ಬ್ರೇಕಿಂಗ್ ನ್ಯೂಸ್
07-09-24 06:06 pm Mangalore Correspondent ಕರಾವಳಿ
ಉಳ್ಳಾಲ, ಸೆ.7: ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ "ಕೃಷ್ಣಂ ಪ್ರಣಯ ಸಖಿ" ಚಿತ್ರದಲ್ಲಿ "ದ್ವಾಪರ ದಾಟುತ ನನ್ನನೆ ನೋಡಲು ನನ್ನನೆ ಸೇರಲು ಬಂದ ರಾಧಿಕೆ..." ಹಾಡಿನ ಮೂಲಕ ಯುವ ಮನಸ್ಸುಗಳನ್ನು ಆಕರ್ಷಿಸಿದ್ದ ಝೀ ಕನ್ನಡದ ಸರಿಗಮಪ ಖ್ಯಾತಿಯ ಗಾಯಕ ಜಸ್ಕರನ್ ಸಿಂಗ್ ಅವರು ಗಣೇಶ ಹಬ್ಬದಂದು ಉಳ್ಳಾಲ ತಾಲೂಕಿನ ಕಲ್ಲಾಪುವಿನ ಬುರ್ದುಗೋಳಿ ಗುಳಿಗ- ಕೊರಗಜ್ಜ ಉದ್ಭವ ಶಿಲೆಯ ಆದಿಸ್ಥಳಕ್ಕೆ ಭೇಟಿ ನೀಡಿ ದೈವಗಳಿಗೆ ಪ್ರಾರ್ಥನೆ ಸಲ್ಲಿಸಿದರು.
ಮಂಗಳೂರಿನ ಸರಿಪಳ್ಳದಲ್ಲಿ ಕದ್ರಿ ಈವೆಂಟ್ಸ್ ಆಯೋಜಿಸಿರುವ ಮ್ಯೂಸಿಕಲ್ ನೈಟಲ್ಲಿ ಪ್ರದರ್ಶನ ನೀಡಲು ಬಂದಿರುವ ಜಸ್ಕರನ್ ಸಿಂಗ್ ಅವರು ಕದ್ರಿ ಮಂಜುನಾಥೇಶ್ವರ ಕ್ಷೇತ್ರಕ್ಕೆ ತೆರಳಿದ ಬಳಿಕ ಬುರ್ದುಗೋಳಿಯ ಗುಳಿಗ-ಕೊರಗಜ್ಜನ ಸಾನಿಧ್ಯಕ್ಕೆ ಭೇಟಿ ನೀಡಿದರು. ಕ್ಷೇತ್ರದ ಆಡಳಿತ ಸಮಿತಿ ಪ್ರಧಾನ ಕಾರ್ಯದರ್ಶಿ ಕಮಲಾಕ್ಷ ಕುಲಾಲ್ ಅವರು ಜಸ್ಕರನ್ ಸಿಂಗ್ ಅವರನ್ನ ಬರಮಾಡಿಕೊಂಡರು.
ಸಾನಿಧ್ಯದ ಸಂಪ್ರದಾಯದಂತೆ ಕೊರಗಜ್ಜನಿಗೆ ಬೀಡ ಚಕ್ಕುಳಿ ಇಟ್ಟು ಜಸ್ಕರನ್ ಅವರು ಪ್ರಾರ್ಥನೆ ಸಲ್ಲಿಸಿದರು. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಮಂಗಳೂರಿನ ಕದ್ರಿ ಮತ್ತು ಬುರ್ದುಗೋಳಿಯ ಗುಳಿಗ-ಕೊರಗಜ್ಜನ ಕ್ಷೇತ್ರಕ್ಕೆ ಭೇಟಿ ನೀಡಿದ ಬಳಿಕ ವಿಭಿನ್ನವಾದ ದೈವಿಕ ಭಾವನೆ ಜಾಗೃತಗೊಂಡಿದ್ದು, ಇಂದಿನ ಮಂಗಳೂರಿನ ಪ್ರದರ್ಶನದ ಯಶಸ್ಸಿಗೂ ದೈವ, ದೇವರಲ್ಲಿ ಪ್ರಾರ್ಥಿಸಿರುವುದಾಗಿ ಹೇಳಿದರು. ಸ್ಯಾಂಡಲ್ ವುಡ್ಡಲ್ಲಿ ಹಾಡಲು ಸಾಕಷ್ಟು ಆಫರ್ ಗಳು ಬಂದಿವೆ. ಅರ್ಜುನ್ ಜನ್ಯರ ಸಂಗೀತಕ್ಕೆ ಹಾಡೊಂದನ್ನ ಹೇಳಿದ್ದು ಅದು ರೆಕಾರ್ಡ್ ಆಗಿದೆ. ಬೇರೆ ಸಿಂಗಲ್ ಪ್ರಾಜೆಕ್ಟಲ್ಲೂ ಕೆಲಸ ಮಾಡುತ್ತಿದ್ದೇನೆ. ತಮಿಳಲ್ಲೂ ಹಾಡುಗಳು ರೆಕಾರ್ಡ್ ಆಗಿದೆ. ಪಂಜಾಬಿ ಚಿತ್ರಗಳು ಮತ್ತು ಸೋಲೊ ಆಲ್ಬಮ್ ಗಳಿಗಾಗಿ ಹಾಡುತ್ತಿದ್ದು ಅದರ ರೆಕಾರ್ಡಿಂಗ್ ನಡೆಯುತ್ತಿದೆ ಎಂದರು.
ಬುರ್ದುಗೋಳಿ ಕ್ಷೇತ್ರದ ವತಿಯಿಂದ ಜಸ್ಕರನ್ ಸಿಂಗ್ ಅವರನ್ನು ಅಭಿನಂದಿಸಿ ಗೌರವಿಸಲಾಯಿತು. ಝೀ ಕನ್ನಡ ಸರಿಗಮಪ ಖ್ಯಾತಿಯ ಹಾಡುಗಾರ ಅಮಿಷ್ ಕುಮಾರ್ ಕೆ, ಕದ್ರಿ ಈವೆಂಟ್ಸ್ ನ ಪ್ರಮುಖರಾದ ಜಗದೀಶ್ ಕದ್ರಿ ಜತೆಯಲ್ಲಿದ್ದರು. ಕ್ಷೇತ್ರ ಸಮಿತಿಯ ಚಂದ್ರಹಾಸ್ ಪಂಡಿತ್ ಹೌಸ್, ನವೀನ್ ಕಾಯಂಗಳ, ಜಯಶ್ರೀ ಕೊಟ್ಟಾರಿ ಉಪಸ್ಥಿತರಿದ್ದರು.
Ganesh movie Dwapara song singer Jaskaran Singh visits Kuttaru Koragajja temple in Mangalore.
19-03-25 04:42 pm
HK News Desk
"ಹೆಂಗಸರಿಗೆ ಫ್ರೀ ಕೊಟ್ಟಂತೆ ಗಂಡಸರಿಗೂ ವಾರಕ್ಕೆರಡು...
19-03-25 12:44 pm
Sowjanya case, Protest; ಸೌಜನ್ಯಾ ಪ್ರಕರಣ ; ನ್ಯಾ...
19-03-25 11:39 am
ಮಾ.22ರಂದು ಕರ್ನಾಟಕ ಬಂದ್ ; ಯಾವುದೇ ಕಾರಣಕ್ಕೂ ಬಂದ್...
18-03-25 11:02 pm
ಬಿಡದಿಯಲ್ಲಿ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ...
18-03-25 10:34 pm
19-03-25 07:39 pm
HK News Desk
ಕೊನೆಗೂ ಭುವಿಗಿಳಿದ ಸುನಿತಾ ವಿಲಿಯಮ್ಸ್ ; 9 ತಿಂಗಳ ತ...
19-03-25 02:10 pm
ಮಹಾರಾಷ್ಟ್ರದಲ್ಲಿ 'ಛಾವಾ' ಚಿತ್ರ ಹೊತ್ತಿಸಿದ ಕಿಚ್ಚು...
17-03-25 10:57 pm
Case against Orry at Vaishno Devi: ವೈಷ್ಣೋದೇವಿ...
17-03-25 09:43 pm
Kerala Christan girls missing, PC George: ಕೊಟ...
13-03-25 03:49 pm
19-03-25 10:13 pm
Udupi Correspondent
ಪವಾಡಕ್ಕೆ ಸಾಕ್ಷಿಯಾಗಿದೆ ತಲಪಾಡಿ ದುರ್ಗಾಪರಮೇಶ್ವರೀ...
18-03-25 10:09 pm
Electricity, Malekudiya Tribal, Belthangady:...
18-03-25 08:53 pm
Mangalore accident, Kinnigoli, Bike, Vidoe: ಕ...
18-03-25 03:15 pm
ಮಂಗಳೂರು- ಮುಂಬೈ ವಂದೇ ಭಾರತ್ ರೈಲು ಸನ್ನಿಹಿತ ; ಉಡು...
17-03-25 11:02 pm
19-03-25 08:27 pm
Mangalore Correspondent
Mangalore drugs, NCB: ಅತಿ ದೊಡ್ಡ ಡ್ರಗ್ಸ್ ಬೇಟೆ...
18-03-25 06:31 pm
Ccb Police Mangalore, Kali Yogesh, Underworld...
17-03-25 07:51 pm
Bangalore crime, Fraud, Bank Manager: ಮನೆ ಮಾರ...
16-03-25 10:39 pm
Mangalore Police, CCB, Drugs, CM: ರಾಜ್ಯದಲ್ಲೇ...
16-03-25 07:27 pm