ಬ್ರೇಕಿಂಗ್ ನ್ಯೂಸ್
21-10-24 04:02 pm Mangalore Correspondent ಕರಾವಳಿ
ಮಂಗಳೂರು, ಅ.21: ದಕ್ಷಿಣ ಕನ್ನಡ – ಉಡುಪಿ ಜಿಲ್ಲೆಯ ಸ್ಥಳೀಯಾಡಳಿತ ಕ್ಷೇತ್ರದಿಂದ ವಿಧಾನ ಪರಿಷತ್ತಿಗೆ ಆಯ್ಕೆಗೊಳ್ಳಲು ಇಂದು ಚುನಾವಣೆ ನಡೆದಿದೆ. ಮಂಗಳೂರು ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ ಸೇರಿದಂತೆ ಗ್ರಾಮಾಂತರ ಏರಿಯಾದಲ್ಲಿ ಆಯಾ ಗ್ರಾಮ ಪಂಚಾಯತ್ ಕಚೇರಿಗಳಲ್ಲಿ ಮತದಾನ ನಡೆದಿದೆ.
ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಪಾಲಿಕೆಯ ಸದಸ್ಯರು ಮತ್ತು ಶಾಸಕರು, ಸಂಸದರು ಹಾಗೂ ವಿಧಾನ ಪರಿಷತ್ ಸದಸ್ಯರು ಮತ ಚಲಾಯಿಸಿದ್ದಾರೆ. ದಕ್ಷಿಣ ಕನ್ನಡ ಸಂಸದ ಕ್ಯಾ.ಬ್ರಿಜೇಶ್ ಚೌಟ, ಶಾಸಕರಾದ ವೇದವ್ಯಾಸ ಕಾಮತ್, ಭರತ್ ಶೆಟ್ಟಿ, ಪರಿಷತ್ ಸದಸ್ಯರಾದ ಐವಾನ್ ಡಿಸೋಜ, ಮಂಜುನಾಥ ಭಂಡಾರಿ ಮತ ಚಲಾವಣೆ ಮಾಡಿದ್ದಾರೆ.
ಬಿಜೆಪಿ 1500ಕ್ಕೂ ಹೆಚ್ಚು ಮತಗಳಿಂದ ಗೆಲುವು
ಮತ ಚಲಾಯಿಸಿದ ಬಳಿಕ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಬ್ರಿಜೇಶ್ ಚೌಟ, ಪರಿಷತ್ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿ ಕಿಶೋರ್ ಕುಮಾರ್ ಖಚಿತವಾಗಿ ಗೆಲ್ಲುತ್ತಾರೆ. ಈ ಗೆಲುವು ರಾಜ್ಯದೆಲ್ಲೆಡೆ ಬಿಜೆಪಿ ಕಾರ್ಯಕರ್ತರಿಗೆ ಹೊಸ ಹುಮ್ಮಸ್ಸು ನೀಡಲಿದೆ. ಸದ್ಯದಲ್ಲೇ ನಡೆಯುವ ಸಂಡೂರು, ಶಿಗ್ಗಾಂವಿ ಮತ್ತು ಚನ್ನಪಟ್ಟಣ ಕ್ಷೇತ್ರದ ಉಪ ಚುನಾವಣೆಗೆ ದಿಕ್ಸೂಚಿಯಾಗಲಿದೆ. ಬಿಜೆಪಿ ಅಭ್ಯರ್ಥಿ 1500ಕ್ಕೂ ಹೆಚ್ಚು ಮತಗಳಿಂದ ಗೆಲ್ಲುವುದು ಖಚಿತವಾಗಿದ್ದು, ಕೋಟ ಶ್ರೀನಿವಾಸ ಪೂಜಾರಿ ಅವರಿಂದ ತೆರವಾದ ಸ್ಥಾನವನ್ನು ಕಿಶೋರ್ ಕುಮಾರ್ ತುಂಬಲಿದ್ದಾರೆ ಎಂದು ಹೇಳಿದರು.
ಶಾಸಕ ಭರತ್ ಶೆಟ್ಟಿ ಅವರು ಮಂಗಳೂರು ಉತ್ತರ ಕ್ಷೇತ್ರದ ಕಾರ್ಪೊರೇಟರ್ ಗಳ ಜೊತೆಗೆ ಬಂದು ಮತ ಚಲಾಯಿಸಿದರೆ, ಆನಂತರ ಮಂಗಳೂರು ದಕ್ಷಿಣ ಕ್ಷೇತ್ರದ ಕಾರ್ಪೊರೇಟರುಗಳ ಜೊತೆಗೆ ಸಂಸದ ಬ್ರಿಜೇಶ್ ಚೌಟ ಮತ ಚಲಾಯಿಸಿದರು. ಆಬಳಿಕ ಮುಂಬೈನಿಂದ ನೇರವಾಗಿ ಮಂಗಳೂರಿಗೆ ಆಗಮಿಸಿದ ಶಾಸಕ ವೇದವ್ಯಾಸ ಕಾಮತ್ ತನ್ನ ಬೆಂಬಲಿಗರೊಂದಿಗೆ ಮತಗಟ್ಟೆಗೆ ಬಂದು ಮತ ಚಲಾಯಿಸಿದರು. ಇದಕ್ಕೂ ಮುನ್ನ ಒಂದಷ್ಟು ಕಾಂಗ್ರೆಸ್ ಕಾರ್ಪೊರೇಟರುಗಳ ಜೊತೆಗೆ ಬಂದು ಐವಾನ್ ಡಿಸೋಜ ಮತ್ತು ಮಂಜುನಾಥ ಭಂಡಾರಿ ಮತ ಚಲಾಯಿಸಿದರು.
ಹುಮ್ಮಸ್ಸು ಕಳಕೊಂಡ ಕಾಂಗ್ರೆಸಿಗರು
ಎರಡು ಜಿಲ್ಲೆಗಳ ಪರಿಷತ್ ಚುನಾವಣೆಯಲ್ಲಿ ಅಸ್ತಿತ್ವ ಇಲ್ಲದ ಜಿಪಂ ಸದಸ್ಯರನ್ನು ಹೊರತುಪಡಿಸಿ 6042 ಮಂದಿ ಮತದಾರರಿದ್ದಾರೆ. ಈ ಪೈಕಿ ಬಿಜೆಪಿ ಸದಸ್ಯರೇ ಹೆಚ್ಚಿದ್ದು, 1500ಕ್ಕೂ ಹೆಚ್ಚು ಮತಗಳು ಬಿಜೆಪಿಗೆ ಪರವಾಗಿವೆ ಎನ್ನಲಾಗುತ್ತಿದೆ. ಕಳೆದ ಬಾರಿಯೂ ಕೋಟ ಶ್ರೀನಿವಾಸ ಪೂಜಾರಿ 1500 ಹೆಚ್ಚು ಮತಗಳನ್ನು ಪಡೆದಿದ್ದರು. ಇದೇ ಕಾರಣದಿಂದ ಕಾಂಗ್ರೆಸ್ ಹೇಗೂ ಗೆಲ್ಲುವುದಿಲ್ಲ ಎನ್ನುವ ಭಾವನೆ ಆ ಪಕ್ಷದ ಸದಸ್ಯರಲ್ಲೇ ಇರುವುದರಿಂದ ಚುನಾವಣೆಯನ್ನು ನಿರ್ಲಕ್ಷ್ಯ ಮಾಡಿದ್ದಾರೆ. ಹೀಗಾಗಿ ಕಾಂಗ್ರೆಸಿನಲ್ಲಿ ಪರವಾಗಿರುವ ಮತಗಳೇ ಪೂರ್ತಿಯಾಗಿ ಪೋಲಿಂಗ್ ಆಗುವ ಸಾಧ್ಯತೆಯಿಲ್ಲ ಎನ್ನಲಾಗುತ್ತಿದೆ. ಮಂಗಳೂರು ಪಾಲಿಕೆಯಲ್ಲೂ ಕೆಲವು ಕಾಂಗ್ರೆಸ್ ಕಾರ್ಪೋರೇಟರುಗಳು ಊರಿನಲ್ಲಿ ಇಲ್ಲದ ಕಾರಣ ಚುನಾವಣೆಯಿಂದ ದೂರ ಉಳಿದಿದ್ದಾರೆ.
ಉಳ್ಳಾಲ ನಗರಸಭೆಯಲ್ಲಿ ಸ್ಪೀಕರ್ ಮತದಾನ
ಉಳ್ಳಾಲ ನಗರಸಭೆಯಲ್ಲಿ ಸ್ಪೀಕರ್ ಮತ್ತು ಕ್ಷೇತ್ರದ ಶಾಸಕ ಯುಟಿ ಖಾದರ್ ತನ್ನ ಹಕ್ಕು ಚಲಾಯಿಸಿದ್ದಾರೆ. ಉಳಿದಂತೆ, ನಗರಸಭೆ ಸದಸ್ಯರು ಕೂಡ ತಮ್ಮ ಅಭ್ಯರ್ಥಿಗಳಿಗೆ ಮತ ಚಲಾವಣೆ ಮಾಡಿದ್ದಾರೆ. ಆಯಾ ಪುರಸಭೆ, ನಗರಸಭೆ, ಗ್ರಾಪಂ ಗಳಲ್ಲಿ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿದೆ. ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಎರಡು ಜಿಲ್ಲೆಗಳಲ್ಲಿ 392 ಮತಗಟ್ಟೆಗಳನ್ನು ಮಾಡಲಾಗಿದ್ದು, ಈ ಪೈಕಿ 50 ಮತಗಟ್ಟೆ ಸೂಕ್ಷ್ಮ ಎಂದು ಪರಿಗಣಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 223 ಗ್ರಾಪಂ ಪೈಕಿ 3263 ಸದಸ್ಯರು, ಪಾಲಿಕೆಯಲ್ಲಿ 65, ಎರಡು ನಗರಸಭೆಗಳಲ್ಲಿ 64, ಮೂರು ಪುರಸಭೆಗಳಲ್ಲಿ 74 ಹಾಗೂ 5 ನಗರ ಪಂಚಾಯತ್ ನಲ್ಲಿ 86 ಮಂದಿ ಮತ ಚಲಾಯಿಸಲು ಅರ್ಹರಿದ್ದಾರೆ. ಉಡುಪಿ ಜಿಲ್ಲೆಯಲ್ಲಿ 153 ಗ್ರಾಪಂ ಪೈಕಿ 2355 ಸದಸ್ಯರು, ಉಡುಪಿ ನಗರಸಭೆಯಲ್ಲಿ 36, ಮೂರು ಪುರಸಭೆಯಲ್ಲಿ 72 ಹಾಗೂ ಒಂದು ನಗರ ಪಂಚಾಯತ್ ನಲ್ಲಿ 17 ಮಂದಿ ಮತ ಚಲಾಯಿಸಲು ಅರ್ಹರಿದ್ದಾರೆ. ಮಧ್ಯಾಹ್ನ ಹೊತ್ತಿಗೆ ಶೇ.80 ರಷ್ಟು ಮತದಾನ ಆಗಿರುವ ಮಾಹಿತಿಯಿದೆ.
The by-election for the Udupi district's Member of the Legislative Council (MLC) seat, which was left vacant by MP Kota Srinivas Poojary, began in Dakshina Kannada and Udupi, on Monday October 21.
22-08-25 10:28 pm
Bangalore Correspondent
ವಾಹನ ಸವಾರರಿಗೆ ಗುಡ್ ನ್ಯೂಸ್ ; ಸಂಚಾರ ಉಲ್ಲಂಘನೆ ದಂ...
22-08-25 08:01 pm
Tumkur School, Compound News, Student: ಸ್ಕೂಲ್...
22-08-25 12:29 pm
Mahesh Thimarodi, Kalladka Prabhakar Bhat: ಮಹ...
22-08-25 09:47 am
Dharmasthala Case, Minister Eshwar Khandre: ಧ...
21-08-25 10:31 pm
23-08-25 04:58 pm
HK News Desk
Mp Brijesh Chowta, Mangalore: ಆನ್ಲೈನ್ ಗೇಮಿಂಗ್...
22-08-25 10:00 pm
ಪತ್ನಿಯ ಪದವಿ ಪ್ರದಾನ ಸಮಾರಂಭಕ್ಕೆ ಬ್ರಿಟನ್ ತೆರಳಲು...
22-08-25 08:07 pm
Another Security, Parliament, Arrest: ಸಂಸತ್ತಿ...
22-08-25 02:00 pm
ಚಿತ್ರನಟಿ ಆರೋಪ ಬೆನ್ನಲ್ಲೇ ಮಂಗಳಮುಖಿಯಿಂದಲೂ ದೂರು,...
22-08-25 01:11 pm
23-08-25 03:04 pm
Mangalore Correspondent
Mervin Mendonca Accident, Udupi, Mangalore: ರ...
23-08-25 01:29 pm
ಹಿಂದುಗಳ ಹಬ್ಬ, ಆಚರಣೆಗೆ ತೊಂದರೆ ಇಲ್ಲ, ಬಿಜೆಪಿ ಶಾಸ...
22-08-25 05:07 pm
ಪೊಲೀಸರ ಕರ್ತವ್ಯಕ್ಕೆ ಅಡ್ಡಿ ; ಬೆಳ್ತಂಗಡಿ ಠಾಣೆಯಲ್ಲ...
22-08-25 04:21 pm
Activist Mahesh Shetty Timarodi Arrest: ಬಿ.ಎಲ...
21-08-25 09:35 pm
23-08-25 11:11 am
Mangaluru Correspondent
ಕ್ಲಾಸ್ ನಲ್ಲಿ ಹೊಡೆದಿದ್ದಕ್ಕೆ ಶಿಕ್ಷಕನ ಮೇಲೆ 9ನೇ ತ...
22-08-25 09:57 pm
Lucky Scheme, Shine Enterprises, Arrest, Mang...
22-08-25 09:17 pm
Mangalore Church, Moodbidri, Fraud: ಕಿಡ್ನಿ ವೈ...
21-08-25 11:00 pm
ಶೀಲ ಶಂಕೆ ; ಕ್ರಿಮಿನಾಶಕ ಕೊಡಿಸಿ ಕೊಲೆ, ಪ್ರಿಯಕರನೊ...
21-08-25 10:39 pm