಗೋವಿಂದಾಚಾರ್ಯರು. ಸಂಸ್ಕೃತದ ಖ್ಯಾತ ಕಾದಂಬರಿಗಳಾದ ಬಾಣ ಭಟ್ಟನ ಕಾದಂಬರಿ ಕಾಳಿದಾಸನ ಶಾಕುಂತಲಾ ಶೂದ್ರಕನ ಮೃಚ್ಛಕಟಿಕವನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಕೇವಲ ವೇದ ಪುರಾಣಗಳ ಅನುವಾದ ಟಿಪ್ಪಣಿ ಮಾತ್ರವಲ್ಲದೆ ಜಿ.ವಿ ಅಯ್ಯರ್ ಅವರ ಶ್ರೀ ಶಂಕರಾಚಾರ್ಯ ಮದ್ವಾಚಾರ್ಯ ರಾಮಾನುಜಾಚಾರ್ಯ ಚಲನಚಿತ್ರಗಳಿಗೆ ಸಂಭಾಷಣೆ ರಚಿಸಿದ್ದರು. ಖ್ಯಾತ ನಟ ವಿಷ್ಣು ವರ್ಧನ್ ಅವರ ಆದ್ಯಾತ್ಮ ಗುರುಗಳಾಗಿದ್ದ ಬನ್ನಂಜೆ ಅವರಿಗೆ ಸಾವಿರಾರು ಶಿಷ್ಯಂದಿರು ಇದ್ದಾರೆ. ಅವರ ಪ್ರವಚನ ಮತ್ತು ಪಾಂಡಿತ್ಯದ ಪ್ರಭಾವದಿಂದ ಅದೆಷ್ಟೋ ಜನ ಆದ್ಯಾತ್ಮ ಲೋಕದಲ್ಲಿ ಅದ್ಭುತ ಸಾಧನೆ ಮಾಡಿದ್ದಾರೆ.
Udupi Bannanje Govindacharya Sanskrit scholar versed in Veda Bhashya, Upanishad Bhashya, Mahabharata, Puranas and Ramayana is no more.
19-03-25 04:42 pm
HK News Desk
"ಹೆಂಗಸರಿಗೆ ಫ್ರೀ ಕೊಟ್ಟಂತೆ ಗಂಡಸರಿಗೂ ವಾರಕ್ಕೆರಡು...
19-03-25 12:44 pm
Sowjanya case, Protest; ಸೌಜನ್ಯಾ ಪ್ರಕರಣ ; ನ್ಯಾ...
19-03-25 11:39 am
ಮಾ.22ರಂದು ಕರ್ನಾಟಕ ಬಂದ್ ; ಯಾವುದೇ ಕಾರಣಕ್ಕೂ ಬಂದ್...
18-03-25 11:02 pm
ಬಿಡದಿಯಲ್ಲಿ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ...
18-03-25 10:34 pm
19-03-25 07:39 pm
HK News Desk
ಕೊನೆಗೂ ಭುವಿಗಿಳಿದ ಸುನಿತಾ ವಿಲಿಯಮ್ಸ್ ; 9 ತಿಂಗಳ ತ...
19-03-25 02:10 pm
ಮಹಾರಾಷ್ಟ್ರದಲ್ಲಿ 'ಛಾವಾ' ಚಿತ್ರ ಹೊತ್ತಿಸಿದ ಕಿಚ್ಚು...
17-03-25 10:57 pm
Case against Orry at Vaishno Devi: ವೈಷ್ಣೋದೇವಿ...
17-03-25 09:43 pm
Kerala Christan girls missing, PC George: ಕೊಟ...
13-03-25 03:49 pm
19-03-25 10:13 pm
Udupi Correspondent
ಪವಾಡಕ್ಕೆ ಸಾಕ್ಷಿಯಾಗಿದೆ ತಲಪಾಡಿ ದುರ್ಗಾಪರಮೇಶ್ವರೀ...
18-03-25 10:09 pm
Electricity, Malekudiya Tribal, Belthangady:...
18-03-25 08:53 pm
Mangalore accident, Kinnigoli, Bike, Vidoe: ಕ...
18-03-25 03:15 pm
ಮಂಗಳೂರು- ಮುಂಬೈ ವಂದೇ ಭಾರತ್ ರೈಲು ಸನ್ನಿಹಿತ ; ಉಡು...
17-03-25 11:02 pm
19-03-25 08:27 pm
Mangalore Correspondent
Mangalore drugs, NCB: ಅತಿ ದೊಡ್ಡ ಡ್ರಗ್ಸ್ ಬೇಟೆ...
18-03-25 06:31 pm
Ccb Police Mangalore, Kali Yogesh, Underworld...
17-03-25 07:51 pm
Bangalore crime, Fraud, Bank Manager: ಮನೆ ಮಾರ...
16-03-25 10:39 pm
Mangalore Police, CCB, Drugs, CM: ರಾಜ್ಯದಲ್ಲೇ...
16-03-25 07:27 pm