ಬ್ರೇಕಿಂಗ್ ನ್ಯೂಸ್
27-10-24 02:41 pm HK News Desk ಕರಾವಳಿ
ಮಂಗಳೂರು, ಅ.27: ನನ್ನನ್ನು ಶಾಸಕ ಮಾಡಿದ್ದು ಕಾಂಗ್ರೆಸ್ ಪಕ್ಷ. 22 ವರ್ಷಗಳಿಂದ ಬಿಜೆಪಿಯಲ್ಲಿದ್ದೆ, ಕ್ಷೇತ್ರದ ಅಭಿವೃದ್ಧಿಯ ಕನಸು ಹೊಂದಿದ್ದೇನೆ, ಬಿಜೆಪಿಯಲ್ಲಿ ಅವಕಾಶ ಸಿಗದೇ ಇದ್ದುದರಿಂದ ಕಾಂಗ್ರೆಸಿಗೆ ಬಂದಿದ್ದೇನೆ. ಪಕ್ಷ ಬಿಟ್ಟು ಹೋಗುವ ಯಾವುದೇ ಉದ್ದೇಶ ಇಲ್ಲ. ನಾನೊಬ್ಬ ಹಿಂದು, ವಿಶ್ವ ಹಿಂದು ಪರಿಷತ್ತಿನ ಕಾರ್ಯಕ್ರಮಕ್ಕೆ ಕರೆದಿದ್ದರು, ಹೋಗಿದ್ದೇನೆ. ಶಾಸಕನಾಗಿ ಮಸೀದಿಗೆ, ಚರ್ಚ್, ದೇವಸ್ಥಾನ ಎಲ್ಲದಕ್ಕೂ ಹೋಗುತ್ತೇನೆ. ಅದರಲ್ಲಿ ತಪ್ಪು ಕಾಣುವುದಿಲ್ಲ ಎಂದು ಪುತ್ತೂರು ಶಾಸಕ ಅಶೋಕ್ ರೈ ಹೇಳಿದ್ದಾರೆ.
ವಿಶ್ವ ಹಿಂದು ಪರಿಷತ್ ಕಚೇರಿಯ ಭೂಮಿಪೂಜನ ಕಾರ್ಯಕ್ರಮಕ್ಕೆ ಶಾಸಕ ಅಶೋಕ್ ರೈ ಹೋಗಿದ್ದಕ್ಕೆ ಎಡಪಂಥೀಯರಿಂದ ಟೀಕೆ ವ್ಯಕ್ತವಾಗಿತ್ತು. ಅಶೋಕ್ ರೈ ಬಿಜೆಪಿಗೆ ಹೋಗುವ ಸೂಚನೆ ಎಂಬ ಟೀಕೆ ಕೇಳಿಬಂದಿತ್ತು. ಸುದ್ದಿಗೋಷ್ಟಿ ಸಂದರ್ಭದಲ್ಲಿ ಈ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅಶೋಕ್ ರೈ, ಭಜನಾ ಮಂದಿರ, ಮಸೀದಿಗಳಲ್ಲಿ ಅತಿ ಹೆಚ್ಚು ಸರ್ಕಾರಿ ಜಾಗದಲ್ಲೇ ಇದೆ. ಇವನ್ನು ಸರಿಪಡಿಸಿ ಹಕ್ಕುಪತ್ರ ಪಡೆಯುವಂತೆ ಹೇಳಿದ್ದೇನೆ. ಈ ಸಲ ಅತಿ ಹೆಚ್ಚು ಅನುದಾನ ಭಜನಾ ಮಂದಿರಗಳಿಗೆ ಕೊಟ್ಟಿದ್ದರೂ, ಸರಿಯಾದ ದಾಖಲೆ ಇಲ್ಲದ ಕಾರಣ ಅನುದಾನ ಹಿಂದಿರುಗಿ ಬಂದಿದೆ.
ಶಾಸಕನಾಗಿ ನನಗೆ ಎಲ್ಲರೂ ಒಂದೇ. ನಾನೊಬ್ಬ ಹಿಂದು, ಶಾಸಕನೆಂದು ನನ್ನ ಧರ್ಮದಲ್ಲಿ ಬದಲಾವಣೆ ಮಾಡಲು ಆಗಲ್ಲ. ದಿನವೂ ಬೆಳಗ್ಗೆ ಮತ್ತು ರಾತ್ರಿ 50 ಶ್ಲೋಕಗಳನ್ನು ಹೇಳಿಯೇ ಕೆಲಸ ಮುಂದುವರಿಸುತ್ತೇನೆ. ಹುಲಿ ವೇಷ, ಕಂಬಳ ಮಾಡಿ ಎಲ್ಲರನ್ನೂ ಕರೆಯುತ್ತೇನೆ, ಪಕ್ಷ ಭೇದ ಮಾಡಲ್ಲ, ಹೋಗುತ್ತೇವೆ. ಮುಸ್ಲಿಮರು, ಕ್ರಿಸ್ತಿಯನ್ನರ ಕಾರ್ಯಕ್ರಮಕ್ಕೂ ಹೋಗುತ್ತೇನೆ. ಹಿಂದುಗಳಲ್ಲಿಗೆ ಬರುವುದಿಲ್ಲ ಎಂದು ಹೇಳಬಾರದಲ್ವಾ ಎಂದು ಮರು ಪ್ರಶ್ನೆ ಹಾಕಿದರು.
ಪುತ್ತೂರಿನಲ್ಲಿ ಅತಿ ಹೆಚ್ಚು ಅಡಿಕೆ ಕೃಷಿಕರಿದ್ದಾರೆ, ಬರ್ಮಾ ಅಡಿಕೆ ಬರುತ್ತಿರುವುದರಿಂದ ಸಮಸ್ಯೆ ಆಗಲ್ವೇ ಎಂಬ ಪ್ರಶ್ನೆಗೆ, ಅಡಿಕೆ ಸೇರಿ 28 ವಾಣಿಜ್ಯ ಬೆಳೆಗಳನ್ನು ಕೃಷಿ ಬೆಳೆಗಳೆಂದು ಪರಿಗಣಿಸಲು ಸರಕಾರಕ್ಕೆ ಪ್ರಸ್ತಾಪ ಇಟ್ಟಿದ್ದೇವೆ. ಅಡಿಕೆ ಈಗಲೂ ವಾಣಿಜ್ಯ ಬೆಳೆಯೆಂದೇ ಪರಿಗಣನೆ ಇದೆ. ಅಡಿಕೆಯನ್ನು ಜಗಿಯುವುದಕ್ಕೆ ಬಿಟ್ಟರೆ ಬೇರಾವುದಕ್ಕೂ ಬಳಕೆ ಮಾಡುವುದಿಲ್ಲ. ಅಡಿಕೆ ಕೃಷಿಕರ ಮಕ್ಕಳು ಬೇರೆ ಬೆಳೆಗಳತ್ತಲೂ ಮನಸ್ಸು ಮಾಡಬೇಕು. ಕೇವಲ ಅಡಿಕೆಗಾಗಿ ಜೋತು ಬೀಳುವುದನ್ನು ಮಾಡಬಾರದು ಎಂದು ಹೇಳಿದರು.
ತುಳು ಭಾಷೆಯನ್ನು ರಾಜ್ಯದಲ್ಲಿ ಎರಡನೇ ಅಧಿಕೃತ ಭಾಷೆಯಾಗಿ ಮಾಡಲು ಮೂರು ರಾಜ್ಯಗಳ ಕಾನೂನು ಮಾದರಿಗಳನ್ನು ಪಡೆದಿದ್ದು, ಸರ್ಕಾರಕ್ಕೆ ವರದಿ ಕೊಟ್ಟಿದ್ದೇನೆ. ಸದ್ಯದಲ್ಲೇ ಸಿಎಂ ಜೊತೆಗೆ ಕುಳಿತು ಈ ಬಗ್ಗೆ ಮಾತುಕತೆ ನಡೆಸಿ ದ್ವಿತೀಯ ಭಾಷೆಯಾಗಿ ಮಾಡಿಸುತ್ತೇನೆ. ಅದು ನನ್ನ ಆದ್ಯತೆ. ಈ ಭಾಗದ ಹಲವರು ಶಾಸಕರಾಗಿದ್ದರೂ, ತುಳು ಭಾಷೆಯ ಬಗ್ಗೆ ಯಾರು ಕೂಡ ಗಮನ ಹರಿಸಿರಲಿಲ್ಲ ಎಂದರು.
ಪೇಟಾದವರ ಬಾಯಲ್ಲಿ ನೊರೆ ಬರುತ್ತದೆಯೇ ?
ಕಳೆದ ಬಾರಿ ಬೆಂಗಳೂರು ಕಂಬಳವನ್ನು 9 ಕೋಟಿ ಖರ್ಚಿನಲ್ಲಿ ಮಾಡಿದ್ದೇವೆ. ಈ ಸಲ ಪೇಟಾದವರು ಕೇಸು ಮಾಡಿದಾರೆ. ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ ಮಾತ್ರ ಕಂಬಳ ಮಾಡುತ್ತಾರೆಂದು ಬರೆದು ಕೊಟಿದ್ದಾರೆಂದು ಆಕ್ಷೇಪಿಸಿದ್ದಾರೆ. ಕರಾವಳಿ ಜಿಲ್ಲೆಗಳ ಜನಪದ ಕ್ರೀಡೆಯೆಂದು ಹೇಳಿದ್ದೇವೆ, ಇಲ್ಲಿ ಮಾತ್ರ ಮಾಡುತ್ತೇವೆಂದು ನಾವು ಬರೆದುಕೊಟ್ಟಿಲ್ಲ. ಮಣಿಪುರದ ನೃತ್ಯವನ್ನು ಮಣಿಪುರದಲ್ಲಿ ಮಾತ್ರ ಮಾಡಬೇಕೆನ್ನುವುದು ಸರಿಯಲ್ಲ. ಬೇರೆ ಕಡೆ ಮಾಡಬಾರದೇ ಎಂಬ ಪ್ರಶ್ನೆ ಬರುತ್ತದೆ. ಇನ್ನು ಕೋಣದ ಬಾಯಲ್ಲಿ ನೊರೆ ಬರುತ್ತದೆ ಎಂದು ಆಕ್ಷೇಪಿಸಿದ್ದಾರೆ. ಕೋಣನ ಬಾಯಲ್ಲಿ ನೊರೆ ಬರದೆ ಪೇಟಾದವರ ಬಾಯಲ್ಲಿ ನೊರೆ ಬರುತ್ತದೆಯೇ.? ಇವರಿಗೆ ಅಮೆರಿಕದಿಂದ ದುಡ್ಡು ಬರುತ್ತದೆ, ದೊಡ್ಡ ವಕೀಲರನ್ನು ಇಟ್ಟು ಆಕ್ಷೇಪ ಮಾಡುತ್ತಿದ್ದಾರೆ. ಇವರು ತಾಕತ್ತಿದ್ದರೆ ಒಂದು ಜೊತೆ ಕೋಣವನ್ನು ಒಂದು ತಿಂಗಳು ಸಾಕಿ ನೋಡಲಿ ಎಂದು ಸವಾಲು ಹಾಕಿದರು.
Mangalore Ashok rain slams those mocking him attending VHP bhoomi Pooja in puttur. Ashok Rai was mocked on social media after he attending the Vhp bhoomi Pooja being a congress MLA.
22-08-25 10:28 pm
Bangalore Correspondent
ವಾಹನ ಸವಾರರಿಗೆ ಗುಡ್ ನ್ಯೂಸ್ ; ಸಂಚಾರ ಉಲ್ಲಂಘನೆ ದಂ...
22-08-25 08:01 pm
Tumkur School, Compound News, Student: ಸ್ಕೂಲ್...
22-08-25 12:29 pm
Mahesh Thimarodi, Kalladka Prabhakar Bhat: ಮಹ...
22-08-25 09:47 am
Dharmasthala Case, Minister Eshwar Khandre: ಧ...
21-08-25 10:31 pm
22-08-25 10:00 pm
HK News Desk
ಪತ್ನಿಯ ಪದವಿ ಪ್ರದಾನ ಸಮಾರಂಭಕ್ಕೆ ಬ್ರಿಟನ್ ತೆರಳಲು...
22-08-25 08:07 pm
Another Security, Parliament, Arrest: ಸಂಸತ್ತಿ...
22-08-25 02:00 pm
ಚಿತ್ರನಟಿ ಆರೋಪ ಬೆನ್ನಲ್ಲೇ ಮಂಗಳಮುಖಿಯಿಂದಲೂ ದೂರು,...
22-08-25 01:11 pm
ಮಹಾ ಸಿಎಂ ದೇವೇಂದ್ರ ಫಡ್ನವೀಸ್ - ಎಂಎನ್ಎಸ್ ಮುಖ್ಯಸ್...
21-08-25 06:09 pm
23-08-25 01:29 pm
Udupi Correspondent
ಹಿಂದುಗಳ ಹಬ್ಬ, ಆಚರಣೆಗೆ ತೊಂದರೆ ಇಲ್ಲ, ಬಿಜೆಪಿ ಶಾಸ...
22-08-25 05:07 pm
ಪೊಲೀಸರ ಕರ್ತವ್ಯಕ್ಕೆ ಅಡ್ಡಿ ; ಬೆಳ್ತಂಗಡಿ ಠಾಣೆಯಲ್ಲ...
22-08-25 04:21 pm
Activist Mahesh Shetty Timarodi Arrest: ಬಿ.ಎಲ...
21-08-25 09:35 pm
Vhp, Mangalore, Sharan Pumpwell: ಗಣೇಶೋತ್ಸವ, ದ...
21-08-25 09:12 pm
23-08-25 11:11 am
Mangaluru Correspondent
ಕ್ಲಾಸ್ ನಲ್ಲಿ ಹೊಡೆದಿದ್ದಕ್ಕೆ ಶಿಕ್ಷಕನ ಮೇಲೆ 9ನೇ ತ...
22-08-25 09:57 pm
Lucky Scheme, Shine Enterprises, Arrest, Mang...
22-08-25 09:17 pm
Mangalore Church, Moodbidri, Fraud: ಕಿಡ್ನಿ ವೈ...
21-08-25 11:00 pm
ಶೀಲ ಶಂಕೆ ; ಕ್ರಿಮಿನಾಶಕ ಕೊಡಿಸಿ ಕೊಲೆ, ಪ್ರಿಯಕರನೊ...
21-08-25 10:39 pm