ಬ್ರೇಕಿಂಗ್ ನ್ಯೂಸ್
29-09-24 05:33 pm Mangalore Correspondent ಕರಾವಳಿ
ಮಂಗಳೂರು, ಸೆ.29: ಪಾವೂರು ಉಳಿಯ ದ್ವೀಪದಲ್ಲಿ ಅಕ್ರಮ ಮರಳುಗಾರಿಕೆ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ದ್ವೀಪದ ಜಮೀನಿನ ವಾಸ್ತವ ವಿಸ್ತೀರ್ಣ ಅರಿಯಲು ಅಧಿಕೃತ ಸರ್ವೆ ನಡೆಸಲು ಸ್ಪೀಕರ್ ಯು.ಟಿ.ಖಾದರ್ ದ.ಕ. ಜಿಲ್ಲಾಧಿಕಾರಿಗೆ ಸೂಚನೆ ನೀಡಿದ್ದಾರೆ.
ಈ ಬಗ್ಗೆ Satellite images ಅನ್ನು Google Engine Portal ಮೂಲಕ ತೆಗೆಯಬೇಕು ಮತ್ತು ಅಧಿಕೃತ ಸರ್ವೆಯರ್ ಮೂಲಕ ಸರ್ವೆ ನಡೆಸಬೇಕು. ಕಂದಾಯ ಇಲಾಖೆಯ ಅಧಿಕೃತ ದಾಖಲೆ ಪ್ರಕಾರ ಈ ಹಿಂದೆ ದ್ವೀಪದ ಮೂಲ ವಿಸ್ತೀರ್ಣ ಎಷ್ಟಿತ್ತು ಮತ್ತು ಈಗ ಎಷ್ಟಿದೆ? ವಿಸ್ತೀರ್ಣದಲ್ಲಿ ಕೊರತೆ ಕಂಡು ಬಂದಿದ್ದರೆ ಅದಕ್ಕೆ ಕಾರಣ ಏನು? ಎಂಬುದರ ಬಗ್ಗೆ ಸರ್ವೆ ನಡೆಸಿ ವರದಿ ನೀಡುವಂತೆ ಖಾದರ್ ನಿರ್ದೇಶನ ನೀಡಿದ್ದಾರೆ.
ಈಗಾಗಲೇ ಈ ಭಾಗದ ಜನರು ಅಕ್ರಮ ಮರಳುಗಾರಿಕೆಯ ಬಗ್ಗೆ ನನ್ನ ಗಮನಕ್ಕೆ ತಂದಿದ್ದಾರೆ. ಅದರಂತೆ ಅಕ್ರಮ ಮರಳುಗಾರಿಕೆ ತಡೆಯಲು ಸಂಬಂಧಪಟ್ಟ ಇಲಾಖೆಗೆ ಸೂಚನೆ ನೀಡಿದ್ದೇನೆ. ಅಧಿಕೃತ ಸರ್ವೆ ನಡೆಸಿದ ಬಳಿಕ ವಾಸ್ತವ ತಿಳಿಯಲಿದೆ. ಮರಳುಗಾರಿಕೆಯಿಂದ ದ್ವೀಪದ ವಿಸ್ತೀರ್ಣದಲ್ಲಿ ಕಡಿಮೆ ಕಂಡುಬಂದಿದ್ದರೆ ಅಕ್ರಮ ಮರಳುಗಾರಿಕೆ ನಡೆಸುವವರ ವಿರುದ್ಧ ಸೂಕ್ತ ಕ್ರಮಕ್ಕೆ ಸೂಚನೆ ನೀಡಲಾಗಿದೆ. ದ್ವೀಪದ ಮೂಲ ಸ್ವರೂಪಕ್ಕೆ ಯಾವುದೇ ಧಕ್ಕೆಯಾಗದಂತೆ ಜಿಲ್ಲಾಡಳಿತ ಮುನ್ನೆಚ್ಚರಿಕೆ ವಹಿಸಲು ತಿಳಿಸಲಾಗಿದೆ ಎಂದು ಯು.ಟಿ.ಖಾದರ್ ತಿಳಿಸಿದ್ದಾರೆ.
ಸ್ಪೀಕರ್ ನಿರ್ದೇಶನದ ಮೇರೆಗೆ ಈಗಾಗಲೇ ಜಿಲ್ಲಾಧಿಕಾರಿ ಅವರು ಮಂಗಳೂರು ಉಪವಿಭಾಗದ ಸಹಾಯಕ ಆಯುಕ್ತರು, ಮಂಗಳೂರು ನಗರ ದಕ್ಷಿಣ ಉಪ ವಿಭಾಗದ ಪೊಲೀಸ್ ಉಪಾಯುಕ್ತರು, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಭೂ ವಿಜ್ಞಾನಿ ಸಹಿತ 6 ಮಂದಿಯ ತನಿಖಾ ಸಮಿತಿಯನ್ನು ರಚಿಸಿದ್ದಾರೆ.
Mangalore Speaker Khader orders survey of Pavoor uliya Island, Action against illegal miniers. Meanwhile, Deputy Commissioner M.P. Mullai Muhilan in his September 17 order directed officials of the revenue, police, and mines and geology department to initiate strict action, including seizing of boats and vehicles, if they were found to be engaged in illegal sand extraction in the CRZ area of the Netravathi.
18-03-25 11:02 pm
Bangalore Correspondent
ಬಿಡದಿಯಲ್ಲಿ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ...
18-03-25 10:34 pm
Bangalore JCB Accident, Two Killed; ರಸ್ತೆ ಕಾಮ...
18-03-25 02:30 pm
Tumkur Wedding News, Water: ನೀರಿನ ವಿಚಾರದಲ್ಲಿ...
18-03-25 01:08 pm
ಎಸ್.ಟಿ. ಸೋಮಶೇಖರ್, ಶಿವರಾಮ ಹೆಬ್ಬಾರ್ ಸದ್ಯದಲ್ಲೇ...
17-03-25 11:54 am
17-03-25 10:57 pm
HK News Desk
Case against Orry at Vaishno Devi: ವೈಷ್ಣೋದೇವಿ...
17-03-25 09:43 pm
Kerala Christan girls missing, PC George: ಕೊಟ...
13-03-25 03:49 pm
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
18-03-25 10:09 pm
Mangalore Correspondent
Electricity, Malekudiya Tribal, Belthangady:...
18-03-25 08:53 pm
Mangalore accident, Kinnigoli, Bike, Vidoe: ಕ...
18-03-25 03:15 pm
ಮಂಗಳೂರು- ಮುಂಬೈ ವಂದೇ ಭಾರತ್ ರೈಲು ಸನ್ನಿಹಿತ ; ಉಡು...
17-03-25 11:02 pm
Mangalore Accident, Kallapu: ನಿಯಂತ್ರಣ ತಪ್ಪಿ ಆ...
17-03-25 08:01 pm
18-03-25 06:31 pm
Mangalore Correspondent
Ccb Police Mangalore, Kali Yogesh, Underworld...
17-03-25 07:51 pm
Bangalore crime, Fraud, Bank Manager: ಮನೆ ಮಾರ...
16-03-25 10:39 pm
Mangalore Police, CCB, Drugs, CM: ರಾಜ್ಯದಲ್ಲೇ...
16-03-25 07:27 pm
Mangalore CCB police, Drugs, crime: ರಾಜ್ಯದಲ್ಲ...
16-03-25 10:43 am