ಬ್ರೇಕಿಂಗ್ ನ್ಯೂಸ್
06-09-24 05:17 pm Mangaluru Correspondent ಕರಾವಳಿ
ಮಂಗಳೂರು, ಸೆ.5: ಮೊನ್ನೆ ಭಾನುವಾರ ಸೆ.1ರಂದು ಮಂಗಳೂರಿನಲ್ಲಿ ಸಿನಿಮಾ ನಟಿ ಸೋನಲ್ ಮೊಂತೇರೊ ಮತ್ತು ಕನ್ನಡದ ಚಿತ್ರ ನಿರ್ದೇಶಕ ತರುಣ್ ಸುಧೀರ್ ಮದುವೆ ನಡೆದಿತ್ತು. ಕೋರ್ಡೆಲ್ ಚರ್ಚ್ ನಲ್ಲಿ ಸಾಂಪ್ರದಾಯಿಕ ಮದುವೆ ಮತ್ತು ಅದೇ ದಿನ ಸಂಜೆ ಟಿಎಂಎ ಪೈ ಹಾಲ್ ನಲ್ಲಿ ರಿಸೆಪ್ಶನ್ ಆಗಿತ್ತು. ಆದರೆ, ಕ್ರಿಶ್ಚಿಯನ್ ಸಂಪ್ರದಾಯ ಪ್ರಕಾರ ಈ ಮದುವೆ ನಡೆದಿಲ್ಲ ಎಂದು ಸಮುದಾಯದಲ್ಲೇ ಆಕ್ಷೇಪ ವ್ಯಕ್ತವಾಗಿದೆ.
ಈ ಬಗ್ಗೆ ಕೋರ್ಡೆಲ್ ಚರ್ಚ್ ಪಾದ್ರಿಯ ನಡೆ ಬಗ್ಗೆ ಆಕ್ಷೇಪಿಸಿ ಜಾಲತಾಣದಲ್ಲಿ ಟೀಕೆ ಮಾಡಲಾಗಿದೆ. ಸಾಮಾನ್ಯವಾಗಿ ಚರ್ಚ್ ನಲ್ಲಿ ಸಾಂಪ್ರದಾಯಿಕ ನೆಲೆಯಲ್ಲಿ ಮದುವೆ ಆಗುವುದಿದ್ದರೆ ಕನಿಷ್ಠ ಮೂರು ಭಾನುವಾರ ಪೂಜೆ ನಡೆಯಬೇಕು. ಗಂಡು- ಹೆಣ್ಣಿನ ಹೆಸರು ಹೇಳಿ ಮದುವೆಯಾಗುವ ಬಗ್ಗೆ ಘೋಷಣೆ ಆಗಬೇಕು. ಹೆಣ್ಣು ಅಥವಾ ಗಂಡು ತಾನು ಸದಸ್ಯನಾಗಿರುವ ಚರ್ಚ್ ನಲ್ಲಿ ಈ ಘೋಷಣೆ ನಡೆಯಬೇಕು. ಮದುವೆ ಬಗ್ಗೆ ಯಾರದ್ದಾದರೂ ಆಕ್ಷೇಪ ಇದ್ದರೆ ಅದನ್ನು ದಾಖಲಿಸಲು ಅವಕಾಶ ಇರುತ್ತದೆ. ಅಲ್ಲದೆ, ಮದುವೆಯ ಮೂರು ತಿಂಗಳ ಮೊದಲೇ ಇಬ್ಬರೂ ಕರಾರು ಪತ್ರಕ್ಕೆ ಸಹಿ ಹಾಕಬೇಕು. ಅಂತರ್ ಧರ್ಮೀಯ ಮದುವೆ ಆಗುವುದಿದ್ದರೂ, ಗಂಡು ಅಥವಾ ಹೆಣ್ಣು ತಮ್ಮ ಚರ್ಚ್ ಗಳಲ್ಲಿ ತಿಳಿಸಬೇಕು ಎನ್ನುವ ನಿಯಮ ಇದೆ.
ಇವೆಲ್ಲ ನಿಯಮಗಳನ್ನು ಗಾಳಿಗೆ ತೂರಿ ಸೋನಲ್ ಮೊಂತೇರೊ ಮದುವೆಗೆ ಚರ್ಚ್ ನಲ್ಲಿ ಅವಕಾಶ ನೀಡಲಾಗಿದೆ. ತರುಣ್ ಸುಧೀರ್ ಅಂತರ್ ಧರ್ಮೀಯ ವ್ಯಕ್ತಿಯಾಗಿದ್ದರೂ, ಸೋನಲ್ ಮೊಂತೇರೊ ತನ್ನ ಚರ್ಚ್ ನಲ್ಲಿ ಸಂಪ್ರದಾಯ ನೆರವೇರಿಸಬೇಕಿತ್ತು. ಅದಕ್ಕಾಗಿ ಇರುವ ನಿಯಮಗಳನ್ನು ಪಾಲನೆ ಮಾಡಬೇಕಿತ್ತು. ಸೆಲೆಬ್ರಿಟಿ ಅನ್ನುವ ಕಾರಣಕ್ಕೆ ನಿಯಮಗಳನ್ನು ಮೀರಿ ಅವಕಾಶ ನೀಡಿದ್ದು ತಪ್ಪು ಎಂದು ಆಕ್ಷೇಪ ಕೇಳಿಬಂದಿದೆ. ಕ್ಯಾಥೋಲಿಕ್ ಕ್ರಿಶ್ಚಿಯನ್ ಗ್ರೂಪ್ ಗಳಲ್ಲಿ ಈ ಬಗ್ಗೆ ಚರ್ಚೆಯಾಗಿದ್ದು, ಮಂಗಳೂರು ಬಿಷಪ್ ಮತ್ತು ಕೋರ್ಡೆಲ್ ಚರ್ಚ್ ಪಾದ್ರಿಯ ನಡೆಯನ್ನು ಟೀಕಿಸಲಾಗಿದೆ. ಶ್ರೀಮಂತರಿಗೆ ಒಂದು ನ್ಯಾಯ, ಬಡವರಿಗೆ ಇನ್ನೊಂದು ನ್ಯಾಯ ಎನ್ನುವ ನಿಯಮ ಇದೆಯೇ ಎಂದು ಆಕ್ಷೇಪಿಸಲಾಗಿದೆ.
ಕರಾರು ಪತ್ರದಲ್ಲಿ ಮೂರು ತಿಂಗಳ ಮೊದಲು ಗಂಡು ಮತ್ತು ಹೆಣ್ಣು ಸಹಿ ಹಾಕಿರಬೇಕು. ಅಲ್ಲದೆ, ತಮ್ಮಿಂದ ಹುಟ್ಟುವ ಸಂತಾನವನ್ನು ಇದೇ ಚರ್ಚ್ ಸದಸ್ಯನಾಗಿಸುವುದಾಗಿಯೂ ಕರಾರು ಪತ್ರದಲ್ಲಿ ಉಲ್ಲೇಖ ಮಾಡಲಾಗುತ್ತದೆ. ಗಂಡು, ಹೆಣ್ಣು ಇಬ್ಬರು ಮದುವೆ ಮೊದಲಿನ ಮಾಹಿತಿ ಶಿಬಿರಕ್ಕೆ ಹಾಜರಾಗಬೇಕು ಇತ್ಯಾದಿ ನಿಯಮಗಳನ್ನು ಸೋನಲ್ ಮೊಂತೇರೋ ಮದುವೆಯಲ್ಲಿ ಅನುಸರಣೆ ಮಾಡಿಲ್ಲ ಎಂದು ಕೆಲವರು ಆಕ್ಷೇಪಿಸಿದ್ದಾರೆ. ಕೆಲವರು ಈಗ ಹಣ ಇದ್ದರೆ ಎಲ್ಲವೂ ನಡೆಯುತ್ತದೆ ಎಂದು ಟೀಕೆ ಮಾಡಿದ್ದಾರೆ. ಕ್ರಿಶ್ಚಿಯನ್ನರಲ್ಲಿ ಚರ್ಚ್ ನಿಯಮ, ಕಟ್ಟುಪಾಡು ಹೊರಗೆ ಚರ್ಚೆಯಾಗದೆ ಆಚರಣೆಗಷ್ಟೇ ಸೀಮಿತ ಎನ್ನುವಂತಿದೆ. ಆದರೆ, ಸೋನಲ್ ಮದುವೆ ವಿಚಾರದಲ್ಲಿ ಕೆಲವರು ಟೀಕಿಸಿದ್ದು, ಜಾಲತಾಣದಲ್ಲಿ ಚರ್ಚೆ ನಡೆಸಿದ್ದಾರೆ.
ಸೋನಲ್ ಮಂಗಳೂರಿನ ಕ್ಯಾಥೋಲಿಕ್ ಕ್ರಿಶ್ಚಿಯನ್ ಆಗಿದ್ದರೂ, ಕಳೆದ 3-4 ವರ್ಷದಿಂದ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಈ ಹಿಂದೆ ಪಡೀಲಿನಲ್ಲಿ ಮನೆ ಇದ್ದಾಗ ಅವರ ಹೆತ್ತವರು ಮಂಗಳೂರಿನ ಕುಲಶೇಖರದ ಕೋರ್ಡೆಲ್ ಚರ್ಚ್ ಸದಸ್ಯರಾಗಿದ್ದರು ಎನ್ನುವ ಕಾರಣಕ್ಕೆ ಮತ್ತು ಕುಟುಂಬಸ್ಥರು, ಆಪ್ತರು ಪಾಲ್ಗೊಳ್ಳಲು ಅವಕಾಶ ಸಿಗಬೇಕೆಂದು ಮಂಗಳೂರಿನಲ್ಲಿ ಎರಡನೇ ಬಾರಿ ಮದುವೆ ಏರ್ಪಾಡು ಮಾಡಲಾಗಿತ್ತು. ಸೋನಲ್- ತರುಣ್ ಅವರ ಮದುವೆ ಆಗಸ್ಟ್ 11ರಂದು ಹಿಂದು ಸಂಪ್ರದಾಯ ಪ್ರಕಾರ ಬೆಂಗಳೂರಿನಲ್ಲಿ ಆಗಿದ್ದರೂ, ಸೆ.1ರಂದು ಕ್ರಿಶ್ಚಿಯನ್ ಪದ್ಧತಿಯಂತೆ ಮತ್ತೊಮ್ಮೆ ಮದುವೆ ಏರ್ಪಡಿಸಲಾಗಿತ್ತು. ಚರ್ಚ್ ನಲ್ಲಿ ಮದುವೆ ಆಗುವುದಿದ್ದರೆ, ಈ ಮೊದಲು ಮದುವೆ ಆಗಿಲ್ಲ ಎಂದು ಘೋಷಣೆ ಮಾಡುವ ಪದ್ಧತಿಯೂ ಇದೆ. ಕೋರ್ಡೆಲ್ ಚರ್ಚ್ ನಲ್ಲಿ ಕೆಲವು ವಿಧಿಗಳನ್ನು ಮಾಡಿಲ್ಲ, ಕೇವಲ ಉಂಗುರ ಬದಲಾವಣೆ ಮಾತ್ರ ಮಾಡಲಾಗಿದೆ ಎನ್ನುವ ಮಾತನ್ನೂ ಕೆಲವರು ಹೇಳುತ್ತಿದ್ದಾರೆ.
Sonal Monteiro wedding turns controversy in Mangalore among Catholics, people slam Cordel church for breaking rules. Debate and arguments have started in social media platform over catholic church giving wedding mass to Sonal and Tharun Sudhir. Sonal and director Tarun Sudhir tied the knot on Sunday, August 11, in the morning in Bengaluru.
19-03-25 04:42 pm
HK News Desk
"ಹೆಂಗಸರಿಗೆ ಫ್ರೀ ಕೊಟ್ಟಂತೆ ಗಂಡಸರಿಗೂ ವಾರಕ್ಕೆರಡು...
19-03-25 12:44 pm
Sowjanya case, Protest; ಸೌಜನ್ಯಾ ಪ್ರಕರಣ ; ನ್ಯಾ...
19-03-25 11:39 am
ಮಾ.22ರಂದು ಕರ್ನಾಟಕ ಬಂದ್ ; ಯಾವುದೇ ಕಾರಣಕ್ಕೂ ಬಂದ್...
18-03-25 11:02 pm
ಬಿಡದಿಯಲ್ಲಿ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ...
18-03-25 10:34 pm
19-03-25 07:39 pm
HK News Desk
ಕೊನೆಗೂ ಭುವಿಗಿಳಿದ ಸುನಿತಾ ವಿಲಿಯಮ್ಸ್ ; 9 ತಿಂಗಳ ತ...
19-03-25 02:10 pm
ಮಹಾರಾಷ್ಟ್ರದಲ್ಲಿ 'ಛಾವಾ' ಚಿತ್ರ ಹೊತ್ತಿಸಿದ ಕಿಚ್ಚು...
17-03-25 10:57 pm
Case against Orry at Vaishno Devi: ವೈಷ್ಣೋದೇವಿ...
17-03-25 09:43 pm
Kerala Christan girls missing, PC George: ಕೊಟ...
13-03-25 03:49 pm
19-03-25 10:13 pm
Udupi Correspondent
ಪವಾಡಕ್ಕೆ ಸಾಕ್ಷಿಯಾಗಿದೆ ತಲಪಾಡಿ ದುರ್ಗಾಪರಮೇಶ್ವರೀ...
18-03-25 10:09 pm
Electricity, Malekudiya Tribal, Belthangady:...
18-03-25 08:53 pm
Mangalore accident, Kinnigoli, Bike, Vidoe: ಕ...
18-03-25 03:15 pm
ಮಂಗಳೂರು- ಮುಂಬೈ ವಂದೇ ಭಾರತ್ ರೈಲು ಸನ್ನಿಹಿತ ; ಉಡು...
17-03-25 11:02 pm
19-03-25 08:27 pm
Mangalore Correspondent
Mangalore drugs, NCB: ಅತಿ ದೊಡ್ಡ ಡ್ರಗ್ಸ್ ಬೇಟೆ...
18-03-25 06:31 pm
Ccb Police Mangalore, Kali Yogesh, Underworld...
17-03-25 07:51 pm
Bangalore crime, Fraud, Bank Manager: ಮನೆ ಮಾರ...
16-03-25 10:39 pm
Mangalore Police, CCB, Drugs, CM: ರಾಜ್ಯದಲ್ಲೇ...
16-03-25 07:27 pm