ಬ್ರೇಕಿಂಗ್ ನ್ಯೂಸ್
10-12-20 03:25 pm Mangalore Correspondent ಕರಾವಳಿ
ಮಂಗಳೂರು, ಡಿ.10: ಗೋವು ಕೃಷಿಕರ ಪಾಲಿಗೆ ಜೀವನಾಡಿ. ಅಂಥ ಗೋವಿನ ರಕ್ಷಣೆಗಾಗಿ ಯಡಿಯೂರಪ್ಪ ಸರಕಾರ ಕಾನೂನು ತಂದಿದೆ. ಸಿದ್ದರಾಮಯ್ಯ ಜಾತ್ಯತೀತ ನೆಪದಲ್ಲಿ ತುಷ್ಟೀಕರಣಕ್ಕಾಗಿ ಹೇಳಿಕೆ ನೀಡುತ್ತಿದ್ದಾರೆ. ಕೃಷಿಕನ ಬದುಕಿನ ಪರವಾಗಿ ನಾವು ಕಾನೂನು ತಂದಿದ್ದೇವೆ. ಇದನ್ನು ವಿರೋಧಿಸುವುದಾದ್ರೆ ಸಿದ್ದರಾಮಯ್ಯ ಕೃಷಿಕರ ವಿರುದ್ಧ ಇದ್ದಾರೆ ಅಂತ ಆಗಿಲ್ಲವೇ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಪ್ರಶ್ನೆ ಮಾಡಿದ್ದಾರೆ.
ಗೋಹತ್ಯೆ ನಿಷೇಧ ಕಾನೂನು ವಿಧಾನಸಭೆಯಲ್ಲಿ ಅಂಗೀಕಾರಗೊಂಡ ಹಿನ್ನೆಲೆಯಲ್ಲಿ ಮಂಗಳೂರಿನ ಬಿಜೆಪಿ ಕಚೇರಿಯಲ್ಲಿ ಗೋಪೂಜೆ ನಡೆಸಲಾಯಿತು. ಗೋವಿಗೆ ನಳಿನ್ ಕುಮಾರ್ ಪೂಜೆ ನೆರವೇರಿಸಿದರು.
ಬಳಿಕ ಮಾಧ್ಯಮಕ್ಕೆ ಹೇಳಿಕೆ ನೀಡಿದ ನಳಿನ್ ಕುಮಾರ್, ಭಾರತೀಯ ಸಂಸ್ಕೃತಿಯಲ್ಲಿ ಗೋವಿಗೆ ವಿಶೇಷ ಸ್ಥಾನವಿದೆ. ಪ್ರತಿ ಮನೆಯಲ್ಲಿ ಗೋವುಗಳಿದ್ದವು. ಅದನ್ನು ಭಾರತೀಯರೆಲ್ಲ ಪೂಜಿಸುತ್ತಿದ್ದರು. ದೇವತೆಯ ಸ್ಥಾನದಲ್ಲಿರುವ ಗೋವನ್ನು ರಕ್ಷಿಸಲು ಯಡಿಯೂರಪ್ಪ ಸರಕಾರ ಕಾನೂನು ತಂದಿದೆ. ಕಾನೂನು ತರುತ್ತೇವೆಂದು ಮೊದಲಿಂದಲೂ ಹೇಳಿಕೊಂಡು ಬರಲಾಗಿತ್ತು. ಯಡಿಯೂರಪ್ಪ ಈಗ ಮಾತು ಈಡೇರಿಸಿದ್ದಾರೆ. ಇದಕ್ಕಾಗಿ ಯಡಿಯೂರಪ್ಪ ಅವರನ್ನು ಅಭಿನಂದಿಸುತ್ತೇನೆ ಎಂದರು.
ಸಿದ್ದರಾಮಯ್ಯ ಚರ್ಚೆ ಮಾಡಬೇಕಿತ್ತು ಎನ್ನಲು ಈ ಹಿಂದೆ ಮಸೂದೆ ತರುವಾಗ ಕಾಂಗ್ರೆಸ್ ಚರ್ಚೆ ಮಾಡಿತ್ತಾ..? ನಾವು ಸದನ ಸಮಿತಿಯಲ್ಲಿಟ್ಟು ಅನುಮೋದನೆ ಪಡೆದಿದ್ದೇವೆ. ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಗೋಹತ್ಯೆಯ ಪರವಾಗಿದೆ. ಆದ್ದರಿಂದ ರಾಜಕೀಯ ಹೇಳಿಕೆ ನೀಡುತ್ತಿದ್ದಾರೆ ಎಂದು ಹೇಳಿದ್ದಾರೆ.
Video:
The Karnataka government on Wednesday passed a law to ban the slaughter of all kinds of cattle in the state, The Mangalore BJP leaders offered special puja to cows near BJP office in Mangalore.
19-03-25 04:42 pm
HK News Desk
"ಹೆಂಗಸರಿಗೆ ಫ್ರೀ ಕೊಟ್ಟಂತೆ ಗಂಡಸರಿಗೂ ವಾರಕ್ಕೆರಡು...
19-03-25 12:44 pm
Sowjanya case, Protest; ಸೌಜನ್ಯಾ ಪ್ರಕರಣ ; ನ್ಯಾ...
19-03-25 11:39 am
ಮಾ.22ರಂದು ಕರ್ನಾಟಕ ಬಂದ್ ; ಯಾವುದೇ ಕಾರಣಕ್ಕೂ ಬಂದ್...
18-03-25 11:02 pm
ಬಿಡದಿಯಲ್ಲಿ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ...
18-03-25 10:34 pm
19-03-25 07:39 pm
HK News Desk
ಕೊನೆಗೂ ಭುವಿಗಿಳಿದ ಸುನಿತಾ ವಿಲಿಯಮ್ಸ್ ; 9 ತಿಂಗಳ ತ...
19-03-25 02:10 pm
ಮಹಾರಾಷ್ಟ್ರದಲ್ಲಿ 'ಛಾವಾ' ಚಿತ್ರ ಹೊತ್ತಿಸಿದ ಕಿಚ್ಚು...
17-03-25 10:57 pm
Case against Orry at Vaishno Devi: ವೈಷ್ಣೋದೇವಿ...
17-03-25 09:43 pm
Kerala Christan girls missing, PC George: ಕೊಟ...
13-03-25 03:49 pm
19-03-25 10:13 pm
Udupi Correspondent
ಪವಾಡಕ್ಕೆ ಸಾಕ್ಷಿಯಾಗಿದೆ ತಲಪಾಡಿ ದುರ್ಗಾಪರಮೇಶ್ವರೀ...
18-03-25 10:09 pm
Electricity, Malekudiya Tribal, Belthangady:...
18-03-25 08:53 pm
Mangalore accident, Kinnigoli, Bike, Vidoe: ಕ...
18-03-25 03:15 pm
ಮಂಗಳೂರು- ಮುಂಬೈ ವಂದೇ ಭಾರತ್ ರೈಲು ಸನ್ನಿಹಿತ ; ಉಡು...
17-03-25 11:02 pm
19-03-25 08:27 pm
Mangalore Correspondent
Mangalore drugs, NCB: ಅತಿ ದೊಡ್ಡ ಡ್ರಗ್ಸ್ ಬೇಟೆ...
18-03-25 06:31 pm
Ccb Police Mangalore, Kali Yogesh, Underworld...
17-03-25 07:51 pm
Bangalore crime, Fraud, Bank Manager: ಮನೆ ಮಾರ...
16-03-25 10:39 pm
Mangalore Police, CCB, Drugs, CM: ರಾಜ್ಯದಲ್ಲೇ...
16-03-25 07:27 pm