ಬ್ರೇಕಿಂಗ್ ನ್ಯೂಸ್
18-10-24 05:00 pm Mangalore Correspondent ಕರಾವಳಿ
ಪುತ್ತೂರು, ಅ.18: ಬಿಲ್ಲವ ಸಮಾಜದ ಮಹಿಳೆಯರ ಬಗ್ಗೆ ಅವಹೇಳನಕಾರಿ ಮಾತನಾಡಿ ವಿವಾದ ಮೈಮೇಲೆ ಎಳಕೊಂಡಿರುವ ಪಂಜ ವಲಯ ಅರಣ್ಯಾಧಿಕಾರಿ ಸಂಜೀವ ಪೂಜಾರಿ ವಿರುದ್ಧ ಹಿಂದು ಜಾಗರಣ ವೇದಿಕೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದು ಇದರ ಬೆನ್ನಲ್ಲೇ ಬೆಳ್ಳಾರೆ ಪೊಲೀಸರು ಆರೋಪಿತ ಅಧಿಕಾರಿಯನ್ನು ವಶಕ್ಕೆ ಪಡೆದಿದ್ದಾರೆ.
ಪುತ್ತೂರಿನಲ್ಲಿ ಡಿವೈಎಸ್ಪಿ ಕಚೇರಿ ಮುಂಭಾಗದಲ್ಲಿ ಹಿಂದು ಜಾಗರಣ ವೇದಿಕೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದು, ಆರೋಪಿತ ಸಂಜೀವ ಪೂಜಾರಿಯನ್ನು ಸಂಜೆಯೊಳಗೆ ಬಂಧಿಸಬೇಕು ಎಂದು ಆಗ್ರಹ ಮಾಡಿದ್ದಾರೆ. ಸ್ಥಳಕ್ಕೆ ಬಂದ ಡಿವೈಎಸ್ಪಿ ಅರುಣ್ ಅವರು ಬಂಧನಕ್ಕೆ ಒಂದು ದಿನದ ಸಮಯ ಕೊಡಿ ಎಂದು ಕೇಳಿದಾಗ, ಕಾರ್ಯಕರ್ತರು ಅದಕ್ಕೆ ಒಪ್ಪಲಿಲ್ಲ. ಇವತ್ತು ಸಂಜೆಯೊಳಗೆ ಬಂಧನ ಮಾಡಬೇಕು ಎಂದು ಆಗ್ರಹ ಮಾಡಿದ್ದಾರೆ.
ಇದರ ಬೆನ್ನಲ್ಲೇ ಆರೋಪಿ ಸಂಜೀವ ಪೂಜಾರಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆಂದು ತಿಳಿದುಬಂದಿದೆ. ಹಿಂದು ಸಂಘಟನೆ ಕಾರ್ಯಕರ್ತ ಸುರೇಶ್ ಕಾಸರಗೋಡು ಎಂಬವರು ಫೋನ್ ಮಾಡಿದ್ದಾಗ, ಬಿಲ್ಲವ ಸಮಾಜದ ಒಂದು ಲಕ್ಷ ಯುವತಿಯರು ಸೂಳೆಯರಿದ್ದಾರೆ, ಇದಕ್ಕೆ ತನ್ನಲ್ಲಿ ಹತ್ತು ಸಾವಿರದಷ್ಟು ದಾಖಲೆ ಇದೆ ಎಂದು ಹೇಳಿದ್ದರು. ಈ ರೀತಿ ಮಾತನಾಡಿದ್ದ ಆಡಿಯೋ ವೈರಲ್ ಆಗುತ್ತಿದ್ದಂತೆ ಹಿಂದು ಜಾಗರಣ ವೇದಿಕೆ ಕಾರ್ಯಕರ್ತರು ಬೆಳ್ಳಾರೆ ಮತ್ತು ಮೂಡುಬಿದ್ರೆ ಠಾಣೆಗೆ ದೂರು ನೀಡಿದ್ದರು.
ನಾಲಗೆ ಕತ್ತರಿಸುತ್ತೇವೆ ಎಂದ ಮುಖಂಡ
ಇಂದು ಬೆಳಗ್ಗೆ ಪುತ್ತೂರಿನ ಡಿವೈಎಸ್ಪಿ ಕಚೇರಿ ಎದುರಲ್ಲಿ ಹಿಂಜಾವೇ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಮಾತನಾಡಿದ ಹಿಂಜಾವೇ ಮುಖಂಡ ಸಮಿತ್ ರಾಜ್ ದರೆಗುಡ್ಡೆ, ಸಂಜೀವ ಪೂಜಾರಿ ತನ್ನ ಬಿಲ್ಲವ ಸಮಾಜದ ಬಗ್ಗೆ ಈ ರೀತಿ ಅವಹೇಳನ ಮಾಡಿದ್ದರೂ ಒಂದೇ ಒಂದು ಬಿಲ್ಲವ ಸಂಘಗಳು ಚಕಾರ ಎತ್ತಿಲ್ಲ. ಪೊಲೀಸರು ಸರಳ ಸೆಕ್ಷನ್ ಹಾಕಿ ಕೇಸು ಹಾಕಿದ್ದಾರೆ. ಕಠಿಣ ಕ್ರಮ ಜರುಗಿಸದಿದ್ದರೆ, ಮಹಿಳೆಯರನ್ನೇ ಒಟ್ಟು ಸೇರಿಸಿ ಆತನ ನಾಲಗೆ ಕತ್ತರಿಸುತ್ತೇವೆ, ಈತ ಅನ್ಯಧರ್ಮದವರ ಬಗ್ಗೆ ಇಂಥ ಮಾತು ಹೇಳುತ್ತಿದ್ದರೆ ಈಗಲೇ ನಾಲಗೆ, ಕೈ ಕಟ್ ಮಾಡುತ್ತಿದ್ದರು. ಕೂಡಲೇ ಬಂಧನ ಮಾಡದಿದ್ದರೆ ನಾವೇ ಕ್ರಮ ಜರುಗಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.
Puttur Complaint filed against forest officer for derogatory remarks, officer taken to police custody after protest by Hindu Jagrana vedike. Previously, the same officer faced allegations for making derogatory posts about Bhajans, leading to a complaint being filed with the department.
22-08-25 10:28 pm
Bangalore Correspondent
ವಾಹನ ಸವಾರರಿಗೆ ಗುಡ್ ನ್ಯೂಸ್ ; ಸಂಚಾರ ಉಲ್ಲಂಘನೆ ದಂ...
22-08-25 08:01 pm
Tumkur School, Compound News, Student: ಸ್ಕೂಲ್...
22-08-25 12:29 pm
Mahesh Thimarodi, Kalladka Prabhakar Bhat: ಮಹ...
22-08-25 09:47 am
Dharmasthala Case, Minister Eshwar Khandre: ಧ...
21-08-25 10:31 pm
23-08-25 04:58 pm
HK News Desk
Mp Brijesh Chowta, Mangalore: ಆನ್ಲೈನ್ ಗೇಮಿಂಗ್...
22-08-25 10:00 pm
ಪತ್ನಿಯ ಪದವಿ ಪ್ರದಾನ ಸಮಾರಂಭಕ್ಕೆ ಬ್ರಿಟನ್ ತೆರಳಲು...
22-08-25 08:07 pm
Another Security, Parliament, Arrest: ಸಂಸತ್ತಿ...
22-08-25 02:00 pm
ಚಿತ್ರನಟಿ ಆರೋಪ ಬೆನ್ನಲ್ಲೇ ಮಂಗಳಮುಖಿಯಿಂದಲೂ ದೂರು,...
22-08-25 01:11 pm
23-08-25 09:00 pm
Mangalore Correspondent
Veerendra Heggade Reacts, Dharmasthala News:...
23-08-25 07:25 pm
ಆನಂದಾಶ್ರಮ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ "ಡೆನ್ನ ಡೆ...
23-08-25 07:02 pm
Mask Man Dharmasthala, Arrest, SIT: ಧರ್ಮಸ್ಥಳ...
23-08-25 03:04 pm
Mervin Mendonca Accident, Udupi, Mangalore: ರ...
23-08-25 01:29 pm
23-08-25 06:21 pm
Mangaluru Correspondent
Dharmasthala Mask Man Arrest, SIT: ಧರ್ಮಸ್ಥಳ ಪ...
23-08-25 11:11 am
ಕ್ಲಾಸ್ ನಲ್ಲಿ ಹೊಡೆದಿದ್ದಕ್ಕೆ ಶಿಕ್ಷಕನ ಮೇಲೆ 9ನೇ ತ...
22-08-25 09:57 pm
Lucky Scheme, Shine Enterprises, Arrest, Mang...
22-08-25 09:17 pm
Mangalore Church, Moodbidri, Fraud: ಕಿಡ್ನಿ ವೈ...
21-08-25 11:00 pm