ಬ್ರೇಕಿಂಗ್ ನ್ಯೂಸ್
10-01-26 03:22 pm HK News Desk ದೇಶ - ವಿದೇಶ
ವಾಷಿಂಗ್ಟನ್, ಜ.10 : ವೆನಿಜುವೆಲಾ ಅಧ್ಯಕ್ಷರ ಬಂಧನ ಬೆನ್ನಲ್ಲೇ ಅಲ್ಲಿನ ತೈಲದ ಮೇಲೆ ಹಿಡಿತ ಸಾಧಿಸಲು ಅಮೆರಿಕ ಮುಂದಾಗಿದೆ. ವೆನೆಜುವೆಲಾ ತೈಲದ ನಿಕ್ಷೇಪಗಳ ಮೇಲೆ ಅಮೇರಿಕಾದ ನಿಯಂತ್ರಣ ಅನಿರ್ದಿಷ್ಟವಾಗಿರಲಿದೆ ಎಂದು ಅಮೆರಿಕದ ಇಂಧನ ಸಚಿವಾಲಯದ ಅಧಿಕಾರಿಯೊಬ್ಬರು ಸುಳಿವು ನೀಡಿದ್ದಾರೆ.
ಮಿಯಾಮಿಯಲ್ಲಿ ನಡೆದ ಗೋಲ್ಡ್‌ಮನ್ ಸ್ಯಾಚ್ಸ್ ಗ್ರೂಪ್ ಇಂಕ್ ಸಮ್ಮೇಳನದಲ್ಲಿ ಈ ಬಗ್ಗೆ ಮಾಹಿತಿ ನೀಡಿರುವ ಕ್ರಿಸ್ ರೈಟ್, "ಬಡ ರಾಷ್ಟ್ರದ ಕಚ್ಚಾ ತೈಲವನ್ನು ಮಾರುಕಟ್ಟೆಗೆ ತರುವ ಮತ್ತು ಅದರ ಅತ್ಯಮೂಲ್ಯ ಸಂಪನ್ಮೂಲವನ್ನು ನಿಯಂತ್ರಿಸುವ ವಾಷಿಂಗ್ಟನ್‌ನ ಕಾರ್ಯತಂತ್ರ ನ್ಯಾಯಯುತವಾಗಿದೆ" ಎಂದು ಹೇಳಿದ್ದಾರೆ.
ನಾವು ವೆನಿಜುವೆಲಾದ ಕಚ್ಚಾತೈಲವನ್ನು ಮಾರುಕಟ್ಟೆಗೆ ಸ್ಥಳಾಂತರಿಸಿ ಮಾರಾಟ ಮಾಡುತ್ತೇವೆ. ಅದರಿಂದ ಬರುವ ಆದಾಯವನ್ನು ಅನಿರ್ದಿಷ್ಟಾವಧಿಯ ವರೆಗೆ ನಿಯಂತ್ರಿಸುತ್ತೇವೆ. ಈ ಆದಾಯವನ್ನು ವೆನೆಜುವೆಲಾದ ತೈಲ ಮೂಲಸೌಕರ್ಯವನ್ನು ಪುನರುಜ್ಜೀವನಗೊಳಿಸಲು ಮತ್ತು ಉತ್ಪಾದನೆಯ ಪ್ರಮಾಣವನ್ನು ಹೆಚ್ಚಿಸಲು ಬಳಸಿಕೊಳ್ಳುತ್ತೇವೆ" ಎಂದು ಅಮೆರಿಕದ ಇಂಧನ ಕಾರ್ಯದರ್ಶಿಯೂ ಆಗಿರುವ ರೈಟ್ಸ್ ಸ್ಪಷ್ಟಪಡಿಸಿದ್ದಾರೆ.
ವೆನೆಜುವೆಲಾ ತನ್ನ 50 ಮಿಲಿಯನ್ ಬ್ಯಾರೆಲ್‌ಗಳಷ್ಟು ಕಚ್ಚಾತೈಲವನ್ನು ಅಮೆರಿಕಕ್ಕೆ ಮಾರಾಟ ಮಾಡಲು ಬಿಟ್ಟುಕೊಡಲಿದೆ. ಇದರ ಮೌಲ್ಯ
ಪ್ರಸ್ತುತ ಮಾರುಕಟ್ಟೆಯಲ್ಲಿ ಸುಮಾರು 2.8 ಬಿಲಿಯನ್ ಅಮೆರಿಕನ್ ಡಾಲರ್ ಆಗಿದೆ" ಎಂದು ಡೊನಾಲ್ಡ್ ಟ್ರಂಪ್ ಇತ್ತೀಚೆಗೆ ಹೇಳಿಕೆ ನೀಡಿದ್ದರು. ಇದು ವೆನೆಜುವೆಲಾದ ತೈಲದ ಮೇಲೆ ಅಮೆರಿಕ ಕಣ್ಣು ಹಾಕಿದೆ ಎಂಬುದನ್ನು ಸಾಬೀತುಪಡಿಸಿತ್ತು. ಇದೀಗ ಅಲ್ಲಿನ ಅಧಿಕಾರಿ, ವೆನಿಜುವೆಲಾದ ತೈಲವನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳುತ್ತಿರುವುದಾಗಿ ಹೇಳಿದ್ದಾರೆ.
Following the arrest of Venezuela’s president, the United States has signaled a decisive move to gain control over Venezuela’s vast oil reserves. Speaking at a Goldman Sachs Group conference in Miami, US Energy Secretary Chris Wright stated that Washington plans to take charge of bringing Venezuelan crude oil to global markets and managing the revenue for an indefinite period.
10-01-26 10:28 pm
HK News Desk
"ಡ್ಯಾಡಿ ಈಸ್ ಹೋಮ್" ಎಐ ವಿಡಿಯೋ ರಿಲೀಸ್ ; ರಾಜ್ಯ ರಾ...
10-01-26 04:29 pm
ಚಾರ್ಮಾಡಿ ಘಾಟಿಯಲ್ಲಿ ರಸ್ತೆಗೆ ಅಡ್ಡ ನಿಂತ ಒಂಟಿ ಸಲಗ...
10-01-26 03:00 pm
Purushottam Bilimale, Legal Battle Against Ma...
10-01-26 01:17 pm
ಮಲಯಾಳ ಭಾಷಾ ಮಸೂದೆಯಿಂದ ಕಾಸರಗೋಡು ಕನ್ನಡಿಗರಿಗೆ ಧಕ್...
09-01-26 04:42 pm
10-01-26 03:22 pm
HK News Desk
ಶಬರಿಮಲೆ ಚಿನ್ನ ಕಳವು ಪ್ರಕರಣ ; ಪ್ರಧಾನ ತಂತ್ರಿ ಕಂಠ...
09-01-26 11:00 pm
ಟ್ರಂಪ್ ಕೈಗಳು ಸಾವಿರಾರು ಇರಾನಿಗರ ರಕ್ತದಿಂದ ಒದ್ದೆಯ...
09-01-26 08:30 pm
ರಷ್ಯಾ ಹಡಗು ವಶಕ್ಕೆ ಪಡೆದ ಬೆನ್ನಲ್ಲೇ ಅಮೆರಿಕಕ್ಕೆ ತ...
08-01-26 11:21 pm
ರಷ್ಯಾ ತೈಲ ಖರೀದಿ ನಿಲ್ಲಿಸಲು ಅಮೆರಿಕ ಹೊಸ ಮಸೂದೆ ;...
08-01-26 05:11 pm
10-01-26 10:45 pm
Mangalore Correspondent
ಡೀಮ್ಡ್ ಯುನಿವರ್ಸಿಟಿಗಳಲ್ಲಿ ಭಾಷೆಯ ಅವಜ್ಞೆ ; ಸಾಹಿತ...
10-01-26 07:57 pm
Dr Meenakshi Jain at Mangaluru Lit Fest: ಉಪನಿ...
10-01-26 07:21 pm
ಕರಾವಳಿ ಟೂರಿಸಂ ಅಭಿವೃದ್ಧಿಗೆ ಜನಪ್ರನಿಧಿಗಳು, ಉದ್ಯಮ...
10-01-26 06:23 pm
ಉದ್ಯೋಗ ಖಾತ್ರಿ ಯೋಜನೆ ಬಗ್ಗೆ ಕಾಂಗ್ರೆಸ್ ಅಪಪ್ರಚಾರ...
10-01-26 06:07 pm
07-01-26 10:45 pm
Bangalore Correspondent
ಸಮಾಧಿಯಲ್ಲಿ ಡ್ರಗ್ಸ್ ಬಚ್ಚಿಟ್ಟು ಮಾರಾಟ ; 3.5 ಕೋಟಿ...
06-01-26 07:04 pm
Kanachur Hospital, POSCO, Doctor: ಚಿಕಿತ್ಸೆಗೆ...
06-01-26 02:24 pm
ಯಲ್ಲಾಪುರ ; ಮದ್ವೆಗೆ ಒಪ್ಪಿಲ್ಲವೆಂದು ನಡುರಸ್ತೆಯಲ್ಲ...
04-01-26 11:02 pm
Ganja from Bihar: ಬಿಹಾರದಿಂದ ರೈಲಿನಲ್ಲಿ ಗಾಂಜಾ ತ...
04-01-26 06:15 pm